Sunday, April 26, 2009

Eretmocera dioctis

ಪತಂಗಗಳ ಗುಂಪಿಗೆ ಸೇರಿದ ಈ ಕೀಟದ ವೈಜ್ಞಾನಿಕ ಹೆಸರು "Eretmocera dioctis". ಸುಮಾರು ೧ ಸೆ.ಮೀ.ನಷ್ಟು ಉದ್ದದ ಇದರ ಹೊಟ್ಟೆಯ ಭಾಗ ಕಿತ್ತಳೆ ಬಣ್ಣ, ರೆಕ್ಕೆಯ ಮುಂಭಾಗ ಕಂದು ಮತ್ತು ಹಳದಿ ಬಣ್ಣದಿಂದ ಕೂಡಿದ್ದರೆ, ಹಿಂಭಾಗ ಕಪ್ಪು ಬಣ್ಣದ ಕೂದಲಿನಂತಹ ರಚನೆಯಿಂದ ಕೂಡಿರುತ್ತದೆ. ಹಿಂಗಾಲಿನೊಂದಿಗೆ ಹುಟ್ಟಿಕೊಂಡಿರುವ ಸಾರಂಗದ ಕೊಂಬಿನಂತೆ ಕಾಣುವ ರಚನೆ ಈ ಪತಂಗದ ವಿಶೇಷ.

ERETMOCERA DIOCTIS

ERETMOCERA DIOCTIS

ERETMOCERA DIOCTIS

Thursday, April 23, 2009

ಕೃಷ್ಣನ ಬೆಣ್ಣೆ ಬಟ್ಟಲಿನ ಗಿಡ

ಶ್ರೀಕೃಷ್ಣ ಮತ್ತವನ ಬೆಣ್ಣೆ ಕಳ್ಳತನ, ಕಾವ್ಯದಲ್ಲಿನ ಚಿಕ್ಕ ಮಕ್ಕಳ ತುಂಟತನದ ಸುಂದರ ಚಿತ್ರಣ. ಈ ಕಥೆಯೊಂದಿಗೆ ಬೆಸೆದುಕೊಂಡಿರುವ "ಕೃಷ್ಣನ ಬೆಣ್ಣೆ ಬಟ್ಟಲಿನ ಗಿಡ"ದ ಎಲೆಯ ರಚನೆಯೂ ಕೂಡ ಅಷ್ಟೇ ಸುಂದರವಾಗಿದೆ. ಈ ಮರ ಮೇಲ್ನೋಟಕ್ಕೆ ಆಲದ ಮರದಂತೆ ಕಂಡುಬಂದರೂ, ಎಲೆಗಳ ಬುಡದಲ್ಲಿ ಜೇಬಿನಂತಹ ಚಿಕ್ಕ ರಚನೆಯನ್ನು ಹೊಂದಿದ್ದು, ಆಲಕ್ಕಿಂತ ತುಸು ಭಿನ್ನವಾಗಿದೆ. ಬೆಣ್ಣೆ ಕದ್ದ ಕೃಷ್ಣ ಈ ಮರದ ಎಲೆಯನ್ನೇ ಬಟ್ಟಲಿನಂತೆ ಉಪಯೋಗಿಸುತ್ತಿದ್ದನೆಂದು ಜನರ ನಂಬುಗೆ. ಈ ನಂಬುಗೆಯ ಫಲವಾಗಿಯೇ ಇದಕ್ಕೆ "ಕೃಷ್ಣನ ಬೆಣ್ಣೆ ಬಟ್ಟಲಿನ ಗಿಡ" ಹಾಗೂ ಶಾಸ್ತ್ರೀಯವಾಗಿ "Ficus krishnae" ಎಂಬುದಾಗಿ ನಾಮಕರಣ ಮಾಡಿರುವುದು.

