
ಬಂಡೆಯ ಮೇಲ್ಮೈಗೂ ಓತಿಯ ಮೇಲ್ಮೈಯ ಲಕ್ಷಣಕ್ಕೂ ಇರುವ ಸಾಮ್ಯತೆ ಗಮನಿಸಿ
ಹೊಯಿಗೆಯ ಬಣ್ಣಕ್ಕೂ, ಏಡಿಯ ಬಣ್ಣಕ್ಕೂ ಇರುವ ಸಾಮ್ಯತೆ ಗಮನಿಸಿ

ಹೀಗೆಯೇ ಹಲವು ಹಕ್ಕಿಗಳು, ಪ್ರಾಣಿಗಳು, ಕೀಟಗಳನ್ನು ಗಮನಿಸಿದರೆ ಅವುಗಳ ಮೇಲ್ಮೈ ಲಕ್ಷಣ ಅವು ವಾಸಿಸುವ ಪರಿಸರದ ಹಿನ್ನೆಲೆಗೆ ಹೊಂದುವುದನ್ನು ಗಮನಿಸಬಹುದು. ಇಂತಹ ಪರಿಸ್ಥಿತಿಯಲ್ಲಿ ಇವುಗಳನ್ನು ಹಿನ್ನೆಲೆಯಿಂದ ಬೇರ್ಪಡಿಸಿ ನೋಡುವುದು ಕಠಿಣವಾಗಿ ಕಾಣಿಸುವುದು. ಇವುಗಳ ಈ ಗುಣಲಕ್ಷಣವೇ ವೈರಿಗಳಿಂದ ರಕ್ಷಿಸಿ ಇವುಗಳ ಸಂತತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಸಹಾಯಕ.
ಇಲ್ಲಿ ಮೊದಲಿಗೆ ಏಳುವ ಪ್ರಶ್ನೆ, ಈ ಜೀವಿಗಳು ಹೇಗೆ ತಮ್ಮ ಮೈಯ ಬಣ್ಣವನ್ನು ಪರಿಸರಕ್ಕೆ ಅನುಕೂಲವಾಗಿ ಹೊಂದಿಸಿಕೊಂಡವು ಎಂಬುದು.ನಾವಾದರೋ ಕನ್ನಡಿಯನ್ನು ನೋಡಿ ನಮ್ಮ ರೂಪ, ಬಣ್ಣ ಹೀಗೆ ಇದೆ ಎಂದು ತಿಳಿದುಕೊಳ್ಳುತ್ತೇವೆ. ಆದರೆ ಈ ಜೀವಿಗಳು ಹೇಗೆ ತಮ್ಮನ್ನು ಕಂಡುಕೊಂಡು, ಪರಿಸರಕ್ಕೆ ಅನುಗುಣವಾಗಿ ತಮ್ಮ ಬಣ್ಣ ಬದಲಿಸಿಕೊಂಡವು ಎಂಬುದು.
ತುಂಬಾ ಹಳೇ ಪ್ರಶ್ನೆ ಉತ್ತರ ನೀವೇ ಕಂಡುಕೊಳ್ಳಿ.
ಫೋಟೋಗಳು ಚೆನ್ನಾಗಿವೆ..ನಾನೂ ಈ ಹಳೇ ಪ್ರಶ್ನೆಯನ್ನು ಅಮ್ಮನ ಜೊತೆ ಕೇಳ್ತಾ ಇದ್ದೆ ಸಣ್ಣವಳಿರುವಾಗ. ಅದಕ್ಕೆ ಅಮ್ಮ 'ಅದು ನಮಗೆ ಕಾಣಬಾರದೆಂದು ಬಣ್ಣ ಬದಲಯಿಸುತ್ತೆ' ಅನ್ತಾ ಇದ್ರು.! ನೀವೇ ಪಕ್ಕಾ ಉತ್ತರ ಹುಡುಕಿ ಕೊಟ್ರೆ ಒಳ್ಳೆದು ಸರ್.
