[ಚಿತ್ರದ ಮೇಲೆ ಕ್ಲಿಕ್ಕಿಸಿದರೆ ದೊಡ್ಡ ಚಿತ್ರ ತೆರೆದುಕೊಳ್ಳುವುದು]

ಬಿದಿರಮ್ಮ ತಾಯಿ ಕೇಳೆ ನೀನಾರಿಗಲ್ಲದವಳೆ
ಹುಟ್ಟುತ್ತಾ ಹುಲ್ಲು ಆದೆ ಬೆಳೆಯುತ್ತಾ ಬಿದಿರು ಆದೆ || ಪಲ್ಲವಿ ||
ಬೆಟ್ಟಾದ ಕೆಳಗೆ ಇದ್ದೆ ಅದರುದ್ದ ಬೆಳೆದಿದ್ದೆ || ಅನುಪಲ್ಲವಿ ||
ರಂಗನಿಗೆ ಕೊಳಲು ಆದೆ ಕಂದನಿಗೆ ತೊಟ್ಟಿಲಾದೆ
ಆಡುವ ಮಕ್ಕಳಿಗೆ ಓಡುವ ಕುದುರೆ ಆದೆ || ೧ ||
ಮದುವೇಯ ಹಂದರಕ್ಕೆ ಚಪ್ಪರದ ಕಂಬವಾದೆ
ಮೈದುಂಬುವ ಕುಣಿತಕ್ಕೆ ನಂದೀಯ ಕೋಲು ಆದೆ || ೨ ||
ಅತ್ತೆಮನೆ ಸೊಸೆಯರೀಗೆ ಬೀಸುವ ಕುಕ್ಕೆಯಾದೆ
ಮುತ್ತೈದೆ ಮಕ್ಕಳೀಗೆ ಬಾಗಣದ ಮರಗಳಾದೆ || ೩ ||
ಆಡು ಕಾಯೊ ಮಕ್ಕಳೀಗೆ ಸೆಣೆಯೆಂಬ ಜವಳಿಯಾದೆ
ಕಾಳುಗಳ ಕೂಡಿ ಇಡಲು ಕಟ್ಟೀದ ಕಣಜವಾದೆ || ೪ ||
ಊರೂರು ಸೂರು ಆದೆ ಕೂರಿಗೆಯ ಕೊಳವೆ ಆದೆ
ಮುಪ್ಪೀನ ಮುದುಕರಿಗೆ ಊರಂಬೊ ದೊಣ್ಣೆಯಾದೆ || ೫ ||
ಅಂಬಿಗನಿಗೆ ಹುಟ್ಟು ಆದೆ ಮ್ಯಾದಾರ್ಗೆ ಬುಟ್ಟಿ ಆದೆ
ಹತ್ತುವವಗೆ ಏಣಿ ಆದೆ ಸತ್ತವಂಗೆ ಚಟ್ಟವಾದೆ || ೬ ||
ಅಂತೆಯೇ ಈ ಕೆಳಗಿನ ಪದ, ಸಾಲುಗಳಿಗೆ ತಿಳಿದವರಿಂದ ಉತ್ತರ ನಿರೀಕ್ಷಿಸುತ್ತಾ
* ಬಾಗಣದ = ?
* ಮ್ಯಾದಾರ್ಗೆ = ?
* ಆಡು ಕಾಯೊ ಮಕ್ಕಳೀಗೆ ಸೆಣೆಯೆಂಬ ಜವಳಿಯಾದೆ = ?
ಬಾಗಣ : ಗೌರಿ ಹಬ್ಬದ ದಿನ ಹೆಂಗಸರು ಎರಡು ಮೊರಗಳ ಮಧ್ಯೆ ಮಂಗಲದ್ರವ್ಯಗಳನ್ನಿಟ್ಟು ಹಂಚಿಕೊಳ್ಳುವರು. ಅದಕ್ಕೆ ಬಾಗಣ ವೆನ್ನುತ್ತಾರೆ. ಬಿದಿರಿನ ಮೊರ ಅದಕ್ಕೆ ಬೇಕೇಬೇಕು ಅಲ್ಲವೆ?