Leaf pattern

ನೀರಿನ ಅಭಾವವಿರುವ ಇಂದಿನ ಕಾಲದಲ್ಲಿ, ಮಳೆನೀರು ಇಂಗಿಸುವಿಕೆ, ಬೇಸಾಯದಲ್ಲಿ ಹನಿ ನೀರಾವರಿ ಪ್ರಸಿದ್ಧಿ ಪಡೆದುಕೊಂಡಿದೆ. ಇವೆರಡೂ ಪದ್ಧತಿಗಳು ಮಳೆ ನೀರು ಮತ್ತೆ ಬೇಸಾಯದಲ್ಲಿ ಒದಗುವ ನೀರನ್ನು ಮಣ್ಣಿಗೆ ಒಮ್ಮೆಲೇ ಬಿಡದೆ ಸ್ವಲ್ಪ ಸ್ವಲ್ಪವಾಗಿ ಬಿಡುವುದು (ಮಳೆ ನೀರು ಇಂಗಿಸುವಿಕೆಯಲ್ಲಿ ಸಂಗ್ರಹಿಸುವ ರೀತಿ ಸ್ವಲ್ಪ ಭಿನ್ನ). ಈ ರೀತಿ ಸ್ವಲ್ಪ ಸ್ವಲ್ಪವಾಗಿ ಬಿಡುವ ನೀರು, ವ್ಯರ್ಥವಾಗಿ ಹರಿದು ಹೋಗದೆ, ಮಣ್ಣಿನಲ್ಲಿ ಇಂಗಿ ಅಂತರ್ಜಲ ಮಟ್ಟವನ್ನು ಕಾಪಾಡಿಕೊಳ್ಳುವಲ್ಲಿ ಸಹಕಾರಿ. "ಕೃಷ್ಣನ ಬೆಣ್ಣೆ ಬಟ್ಟಲಿನ ಗಿಡ"ದ ಎಲೆಯ ರಚನೆಯೂ ಕೂಡ ಇದೇ ಉದ್ದೇಶಕ್ಕಾಗಿ ಹಂತ ಹಂತವಾಗಿ ಮಾರ್ಪಾಡುಗೊಂಡಿರುವುದು ಎಂದು ಸಸ್ಯ ಶಾಸ್ತ್ರಜ್ಞರ ವಾದ. ಉಳಿದ ಮರಗಳ ಎಲೆಗಳಿಗಿಂತ ಈ ಮರದ ಎಲೆಗಳಲ್ಲಿ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಅಧಿಕವಿದ್ದು, ನೀರನ್ನು ಸ್ವಲ್ಪ ಸ್ವಲ್ಪವಾಗಿಯೇ ಭೂಮಿಗೆ ಬಿಟ್ಟು, ಅಂತರ್ಜಲದ ಮಟ್ಟ ಕಾಪಾಡುವಲ್ಲಿ ಸಹಕಾರಿಯಾಗಿದೆ.

ಆಸಕ್ತರು ಈ ಮರವನ್ನು ಬೆಂಗಳೂರಿನ ಕೆಂಪು ತೋಟದಲ್ಲೂ ನೋಡಬಹುದಾಗಿದೆ.
ಚಿತ್ರ ಕೃಪೆ: ನಾನೇ ಕಷ್ಟ ಪಟ್ಟು ತೆಗೆದಿರೋದು

Tuesday, April 21, 2009

ನಿನ್ನ ಕಣ್ಣ ನೋಟದಲ್ಲಿ

ನಿನ್ನ ಕಣ್ಣ ನೋಟದಲ್ಲಿ ೩೬೦ ಡಿಗ್ರಿ ಕಂಡೆನು. ಏಡಿಯ ಚಿತ್ರ ಎಲ್ಲಾ ಕೋನದಿಂದ ತೆಗೆದು ಅದರ ಬಗ್ಗೆ ಅಂತರ್ಜಾಲದಲ್ಲಿ ಹುಡುಕಾಡಿದಾಗ ನೆನಪಾದ ಹಾಡು ಇದು. ಏಡಿ ಒಂದೇ ಬಾರಿಗೆ ತನ್ನ ಸುತ್ತ ಇರುವ ನೋಟವನ್ನು ಒಮ್ಮೆಲೇ ಗ್ರಹಿಸುತ್ತದೆ. ಅಂದರೆ ನಮಗೆ ಮುಂದೆ ಕಣ್ಣು ಇರುವಂತೆ ಎಡ, ಬಲ, ಹಿಂದೆ ಕಣ್ಣು ಇದ್ದು ಆ ಕಣ್ಣುಗಳಿಂದ ಸಿಗುವ ನೋಟ ಹೇಗೆ ಇರಬಹುದೋ ಹಾಗೆ!

