"ಬೆಳಕನ್ನು ಗಮನಿಸು" ಇದು ಛಾಯಾಗ್ರಹಣದ ಮೊದಲ ಪಾಠ. ಬೆಳಕಿನ ಮೂಲ ಛಾಯಾಗ್ರಾಹಕನ ಹಿಂದೆ ಇರಬೇಕು, ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ಬೆಳಕಿಗೆ ಅಭಿಮುಖವಾಗಿ ಚಿತ್ರ ತೆಗೆಯುವುದು ಸಾಮನ್ಯ ಅಭ್ಯಾಸವಲ್ಲ. ಕೆಲವೊಂದು ಬಾರಿ ಸೂರ್ಯಾಸ್ಥಮಾನ, ಸೂರ್ಯೋದಯ ಮೊದಲಾದ ಹಿನ್ನೆಲೆಯನ್ನು ಬಳಸಿ, ಮುನ್ನೆಲೆಯಲ್ಲಿ ನಮ್ಮನ್ನಿರಿಸಿ ಚಿತ್ರ ತೆಗೆಯುವಾಗ ಸರಿಯಾದ ಬೆಳಕು ಬೀಳಲು ಫ್ಲಾಷ್ ಬಳಸುವುದು ಸಾಮಾನ್ಯ. ಇಲ್ಲಿ ಮುನ್ನೆಲೆಯ ವಿಷಯ ಸ್ಪಷ್ಟವಾಗಿ ಕಾಣಿಸಿ, ವರ್ಣಮಯ ಹಿನ್ನೆಲೆ ಬರೀ ಕತ್ತಲೆಯಂತೆ ಕಾಣಿಸುತ್ತದೆ. ಇಂತಹ ಸಂದರ್ಭದಲ್ಲಿ ಫ್ಲಾಷ್ ಉಪಯೋಗಿಸದೆ, ಮುನ್ನೆಲೆಯನ್ನು ಅಂಡರ್ ಎಕ್ಸ್ಪೋಸ್ ಮಾಡಿ ವರ್ಣಮಯ ಹಿನ್ನೆಲೆಯನ್ನು ಸಂಯೋಜಿಸಬಹುದು. ಪಕ್ಕದ ಚಿತ್ರದಲ್ಲಿ ಮಂಟಪದ ಆಕಾರ ಮಾತ್ರ ಗುರುತಿಸುವಂತಿದ್ದು ಅದರ ವಿವರಗಳು ಕತ್ತಲೆಯಲ್ಲಿ ಕಾಣಿಸದಂತಿದೆ ಹಾಗೂ ಹಿನ್ನೆಲೆಯಲ್ಲಿ ಸೂರ್ಯಾಸ್ಥಮಾನದ ಬಣ್ಣ ಚಿತ್ರಿತವಾಗಿದೆ. ಈ ರೀತಿಯ ಚಿತ್ರಗಳೇ silhouettes.
silhouette ಚಿತ್ರ ತೆಗೆಯಲು ಕೆಲವೊಂದು ಸಲಹೆಗಳು:
ಪ್ರಕಾಶಮಾನವಾದ ಅಥವಾ ವರ್ಣಮಯ ಬೆಳಕಿನ ಮೂಲವು ವಿಷಯದ ಹಿಂದೆ ಇರಬೇಕು. ಇಲ್ಲಿ ವಿಷಯದ ಬಣ್ಣ, ವಿವರ ಚಿತ್ರಿಸುವ ಅವಕಾಶವಿರದಿದ್ದುದರಿಂದ, ಬರೀ ಆಕೃತಿಯಿಂದಲೇ ಅದನ್ನು ಗುರುತಿಸುವಂತಿರಬೇಕು.
ಫ್ಲಾಷ್ ಬಳಸಿ silhouette ಚಿತ್ರ ತೆಗೆಯುವುದು ಸಾಧ್ಯವಿಲ್ಲವಾದ್ದರಿಂದ, ಫ್ಲಾಷನ್ನು ಆಫ್ ಮಾಡಬೇಕು.
