ಮಗಾ ಆವಾಗಿಂದ ಸುಮ್ನೆ ಕೂತು ಕೂತು, ಸಕ್ಕತ್ ಬೋರ್ ಹೊಡೀತಾ ಇದೆ.
ಹೌದಾ, ಈ ಕಡೆ ತಿರ್ಗು ಕಷ್ಟ ಸುಖ ಮಾತೋಡೋಣ
ಏನ್ಲಾ ಇದು, ಮುಖಾ ಎಲ್ಲಾ ಹಿಂಗಾಗಿದೆ, ಮೊಡವೇನಾ?
ಇಲ್ಲಾ ಲೇ ಮೈ ತುಂಬಾ ಹೇನು, ರಾತ್ರಿ ಎಲ್ಲಾ ಬಂದು ಮುಖದ ಮೇಲೆ ಹರಿದಾಡ್ತಾವೆ. ನಾನೂ ಎಷ್ಟು ಅಂತಾ ತಿನ್ಲಿ.
ವಾವ್ ಎಷ್ಟು ರುಚಿಯಾಗಿದೆ, ಒಳ್ಳೆ ಪ್ರೋಟೀನು.
ಇವ್ಕೊಂದು ಮಾಡೋಕೆ ಬೇರೆ ಕೆಲ್ಸ ಇಲ್ಲ, ಏನ್ ಮಾಡಿದ್ರು ಕ್ಯಾಮರಾ ಹಿಡ್ಕೊಂಡ್ ಬರ್ತಾವೆ. ಗರ್ರ್.. ಹೊಗ್ತೀಯೋ ಇಲ್ವೊ..
ಪಾಲಚಂದ್ರ...
ReplyDeleteಭೂಪಟದ ನಗುವಿನಿಂದ ಹೊರ ಬರುತ್ತಿದ್ದೆವು....ಆಷ್ಟರಲ್ಲಿ ನಿಮ್ಮಾ ಕೋತಿಗಳ ಸಂಭಾಷಣೆ ಕೇಳಿ ನಾನು ಮತ್ತು ನನ್ನಾಕೆ ಜೋರಾಗಿ ನಕ್ಕುಬಿಟ್ಟೆವು....
ಇತ್ತೀಚೆಗೆ ನೀವು ಪ್ರಕಾಶ್ ಹೆಗಡೆಯವರು[ಕಾಗೆ ಜೊತೆ ] ಎಲ್ಲಾ ಪ್ರಾಣಿ ಪಕ್ಷಿಗಳ ಜೊತೆ ಒಡನಾಟ ಜಾಸ್ತಿ ಮಾಡಿಕೊಂಡಿದ್ದ್ರೀರಿ...ಏನ್ ಸಮಾಚಾರ.....
ಶಿವು,
ReplyDeleteನೀವಿಬ್ಬರೂ ನಕ್ಕಿದ್ದು ಕೇಳಿ, ಊಟ ಆದಮೇಲೆ ಹಾಲು ಕುಡಿದ ಹಾಗೆ ಆಯ್ತು. ಏನು ಮಾಡೋದು, ಪ್ರಕಾಶ್ ಕಾಗೆ ಮಾತು ಕೇಳಿಸ್ಕೊಂಡಿದ್ದಕ್ಕೆ, ನಂಗೆ ಮಂಗಗಳ ಮಾತು ಕೇಳಿಸ್ತು.
--
ಪಾಲ
ಎಲ್ಲಾರು ಈ ಥರ ಕಾಗೆ ಕೋತಿಗಳ ಮಾತನ್ನ ಕೇಳಿಸ್ಕೊಳ್ಳೋರೇ ಆಗೋದ್ರಪ್ಪ ! ಏನೇ ಆಗ್ಲಿ...ಫೋಟೋಗಳಿಗೇನೂ ಕಮ್ಮಿ ಇಲ್ಲ !ಎಲ್ಲಾ ಸಖತ್ !
ReplyDeleteha ha ha ha ha ha..... ayyappa
ReplyDeletesakath masth maga.....
ಲಕ್ಷ್ಮೀ,
ReplyDeleteಏನು ಮಾಡೋದು ಜನರ ಮಂಗಳೂರು ಪಬ್ ಗಲಾಟೆ, ಲೋಕಾಯುಕ್ತರ ಬಲೆಗೆ ಬಿದ್ದ ಶಾಸಕರು, ರಿಸೆಷನ್, ಆರ್ಥಿಕ ಮುಗ್ಗಟ್ಟು ಕೇಳಿ ಕೇಳಿ ಸಕ್ಕತ್ ಬೋರಾಗ್ತಿತ್ತು.
