
ಕಪ್ಪು ಮಿಶ್ರಿತ ಕಂದು ಮೈಬಣ್ಣ, ರೆಕ್ಕೆಯಲ್ಲಿ ಬಿಳಿ ಬಣ್ಣದ ರೇಖೆ, ಕಪ್ಪು ತಲೆ, ಕಣ್ಣಿನ ಸುತ್ತ ಹಳದಿ ಬಣ್ಣದ ಪುಕ್ಕ ರಹಿತ ಚರ್ಮ, ಕಾಲು ಮತ್ತು ಕೊಕ್ಕು ಹಳದಿ ಬಣ್ಣದಿಂದ ಕೂಡಿರುತ್ತದೆ. ಹೆಣ್ಣು ಮತ್ತು ಗಂಡು ಒಂದೇ ರೀತಿ ಇದ್ದು, ಗುಂಪುಗಳಲ್ಲಿ ಅಥವಾ ಜೋಡಿಯಾಗಿ ಕಾಣಿಸುತ್ತವೆ.
೨೦೦೮ರ ಆಸ್ಟ್ರೇಲಿಯಾದ ಸಮೀಕ್ಷೆಯ ಪ್ರಕಾರ "The Most Important Pest" ಎಂದು ಕುಖ್ಯಾತಿ ಪಡೆದ ಗೊರವಂಕ, "100 of the World's Worst Invasive Alien Species" ಕ್ರಮಾಂಕದಲ್ಲಿ ಮೂರನೇ ಸ್ಥಾನ ಪಡೆದಿದೆ. ೧೮೬೩ -೧೮೭೨ರ ಸಮಯದಲ್ಲಿ ಕೀಟಗಳ ನಿಯಂತ್ರಣಕ್ಕಾಗಿ ಈ ಜಾತಿಯ ಹಕ್ಕಿಗಳನ್ನು ಆಸ್ಟ್ರೇಲಿಯಾಕ್ಕೆ ಪರಿಚಯಿಸಲಾಯ್ತು. ಈ ಹಕ್ಕಿ ಆಕ್ರಮಣ ಶೀಲ ಸ್ವಭಾವದ್ದಾಗಿದ್ದು, ವಾತಾವರಣ ವೈಪರೀತ್ಯಕ್ಕೆ ಸುಲಭವಾಗಿ ಹೊಂದಿಕೊಳ್ಳಬಲ್ಲದು. ಕೀಟಗಳನ್ನು ಧ್ವಂಸ ಮಾಡುವುದರ ಜೊತೆಗೆ ತನ್ನ ಗೂಡಿನ ಬಳಿ ಬರುವ ಇತರ ಹಕ್ಕಿಗಳ ಮೇಲೆ ಆಕ್ರಮಿಸಿ ಅವುಗಳ ಸಂತತಿಗೆ ಮಾರಕವಾಗಿ, ಬೆಳೆ ನಾಷಕ ಪಿಡುಗಾಗಿ ತನ್ನ ಸಂತಾನ ವೃದ್ಧಿಸಿಕೊಂಡಿದೆ. ಒಂದು ಭೂಭಾಗದ ಜೀವಿಯನ್ನು ಹೊಸ ವಾತಾವರಣಕ್ಕೆ ಪರಿಚಯಿಸಿದಲ್ಲಿ ಆಗಬಹುದಾದ ತೊಂದರೆಗಳಿಗೆ ಗೊರವಂಕ ಉತ್ತಮ ಉದಾಹರಣೆ.
ಮಾಹಿತಿ ಆಧಾರ: ವಿಕಿ
ಚಿತ್ರ ಕೃಪೆ: ಪಾಲ
ಭಾರತದಲ್ಲಿ ಹೇರಳವಾಗಿ ಕಾಣ ಸಿಗುತ್ತದೆ ಈ ಪಕ್ಷಿ.
ReplyDeleteಫೋಟೊ ಚೆನ್ನಾಗಿದೆ. ಪಾರ್ಶ್ವ ನೋಟದ ಒಂದು ಫೋಟೊ ವನ್ನು ಹಾಕಿದ್ದರೆ ಪಕ್ಷಿಯ ಮೈಮಾಟಿನ ಹೆಚ್ಚಿನ ಮಾಹಿತಿ ದೊರಕುತ್ತಿತ್ತು.
ನೀವು ಒದಗಿಸಿದ ಮಾಹಿತಿ ಕೂಡ ಚೆನ್ನಾಗಿದೆ.
PHOTO TUMBA CHENNAGIDE.... EE HAKKIYANNU NODIDDE.... AADARE EDARA BAGGE ISHTU VICHARA THILIDIRALILA....
ReplyDeleteChannagide pala..
ReplyDeleteKota da kade idanna halasina hakki anta karitare..
ನಿಮ್ಮ ಬ್ಲಾಗಿನ ಎಲ್ಲಾ ಚಿತ್ರಗಳು ಮತ್ತೆ ಮತ್ತೆ ನೋಡಬಲ್!
ReplyDeleteಗೊರವಂಕವನ್ನು ನಮ್ಮ ಹಳ್ಳಿಯ ಕಡೆ ಹು(ಉ)ಣ್ಣಿಗೊರವ ಎನ್ನುತ್ತಾರೆ. ಇವು ದನಗಳ ಮೈಮೇಲೆ ಕುಳಿತು ದನಗಳ ರಕ್ತ ಹೀರುವ ಹುಣ್ಣಿಗಳನ್ನು ತಿನ್ನುತ್ತವೆ. ಆದ್ದರಿಂದ ಹುಣ್ಣಿಗೊರವ ಎನ್ನುವ ಹೆಸರು ಬಳಕೆಗೆ ಬಂದಿರಬಹುದು.
ಉಣ್ಣಿಗೊರವ ಎಂಬುದು ಸರಿಯಾದ ಪ್ರಯೋಗ; ಹುಣ್ಣಿಗೊರವ ಎಂಬುದು ತಪ್ಪು.
ReplyDeleteಗುರು,
ReplyDeleteನಿಮ್ಮ ಪ್ರತಿಕ್ರಿಯೆಗೆ ವಂದನೆಗಳು, ಹಾಗೆಯೇ ನಿಮ್ಮ ಸಲಹೆ ಕೂಡ ಉತ್ತಮವಾಗಿದೆ. ಮುಂದಿನ ಬಾರಿ ಪ್ರಯತ್ನಿಸುತ್ತೇನೆ.
ಹರ್ಷ,
ಪ್ರತಿಕ್ರಿಯೆಗೆ ವಂದನೆಗಳು
ರವೀಂದ್ರ,
"ಹಲಸಿನ ಹಕ್ಕಿ" ಮೈನಾದ ಇನ್ನೊಂದು ಹೆಸರಿಗೆ ವಂದನೆಗಳು.
ಡಾ||ಸತ್ಯನಾರಾಯಣ,
ಹಾಗಿದ್ರೆ ಆವಾಗಾವಾಗ ಬರ್ತಾ ಇರಿ :)
"ಉಣ್ಣಿಗೊರವ" ಮತ್ತೊಂದು ಹೊಸ ಹೆಸ್ರು ಸಿಕ್ತು ನೋಡಿ, ಧನ್ಯವಾದ
--
ಪಾಲ
Photo mattu maahiti chennaagive...
ReplyDeleteಪಾಲಚಂದ್ರ,
ReplyDeleteಬ್ಲಾಗಿಗೆ ಬರುವುದಕ್ಕೆ ತಡವಾಗಿದ್ದಕ್ಕೆ ಕ್ಷಮೆಯಿರಲಿ....
ಮೈನಾ ಹಕ್ಕಿಯ ಫೋಟೋ ಚೆನ್ನಾಗಿದೆ..ಷಾರ್ಪ್‌ನೆಸ್ ಚೆನ್ನಾಗಿದೆ. ಇದೇ ಜಾತಿಯಲ್ಲಿ ಬ್ರಾಹ್ಮಿಣಿ ಮೈನಾ ಅಂತ ಇದೆ..ಅದು ದಿನಾ ಸ್ನಾನ ಮಾಡಿದ ಹಾಗೆ ಇದಕ್ಕಿಂತ ಸ್ವಲ್ಪ ಸುಂದರವಾಗಿ ಇರುತ್ತದೆ...ನೋಡಲು ಇನ್ನೂ ಚೆನ್ನಾಗಿರುತ್ತದೆ..ಅದು ಸಿಕ್ಕರೇ ಪ್ರಯತ್ನಿಸಿ....
ಧನ್ಯವಾದಗಳು..
ಚಿತ್ರ ಗೆನ್ನಾಗಿದೆ, ಮಾಹಿತಿ ಕೂಡ. ಎಲ್ಲಿ ತೆಗೆದದ್ದು. ತೆಗೆಯುವಾಗ ಆದ ಅನುಭವ ವಿಶೇಷವಾಗಿದ್ರೆ ಹಂಚಿಕೊಳ್ಳಿ.
ReplyDeleteಒಳ್ಳೆಯ ಮಾಹಿತಿ ಪಾಲಚಂದ್ರ.
ReplyDeleteರವಿಕಾಂತ ಗೋರೆ, ಶಿವು, ಧರಿತ್ರಿ
ReplyDeleteಪ್ರತಿಕ್ರಿಯೆಗೆ ವಂದನೆಗಳು.
ಮಲ್ಲಿಕಾರ್ಜುನ್,
ಚಿತ್ರಾನ ಉಡುಪಿ ಜಿಲ್ಲೆಯ ಕೋಟದಲ್ಲಿ ತೆಗೆದದ್ದು. ಆ ಹಕ್ಕಿ ದಿನಾ ಅದೇ ಜಾಗದಲ್ಲಿ ಕೂತು ಆಹಾರ ಹುಡುಕುತ್ತಾದ್ದರಿಂದ, ಸ್ವಲ್ಪ ದೂರದಲ್ಲಿಯೇ ಇರುವ ಮನೆಯ ಕಿಟಕಿಯಿಂದ ಮರೆ ಮಾಡಿಕೊಂಡು ತೆಗೆದದ್ದು.