
ಬಿರು ಬಿಸಿಲಿಗೆ ನಾನಾವಿಯಾಗಿ
ಬೆರೆತಿದ್ದೆ ಗಾಳಿಯೊಡನೆ
ಏನು ಗುರಿಯೋ ಎತ್ತ ಪಯಣವೋ
ನಾ ತಿಳಿಯದಾಗಿದ್ದೆ
ಮುಂಜಾನೆಯ ಯಾವ ಹೂವ
ಮುತ್ತಾಗಿದ್ದೆ ನೀನು
ತಂಗಾಳಿಯೊಡನೊಮ್ಮೆ
ಬಂದು ಸೇರಿದ್ದೆ
ಗೊತ್ತೇನು ಗುರಿಯೇನು
ನೀ ನನ್ನೊಡನಿರಲು
ಕನಸೇನು ನನಸೇನು
ಜೊತೆ ಬಾಳುತಿರಲು
ನೀಲಾಕಾಶವ ಮರೆಸಿ
ತೇಲುವ ಮೋಡಗಳಾಗಿ
ಕಂಡ ಕನಸೆಷ್ಟು
ಉಂಡ ಸುಖವೆಷ್ಟು
ವಿರಹದಾ ಕಣ್ಣೀರು
ಹನಿ ಹನಿಯಾಗಿ
ಉದುರಿತ್ತು
ಇಳೆಯ ತೋಯಿಸಿತ್ತು
ಮಣ್ಗಂಪು ಹೊಸಚಿಗುರು
ನಾ ಸವಿಯಲಾರೆ
ನಿನ್ನ ಗೆಳೆತನದ ವಿರಹ
ನಾ ಸಹಿಸಲಾರೆ
ಕಂಡ ಕನಸುಗಳ
ನಾ ಮರೆಯಲೆಂತು
ಜೊತೆಯಾಗಲಾರೆಯಾ ಗೆಳತಿ
ಕಡಲ ಸೇರಲೆಂದು
Super..
ReplyDeleteಪಾಲಚಂದ್ರ..
ReplyDeleteಪ್ರೇಮ.. ವಿರಹವನ್ನು...
ಸುಂದರ ಕಲ್ಪನೆಯಲ್ಲಿ..
ಚಂದದ ಶಬ್ಧಗಳಲ್ಲಿ
ಬಿಂಬಿತವಾಗಿದೆ...
ನಿಮ್ಮ ಕಲ್ಪನೆಗಳು
ಇಷ್ಟವಾದವು..
ರವೀಂದ್ರ,
ReplyDelete"ಅನುಭವ ಮಂಟಪಕ್ಕೆ" ಸ್ವಾಗತ, ನಿಮ್ಮನಿಸಿಕೆಗೆ ವಂದನೆಗಳು.
ಪ್ರಕಾಶ್,
ನನ್ನ ಕಲ್ಪನೆ ನಿಮಗೆ ಹಿಡಿಸಿದ್ದಕ್ಕೆ, ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ.
--
ಪಾಲ
ಸರ್, ಈ ಕವನದ ಜೊತೆಗೆ ಒಂದು ಚಿತ್ರವೂ ಇದ್ದಿದ್ದರೆ...
ReplyDeleteಪಾಲಚಂದ್ರ ಸರ್..
ReplyDeleteನೀವು ಫೋಟೋಗ್ರಾಫಿ ಬಗ್ಗೆ ಎಕ್ಸ್ ಫರ್ಟು ಅಂದುಕೊಂಡಿದ್ದೆ..ಈಗ ನೋಡಿದ್ರೆ ಕಥೆ, ಕವನಗಳನ್ನು ಕೂಡ ಚೆನ್ನಾಗಿ ಬರೇತೀರ. ಪ್ರತಿಯೊಬ್ಬರೂ ಅಷ್ಟೇ,,,ವಿರಹದ ಕವನಗಳನ್ನೇ ಚೆನ್ನಾಗಿ ಬರೀತಾರೆ ಅನ್ನೋ ಮಾತನ್ನು ಕೇಳಿದೆ. 'ಸಂಗಾತಿ' ಕೂಡ ಚೆನ್ನಾಗಿ ಮೂಡಿಬಂದಿದೆ.
ಸರ್..
ಕಂಡ ಕನಸುಗಳ ಮರೆಯಬೇಡಿ..ಆ 'ಗೆಳತಿ' ಬೇಗನೆ ಜೊತೆಯಾಗಲಿ ಅನ್ನೋ ಹಾರೈಕೆ ನನ್ನದು..(:::)
-ಚಿತ್ರಾ
ಪಾಲಚಂದ್ರ,
ReplyDeleteಕವನದಲ್ಲಿ ಪ್ರೇಮದ ಉತ್ಕಟತೆ, ವಿರಹದ ವೇದನೆ, ಗೆಳೆತನವನ್ನು...ಚೆನ್ನಾಗಿ ಬರೆದಿದ್ದೀರಿ....
