Wednesday, January 26, 2011

hobby, ಅಂಗಂದ್ರೇನಪ್ಪಾ?

ಗಣರಾಜ್ಯೋತ್ಸವದ ರಜಾ ದಿನ. ತೊಂಡೆಕಾಯಿ ಮಜ್ಜಿಗೆ ಹುಳಿ ಗಡದ್ದಾಗಿ ಹೊಡೆದು, ಹಾಗೆ ಸ್ವಲ್ಪ ಮಲಗಿ ಎದ್ದ ಮೇಲೆ ಉಂಡಿದ್ದು ಅರಗಿಲ್ಲವಲ್ಲ ಎಂಬ ತಿಳಿವಾಯ್ತು. ಅರಗಿಸುವ ನೆಪದಿಂದ ಹೆಗಲಿಗೆ ಕ್ಯಾಮರಾ ಸಿಕ್ಕಿಸಿಕೊಂಡು, ಸೈಕಲ್ ಏರಿ ಮನೆಯಿಂದ ಪಶ್ಚಿಮಾಭಿಮುಖವಾಗಿ ಹೊರಟೆ. ೪ ಗಂಟೆಯ ಬಿಸಿಲು, ಹೊಟ್ಟೆ ಭರ್ತಿ, ಅದೇ ಏರು ತಗ್ಗಿನ ರಸ್ತೆಯಲ್ಲಿ ಏದುಸಿರು ಬಿಡುತ್ತಾ ಸಾಗಿದೆ. ಈ ಬಾರಿ ಅಕ್ಕ ಪಕ್ಕದಲ್ಲಿ ಯಾವುದೇ ಚಿತ್ರ ಕಾಣಿಸಲಿಲ್ಲವಾದ್ದರಿಂದ ನನ್ನ ಸೈಕಲ್ ಯಾವುದೇ ತಿರುವು ತೆಗೆದುಕೊಳ್ಳದೇ ನೇರವಾಗಿ ಸಾಗಿತು.

ಹೋದ ಸ್ವಲ್ಪ ದೂರದಲ್ಲಿಯೇ ನೈಸ್ ರಸ್ತೆ ಕಾಣಿಸಿತು. ಅದರ ಮೇಲೆ ಸೇತುವೆಯಂತೆ ಹಾದುಹೋಗುವ ಇನ್ನೊಂದು ರಸ್ತೆ. ಹಾಗೇ ರಸ್ತೆಯಿಂದ ಮುಂದೆ ಸಾಗುತ್ತಿದ್ದಂತೆ ಅಕ್ಕಪಕ್ಕ ಗುಬ್ಬಚ್ಚಿಗಳು, ಮಿಂಚುಳ್ಳಿ, ಕೊಕ್ಕರೆ ಮೊದಲಾದ ಹಕ್ಕಿಗಳು, ಹೀರೆ, ಅಲಸಂದೆ, ಅವರೆ ಇನ್ನೂ ಒಂದಿಷ್ಟು ತರಕಾರಿಯ ತೋಟಗಳಿಂದ ಕಂಗೊಳಿಸುತ್ತಿತ್ತು. ಇಲ್ಲಿಂದ ಸೈಕಲ್ ನನ್ನ ಮಾತು ಕೇಳದೆ ಎಡ ಬಲ ಎಂದು ತನಗಿಷ್ಟ ಬಂದ ಕಡೆ ಹೋಗಲು ಆರಂಭಿಸಿತು.