ReplyDeleteಮ್ಯಾದರು ಅಂದರೆ ಬಿದಿರನ್ನು ನೇಯುವವರು. ಬುಟ್ಟಿ ಇತ್ಯಾದಿ ಬಿದಿರಿನಿಂದ ತಯಾರಿಸುವವರು.
ಮಲ್ಲಿಕಾರ್ಜುನರವರು ಹೇಳಿರುವುದು ಸರಿಯೇ. ಗೌರಿ ಹಬ್ಬದ ದಿನ ಹಂಚಿಕೊಳ್ಳುವುದಕ್ಕೆ "ಬಾಗೀನ" ಎನ್ನುತಾರೆ ಅಲ್ಲವೇ? ಅದನ್ನು ಗೀತೆಯಲ್ಲಿ "ಬಾಗಿಣ" ಎಂದು ಬಳಕೆಯಾಗಿದೆ.
ReplyDeleteಬಿದಿರಿನ ಉಪಯೋಗ ನೋಡಿದರೆ, ಮಾನವನಿಗಿಂತ ಬಿದಿರೀ ಮೇಲು ಎನ್ನಿಸುವುದಿಲ್ಲವೇ?
ಮಲ್ಲಿಕಾರ್ಜುನ್,
ReplyDeleteಬಾಗಣ (ಬಾಗೀನ), ಮ್ಯಾದರ ಬಗ್ಗೆ ಬೆಳಕು ಚೆಲ್ಲಿದ್ದಕ್ಕೆ ಧನ್ಯವಾದ.
ರಾಜೀವ್,
ಗೀತೆಯ ವಿಚಾರ ತಿಳಿದಿರಲಿಲ್ಲ, ಮೂಲ ಬರಹವನ್ನು ಕೋಟ್ ಮಾಡಬಹುದೇ?
ಮಾನವನನ್ನೂ ಬಿದಿರನ್ನೂ ಪ್ರಯೋಜನ ದೃಷ್ಟಿಯಿಂದ ಹೋಲಿಸುವುದು ಸರಿಯಲ್ಲವೆಂದು ನನ್ನನಿಸಿಕೆ.
ನಾನು ಗೀತೆ ಎಂದು ಹೇಳಿದ್ದು ಈ ಜನಪದ ಗೀತೆಯನ್ನು ಉದ್ದೇಶಿಸಿ. "ಬಾಗೀನ" ಎಂಬ ಪದವನ್ನು ಪ್ರಾಸದ ಸಲುವಾಗಿ "ಬಾಗಣ" ಎಂದು ಉಪಯುಕ್ತವಾಗಿದೆ.
ReplyDeleteಬಿದಿರನ್ನೂ ಮಾನವನನ್ನೂ ಹೋಲಿಸಿದಕ್ಕಾಗಿ ನನ್ನ ಕ್ಷಮೆ ಇರಲಿ.
ಪಾಲಚಂದ್ರ,
ReplyDeleteಬಿದಿರಿನ ಬಗ್ಗೆ ಜನಪದ ಹಾಡು ತುಂಬಾ ಚೆನ್ನಾಗಿದೆ. ಅದನ್ನು ಅರ್ಥಮಾಡಿಕೊಂಡರೇ ಬಿದಿರಿನ ಮಹತ್ವ ಗೊತ್ತಾಗುತ್ತದೆ....ಚಿತ್ರ ಸಹಿಯ ವಿವರಣೆ ಕೊಟ್ಟಿದ್ದೀರಿ...ಧನ್ಯವಾದಗಳು.
ಪಾಲಚಂದ್ರ...
ReplyDeleteಬಿದಿರಿನ ಮಹತ್ವ ಹೇಳುವ ಈ ಕವನ ಇಷ್ಟವಾಯಿತು....
ಧನ್ಯವಾದಗಳು..
ಪಾಲ ಅವರೆ
ReplyDeleteನೀವು ನೆನಪಿಸದಿದ್ದರೆ ಈ ಹಾಡನ್ನು ನಾನು ಓದುತ್ತಿರಲಿಲ್ಲವೇನೋ?
