Sunday, December 19, 2010

ಹೊಸ lens

ಇತ್ತೀಚೆಗೆ ಕೊಂಡ ಹೊಸ lensನಿಂದ ತೆಗೆದ ಕೆಲವು ಪ್ರಾಯೋಗಿಕ ಚಿತ್ರಗಳು:

@ f/2.8

DEC_2010_KOTA_SAHANA

@ f/1.8
DEC_2010_KOTA_NANMRUTHA

ಅಂದಹಾಗೇ ನಾ ಕೊಂಡ lens: Nikkor f/1.8 50mm
ಇದೇ ಲೆನ್ಸ್ ಬಳಸಿ ನಾ ತೆಗೆದ ಇನ್ನಷ್ಟು ಚಿತ್ರಗಳನ್ನು ಇಲ್ಲಿ ಕಾಣಬಹುದು: Nikkor f/1.8 50mm | Palachandra | flickr

Saturday, December 18, 2010

ಹಸ್ತಾಕ್ಷರಿ ಜೇಡ

ನೀವು "Mask of Zorro" ಸಿನೇಮಾ ನೋಡಿದ್ದರೆ, ಅದ್ರಲ್ಲಿ ಹೀರೋ ತನ್ನ ಕೈವಾಡವಿದ್ದಲ್ಲೆಲ್ಲಾ "Z" ಎಂಬ ಚಿಹ್ನೆಯ ಕತ್ಯಾಕ್ಷರ (ಹಸ್ತದಿಂದ ಹಾಕುವ ಅಕ್ಷರ ಹಸ್ತಾಕ್ಷರ, ಹಾಗೆಯೇ ಕತ್ತಿಯಿಂದ ಹಾಕುವುದು ಕತ್ಯಾಕ್ಷರ) ಹಾಕುವುದನ್ನು ನೋಡಿರುತ್ತೀರಿ. ನಾವೂ ಕೂಡ ಯಾವುದಾದರೂ ಒಪ್ಪಂದ ಪತ್ರಕ್ಕೆ ಆಗಾಗ ಹಸ್ತಾಕ್ಷರ (ಸಹಿ) ಹಾಕಬೇಕಾಗಿ ಬರುತ್ತದೆ. ಈ ಹಸ್ತಾಕ್ಷರವೇ ನಮ್ಮ ಒಪ್ಪಂದಕ್ಕೆ ಸಾಕ್ಷಿ, ನಮ್ಮ ವ್ಯಕ್ತಿತ್ವಕ್ಕೆ ಗುರುತು.

 DEC_2010_KOTA_SignatureSpider_01

ಇದೇ ರೀತಿ ಈ "ಹಸ್ತಾಕ್ಷರಿ ಜೇಡ (signature spider)" ತನ್ನ ಬಲೆಯಲ್ಲಿ ನಾಲ್ಕು ಕಡೆ zig-zag ಹಸ್ತಾಕ್ಷರ ಹಾಕುತ್ತದೆ. ಬಲೆಯ ಈ ತರದ ರಚನೆ ಒಂದು ರೀತಿ ಅಲಂಕಾರದಂತೆ(stabilimentum). ತಮ್ಮ identityಯನ್ನು ಪ್ರತ್ಯೇಕವಾಗಿ ಗುರುತಿಸಿಕೊಳ್ಳಲು ಇದು ಸಹಾಯಕ. ನೆಲಮಟ್ಟದಿಂದ ಒಂದು ಮೀಟರೊಳಗೆ ಇದು ಬಲೆ ನೇಯುವುದರಿಂದ, ಇತರ ದೊಡ್ಡ ಪ್ರಾಣಿಗಳು ಸುಳಿದಾಡುವಾಗ, ಅದು ಗುರುತಿಸಿ, ಬಲೆಯನ್ನು ಹಾದು ಹೋಗದಂತೆ ಮಾಡಲು ಈ ಅಲಂಕಾರ. ಈ ಅಲಂಕಾರವಿಲ್ಲದಿದ್ದರೆ ಬರೀ ಕಣ್ಣಿಗೆ ಸೂಕ್ಷವಾಗಿ ಗಮನಿಸಿದರಷ್ಟೇ ಇದರ ಬಲೆ ಕಾಣಿಸುವುದು.