ಆಟೋ ಮೋಡ್ ಉಪಯೋಗಿಸುವವರಾದಲ್ಲಿ ವಿಷಯವನ್ನು ಬಿಟ್ಟು, ಹಿನ್ನೆಲೆಗೆ ಕ್ಯಾಮರಾ ಹಿಡಿದು, ಬಟನ್ನನ್ನು ಅರ್ಧ ಅಮುಕಿ ಹಾಗೆಯೇ ಹಿಡಿದುಕೊಳ್ಳಬೇಕು. ಈಗ ನಿಮ್ಮ ಕ್ಯಾಮಾರಾ ಕೇವಲ ಹಿನ್ನೆಲೆಯನ್ನು ಗಮನದಲ್ಲಿರಿಸಿಕೊಂಡು ಎಕ್ಸ್-ಪೋಜರ್ ಸೆಟ್ ಮಾಡಿಕೊಳ್ಳುತ್ತದೆ. ಈಗ (ಬಟನ್ನನ್ನು ಅರ್ಧ ಅಮುಕಿ ಹಿಡಿದುಕೊಂಡೇ) ಮತ್ತೆ ವಿಷಯವನ್ನು ಚಿತ್ರದೊಳಗೆ ಸೇರಿಸಿಕೊಂಡು ಮರು ಸಂಯೋಜಿಸಿ, ಕ್ಲಿಕ್ಕಿಸಿದರೆ silhouette ಚಿತ್ರ ಸಿಗುತ್ತದೆ. ಈ ವಿಧಾನದಿಂದ ಫೋಕಸ್ ಕೂಡಾ ಹಿನ್ನೆಲೆಗೇ ಆಗುವುದರಿಂದ ಮುನ್ನೆಲೆ ಅಸ್ಪಷ್ಟವಾಗಿ (ಶಾರ್ಪ್ನೆಸ್ ಕಡಿಮೆ) ಮೂಡಬಹುದು. ಆದ್ದರಿಂದ ಕಡಿಮೆ aperture ಉಪಯೋಗಿಸಿ ಹೆಚ್ಚಿನ ಡೆಪ್ತ್ ಪಡೆಯುವುದು ಸೂಕ್ತ.
ಅಟೋ ಮೋಡ್ ಮತ್ತು exposure compensation ಉಪಯೋಗಿಸಿ, ಇನ್ನೊಂದು ವಿಧಾನದಲ್ಲಿ ಕೂಡ ಈ ರೀತಿಯ ಚಿತ್ರ ತೆಗೆಯಬಹುದು. ವಿಷಯವನ್ನು ಇರಿಸಿಕೊಂಡೇ ಚಿತ್ರ ಸಂಯೋಜಿಸಿ, exposure compensation ನಿಂದ ಅಂಡರ್ ಎಕ್ಸ್-ಪೋಸ್ ಮಾಡಿ ಕ್ಲಿಕ್ಕಿಸಬಹುದು. ಈ ವಿಧಾನದಲ್ಲಿ ಮೇಲೆ ಹೇಳಿದ ಅಸ್ಪಷ್ಟದ ತೊಂದರೆ ಇರುವುದಿಲ್ಲ.
Manual Modeನಲ್ಲಿ shutter speed ಮತ್ತು aperture ನಾವೇ ಹೊಂದಿಸಿ, ಬೇಕಾದ ಬೆಳಕಿನ ಸಂಯೋಜನೆ ಪಡೆಯಬಹುದು.
ಇನ್ನಷ್ಟು ಉದಾಹರಣೆ:
ಮಂಜು ಮುಸುಕಿದಾಗ
ಶಿಲುಬೆ
ಕಡಲು
ಕಂಬಳಿ ಹುಳು
ಏಕಾಂಗಿಯ ಚಿತ್ರ ಚೆನ್ನಾಗಿ ಬಂದಿದೆ.
ReplyDeleteವಿವರಣೆಯೂ ಕೂಡಾ.
ಪಾಲಚಂದ್ರ,
ReplyDeleteನಿಮ್ಮ silhouette ಫೋಟೊ ವಿವರಣೆ ಚೆನ್ನಾಗಿದೆ...