ಬಾಗಣ ಅನ್ನುವುದು ಆಡು ಮಾತಿನಲ್ಲಿ ಬಾಗಿನದ ಬದಲಿಗೆ ಹೇಳುವಂತದ್ದು. ಅದನ್ನು ಬಾಗ್ಣ ಎಂದೂ ಕರೆಯುತ್ತಾರೆ.
ಆಡು ಕಾಯುವವರಿಗೆ ಬೆಣೆಯೆಂಬ ಜವಳಿಯಾದೆ - ಬಹುಶಃ ಅವರಿಗೆ ಬಿದಿರಿನಿಂದ ಹೆಣೆದ ಚಾಪೆ ಇರಬಹುದು, ಇರಬಹುದು ಅಷ್ಟೆ. ನನ್ನ ಅನಿಸಿಕೆ.
ಬಿದಿರಿನ ಬಗ್ಗೆ ಇನ್ನೊಂದು ವಿಶೇಷ . ಬೇರೆ ಎಲ್ಲ ಗಿಡದಲ್ಲಿಯೂ ಹೂ ಬಿಡುವುದು ಜೀವಂತಿಕೆಯ ಸಂಕೇತ. ಆದರೆ ಬಿದಿರಿನಲ್ಲಿ ಹಾಗಲ್ಲ. ಹನ್ನೆರಡು ವರ್ಷಕ್ಕೊಮ್ಮೆ ಅದು ಹೂಬಿಡುತ್ತದೆ. ಹಾಗೂ ಹೂ ಬಿಟ್ಟ ನಂತರ ಅದು ಒಣಗಿ ಸಾಯುತ್ತದೆ.
ಬಿದಿರಿನ ಬಗ್ಗೆ ತೇಜಸ್ವಿಯವರ ‘ಚಿದಂಬರ ರಹಸ್ಯ’ ಕಾದಂಬರಿಯಲ್ಲಿ ಬಹಳ ವಿಷಯಗಳು ತಿಳಿಯುತ್ತವೆ.
ಹಿಂದಿನ ಕಾಲದಲ್ಲಿ ಬಿದಿರು ನಮ್ಮ ಜೀವನದ ಒಂದು ಭಾಗವಾಗಿತ್ತು. ಯಾವಾಗ ಮನುಷ್ಯ ಆಧುನಿಕತೆಯ ಕಡೆ ಮುಖ ಮಾಡಿದನೋ ಆಗ ಅದರ ಪ್ರಾಮುಖ್ಯತೆ ಕಡಿಮೆಯಾಯಿತು.ಹುಟ್ಟುವಾಗ ಮೊರದಲ್ಲಿ ಮಲಗುವ ಮಗು ಸತ್ತ ನಂತರ ಚಟ್ಟದ ಮೇಲೆ ಹೋಗಬೇಕು. ಹೀಗೆ ಹುಟ್ಟು ಸಾವಿನಲ್ಲಿ ಬಿದಿರು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿತ್ತು.
ಮ್ಯಾದಾರು ಅಂದರೆ ಮೇದರು. ಬಿದಿರಿನಿಂದಲೇ ಅವರ ಜೀವನ. ಆದೇ ಅವರ ಜೀವನಾಡಿ. ಮಾಸ್ತಿಯವರು ‘ಮೇದರ ಚೆನ್ನಿ’ ಎಂಬ ಕಥೆ ಬರೆದಿದ್ದಾರೆ.
ಬಹಳ ಇಷ್ಟವಾಯಿತು, ಈ ಜಾನಪದ ಗೀತೆ.
ಸೆಣೆ ಎಂದರೆ ಜೊಲ್ಲೆ ಎಂದು ಕರೆಯುತ್ತಾರೆ. ಸಣ್ಣ ಬಿದಿರುಗಳ ಸುಮಾರು ಹತ್ತ ರಿಂದ ಹದಿನೈದು ಅಡಿ ಉದ್ದವಿರುತ್ತದೆ ಅದಕ್ಕೆ ಕುಡುಗೋಲನ್ನ ಕಟ್ಟಲಾಗುತ್ತದೆ ಕಾರಣ ಆಡುಗಳಿಗೆ ಮರದ ಸೊಪ್ಪನ್ನ ಕೀಳಲು ಬಳಸುತ್ತಾರೆ.
ReplyDeleteBEST SONG
ReplyDelete