ದೊಡ್ಡ ಪ್ರಾಣಿಗಳೇನೋ ಇದರ ಹಸ್ತಾಕ್ಷರ ನೋಡಿ, ಬಲೆಯ ಬಳಿ ಸುಳಿಯುವುದಿಲ್ಲ. ಅಂತೆಯೇ ಈ ಜೇಡದ ಆಹಾರವಾದ ಇತರ ಕೀಟಗಳೂ ಈ ಹಸ್ತಾಕ್ಷರ ನೋಡಿ ಅದರ ಬಳಿ ಸುಳಿಯದಿದ್ದರೆ ಅವಕ್ಕೆ ಉಪವಾಸವೇ ಸರಿ. ಆಗ ಈ ಬಲೆಯ ಅಲಂಕಾರ "ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ" ಎಂಬಂತೆಯೇ. ಅದಕ್ಕಾಗಿ ಈ ಜೇಡ ಅಷ್ಟಪಾದಿಯಾದರೂ, ಕಾಲನ್ನು ಜೋಡಿ ಜೋಡಿಯಾಗಿರಿಸಿಕೊಂಡು ಚತುಷ್ಪಾದಿಯಂತೆ, ತಾನು ಜೇಡ ಅಲ್ಲ ಎನ್ನುವ ನಿಲುವಿನಲ್ಲಿರುತ್ತದೆ. ಈ ರೀತಿ ತನ್ನ ಕಾಲನ್ನು ಜೋಡಿ ಜೋಡಿಯಾಗಿರಿಸಿ ತಾನು ನೇಯ್ದ ಬಲೆಯ ನಾಲ್ಕು ಹಸ್ತಾಕ್ಷರದಂತಹ ರಚನೆಯಮೇಲೆ ಇಡುವುದರಿಂದ ಇನ್ನೊಂದು ಉಪಯೋಗವೂ ಇದೆ. ಕಾಲನ್ನು ಜೋಡಿಸಿದಾಗ ಕಾಲಿನ ರೋಮಗಳು ಬೆಸದು, ಹಸ್ತಾಕ್ಷರದ ಬಿಳುಪಿನ ರಚನೆಯೊಂದಿಗೆ ಸೂರ್ಯನ ಬೆಳಕನ್ನು ಪ್ರತಿಫಲಿಸುವಂತಹ ಸಾಧನವಾಗುತ್ತದೆ. ಕೀಟಗಳು ತೀಕ್ಷ ಬೆಳಕು ಮತ್ತು ಗಾಢವಾದ ಅದರ ಮೈಬಣ್ಣದಿಂದ ಹೂವೆಂದು ತಿಳಿದು ಆಕರ್ಷಿತವಾಗುವುದರಿಂದ ಇದರ ಬಲೆಗೆ ಸುಲಭವಾಗಿ ಬೀಳುತ್ತವೆ.

ತನ್ನ ಹೆಚ್ಚಿನ ಇತರ ಜೇಡಗಳಂತೆಯೇ ಈ ಪ್ರಭೇದದಲ್ಲೂ ಹೆಣ್ಣು ಗಂಡಿಗಿಂತ ದೊಡ್ಡದು. ಅಲ್ಲದೇ ಜೊತೆಗೂಡಿದ ನಂತರ ಜೊತೆಗಾರನನ್ನು ಕೊಲ್ಲುವುದೂ ಉಂಟು. ಜೇಡದ ಜೀವನದಂತೆ ನಮ್ಮದೂ ಇದ್ದಿದ್ದರೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಂನ್ಯಾಸಿಗಳಾಗುತ್ತಿದ್ದರೇನೋ! ಗಂಡು ಜೇಡ, ಹೆಣ್ಣು ಜೇಡದ ಬಲೆಯ ಬಳಿಯಲ್ಲೇ ಬಲೆ ನೇಯ್ದುಕೊಂಡಿರುತ್ತದೆ. ಹೆಣ್ಣು ಜೇಡ ಮುಂದೆ ಮೊಟ್ಟೆಯಿಡುವಾಗ ಈ ಬಲೆಯನ್ನು ಚೀಲದಂತೆ ಮಾಡಿ ಅದರಲ್ಲಿ ಮೊಟ್ಟೆಯನ್ನು ತುಂಬಿಸುತ್ತದೆ. ಈ ಚೀಲದಲ್ಲಿ ಸುಮಾರು ೪೦೦-೧೪೦೦ ಮೊಟ್ಟೆಗಳು ಹಿಡಿಯುತ್ತದೆ. ಮೊಟ್ಟೆಯಿಂದ ಹೊರಬಂದ ಪುಟ್ಟ ಜೇಡಗಳು ಒಂದಿನ್ನೊಂದನ್ನು ತಿಂದುಕೊಂಡಿದ್ದು, ಉಳಿದವು ಆ ಚೀಲ ಹರಿದು ಹೊರಬರುವ ಸಾಮರ್ಥ್ಯ ಹೊಂದಿದ ಮೇಲೆ ಸ್ವತಂತ್ರವಾಗಿ ಜೀವಿಸುತ್ತದೆ.