ನನಗೆ ಎರಡು ಮತ್ತು ನಾಲ್ಕನೆ ಚಿತ್ರ ಇಷ್ಟವಾಯಿತು...ಅವು ಅರ್ಥಗರ್ಭಿತವಾಗಿವೆ...
ಪಾಲ,
ReplyDeleteಮಂಜು ಮುಸುಕಿದಾಗ ಫೋಟೋ ಒಳ್ಳೆ ಪೇಂಟಿಂಗ್ ಥರಾ ಕಾಣ್ಸತ್ತೆ. ವಿವರಣೆ ಚೆನ್ನಾಗಿದೆ.
-ಬಾಲ.
ಅನಿಲ್,
ReplyDeleteನಿಮ್ಮ ಪ್ರತಿಕ್ರಿಯೆಗೆ ವಂದನೆಗಳು.
ಶಿವು,
ತುಂಬಾ ಧನ್ಯವಾದ, ಅಂದಹಾಗೇ ಮೊದಲಿನ ಚಿತ್ರ ಕುತೂಹಲ ಮೂಡಿಸಿಲ್ವ? ಅದರ ಬಗ್ಗೆ ನಿಮ್ಮ ಅಭಿಪ್ರಾಯ/ದೋಷ ತಿಳಿಯುವಾಸೆ.
ಬಾಲ,
ತುಂಬಾ ಧನ್ಯವಾದ.
--
ಪಾಲ
ಪಾಲ ಚಂದ್ರ,
ReplyDeleteಮೊದಲನೆಯ ಚಿತ್ರವೂ ಚೆನ್ನಾಗಿದೆ....ಆದರೆ ಅದನ್ನು ತೆಗೆಯಲು ಹೆಚ್ಚು ಪರಿಣತಿ ಬೇಕಿಲ್ಲ.. ಹಾಗೂ ಅದರಲ್ಲಿ ಎರಡು ಮತ್ತು ನಾಲ್ಕನೆಯ ಚಿತ್ರದ ಹಾಗೆ ಚಿತ್ರವೇ ಕಥೆ ಹೇಳುವುದಿಲ್ಲ.... ಒಂದು ಚಿತ್ರ ನೋಡಿದ ಕೂಡಲೆ ಒಂದು ಕತೆಹೇಳುವಂತಿರಬೇಕು..... ಆ ಅಂಶ ಮೊದಲ ಚಿತ್ರದಲ್ಲಿ ಇಲ್ಲದ್ದರಿಂದ ನನಗೆ ಹಾಗೆ ಅನ್ನಿಸಿತು..... ಮೊದಲ ಚಿತ್ರ ಒಂದು ರೀತಿ....ಪ್ರೈಮರಿ ಶಾಲೆಯ ಹಾಗೆ, ಎರಡು ಮತ್ತು ನಾಲ್ಕನೆ ಚಿತ್ರಗಳು ಹೈಸ್ಕೂಲಿನ ಮೆಟ್ಟಿಲು ಹತ್ತಿದಂತೆ.....
ಶಿವು,
ReplyDeleteತುಂಬಾ ಸಂತೋಷವಾಯಿತು ನಿಮ್ಮ ಪ್ರತಿಕ್ರಿಯೆ ನೋಡಿ, ಒಳ್ಳೆಯ "ಇನ್ ಪುಟ್" ಸಿಕ್ಕಿದಂತಾಯ್ತು.
--
ಪಾಲ
tumba sahakariyaguva vicharagalu....
ReplyDeletekelavu kannada padagalu arthavagalilla... aadaru chennagittu.....
nanage innu hecchu photography bagge mahithi beku..elli sigabahudu?
ಹರ್ಷ,
ReplyDeleteಎಡಗಡೆ ವರ್ಗದ ಕೆಳಗಡೆ ಛಾಯಾಗ್ರಹಣ ಅಂತ ಲಿಂಕಿದೆ, ಅದ್ರ ಮೇಲೆ ಕ್ಲಿಕ್ ಮಾಡಿದ್ರೆ ಉಳಿದ ಲೇಖನ ಸಿಗುತ್ತೆ. ಪ್ರತಿಕ್ರಿಯೆಗೆ ಧನ್ಯವಾದ
--
ಪಾಲ