ನಮ್ಮೂರ ಸಮುದ್ರದಲ್ಲಿ ತೆಗೆದ ಈ ಚಿತ್ರ ನೋಡಿ ನಿಮಗೂ ಆಶ್ಚರ್ಯ ಆಗಬಹುದು.

ಮುನ್ನೋಟ
DSC08223

ಬದಿ ನೋಟ
DSC08225

ಹಿನ್ನೋಟ
DSC08228



ಏಡಿಗೆ ಪ್ರಪಂಚ ಎಷ್ಟು ಭಿನ್ನವಾಗಿ ಕಾಣಿಸುತ್ತಿರಬಹುದಲ್ಲ? ಈ ತಂತ್ರಜ್ಞಾನ ಪೈಲೆಟ್ ರಹಿತ ವಿಮಾನ ಹಾಗೂ ರೋಬಾಟ್ ತಯಾರಿಕೆಯಲ್ಲಿ ಬಹಳಷ್ಟು ಸಹಕಾರಿ.

ಮಾಹಿತಿ ಆಧಾರ: Australia advances

Thursday, April 16, 2009

ನಾ ಕಪ್ಪು ನನ್ನ ನೆರಳಿನಂತೆ

DSC08208

ನಾ ಕಪ್ಪು ನನ್ನ ನೆರಳಿನಂತೆ
ನಾ ಕಪ್ಪು ನನ್ನ ನೆರಳಿನಂತೆ

ತನು ಕಪ್ಪಾದರೇನಂತೆ
ತನು ಕಪ್ಪಾದರೇನಂತೆ

ಮನ ಬಿಳುಪಿನಂತೆ
ಎನ್ನ ಮನ ಸ್ಪಟಿಕದಂತೆ

ವಿ.ಸೂ: ಮತ್ಯಾಕೆ ಬಂದ ಇವ್ನು ಅಂದ್ಕೊಬೇಡಿ, ೫ ನಿಮಿಷದ ಕೆಲ್ಸ ಅಂತ ನನ್ನ ಈ ಫೋಟೋ ಜೊತೆ ನಾಲ್ಕು ಸಾಲು ಬರ್ದೆ ಅಷ್ಟೆ :)

Thursday, April 09, 2009

ತಾತ್ಕಾಲಿಕ ಬಿಡುವು

ಒಂಭತ್ತನೇ ತರಗತಿಯಿಂದ ಬರೆಯಲಾರಂಭಿಸಿದ ಡೈರಿ, ನಾನು ಬ್ಲಾಗ್ ಪ್ರಪಂಚಕ್ಕೆ ಕಾಲಿಡುವವರೆಗೂ ಮುಂದುವರಿಸಿಕೊಂಡು ಬಂದಿದ್ದೇನೆ. ಆ ನನ್ನ ಹಳೇಯ ಡೈರಿಗಳನ್ನ ತೆಗೆದು ನೋಡಿದರೆ ನಾ ಮೆಚ್ಚಿದ ಪುಸ್ತಕಗಳ ಬಗ್ಗೆ, ನಾ ಮೆಚ್ಚಿದ ಜನರು, ವಿದ್ಯಾಭ್ಯಾಸ, ಇತರ ಚಟುವಟಿಕೆ, ಅಲ್ಲಲ್ಲಿ ಫೋಟೋಗಳು,ಪತ್ರಗಳು, ಸಂಗ್ರಹಿಸಿದ ಹಕ್ಕಿ ಪುಕ್ಕಗಳು, ಕೆಲಸದ ಆರಂಭದ ದಿನಗಳು ಇನ್ನೂ ಏನೇನೋ, ಅದೂ ನನ್ನ ಬರವಣಿಗೆಯಲ್ಲೇ.