ಆಕರ: The Signature Spider | Scienceray

Thursday, December 16, 2010

ಬಣ್ಣದ ರೆಕ್ಕೆ

 Common Picture Wing (Rhyothemis variegata)

ಮೇಲ್ನೋಟಕ್ಕೆ ಬಣ್ಣದಿಂದ, ಹಾರಾಟದ ಭಂಗಿಯಿಂದ ಚಿಟ್ಟೆಯಂತೆ ಕಾಣಿಸಿದರೂ ಇದು ಏರೋಪ್ಲೇನ್ ಚಿಟ್ಟೆ (DragonFly)ಯ ಕೀಟವರ್ಗಕ್ಕೆ ಸೇರುತ್ತದೆ. ಹಾರಾಟ ಏರೋಪ್ಲೇನ್ ಚಿಟ್ಟೆಯಂತೆ ವೇಗವಲ್ಲದ ಚಿಟ್ಟೆಯಂತೆ ನಿಧಾನವಾದದ್ದು. ಕೆಳಗಿನ ಚಿತ್ರ ಹೆಣ್ಣು ಏರೋಪ್ಲೇನ್ ಚಿಟ್ಟೆಯದ್ದು. ಗಂಡಿನ ರೆಕ್ಕೆಯಲ್ಲಿ ಕಡಿಮೆ ಕಪ್ಪು ಬಣ್ಣವಿರುವುದರಿಂದ ಲಿಂಗಭೇದವನ್ನು ಸುಲಭದಲ್ಲಿ ಗುರುತಿಸಬಹುದು. 

DEC_2010_CommonPictureWing

Tuesday, December 14, 2010

ಕಂಬಳ

ಕಳೆದ ಗುರುವಾರ ಉಡುಪಿ ಜಿಲ್ಲೆಯ ವಂಡಾರಿನಲ್ಲಿ ನಡೆದ ಕಂಬಳದ ಕೆಲವು ಚಿತ್ರಗಳು
DEC_2010_VANDAR_KAMBLA_ (11)

DEC_2010_VANDAR_KAMBLA_ (2)

DEC_2010_VANDAR_KAMBLA_ (12)

DEC_2010_VANDAR_KAMBLA_ (7)

DEC_2010_VANDAR_KAMBLA_ (13)

DEC_2010_VANDAR_KAMBLA_ (1)