 ಕೊನೇಯಲ್ಲಿ ಯಾವ ಸ್ಥಳ ತಲುಪಿದ್ದೇನಪ್ಪಾ ಎಂದು ಅಂಗಡಿಯವರನ್ನು ಕೇಳಿದರೆ ಇದು"ಕೆಂಚೇನ ಹಳ್ಳಿ" ಎಂದರು. ಅಲ್ಲೇ ಒಂದು ಮನೆಯ ಮುಂದೆ ಮಕ್ಕಳು ಆಟವಾಡುತ್ತಿದ್ದರು. ಸಂಜೆ ೫ ಗಂಟೆಯ ಹೊಂಬಿಸಿಲು. ಸರಿ ಮಕ್ಕಳದ್ದೇ ಚಿತ್ರ ತೆಗೆಯೋಣ risk ಕಡಿಮೆ ಎಂದು ಅವರಿದ್ದ ಕಡೆ ಹೊರಟೆ. ನಾನು ಕ್ಯಾಮರಾ ತೆಗೆಯುತ್ತಿದ್ದಂತೆಯೇ ಮಕ್ಕಳು ಒಬ್ಬೊಬ್ಬರಾಗಿ ಬಂದು, uncle ನನ್ ಫೋಟೋ ತೆಗೀರಿ, ನಂದು ತೆಗೀರಿ ಅಂತ ಗಂಟುಬಿದ್ದವು. ಬರೀ ಚಿತ್ರ ತೆಗೆದರೆ ಸಾಕೇ, ತೆಗೆದ ಚಿತ್ರ ಅವಕ್ಕೆ ತೋರಿಸಿದರೇನೆ ತೃಪ್ತಿ. ಮಕ್ಕಳ ನುಗ್ಗಾಟ, ಜಗ್ಗಾಟದಲ್ಲಿ ನನ್ನ ಕ್ಯಾಮರಾ ಕುತ್ತಿಗೆಯಲ್ಲಿ ಉಳಿದದ್ದೇ ಹೆಚ್ಚು.

ಮಕ್ಕಳ ಸಹವಾಸ ಸಾಕಪ್ಪಾ ಅಂತ ಆಚೀಚೆ ನೋಡಿದಾಗ ಕಣ್ಣಿಗೆ ಬಿದ್ದದ್ದು ರಾಗಿ ಕಣದಲ್ಲಿ ರಾಗಿ ಬೇರ್ಪಡಿಸುತ್ತಿದ್ದ ದೃಷ್ಯ. ನೋಡುತ್ತಿದ್ದಂತೆಯೇ ಸೈಕಲ್ ಅತ್ತ ಕಡೆ ವಾಲಿತು. ಸೈಕಲ್ ಬದಿಗಿಟ್ಟು ಕ್ಯಾಮರಾ ಹೊರತೆಗೆಯುತ್ತಿದ್ದಂತೆಯೇ "ಯಾಕಪ್ಪಾ ನಮ್ಮ ಫೋಟೋ. ನಾವೇನೂ ಮಾಡಿಲ್ಲ, ಬಡವ್ರು" ಎಂದು ಅಲ್ಲಿದ್ದವರೊಬ್ಬರೆಂದರು. "ಸುಮ್ನೆ ನನ್ನ hobby" ಅಂದೆ. "ಅಂಗಂದ್ರೆ ಏನಪ್ಪ?" ಮಾರುಪ್ರಶ್ನೆ. "ಹವ್ಯಾಸ, ನನಗೆ ಫೋಟೋ ತೆಗೆಯೋದು ಸಂತೋಷ ಕೊಡುತ್ತೆ" ಅಂದೆ. ಅದಕ್ಕವರು ತೆಕ್ಕೊಳಪ್ಪ ಅಂದ್ರು.

ಕ್ಯಾಮರಾ ನೋಡಿದ ಕೂಡಲೇ ಜನರ ಹಾವಭಾವದಲ್ಲಿ ಅಸಹಜತೆ ಕಾಣಿಸುತ್ತದೆ. ನಾವು ತೆಗೆಯ ಹೊರಟ ಚಿತ್ರದಲ್ಲಿ ಸಹಜತೆ ಕಾಣಿಸಬೇಕಿದ್ದರೆ ಅವರೊಂದಿಗೆ ಬೆರೆಯುವುದು ಮುಖ್ಯ. ಆದ್ದರಿಂದ ಮೊದಲೇ ಫೋಟೋ ತೆಗೆಯದೇ, ಅವರ ಜೊತೆ ಸ್ವಲ್ಪ ಹೊತ್ತು ಮಾತನಾಡಿ ನಂತರ ನನ್ನ ಕೆಲಸ ಆರಂಭಿಸಿದೆ. ಅವರು ಅವರ ಕೆಲಸ ಮುಂದುವರಿಸಿದರು. ಮುಂದಿನದ್ದು ಕೆಳಗಿನ ಚಿತ್ರಗಳಲ್ಲಿವೆ.

