
ನೀರಿನ ಅಭಾವವಿರುವ ಇಂದಿನ ಕಾಲದಲ್ಲಿ, ಮಳೆನೀರು ಇಂಗಿಸುವಿಕೆ, ಬೇಸಾಯದಲ್ಲಿ ಹನಿ ನೀರಾವರಿ ಪ್ರಸಿದ್ಧಿ ಪಡೆದುಕೊಂಡಿದೆ. ಇವೆರಡೂ ಪದ್ಧತಿಗಳು ಮಳೆ ನೀರು ಮತ್ತೆ ಬೇಸಾಯದಲ್ಲಿ ಒದಗುವ ನೀರನ್ನು ಮಣ್ಣಿಗೆ ಒಮ್ಮೆಲೇ ಬಿಡದೆ ಸ್ವಲ್ಪ ಸ್ವಲ್ಪವಾಗಿ ಬಿಡುವುದು (ಮಳೆ ನೀರು ಇಂಗಿಸುವಿಕೆಯಲ್ಲಿ ಸಂಗ್ರಹಿಸುವ ರೀತಿ ಸ್ವಲ್ಪ ಭಿನ್ನ). ಈ ರೀತಿ ಸ್ವಲ್ಪ ಸ್ವಲ್ಪವಾಗಿ ಬಿಡುವ ನೀರು, ವ್ಯರ್ಥವಾಗಿ ಹರಿದು ಹೋಗದೆ, ಮಣ್ಣಿನಲ್ಲಿ ಇಂಗಿ ಅಂತರ್ಜಲ ಮಟ್ಟವನ್ನು ಕಾಪಾಡಿಕೊಳ್ಳುವಲ್ಲಿ ಸಹಕಾರಿ. "ಕೃಷ್ಣನ ಬೆಣ್ಣೆ ಬಟ್ಟಲಿನ ಗಿಡ"ದ ಎಲೆಯ ರಚನೆಯೂ ಕೂಡ ಇದೇ ಉದ್ದೇಶಕ್ಕಾಗಿ ಹಂತ ಹಂತವಾಗಿ ಮಾರ್ಪಾಡುಗೊಂಡಿರುವುದು ಎಂದು ಸಸ್ಯ ಶಾಸ್ತ್ರಜ್ಞರ ವಾದ. ಉಳಿದ ಮರಗಳ ಎಲೆಗಳಿಗಿಂತ ಈ ಮರದ ಎಲೆಗಳಲ್ಲಿ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಅಧಿಕವಿದ್ದು, ನೀರನ್ನು ಸ್ವಲ್ಪ ಸ್ವಲ್ಪವಾಗಿಯೇ ಭೂಮಿಗೆ ಬಿಟ್ಟು, ಅಂತರ್ಜಲದ ಮಟ್ಟ ಕಾಪಾಡುವಲ್ಲಿ ಸಹಕಾರಿಯಾಗಿದೆ.
ಆಸಕ್ತರು ಈ ಮರವನ್ನು ಬೆಂಗಳೂರಿನ ಕೆಂಪು ತೋಟದಲ್ಲೂ ನೋಡಬಹುದಾಗಿದೆ.
ಚಿತ್ರ ಕೃಪೆ: ನಾನೇ ಕಷ್ಟ ಪಟ್ಟು ತೆಗೆದಿರೋದು
Sir, intaha eleynnu kandiddu eevattu. adara hesaroo saha Sri Krishnana nenapannu tarisuttade. ee blogu uttma maahiti kanajavaagide. ee tarahada eleyannu nodalu namma campus nalli sigabahude hudukuttene. ekendre suttamuttalella maragidagale ive namma campus nalli. sikkadiddare lalbagh betikottu noduttene. maahitigaagi dhanyavaadgalu.
ReplyDeletebeautiful
ReplyDeleteಇದರ ಬಗ್ಗೆ ಚಿತ್ರ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದ. ನನಗೆ ಇದರ ಬಗ್ಗೆ ತಿಳಿದಿರಲಿಲ್ಲ.
ReplyDeleteಕ್ಷಣ ಚಿಂತನೆ,
ReplyDeleteನಿಮ್ಮ ಕ್ಯಾಂಪಸ್ ಯಾವ್ದು, ಬೆಂಗಳೂರು ವಿಶ್ವವಿದ್ಯಾನಿಲಯನಾ?
ಹರೀಶ್,
ಧನ್ಯವಾದ
ಮಲ್ಲಿಕಾರ್ಜುನ್,
ನನಗೂ ಇದರ ಫೋಟೋ ತೆಗೆಯುವವರೆಗೂ ತಿಳಿದಿರಲಿಲ್ಲ
ಫಾಲಚಂದ್ರ ಅವರೆ,
ReplyDeleteನಮ್ಮ ಕ್ಯಾಂಪಸ್ ಬೆಂಗಳೂರು ವಿಶ್ವವಿದ್ಯಾಲಯದ ಹತ್ತಿರವೆ ಇದೆ.
ಧನ್ಯವಾದಗಳು
ಪಾಲಚಂದ್ರ,
ReplyDeleteಚಿತ್ರದಲ್ಲಿರುವ ಎಲೆಯ ಫೋಟೋ ಮತ್ತು ಅದಕ್ಕೆ ತುಂಬಾ ಉಪಯುಕ್ತವಾದ ಮಾಹಿತಿ ನೀಡಿದ್ದೀರಿ...ನನಗೂ ಇದು ಗೊತ್ತಿರಲಿಲ್ಲ...
ಧ್ಯನ್ಯವಾದಗಳು..
ಎಲೆ, ಎಲೆಯ ಫೋಟೊ ಸುಂದರ! ಒದಗಿಸಿದ ಮಾಹಿತಿ ಕೂಡ ಉಪಯುಕ್ತವಾದದ್ದು.
ReplyDelete