Thursday, December 02, 2010

ಭಕುತಿಯ ಭಾವ

ದೇವನ ಹೊತ್ತ ಆನೆಯ ಲದ್ದಿಯೂ ಭಕ್ತನಿಗೆ ಪೂಜ್ಯ!
Bhaktiya Bhava

ವರ್ಗ

Amomum (1) ficus krishnae (1) Gangtok (1) Nikon 40mm f/2.8 Micro (10) paris (1) Sikkim (8) snow (1) Yuksom (5) ಅನಿಮೇಟೆಡ್ (1) ಅನುಭವ ಕಥನ (7) ಅಮೂರ್ತ (1) ಆಟೋಟ (2) ಆಫಿಡ್ (1) ಇರುವೆ (6) ಉಡುಪಿ (4) ಉರಗ (3) ಏರಿ (1) ಒಂಟಿ ಚಕ್ರದ ಸೈಕಲ್ (1) ಒಯ್ಯುಗೆ (6) ಕದ (1) ಕಂದು ಏಲಕ್ಕಿ (1) ಕನ್ನಡ (2) ಕಪ್ಪು ಏಲಕ್ಕಿ (1) ಕಪ್ಪು-ಬಿಳುಪು (5) ಕಂಬಳ (1) ಕಂಬಳಿಹುಳು (2) ಕವನ (15) ಕವಿ ಶೈಲ (1) ಕಸರತ್ತು (1) ಕಳಸ (1) ಕಳ್ಳತನ (1) ಕಾವೇರಿ (1) ಕಾಳಾವಾರ ಬೆಟ್ಟ (1) ಕಾಳಿಂಗ ಸರ್ಪ (1) ಕಿಸ್ಕಾರ (1) ಕೀಟ ಪ್ರಪಂಚ (35) ಕುಂದಾಪುರ (1) ಕುವೆಂಪು (1) ಕೃಷಿ (9) ಕೃಷಿ ಮೇಳ (4) ಕೆರೆ (2) ಕೆಲಸ (2) ಕೆಸು (2) ಕೆಳದಿ (1) ಕೊಕ್ಕರೆ ಬೆಳ್ಳೂರು (1) ಕೋಟ (8) ಖಗೋಳ ಗಡಿಯಾರ (1) ಗವಿ (1) ಗುಡಿ ಕೈಗಾರಿಕೆ (1) ಗುಡ್ಡ (2) ಗುಹೆ (1) ಚಾರಣ (3) ಚಿಕ್ಕಮಗಳೂರು (1) ಚಿಟ್ಟಾಣಿ (1) ಚಿಟ್ಟೆಗಳು (3) ಚಿತ್ರ ಪುಟ (101) ಚಿತ್ರದುರ್ಗ (1) ಚಿತ್ರಪುಟ (1) ಚೌಕಾಶಿ (1) ಛಾಯಾಗ್ರಹಣ (24) ಜನ ಜೀವನ (52) ಜನಪದ (2) ಜರ್ಮನಿ (1) ಜಲಪಾತ (1) ಜೆಕ್ ಗಣರಾಜ್ಯ (4) ಜೇಡ (3) ಜೇನು ಸಾಕಣೆ (1) ಜೋಡಿ (1) ತರಕಾರಿ (2) ತುಮಕೂರು (2) ತೆಂಗಿನ ಕಾಯಿ (1) ತೆಂಗಿನ ತೋಟ (1) ದಸರ (4) ದೇವವೃಂದ (1) ದೇವಸ್ಠಾನ (1) ದೊಡ್ಡ ಏಲಕ್ಕಿ (1) ಧಾರವಾಡ (1) ನಂಬಿಕೆ (1) ನಾಟಕ (1) ನೀರ್ಹಕ್ಕಿ (6) ಪತಂಗ (1) ಪತ್ರಿಕೋದ್ಯಮ (1) ಪಶ್ಚಿಮ ಘಟ್ಟ (2) ಪಾಳು (1) ಪುಸ್ತಕ ಬಿಡುಗಡೆ (1) ಪೋರ್ಟ್ರೈಟ್ (8) ಪ್ರಬಂಧ (2) ಪ್ರವಾಸ ಕಥನ (3) ಪ್ರಾಹ (1) ಪ್ಲಾಸ್ಟಿಕ್ (1) ಬಕೇಟ್ (1) ಬಂಡಿ (1) ಬಣ್ಣ (1) ಬನವಾಸಿ (1) ಬಳ್ಳಿ (1) ಬಾಗಿಲು (1) ಬಾರ್ಕೂರು (1) ಬೀಗ (1) ಬೆಂಗಳೂರಿನ ಚಿತ್ರಗಳು (5) ಬೆಂಗಳೂರು (24) ಬೇಸಾಯ (1) ಬ್ರಹ್ಮಾವರ (1) ಭಾರತ ಬಂದ್ (1) ಭಿಕ್ಷುಕರು (1) ಮಕ್ಕಳು (10) ಮಂಜು (2) ಮಮ್ಮಮ್ (3) ಮಲೆನಾಡು (1) ಮಳೆ (1) ಮಳೆಗಾಲ (2) ಮಾರಿಕಣಿವೆ (1) ಮುಸ್ಸಂಜೆ (1) ಮೇಲುಕೋಟೆ (2) ಮೈಸೂರು (7) ಮೋಡ (2) ಮ್ಯಾಕ್ರೋ (12) ಯಕ್ಷಗಾನ (2) ರಸ್ತೆ (5) ರಾತ್ರಿ ನೋಟ (3) ರೈಮ್ (1) ರೈಲು (2) ರೈಲುಹಳಿ (1) ಲಲಿತ ಪ್ರಬಂಧ (6) ಲೇಪಾಕ್ಷಿ (1) ವಂಡಾರ್ (1) ವಾಸ್ತು ಶಿಲ್ಪ (1) ವಾಹನ (2) ವಿವೇಕ (1) ವ್ಯಕ್ತಿ ವಿಷಯ (3) ವ್ಯಾಪಾರ (1) ಶಾಲೆ (1) ಶಿರಸಿ (1) ಶಿರಸಿ. ಸೈಕಲ್ (1) ಶಿಲ್ಪ (1) ಶಿವನಸಮುದ್ರ (1) ಶುಭಾಶಯ (2) ಸಣ್ಣ ಕಥೆ (4) ಸಂತೆ (2) ಸಮುದ್ರ (2) ಸಮುದ್ರ ಜೀವಿ (2) ಸಸ್ಯ ಪ್ರಪಂಚ (12) ಸಾಕು ಪ್ರಾಣಿ (4) ಸಾಸ್ತಾನ (1) ಸಿಕ್ಕಿಂ (3) ಸೈಕಲ್ (5) ಸೈಕಲ್ ಯಾತ್ರೆ (1) ಸ್ಕಂದಗಿರಿ (1) ಸ್ತೂಪ (1) ಸ್ಪರ್ಧೆ (1) ಹಕ್ಕಿಗಳು (21) ಹಳ್ಳಿ (3) ಹಿಮ (1) ಹೂಗಳು (5) ಹೊಸ ವರ್ಷ (1) ಹೋಂ ಸ್ಟೇ (1) ಹೌರಾ (1)