ReplyDelete-ಧರಿತ್ರಿ
ಧರಿತ್ರಿ,
ReplyDeleteಇಲ್ಲಿ ಬಣ್ಣ ಬದಲಿಸುವ ಉಸರವಳ್ಳಿಯ ಗುಣದ ಬಗ್ಗೆ ಹೇಳುತ್ತಿಲ್ಲ, ಮೇಲೆ ತಿಳಿಸಿದ ಉದಾಹರಣೆಯಲ್ಲಿ ಕೆಲವು ಬಣ್ಣ ಬದಲಿಸದೇ ಇರುವುದೂ ಇವೆ. ಆದರೆ ಅವುಗಳ ಬಣ್ಣ ಅವು ವಾಸಿಸುವ ಪರಿಸರಕ್ಕೆ ಹೊಂದಿಕೆಯಾಗಿ ಇರುವುದು ಹೇಗೆ ಎಂಬುದು ನನ್ನ ಪ್ರಶ್ನೆ. ಉದಾಹರಣೆಗೆ ಮೊದಲ ಚಿತ್ರದ ಮಿಡತೆ ಹಸಿರು ಬಣ್ಣದ ಬದಲು ಕೆಂಪೇಕಿರಬಾರದಿತ್ತು? ವೈರಿಗಳಿಂದ ರಕ್ಷಿಸಿಕೊಳ್ಳಲು ಎಂಬುದು ವಾದವಾದರೆ, ಹಸಿರನ್ನೇ ತನ್ನ ಬಣ್ಣವಾಗಿ ಮಾಡಿಕೊಳ್ಳಲು ಅದಕ್ಕೆ ಯಾವುದು ಸಹಾಯಕವಾಯಿತು ಎಂದು.
ಪಾಲಚಂದ್ರ.....
ReplyDeleteಮೊದಲನೆಯ ಚಿತ್ರಕ್ಕೆ ಮನಸೋತಿದ್ದೇನೆ...
ಮಲೆನಾಡಿನಲ್ಲಿ ಬಣ್ಣ ಬದಲಾಯಿಸುವ
ಊಸರವಳ್ಳಿ ನೋಡಿದ್ದೇನೆ...
ಇನ್ನು ಹಲವು ಪಕ್ಷಿಗಳ ಬಣ್ಣವೂ ಸಹ ಎಲೆ.. ಮರದ ತೊಗಟೆಯ ಹಾಗೆ ಇರುವದನ್ನು ಗಮನಿಸಿದ್ದೇನೆ...
ನಿಮ್ಮ ತರ್ಕ ಇಷ್ಟವಾಯಿತು....
ಪಾಲ,
ReplyDeleteಫೋಟೋಗಳು ಅದ್ಭುತ,
ಪ್ರಕ್ರತಿ ವೈಚಿತ್ರ್ಯಗಳ ತವರೂರು,
ಅರಿತದ್ದು ತುಂಬಾ ಕಡಿಮೆ, ಅರಿಯಬೇಕಾದದ್ದು ಅಗಾಧ
ಪಾಲಚಂದ್ರ,
ReplyDeleteನಾನು ಈ "ಹಿನ್ನೆಲೆಯೊಂದಾಗಿ" ಪ್ರಶ್ನೆಗೆ ಉತ್ತರ ಹುಡುಕುತ್ತಿದ್ದೇನೆ..ಇನ್ನೂ ಗೊತ್ತಾಗಿಲ್ಲ..ಆದ್ರೆ ಇದೆಲ್ಲಾ ದೇವರ ಸೃಷ್ಠಿಯ ಅಧ್ಬುತ ಕ್ರಿಯೆ ಅಂತ ಮಾತ್ರ ಹೇಳಬಲ್ಲೆ...
ಫೋಟೋಗಳೆಲ್ಲಾ ತುಂಬಾ ಚೆನ್ನಾಗಿವೆ...
ಧನ್ಯವಾದಗಳು.
ಪಾಲ ರವರೆ...
ReplyDeleteಒಳ್ಳೆಯ ಫೋಟೋಗಳು. ಹಾಗೆ ನಮಗೆಲ್ಲ ಒಳ್ಳೆ ಪ್ರಶ್ನೆ ಕೊಡ ಕೊಟ್ಟಿದ್ದಿರಾ....
ಹೌದು ಇದು ಪ್ರಕೃತಿ ವಿಸ್ಮಯ, ಇಲ್ಲಿರುವ ಪ್ರಾಣಿಗಳು ಕನ್ನಡಿ ನೋಡಿಕೊಳ್ಳ ದಿರಬಹುದು... ಆದರೆ ಇವಕ್ಕೆ ತಮ್ಮ ರಕ್ಷಣೆಗೋಸ್ಕರ ಬಣ್ಣ ಬದಲಿಸುವ ಕ್ರಿಯೆಯನ್ನು ದೇವರು ಕೊಟ್ಟಿದ್ದಾನೆ,,,,, ಇದರ ಬಗ್ಗೆ ಒಂದು ಡಾಕ್ಯುಮೆಂಟರಿ ನೋಡಿದ್ದೇ... ವಿಚಾರ ಮಾಡುವಂಥ ಪ್ರಶ್ನೆ...
ಮೊದಲನೆಯ ಹಾಗು ಕೊನೆಯ ಫೋಟೋ ತುಂಬ ಚೆನ್ನಾಗಿ ಇದೆ.....
ಗುರು
ಫೋಟೋಗಳು ತುಂಬಾ ಚೆನ್ನಾಗಿವೆ.
ReplyDelete