DSC_1258

DSC_1236

Monday, January 17, 2011

ಅಪ್ಪಗೆ ಬೇಕು... ಗುಟ್ಕಾ ಪ್ಯಾಕೇಟು

ಆಫೀಸು ೧೧ ಗಂಟೆಗಿದ್ದರೆ ಯಾರಿಗೆ ತಾನೇ ಬೆಂಗಳೂರಿನ ಈ ಛಳಿಯಲ್ಲಿ ಬೆಳಿಗ್ಗೆ ಬೇಗ ಏಳುವ ಹುಮ್ಮಸ್ಸಿರುತ್ತದೆ. ಅದೂ ಭಾನುವಾರದ ರಜಾ ದಿನ ಬೇರೆ. ಆದರೂ ನಾನಂದುಕೊಂಡಿದ್ದನ್ನು ಆರಂಭಿಸಬೇಕು. ನಾಳೆ ಬೆಳಿಗ್ಗೆ ಏನಾದರಾಗಲಿ ಬೇಗ ಏಳಬೇಕು ಎಂದು ತೀರ್ಮಾನಿಸಿ ಶನಿವಾರ ರಾತ್ರಿ ೧೧:೩೦ಕ್ಕೆ ಮಲಗಿದೆ. ಭಾನುವಾರ ಬೆಳಿಗ್ಗೆ ೬:೩೦ಕ್ಕೆ ಎಚ್ಚರ ಆಯಿತಾದರೂ ಏಳಬೇಕೆ ಬೇಡವೇ ಎಂಬ ಗೊಂದಲ. ನಾಳೆಯಿಂದ ಆರಂಭಿಸಬಹುದಲ್ಲಾ ಎಂದು ಒಮ್ಮೆ ಅಂದುಕೊಂಡರೂ, ಮನದೊಳಗಿದ್ದ ಆ ಏನೋ ನಿದ್ರಿಸಲು ಬಿಡಲಿಲ್ಲ.

ಇನ್ನೇನು ಮಾಡುವುದೆಂದು ಎದ್ದು, ಶೌಚಾದಿ ಮುಗಿಸಿ ಕ್ಯಾಮರಾವನ್ನು ಹೆಗಲಿಗೇರಿಸಿ ನನ್ನ ನೆಚ್ಚಿನ ಸೈಕಲ್ ಏರಿ ಹೊರಟೆ. ಹೊರಟಿದ್ದು ಹೌದು ಆದರೆ ಹೋಗುವುದು ಎಲ್ಲಿಗೆ? ಇದೇನು ಅಂತಹ ಕಷ್ಟದ ಪ್ರಶ್ನೆಯಲ್ಲ. ಸೈಕಲ್ ಹೋಗಬಹುದಾದ ಜಾಗಕ್ಕೆ ಎಂದುತ್ತರ ನೀಡಿ, ನಮ್ಮ ಮನೆಯಿರುವ ಬಾಲಾಜಿ ಲೇ-ಔಟಿನಿಂದ ಮೇಲ್ಮುಖವಾಗಿ ಉಪಕಾರ್ ಲೇ-ಔಟ್ ಕಡೆ ಹೊರಟೆ.

ಸೂರ್ಯನ ಹೊಂಗಿರಣ ಮೈಯನ್ನು ಹೊನ್ನಾಗಿಸುತ್ತಿದ್ದರೂ, ತಣ್ಣನೆಯ ಗಾಳಿ ಮೈಯೆಲ್ಲಾ ಸೋಕಿ ಮೈ ಬೆಚ್ಚಗಾಗುವುದನ್ನು ತಪ್ಪಿಸುತ್ತಿತ್ತು. ಚಾಪೆ, ಜಮಖಾನ, ಕಂಬಳಿ... ಛೇ ಮತ್ತದೇ ಆಲೋಚನೆ. ಸುಮ್ಮನೇ ಮನೆಯಲ್ಲಿ ಮಲಗಬಹುದಿತ್ತು. ಆದರೆ ಎದುರುಗಡೆಯ ಏರು ಆಲೋಚನೆಯನ್ನು ಹೊಡೆದುಹಾಕಿ ತನ್ನನ್ನು ಏರುವಂತೆ ಪ್ರೇರೇಪಿಸುತ್ತಿತ್ತು.