ಇಂದಿಗೆ ಸುಮಾರು ೩ ವರ್ಷದ ಹಿಂದೆ ನನ್ನ ಬ್ಲಾಗ್ ಅಕೌಂಟ್ ತೆರೆದಿದ್ದರೂ, ಇಲ್ಲಿ ಬರೆಯಲಾರಂಭಿಸಿದ್ದು ಜುಲೈ ೨೦೦೮ರಿಂದ. "ನಿಮ್ಮ ಪ್ರೀತಿಯನ್ನು ನಿವೇದಿಸುವ ಮುನ್ನ" ಎಂಬ ಪ್ರಬಂಧದಿಂದ ತೊಡಗಿದ ಬರಹ ಕೆಲವು ಪ್ರವಾಸ ಕಥನ, ಅನುಭವ ಕಥನ, ಕವನ, ಛಾಯಗ್ರಹಣಕ್ಕೆ ಸಂಬಂಧಿಸಿದ ಲೇಖನಗಳು, ಲಲಿತ ಪ್ರಬಂಧ, ಕೆಲವು ಚಿತ್ರಗಳನ್ನು ಪೋಸ್ಟ್ ಮಾಡಿದ್ದೇನೆ.

ನನ್ನ ಇತರ ಹವ್ಯಾಸಗಳ ಆಸಕ್ತಿಯ ದೆಸೆಯಿಂದ ಬರೆಯಲು ಹೆಚ್ಚಿನ ಸಮಯ ವಿನಿಯೋಗಿಸಲು ಸಾಧ್ಯವಾಗುತ್ತಿಲ್ಲ. ಸಿಗುವ ಅಲ್ಪ ಸಮಯದಲ್ಲಿ ಏನು ಬರೆಯಬೇಕೆಂದೂ ತೋಚುತ್ತಿಲ್ಲ. ಆದ್ದರಿಂದ ಬರವಣಿಗೆಗೆ ತಾತ್ಕಾಲಿಕ ವಿರಾಮ ಕೊಡುತ್ತಿದ್ದೇನೆ. ನಿಮ್ಮೆಲ್ಲರ ಸ್ನೇಹ, ಪ್ರೋತ್ಸಾಹಕ್ಕೆ ನನ್ನ ತುಂಬು ಹೃದಯದ ಕೃತಜ್ಞತೆಗಳು. ಮತ್ತೆ ಬರೆಯಬೇಕೆನಿಸಿದಾಗ ಬರೆಯುತ್ತೇನೆ, ಅಲ್ಲಿಯವರೆಗೂ ಬಿಡುವಿದ್ದಾಗ ನಿಮ್ಮ ಲೇಖನಗಳನ್ನು ಓದಲು ಖಂಡಿತಾ ಬರುತ್ತೇನೆ. ತಿಳಿಯದೇ ನನ್ನ ಪ್ರತಿಕ್ರಿಯೆಯಿಂದ ನಿಮ್ಮ ಮನಸ್ಸನ್ನು ನೋಯಿಸಿದ್ದಲ್ಲಿ ಕ್ಷಮೆಯಿರಲಿ.

ನಾನು ತೆಗೆಯುವ ಫೋಟೋ ನೋಡಲು ಆಸಕ್ತಿಯಿದ್ದಲ್ಲಿ ನನ್ನ ಫ್ಲಿಕರ್ ಎಕೌಂಟ್ಗೆ ಭೇಟಿ ನೀಡಬಹುದು.

-
ಪಾಲ

Thursday, April 02, 2009

ಮಿಡತೆಯ ಗೋಳು


GRASSHOPPER IN ACTION
ಚೆಲುವೆಲ್ಲಾ ತನ್ನಲ್ಲಿದೆ
ಎಂದುಲಿಯಿತು ಹೂವು

ಹೂವ ಮುಡಿದ ಬಾಲೆ
ಚೆಲುವೇ ತಾನೆಂದಳು

ಹೂವ ದೈವಕ್ಕೆ ಮುಡಿಸಿದ ಭಕ್ತ
ಭಕ್ತಿಯ ಚೆಲುವು ತನ್ನದೆಂದನು

ಬೋಳು ಗಿಡವ ಕಂಡ ಮಿಡತೆ
ಬಡವನ ಹೊಟ್ಟೆಗೆ ಹೊಡೆದರೆಂದಿತು!

