ಬೆಳಿಗ್ಗಿನ ಚುಮು ಚುಮು ಚಳಿ, ಕಾಫಿ ಹೀರುತ್ತಾ ತೋಟದ ಕಡೆ ಕಣ್ಣು ಹಾಯಿಸಿದರೆ ಅರಳುತ್ತಿರುವ ಹೂವಿನ ಮೇಲೆ ಹಾರುತ್ತಿರುವ ಹಲವು ಬಗೆಯ ಚಿಟ್ಟೆಗಳು. ದೂರದಿಂದ, ಅದು ಹಾರುವ ಪರಿ, ಅದರ ಬಣ್ಣಗಳಿಂದ ವ್ಯಾಮೋಹಿತನಾಗಿದ್ದೆನಾದರೂ ಹತ್ತಿರದಿಂದ ಅದನ್ನು ವೀಕ್ಷಿಸಿ, ಅದರ ಜಾತಕ ತಿಳಿಯುವ ಪ್ರಯತ್ನ, ನನ್ನ ಕೈಗೆ ಕ್ಯಾಮಾರ ಬರುವವರೆಗೂ ಮಾಡಿರಲಿಲ್ಲ.
ಇವತ್ತು ಯಾವುದಾದರೂ ಒಂದು ಚಿಟ್ಟೆ ಹಿಂದೆ ಬಿದ್ದು ಅದರ ಕ್ಲೋಸ್ ಅಪ್ ತೆಗೆಯಬೇಕೆಂದು ನಿರ್ಧರಿಸಿ, ಮೊದಲು ಕಣ್ಣಿಗೆ ಬಿದ್ದ "ಗ್ರೇ ಫ್ಯಾನ್ಸಿ" ಎಂಬ ಚಿಟ್ಟೆಯ ಬೆನ್ನು ಹತ್ತಿದೆ. ನಾನು ಒಳ್ಳೆಯವನು ಅಂತ ನನಗೆ ಗೊತ್ತು ಆದರೆ ಆ ಚಿಟ್ಟೆಗೇನು ಗೊತ್ತು ಪಾಪ. ಹತ್ತಿರ ಹೋದಂತೆಲ್ಲಾ, ಬೆದರಿ ನನ್ನಿಂದ ದೂರ ಹೋಗಿ ಕುಳಿತುಕೊಳ್ಳಲು ಆರಂಭಿಸಿತು. ನಾನೂ ಕ್ಯಾಮರಾ ಹೆಗಲಿಗೆ ನೇತು ಹಾಕಿಕೊಂಡು ಅದು ಹೋದಲ್ಲೆಲ್ಲಾ ಅದನ್ನು ಹಿಂಬಾಲಿಸಿದೆ.
ಹೀಗೆ ತನ್ನ ಹಿಂದೆ ಬಿದ್ದ ನನ್ನನ್ನು ಕಂಡು, ಈಗ ಅದಕ್ಕೂ ಒಂದು ರೀತಿಯ ಆಶ್ಚರ್ಯವಾಗತೊಡಗಿತು. ಹೂವಿನಿಂದ ಹಾರಿ ದೂರದ ಒಂದು ಎಲೆಯ ಮೇಲೆ ಕುಳಿತುಕೊಂಡು ನನ್ನ ಕಡೆಗೇ ನೋಡತೊಡಗಿತು. ಕ್ಯಾಮರಾದ ಕಣ್ಣಿನಲ್ಲಿ ನೋಡುತ್ತಾ ಹಾಗೇ ಮುಂದುವರಿದಂತೆ ನನಗೆ ಚಿತ್ರ ತೆಗೆಯಲು ಬೇಕಾಗಿದ್ದ ಅಂತರ ಸಿಕ್ಕಿತ್ತು. ಕ್ಯಾಮರ ಕ್ಲಿಕ್ಕಿಸಿ, ಬರಿಗಣ್ಣಿನಿಂದ ನೋಡಿದರೆ ಚಿಟ್ಟೆ ಒಂದೇ ಮಾರಿನ ಅಂತರದಲ್ಲಿತ್ತು.
ಮತ್ತೆ ಅದಕ್ಕೆ ಸಂದೇಹ ಬಂತೋ ಎನೋ, ದೂರದಲ್ಲಿ ಬಿದ್ದಿದ್ದ ತೆಂಗಿನ ಗರಿಯೊಂದರ ಮೇಲೆ ಕುಳಿತು ಎನೋ ಯೋಚಿಸತೊಡಗಿತು. ಈ ಬಾರಿ ಮತ್ತೆ ಅದರ ಹತ್ತಿರ ಹೋಗಿ ನಾಲ್ಕೈದು ಚಿತ್ರ ತೆಗೆದೆ.
