
ಚೆಲುವೆಲ್ಲಾ ತನ್ನಲ್ಲಿದೆ
ಎಂದುಲಿಯಿತು ಹೂವು
ಹೂವ ಮುಡಿದ ಬಾಲೆ
ಚೆಲುವೇ ತಾನೆಂದಳು
ಹೂವ ದೈವಕ್ಕೆ ಮುಡಿಸಿದ ಭಕ್ತ
ಭಕ್ತಿಯ ಚೆಲುವು ತನ್ನದೆಂದನು
ಬೋಳು ಗಿಡವ ಕಂಡ ಮಿಡತೆ
ಬಡವನ ಹೊಟ್ಟೆಗೆ ಹೊಡೆದರೆಂದಿತು!
ಪ್ರೇರಣೆ: ಹೂವು ಚೆಲುವೆಲ್ಲಾ ತಂದೆಂದಿತು ಹಾಡು, ಪಾಲಾಅವರ ಮಿಡತೆ ಫೋಟೋ.
ಅನುಭವಿಸದೇ ಹಾಡಿದ ಹಾಡು ಹಾಡಲ್ಲ, ಅನುಭವಿಸದೇ ಬಿಡಿಸಿದ ಚಿತ್ರ ಚಿತ್ರವಲ್ಲ, ಅನುಭವಿಸದೇ ಬರೆದ ಬರಹ ಬರಹವಲ್ಲ!
ಹೂವು ಮತ್ತು ಮಿಡತೆಯ ಫೋಟೊ ಅದ್ಭುತವಾಗಿದೆ...
ReplyDeleteತುಂಬಾ ಚೆನ್ನಾಗಿದೆ. ನಿಮ್ಮ ತಾಳ್ಮೆ ಮತ್ತು ಕ್ರಿಯಾಶೀಲತೆಗೆ ಹ್ಯಾಟ್ಸಾಫ್!
ReplyDeletesundaravaagide.
ReplyDeleteತುಂಬಾ ಚೆನ್ನಾಗಿ ಬರೆದಿದ್ದೀರ, ಅಭಿನಂದನೆಗಳು --
ReplyDeleteತುಂಬಾ ಚೆನ್ನಾಗಿ ಬರೆದಿದ್ದೀರ, ಅಭಿನಂದನೆಗಳು --
ReplyDeleteಗುರು,
ReplyDeleteವಂದನೆಗಳು
ಸತ್ಯನಾರಾಯಣ,
ಪ್ರೋತ್ಸಾಹಕ್ಕೆ ನನ್ನಿ
ಕ್ಷಣ ಚಿಂತನೆ,
ಧನ್ಯವಾದ
ಗುರುಮೂರ್ತಿ,
ಅನುಭವ ಮಂಟಪಕ್ಕೆ ಸ್ವಾಗತ
ಚಿತ್ರ ಅದ್ಭುತವಾಗಿದೆ. ಅದರೊಂದಿಗೆ ಹೊಸ ದೃಷ್ಟಿಕೋನದ ಕವನ ನನ್ನ ಮನಸೆಳೆಯಿತು.ಮಿಡತೆಯ ದೃಷ್ಟಿಯಿಂದ ಗಿಡವನ್ನು ನೋಡಿ ಅದರ ಬಗ್ಗೆ ಅನುಕಂಪ ಹುಟ್ಟಿಸಿರುವಿರಿ. ಮನುಷ್ಯ ಇಡೀ ಪ್ರಕೃತಿ ತನ್ನದೆಂದು ಭಾವಿಸಿ ಅದನ್ನು ಸೂರೆಗೊಳ್ಳುತ್ತಾನೆ.ಅವನ ಈ ದುರಾಸೆಯ ಕಡೆಗೆ ಬೆಳಕು ಚೆಲ್ಲಿರುವಿರಿ. ಪುಟ್ಟ ಕವನವಾದರೂ ಅದರ ಅರ್ಥ ಸಾಧ್ಯತೆಗಳು ಅನಂತವಾಗಿವೆ.
ReplyDeleteಪಾಲಚಂದ್ರ,
ReplyDeleteಮಿಡತೆ ಮತ್ತು ಹೂವಿನ ಫೋಟೋ ಚೆನ್ನಾಗಿದೆ. ಮತ್ತು ಅದಕ್ಕೆ ತಕ್ಕಂತೆ ಕವನ...
ಧನ್ಯವಾದಗಳು...
ಚಂದ್ರಕಾಂತ ಮೇಡಂ,
ReplyDeleteನನ್ನ ಪುಟ್ಟ ಕವನವನ್ನು ಚೆನ್ನಾಗಿ ಅರ್ಥೈಸಿದ್ದೀರಿ, ವಂದನೆಗಳು.
ಶಿವು,
ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು.
--
ಪಾಲ
http://chaitrapatha.blogspot.com/2009/04/blog-post.html
ReplyDeleteಕವನದ ಮೊದಲ ಸಾಲು ಓದಿದಾಗಲೇ
ReplyDelete'ಹೂವು ಚೆಲ್ಲುವೆಲ್ಲಾ..' ಹಾಡು ನೆನಪಾಯಿತು. ಸುಂದರ ಕವನಕ್ಕೆ ಅಭಿನಂದನೆಗಳು. ಜೊತೆಗೆ ಫೋಟೋ ನೋಡಿ ಭಾಳ ಖುಷಿ ಆತು.
-ಧರಿತ್ರಿ