ನಿಜಜೀವನದಲ್ಲಿ ವಿರಹವನ್ನು ನೀಡದೆ ಗೆಳೆತನ ಪ್ರೇಮ ನೀಡುವವಳು ಸಿಗಲಿ ಅಂತ ಹಾರೈಸುತ್ತೇನೆ....
ಕ್ಷಣ ಚಿಂತನೆ,
ReplyDeleteನಿಮ್ಮ ಪ್ರತಿಕ್ರಿಯೆಗೆ ತುಂಬಾ ಧನ್ಯವಾದ, ನೋಡೋಣ ಯಾವುದಾದರೂ ಚಿತ್ರ ಸಿಗುತ್ತಾ ಅಂತ ಹುಡ್ಕ್ತೀನಿ.
ಚಿತ್ರಾ,
"ಚೆನ್ನಾಗಿ ಬರೀತೀರ" ಅಂತ ಹೇಳಿ ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದ. ನಿಮ್ಮ ಹಾರೈಕೆಯಂತೆಯೇ ಆಗ್ಲಿ, ಕನಸು ನಾನು ಮರೆಯೋಲ್ಲ :)
ಶಿವು,
"ವಿರಹ ನೀಡದ, ಗೆಳೆತನ, ಪ್ರೇಮ ನೀಡುವವಳು ಸಿಗಲಿ" ಎಂಬ ನಿಮ್ಮ ತುಂಬು ಮನದ ಹಾರೈಕೆಗೆ, ಬರೆಯಲು ಪ್ರೋತ್ಸಾಹಿಸುತ್ತಿರುವುದಕ್ಕೆ ತುಂಬಾ ಧನ್ಯವಾದ
--
ಪಾಲ
ಪಾಲಚಂದ್ರ
ReplyDeleteಚಿತ್ರವಂತೂ ಅದ್ಭುತವಾಗಿದೆ. ಕವನವೂ ಸುಂದರವಾಗಿದೆ. ಬೇರೆಯವರೆಲ್ಲರೂ ವಿರಹ ನೀಡದ ಗೆಳೆತನ ಪ್ರೇಮ ನೀಡುವವಳು ಸಿಗಲಿ ಎಂದು ಹಾರೈಸಿದ್ದಾರೆ.ಅವರೆಲ್ಲರ ಕ್ಷಮೆ ಯಾಚಿಸುತ್ತಾ " ವಿರಹವಿದ್ದರೇ ಪ್ರೀತಿಯ ನಿಜವಾದ ಅರ್ಥ ನಿಮಗಾಗುವುದು,ಆದರೆ ವಿರಹ ಊಟದ ಜೊತೆಯ ಉಪ್ಪಿನಕಾಯಾಗಲಿ"ಎಂದು ಹಾರೈಸುತ್ತೇನೆ
ನೋಡಿ ವಿರಹ ಭಾವನೆಯಿಂದಲೇ ಎಷ್ಟು ಸುಂದರ ಕವನ ರಚಿಸಿರುವಿರಿ!!
ವಾವ್ ಪಾಲ,
ReplyDeletePhoto is full of Life!! :)
-ಸವಿತ
ಚಂದ್ರಕಾಂತ ಮೇಡಂ,
ReplyDelete>>" ವಿರಹವಿದ್ದರೇ ಪ್ರೀತಿಯ ನಿಜವಾದ ಅರ್ಥ ನಿಮಗಾಗುವುದು,ಆದರೆ ವಿರಹ ಊಟದ ಜೊತೆಯ ಉಪ್ಪಿನಕಾಯಾಗಲಿ"
ನಿಮ್ಮ ಹಾರೈಕೆ ತುಂಬಾ ಸೊಗಸಾಗಿದೆ
ಚಿತ್ರ ಮತ್ತು ಕವನದ ಬಗೆಗಿನ ನಿಮ್ಮ ಅಭಿಪ್ರಾಯಕ್ಕೆ ವಂದನೆಗಳು
ಸವಿತ,
:)
--
ಪಾಲ
very well written.
ReplyDeleteLakshmi,
ReplyDeleteThank you very much.
--
ಪಾಲ
ಪಾಲಚಂದ್ರ,
ReplyDeleteಕವನ ಸೊಗಸಾಗಿದೆ.
ಕಾಕಾ,
ReplyDelete"ಅನುಭವ ಮಂಟಪ"ಕ್ಕೆ ಸ್ವಾಗತ, ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು
--
ಪಾಲ್
TUMBA CHANNAGIDE........ SUPERB
ReplyDeletesakath sexy photo pala...........
ReplyDeletenice photo work....