ಹತ್ತಿರ ಬಂದೂ ಎನೂ ಮಾಡದ ನನ್ನ ನೋಡಿ ಈಗ ಅದಕ್ಕೆ ಕೊಂಚ ಧೈರ್ಯ ಬಂದಿತ್ತು. ಹಾಗೆಯೇ ಬಳಿಯಿದ್ದ ದಾಸವಾಳದ ಮೊಗ್ಗಿನ ಮೇಲೆ ಕುಳಿತು ಬಾ ಎಂಬಂತೆ ನಗು ಮೊಗದಿಂದ ನನ್ನ ಕರೆಯಿತು. ಹತ್ತಿರ ಹೋಗಿ ಮತ್ತೆ ಚಿತ್ರ ತೆಗೆದು ಅಲ್ಲಿಯೇ ನಿಂತಿದ್ದೆ.
ಈಗ ಆಶ್ಚರ್ಯ ಪಡುವ ಸರದಿ ನನ್ನದಾಗಿತ್ತು. ಮೊಗ್ಗಿನ ಮೇಲೆ ಕೂತಿದ್ದ ಚಿಟ್ಟೆ ಹಾರಿ ನನ್ನ ಎಡ ಹೆಗಲ ಮೇಲೇ ಬಂದು ಕೂತಿತು. ಎನೋ ಒಂದು ಬಗೆಯ ಸಂತಸ, ಪ್ರಿಯಕರನ ಪ್ರೇಮ ನಿವೇದನೆಯನ್ನು ಪ್ರೇಯಸಿ ಒಪ್ಪಿಕೊಂಡಾಗ ಆತನಿಗೆ ಆಗಬಹುದಾದಂತ ಸಂಭ್ರಮ, ನನ್ನ ಮೇಲೆ ಭರವಸೆಯಿಟ್ಟಿ ಚಿಟ್ಟೆಯಿಂದ ಮೂಡಿತು.
ಇದುವರೆಗೂ ರೆಕ್ಕೆ ಬಿಡಿಸಿ ಕೂತುಕೊಂಡ ಚಿತ್ರ ತೆಗೆಯಲು ಅನುಕೂಲವಾಗಿರಲಿಲ್ಲ. ಹೀಗೆ ಸ್ವಲ್ಪ ಸಮಯ ಹೆಗಲ ಮೇಲಿದ್ದ ಚಿಟ್ಟೆ ಪಕ್ಕದಲ್ಲಿದ್ದ ಹೂವಿನ ಮೇಲೆ ಕುಳಿತು ರೆಕ್ಕೆಯನ್ನು ಸಂಪೂರ್ಣವಾಗಿ ಬಿಚ್ಚಿ ಫೋಸು ನೀಡತೊಡಗಿತು.
ಹಾರಿ ಹಾರಿ ಹಸಿವಾಗಿತ್ತೋ ಎನೋ, ಕೊಳವೆಯಂತಹ ತನ್ನ ನಾಲಗೆ ಚಾಚಿ ಮಕರಂದ ಹೀರತೊಡಗಿತು.
ಅದರ ಹಿಂದೆ ಸುತ್ತಿ ಸುತ್ತಿ ನನಗೂ ಹಸಿವಾಗ ತೊಡಗಿತ್ತು. ಇನ್ನೂ ಸಮೀಪ ತೆರಳಿ ಇನ್ನೊಂದು ಚಿತ್ರ ತೆಗೆದು, ಅದರ ಸ್ನೇಹಕ್ಕೆ ಋಣಿಯಾಗಿ ಮನೆಯ ಕಡೆ ಅಡಿಯಿಟ್ಟೆ.
ಗ್ರೇ ಫ್ಯಾನ್ಸಿಯ ಜಾತಕ:
Kingdom: Animalia
Phylum: Arthropoda
Class: Insecta
Order: Lepidoptera
Family: Nymphalidae
Subfamily: Nymphalinae
Genus: Junonia
Species: J. atlites
ಪಾಲ,
ReplyDeleteಎಲ್ಲ ಚಿತ್ರಗಳೂ ಚೆನ್ನಾಗಿವೆ.
ಆದರೆ ತೆಂಗಿನ ಗರಿಯ ಮೇಲೆ ಕುಳಿತಿರುವ ಚಿಟ್ಟೆಯ ಚಿತ್ರ ತುಂಬಾ ಇಷ್ಟ ಆಯ್ತು.
-ಅನಿಲ್.
ಪಾಲ,
ReplyDeleteಸುಂದರವಾದ ಚಿತ್ರಗಳು, ಅಂದ ಹಾಗೆ ನಿಮ್ಮ ಬಳಿ ಇರುವ ಕ್ಯಾಮರ ಯಾವುದು?
-ಬಾಲ
ಅನಿಲ್,
ReplyDeleteಪ್ರತಿಕ್ರಿಯೆಗೆ ವಂದನೆಗಳು.
ಬಾಲ,
ಧನ್ಯವಾದ, ನಾನು ಉಪಯೋಗಿಸುತ್ತಿರುವುದು Sony DSC H2 ಎಂಬ ಕ್ಯಾಮರಾ. ಇದರ ಬಗ್ಗೆ ಹೆಚ್ಚಿನ ವಿವರ ಈ ಕೊಂಡಿಯಲ್ಲಿದೆ: http://www.dpreview.com/reviews/sonyh2
--
ಪಾಲ
nice photos
ReplyDeletechiTTeyannu bahaLa chennaagi sere hiDididdeera nimma kyaamaraadalli..
ReplyDeleteಪಾಲ ಚಂದ್ರ,
ReplyDeleteನಿಮ್ಮ ಈ ಗ್ರೆ ಪ್ಯಾನ್ಸಿ ಚಿಟ್ಟೆ ಚಿತ್ರ ಎರಡನೆಯದು ತಾಂತ್ರಿಕವಾಗಿ ತುಂಬಾ ಚೆನ್ನಾಗಿದೆ. ನಿಮಗೆ ಫೋಟೋಗ್ರಫಿಯ ಉತ್ಸಾಹ ಹೆಚ್ಚಿರುವುದರಿಂದ ಈ ಚಿಟ್ಟೆ ಫೋಟೊ ತೆಗೆಯುವ ಒಂದು ಸುಲಭ ಟೆಕ್ನಿಕ್ ಹೇಳಲಿಚ್ಚಿಸುತ್ತೇನೆ....
ನಿಮಗೆ ಚಿಟ್ಟೆ ಫೋಟೊ ತೆಗೆಯಲು ಚಳಿಗಾಲದ ಮುಂಜಾವು ಉತ್ತಮ. ಮತ್ತು ನೀವು ಯಾವುದೇ ಚಿಟ್ಟೆಯ ಫೋಟೊ ತೆಗೆಯಬೇಕಾದರೆ ಬೆಳಗಿನ ವಾತಾವರಣದ ಉಷ್ಣತೆ ೨೦ ಡಿಗ್ರಿ ಸೆಂಟಿಗ್ರೇಡಿಗಿಂತ ಕಡಿಮೆ ಇದ್ದರೆ ನಿಮಗದು ನೀರು ಕುಡಿದಷ್ಟು ಸುಲಭ... ಆ ವಾತಾವರಣದಲ್ಲಿ ಚಿಟ್ಟೆಗಳ ರೆಕ್ಕೆಗಳು ರಾತ್ರಿ ಬಿದ್ದ ಹಿಮಬಿಂದುಗಳಿಂದಾಗಿ ಒದ್ದೆಯಾಗಿರುತ್ತವೆ. ಬೆಳಗಿನ ಸಮಯದಲ್ಲಿ ಅವು ಯಾವುದೇ ಎಲೆ, ಕಡ್ಡಿ, ಹೂವಿನ ಮೇಲೆ ಕುಳಿತಿದ್ದರೂ ಅವು ಹಾರಿಹೋಗುವುದಿಲ್ಲ.... ಕಾರಣ ಅವುಗಳ ರೆಕ್ಕೆಗಳು ನಮ್ಮ ಒದ್ದೆ ಬಟ್ಟೆಘಳಂತೆ ಆಗಿ ಹಾರಲು ಸಾಧ್ಯವಾಗುವುದಿಲ್ಲ...ಸೂರ್ಯನ ಕಿರಣ ಆ ರೆಕ್ಕೆಗಳ ಮೇಲೆ ಬಿದ್ದು ಶಾಖ ಹೆಚ್ಚಾಗಿ ರೆಕ್ಕೆಗಳು ಪೂರ್ತಿ ಒಣಗಿದ ಮೇಲೆ ರೆಕ್ಕೆಗಳಿಗೆ ಶಕ್ತಿ ಬಂದು ಹಾರಿಹೋಗುತ್ತವೆ...ನಮಗಿಲ್ಲಿ ರೆಕ್ಕೆ ಒಣಗುವ ಸಮಯದಲ್ಲಿ ನಾವು ತುಂಬಾ ಚೆನ್ನಾಗಿ ಫೋಟೊ ತೆಗೆಯಬಹುದು..ಅವು ಮಾಡೆಲ್‌ಗಳಂತೆ ಫೋಸ್ ಕೊಡುತ್ತವೆ... ಇದೇ ವಿಧಾನದಲ್ಲಿ ನಾನು ಕಡಿಮೆಯೆಂದರೂ ೫೦ಕ್ಕೂ ಹೆಚ್ಚು ಚಿಟ್ಟೆ ಫೋಟೊಗಳನ್ನು ತೆಗೆದಿದ್ದೇನೆ. ಮತ್ತು ಅವು ತಾಂತ್ರಿಕವಾಗಿಯೂ ಅತ್ಯುತ್ತಮವಾಗಿದ್ದು ನನಗೆ ಅನೇಕ ಬಹುಮಾನಗಳು ಬಂದಿವೆ....ನೀವು ಈ ವಿಧಾನವನ್ನು ಪ್ರಯತ್ನಿಸಬಹುದು...ನಿಮ್ಮ್ ಚಿಟ್ಟೆ ಫೋಟೊಗ್ರಫಿಗೆ ಇದು ಸಕಾಲ...ಒಳ್ಳೆಯದಾಗಲಿ....
ಅಶೋಕ್, ಗುರು,
ReplyDeleteನಿಮ್ಮ ಮೆಚ್ಚುಗೆಗೆ ವಂದನೆಗಳು.
ಶಿವು,
ತುಂಬಾ ಒಳ್ಳೆಯ ಸಲಹೆ, ಬಹಳ ