
ಮೇಜಿನ ಮೇಲೆ ಪಾರಿವಾಳದ ಪುಕ್ಕವನಿರಿಸಿ
ಪುಕ್ಕದ ಮೇಲೊಂದ್ನೀರ್ತೊಟ್ಟನಿಟ್ಟು
ಆ ನೀರ್ಹನಿಗೆ ಸಮಾನವಾಗಿ
ಛಾಯಾಪೆಟ್ಟಿಗೆಯ ಪಿಡಿದು
ಚಿತ್ರ ತೆಗೆದು ನೋಡಿದೊಡೆ
ಪುಕ್ಕದ ಮೇಲಣ ನೀರ್ಗೋಲದಲಿ
ಬಿಂಬಿಸುವ ಸತ್ಯ ಪ್ರತಿಬಿಂಬಕೆ ಕಾರಣವಾದ
ವಾಯುರ್ಮಾರ್ಗವ ತೊರೆದು
ನೀರ್ಮಾರ್ಗವ ಬಳಸಿ ವೇಗಬದಲಿಸಿದೊಡಾದ
ಬೆಳಕಿನ ತರಂಗದ ದಿಕ್ಪಲ್ಲಟ
nimma blog top photo li... (ade.. kumara parvathada mantapada photo).. aa photo mele ಗ್ನಾನ endide.. adu ಜ್ಞಾನ endaagabekallave? Printing mistake sari madi :)
ReplyDeleteThis comment has been removed by the author.
ReplyDeleteತುಂಬಾ ಚೆನ್ನಾಗಿದೆ ಚಿತ್ರ!
ReplyDeleteಮತ್ತೆ ವಚನ :) ಇನ್ನೂ ಚೆನ್ನಾಗಿದೆ!
ReplyDeleteಪಾಲಚಂದ್ರ,
ReplyDeleteಫೋಟೋ ತುಂಬಾ ಚೆನ್ನಾಗಿದೆ...ಪ್ರಯೋಗವೂ ಆಷ್ಟೇ ....ಅದರೆ ನನಗೆ ಕವನ ಸ್ವಲ್ಪ ಕಷ್ಟ್ಘವಾಯಿತು.....
fantastic photo showing refraction.
ReplyDeleteಸರ್....ಫೋಟೋ ಸೂಪರ್.!
ReplyDelete-ಚಿತ್ರಾ
ವಿಜಯ್,
ReplyDeleteಗ್ನಾನವು, "ಜ್ಞಾನ"ವೆಂದಾಗಬೇಕಿತ್ತು, ಆದರೂ ಈ ಅಲ್ಪನಿಗಿನ್ನೂ ಜ್ಞಾನಿಗಳಿಂದ ಮಾರ್ಗದರ್ಶನ ಸಿಕ್ಕಿಲ್ಲ.
ಹಂಸಾನಂದಿ,
ವಚನ ಹಾಗೂ ಚಿತ್ರದ ಬಗೆನಿನ ಮೆಚ್ಚುಗೆಗೆ ನನ್ನಿ
ಶಿವು,
ಸರಳವಾಗಿ ಬರೆದರೆ ಎಲ್ಲರಿಗೂ ಅರ್ಥವಾಗತ್ತೆ, ಅರ್ಥವಾಗುವಂತೆ ಬರೆದ್ರೆ ಓದಿ ಇಷ್ಟೇನಾ ಅಂದುಕೋತಾರೆ. ಚಿತ್ರ ಮೆಚ್ಚಿದ್ದಕ್ಕೆ ವಂದನೆಗಳು
ಲಕ್ಷ್ಮಿ,
ಇದು ನಾನು ತೆಗೆದ ಸುಮಾರು ೮ ತಿಂಗಳ ಹಿಂದಿನ ಚಿತ್ರ. ನಿಮ್ಮ "ನವಿಲು ಗರಿಯಲ್ಲಿ ಅಷ್ಟು ಬಣ್ಣ ಹೇಗೆ ? - http://kutoohali.blogspot.com/2008/04/blog-post.html" ನೋಡಿದ ಮೇಲೆ ಈ ಚಿತ್ರ ನೆನಪಿಗೆ ಬಂತು. Diffraction ಬಗ್ಗೆ ಚೆನ್ನಾಗಿ ಬರೆದಿದ್ದೀರಿ.
ಚಿತ್ರಾ,
"ಸರ್" ಬಿರುದು ಸಿ.ವಿ. ರಾಮನ್, ವಿಶ್ವೇಶ್ವರಯ್ಯ ಮೊದಲಾದವರಿಗೆ ಚೆನ್ನಾಗಿ ಕಾಣಿಸುತ್ತಲ್ವ? ನಮ್ಮಂತವರಿಗೆ ಸರ್ ಅಂದ್ರೆ ಅದ್ರ ಬೆಲೆ ಕಮ್ಮಿ ಆಗತ್ತೆ, ಈಗ ಎಲ್ಲ್ರಿಗೂ ಪುಕ್ಸಟೆಯಾಗಿ ಡಾ|| ಸಿಕ್ಕಂಗೆ. ಚಿತ್ರ ಮೆಚ್ಚಿದ್ದಕ್ಕೆ ಧನ್ಯವಾದ.
--
ಪಾಲ
ಪಾಲ,
ReplyDeleteಸೂಪರ್ ಫೋಟೋ ರೀ...
ಪಾಲಚಂದ್ರ...
ReplyDeleteಫೋಟೊ... ಸೂಪರ್...!
ಚಂದದ ಕವನ...!
ನಾನು ಸಣ್ಣ ಬೆಳಕಿನ ಕಿಂಡಿಯಲ್ಲಿ ಇಂಥಹ ಪ್ರಯೋಗ ಮಾಡಿದ್ದಿದೆ....
ಚನ್ನಾಗಿ ಬಂದಿದೆಯೊ ಇಲ್ಲವೊ ನನಗೇ ಸಂಶಯ...!
ನಿಮ್ಮ ಪ್ರಯೋಗಕ್ಕೆ ಅಭಿನಂದನೆಗಳು...!
ಸಂದೀಪ್,
ReplyDeleteಥ್ಯಾಂಕ್ಸ್ ಕಣ್ರಿ
ಪ್ರಾಕಾಶ್,
ನಿಮ್ಮ ಪ್ರಯೋಗಾನ ನಮಗೂ ತೋರಿಸ್ರಿ..
--
ಪಾಲ