Thursday, January 13, 2011

ಹೊಸ ಮೊಬೈಲು

ಟಚ್ ಪ್ಯಾಡು, ಮೂರಿಂಚು ಪರದೆಯ ನನ್ನ ಹೊಸ ಮೊಬೈಲಿಗೆ
ಪರದೆಯಷ್ಟೇ ದೊಡ್ಡ ಸ್ಕ್ರಾಚ್ ಗಾರ್ಡು
ಒಂದು ಗೀರಾದರೂ, ಒಮ್ಮೆ ಬಿದ್ದರೂ
ಚಟಪಡಿಸೋದು

ಟಚ್ ಪ್ಯಾಡು, ಮೂರಿಂಚು ಪರದೆಯ ನನ್ನ ಹಳೆ ಮೊಬೈಲಿನ
ಹರಿದ ಸ್ಕ್ರಾಚ್ ಗಾರ್ಡು
ಪರದೆಯ ತುಂಬಾ ಗೀರು, ಬಿದ್ದರೂ
ಎತ್ತಿ ಮೇಲಿಡೆನು

Monday, January 03, 2011

ಹೊಸವರ್ಷದ ಶುಭಾಶಯಗಳು

ಹೊಸತನದ ಹುಡುಕಾಟದಲ್ಲಿರುವ ಸರ್ವರಿಗೂ ಹೊಸ ವರ್ಷದ ಶುಭಾಶಯಗಳು
DEC2010_KOTA_Egret

ವರ್ಗ

Amomum (1) ficus krishnae (1) Gangtok (1) Nikon 40mm f/2.8 Micro (10) paris (1) Sikkim (8) snow (1) Yuksom (5) ಅನಿಮೇಟೆಡ್ (1) ಅನುಭವ ಕಥನ (7) ಅಮೂರ್ತ (1) ಆಟೋಟ (2) ಆಫಿಡ್ (1) ಇರುವೆ (6) ಉಡುಪಿ (4) ಉರಗ (3) ಏರಿ (1) ಒಂಟಿ ಚಕ್ರದ ಸೈಕಲ್ (1) ಒಯ್ಯುಗೆ (6) ಕದ (1) ಕಂದು ಏಲಕ್ಕಿ (1) ಕನ್ನಡ (2) ಕಪ್ಪು ಏಲಕ್ಕಿ (1) ಕಪ್ಪು-ಬಿಳುಪು (5) ಕಂಬಳ (1) ಕಂಬಳಿಹುಳು (2) ಕವನ (15) ಕವಿ ಶೈಲ (1) ಕಸರತ್ತು (1) ಕಳಸ (1) ಕಳ್ಳತನ (1) ಕಾವೇರಿ (1) ಕಾಳಾವಾರ ಬೆಟ್ಟ (1) ಕಾಳಿಂಗ ಸರ್ಪ (1) ಕಿಸ್ಕಾರ (1) ಕೀಟ ಪ್ರಪಂಚ (35) ಕುಂದಾಪುರ (1) ಕುವೆಂಪು (1) ಕೃಷಿ (9) ಕೃಷಿ ಮೇಳ (4) ಕೆರೆ (2) ಕೆಲಸ (2) ಕೆಸು (2) ಕೆಳದಿ (1) ಕೊಕ್ಕರೆ ಬೆಳ್ಳೂರು (1) ಕೋಟ (8) ಖಗೋಳ ಗಡಿಯಾರ (1) ಗವಿ (1) ಗುಡಿ ಕೈಗಾರಿಕೆ (1) ಗುಡ್ಡ (2) ಗುಹೆ (1) ಚಾರಣ (3) ಚಿಕ್ಕಮಗಳೂರು (1) ಚಿಟ್ಟಾಣಿ (1) ಚಿಟ್ಟೆಗಳು (3) ಚಿತ್ರ ಪುಟ (101) ಚಿತ್ರದುರ್ಗ (1) ಚಿತ್ರಪುಟ (1) ಚೌಕಾಶಿ (1) ಛಾಯಾಗ್ರಹಣ (24) ಜನ ಜೀವನ (52) ಜನಪದ (2) ಜರ್ಮನಿ (1) ಜಲಪಾತ (1) ಜೆಕ್ ಗಣರಾಜ್ಯ (4) ಜೇಡ (3) ಜೇನು ಸಾಕಣೆ (1) ಜೋಡಿ (1) ತರಕಾರಿ (2) ತುಮಕೂರು (2) ತೆಂಗಿನ ಕಾಯಿ (1) ತೆಂಗಿನ ತೋಟ (1) ದಸರ (4) ದೇವವೃಂದ (1) ದೇವಸ್ಠಾನ (1) ದೊಡ್ಡ ಏಲಕ್ಕಿ (1) ಧಾರವಾಡ (1) ನಂಬಿಕೆ (1) ನಾಟಕ (1) ನೀರ್ಹಕ್ಕಿ (6) ಪತಂಗ (1) ಪತ್ರಿಕೋದ್ಯಮ (1) ಪಶ್ಚಿಮ ಘಟ್ಟ (2) ಪಾಳು (1) ಪುಸ್ತಕ ಬಿಡುಗಡೆ (1) ಪೋರ್ಟ್ರೈಟ್ (8) ಪ್ರಬಂಧ (2) ಪ್ರವಾಸ ಕಥನ (3) ಪ್ರಾಹ (1) ಪ್ಲಾಸ್ಟಿಕ್ (1) ಬಕೇಟ್ (1) ಬಂಡಿ (1) ಬಣ್ಣ (1) ಬನವಾಸಿ (1) ಬಳ್ಳಿ (1) ಬಾಗಿಲು (1) ಬಾರ್ಕೂರು (1) ಬೀಗ (1) ಬೆಂಗಳೂರಿನ ಚಿತ್ರಗಳು (5) ಬೆಂಗಳೂರು (24) ಬೇಸಾಯ (1) ಬ್ರಹ್ಮಾವರ (1) ಭಾರತ ಬಂದ್ (1) ಭಿಕ್ಷುಕರು (1) ಮಕ್ಕಳು (10) ಮಂಜು (2) ಮಮ್ಮಮ್ (3) ಮಲೆನಾಡು (1) ಮಳೆ (1) ಮಳೆಗಾಲ (2) ಮಾರಿಕಣಿವೆ (1) ಮುಸ್ಸಂಜೆ (1) ಮೇಲುಕೋಟೆ (2) ಮೈಸೂರು (7) ಮೋಡ (2) ಮ್ಯಾಕ್ರೋ (12) ಯಕ್ಷಗಾನ (2) ರಸ್ತೆ (5) ರಾತ್ರಿ ನೋಟ (3) ರೈಮ್ (1) ರೈಲು (2) ರೈಲುಹಳಿ (1) ಲಲಿತ ಪ್ರಬಂಧ (6) ಲೇಪಾಕ್ಷಿ (1) ವಂಡಾರ್ (1) ವಾಸ್ತು ಶಿಲ್ಪ (1) ವಾಹನ (2) ವಿವೇಕ (1) ವ್ಯಕ್ತಿ ವಿಷಯ (3) ವ್ಯಾಪಾರ (1) ಶಾಲೆ (1) ಶಿರಸಿ (1) ಶಿರಸಿ. ಸೈಕಲ್ (1) ಶಿಲ್ಪ (1) ಶಿವನಸಮುದ್ರ (1) ಶುಭಾಶಯ (2) ಸಣ್ಣ ಕಥೆ (4) ಸಂತೆ (2) ಸಮುದ್ರ (2) ಸಮುದ್ರ ಜೀವಿ (2) ಸಸ್ಯ ಪ್ರಪಂಚ (12) ಸಾಕು ಪ್ರಾಣಿ (4) ಸಾಸ್ತಾನ (1) ಸಿಕ್ಕಿಂ (3) ಸೈಕಲ್ (5) ಸೈಕಲ್ ಯಾತ್ರೆ (1) ಸ್ಕಂದಗಿರಿ (1) ಸ್ತೂಪ (1) ಸ್ಪರ್ಧೆ (1) ಹಕ್ಕಿಗಳು (21) ಹಳ್ಳಿ (3) ಹಿಮ (1) ಹೂಗಳು (5) ಹೊಸ ವರ್ಷ (1) ಹೋಂ ಸ್ಟೇ (1) ಹೌರಾ (1)