ಪ್ರೇರಣೆ: ಹೂವು ಚೆಲುವೆಲ್ಲಾ ತಂದೆಂದಿತು ಹಾಡು, ಪಾಲಾಅವರ ಮಿಡತೆ ಫೋಟೋ.

ವರ್ಗ

Amomum (1) ficus krishnae (1) Gangtok (1) Nikon 40mm f/2.8 Micro (10) paris (1) Sikkim (8) snow (1) Yuksom (5) ಅನಿಮೇಟೆಡ್ (1) ಅನುಭವ ಕಥನ (7) ಅಮೂರ್ತ (1) ಆಟೋಟ (2) ಆಫಿಡ್ (1) ಇರುವೆ (6) ಉಡುಪಿ (4) ಉಯ್ಯಾಲೆ (1) ಉರಗ (3) ಏರಿ (1) ಒಂಟಿ ಚಕ್ರದ ಸೈಕಲ್ (1) ಒಯ್ಯುಗೆ (6) ಕದ (1) ಕಂದು ಏಲಕ್ಕಿ (1) ಕನ್ನಡ (2) ಕಪ್ಪು ಏಲಕ್ಕಿ (1) ಕಪ್ಪು-ಬಿಳುಪು (5) ಕಂಬಳ (1) ಕಂಬಳಿಹುಳು (2) ಕವನ (15) ಕವಿ ಶೈಲ (1) ಕಸರತ್ತು (1) ಕಳಸ (1) ಕಳ್ಳತನ (1) ಕಾವೇರಿ (1) ಕಾಳಾವಾರ ಬೆಟ್ಟ (1) ಕಾಳಿಂಗ ಸರ್ಪ (1) ಕಿಸ್ಕಾರ (1) ಕೀಟ ಪ್ರಪಂಚ (35) ಕುಂದಾಪುರ (1) ಕುವೆಂಪು (1) ಕೃಷಿ (9) ಕೃಷಿ ಮೇಳ (4) ಕೆರೆ (2) ಕೆಲಸ (2) ಕೆಸು (2) ಕೆಳದಿ (1) ಕೊಕ್ಕರೆ ಬೆಳ್ಳೂರು (1) ಕೋಟ (8) ಖಗೋಳ ಗಡಿಯಾರ (1) ಗವಿ (1) ಗುಡಿ ಕೈಗಾರಿಕೆ (1) ಗುಡ್ಡ (2) ಗುಹೆ (1) ಚಾರಣ (3) ಚಿಕ್ಕಮಗಳೂರು (1) ಚಿಟ್ಟಾಣಿ (1) ಚಿಟ್ಟೆಗಳು (3) ಚಿತ್ರ ಪುಟ (102) ಚಿತ್ರದುರ್ಗ (1) ಚಿತ್ರಪುಟ (1) ಚೌಕಾಶಿ (1) ಛಾಯಾಗ್ರಹಣ (24) ಜನ ಜೀವನ (52) ಜನಪದ (2) ಜರ್ಮನಿ (1) ಜಲಪಾತ (1) ಜೆಕ್ ಗಣರಾಜ್ಯ (4) ಜೇಡ (3) ಜೇನು ಸಾಕಣೆ (1) ಜೋಡಿ (1) ತರಕಾರಿ (2) ತುಮಕೂರು (2) ತೆಂಗಿನ ಕಾಯಿ (1) ತೆಂಗಿನ ತೋಟ (1) ದಸರ (4) ದೇವವೃಂದ (1) ದೇವಸ್ಠಾನ (1) ದೇವಸ್ಥಾನ (1) ದೊಡ್ಡ ಏಲಕ್ಕಿ (1) ಧಾರವಾಡ (1) ನಗರ (1) ನಂಬಿಕೆ (1) ನಾಟಕ (1) ನೀರ್ಹಕ್ಕಿ (6) ಪತಂಗ (1) ಪತ್ರಿಕೋದ್ಯಮ (1) ಪಶ್ಚಿಮ ಘಟ್ಟ (2) ಪಾರ್ಕ್ (1) ಪಾಳು (1) ಪುಸ್ತಕ ಬಿಡುಗಡೆ (1) ಪೋರ್ಟ್ರೈಟ್ (8) ಪ್ಯಾನಿಂಗ್ (1) ಪ್ರಬಂಧ (2) ಪ್ರವಾಸ ಕಥನ (3) ಪ್ರಾಹ (1) ಪ್ಲಾಸ್ಟಿಕ್ (1) ಬಕೇಟ್ (1) ಬಂಡಿ (1) ಬಣ್ಣ (1) ಬನವಾಸಿ (1) ಬಳ್ಳಿ (1) ಬಾಗಿಲು (1) ಬಾರ್ಕೂರು (1) ಬೀಗ (1) ಬೆಂಕಿ (1) ಬೆಂಗಳೂರಿನ ಚಿತ್ರಗಳು (5) ಬೆಂಗಳೂರು (27) ಬೆಳಕು (1) ಬೇಸಾಯ (1) ಬ್ರಹ್ಮಾವರ (1) ಭಾರತ ಬಂದ್ (1) ಭಿಕ್ಷುಕರು (1) ಮಕ್ಕಳು (10) ಮಗು (1) ಮಂಜು (2) ಮಮ್ಮಮ್ (3) ಮಲೆನಾಡು (1) ಮಳೆ (1) ಮಳೆಗಾಲ (2) ಮಾರಿಕಣಿವೆ (1) ಮುಸ್ಸಂಜೆ (1) ಮೇಲುಕೋಟೆ (2) ಮೇವು (1) ಮೈಸೂರು (7) ಮೋಡ (2) ಮ್ಯಾಕ್ರೋ (12) ಯಕ್ಷಗಾನ (2) ರಸ್ತೆ (5) ರಾತ್ರಿ ನೋಟ (3) ರೈಮ್ (1) ರೈಲು (2) ರೈಲುಹಳಿ (1) ಲಲಿತ ಪ್ರಬಂಧ (6) ಲೇಪಾಕ್ಷಿ (1) ವಂಡಾರ್ (1) ವಾಸ್ತು ಶಿಲ್ಪ (1) ವಾಹನ (2) ವಿವೇಕ (1) ವಿಸ್ತರಣೆ (1) ವ್ಯಕ್ತಿ ವಿಷಯ (3) ವ್ಯಾಪಾರ (1) ಶಾಲೆ (1) ಶಿರಸಿ (1) ಶಿರಸಿ. ಸೈಕಲ್ (1) ಶಿಲ್ಪ (1) ಶಿವನಸಮುದ್ರ (1) ಶುಭಾಶಯ (2) ಸಣ್ಣ ಕಥೆ (4) ಸಂತೆ (2) ಸಮುದ್ರ (2) ಸಮುದ್ರ ಜೀವಿ (2) ಸಸ್ಯ ಪ್ರಪಂಚ (12) ಸಾಕು ಪ್ರಾಣಿ (4) ಸಾಗಾಟ (1) ಸಾಸ್ತಾನ (1) ಸಿಕ್ಕಿಂ (3) ಸೈಕಲ್ (5) ಸೈಕಲ್ ಯಾತ್ರೆ (1) ಸ್ಕಂದಗಿರಿ (1) ಸ್ತೂಪ (1) ಸ್ಪರ್ಧೆ (1) ಹಕ್ಕಿಗಳು (21) ಹರಿಹರ (1) ಹಳ್ಳಿ (3) ಹಿಮ (1) ಹೂಗಳು (5) ಹೂವು (1) ಹೊಸ ವರ್ಷ (1) ಹೋಂ ಸ್ಟೇ (1) ಹೌರಾ (1)