ಹರ್ಷ,
ನಿಂಗ್ ಕುಶಿಯಾದ್ದಕ್ಕೆ ನಂಗ್ ಸಂತೋಷ
--
ಪಾಲ
seeing the title, i reluctantly clicked the lnk, expected pictures of "henu".
ReplyDeleteRelieved to find monkeys instead :)
ಪಾಲಚಂದ್ರ...
ReplyDeleteಸಕತ್ತಾಗಿದೆ...
ಮೊದಲ ಹಾಗೂ ಕೊನೆಯ ಫೋಟೊದಲ್ಲಿರುವ ದೊಡ್ಡ ಕೋತಿಯ ಮುಖದ ಭಾವನೆ..
ಸೂಪರ್...!
ನಾನು ನಿಮ್ಮ "ರವಿಕೆ " ಕಣದ ಲೇಖನದಿಂದ ..
ಸ್ಪೂರ್ತಿ ಪಡೆದು "ಕಾಗೆ ಪುರಾಣ" ಬರೆದಿದ್ದೆ..
ಇದು ತುಂಬಾ, ತುಂಬಾ..,ತುಂಬಾನೇ... ಚೆನ್ನಾಗಿದೆ..
ಹೀಗೆ ನಗಿಸುತ್ತಾ ಇರಿ....
ಅಭಿನಂದನೆಗಳು...!
ಅಶೋಕ್,
ReplyDeleteಹೇನು ಹಿಡ್ಕೊಂಡು ಹೋಗೋದು ತುಂಬಾ ಕಷ್ಟ ಕಣ್ರಿ!
ಪ್ರಕಾಶ್,
ರವಿಕೆಗೆ ಕಾಗೆ, ಕಾಗೆಗೆ ಮಂಗ, ಮಂಗಕ್ಕೆ ಏನು ಬರುತ್ತೋ ನೋಡೋಣ. ನಿಮ್ಮ ಪ್ರೋತ್ಸಾಹಕ್ಕೆ ವಂದನೆಗಳು
--
ಪಾಲ
hahah :D ತುಂಬಾ ಚೆನ್ನಾಗಿದೆ ಮಂಗಾಯಣ..:) ನನ್ನ ಪುಟ್ಟಿಗೂ ತೋರಿಸುವೆ. ಧನ್ಯವಾದಗಳು.
ReplyDeleteತೇಜಸ್ವಿನಿ,
ReplyDeleteತುಂಬಾ ದಿನದ ನಂತರ "ಅನುಭವ ಮಂಟಪಕ್ಕೆ" ಭೇಟಿ ಕೊಟ್ಟ ನಿಮಗೆ ಮತ್ತೊಮ್ಮೆ ಸ್ವಾಗತ. ಪುಟ್ಟಿಗೂ ತೋರ್ಸಿ, ತುಂಬಾ ಖುಶಿಯಾಗಬಹುದು ಅವ್ಳು, ಪ್ರತಿಕ್ರಿಯೆಗೆ ವಂದನೆಗಳು.
--
ಪಾಲ
ಫೋಟೋಗಳು ತುಂಬಾ ಚೆನ್ನಾಗಿವೆ..ನಂಗ್ಯಾಕೋ ಮಂಗಗಳನ್ನು ನೋಡಿದರೆ ಹೆದರಿಕೆ..ಎಲ್ಲೇ ಕೋತಿಗಳನ್ನು ನೋಡಿದರೂ..ಅವುಗಳು ನನ್ನ ಕೈಯಲ್ಲಿರುವ ಬ್ಯಾಗನ್ನು ಕದಿಯದೆ ಇರಲಾರವು..ಯಾವಾಗಲೂ ಕೋತಿ ದಾಳಿ.
ReplyDeleteಚಿತ್ರಾ,
ReplyDeleteಪ್ರತಿಕ್ರಿಯೆಗೆ ವಂದನೆಗಳು, ನಂಗೂ ಹೆದ್ರಿಕೆ ಆಯ್ತು ಕ್ಯಾಮರಾ ಎಲ್ಲಿ ಕಸ್ಕೊಳ್ಳುತ್ತೋ ಅಂತ, ಅದಿಕ್ಕೆ ಅದು ಹಲ್ಲು ತೋರ್ಸಿದ ಮೇಲೆ ಅಲ್ಲಿಂದ ಓಡ್ ಬಂದ್ಬಿಟ್ಟೆ
--
ಪಾಲ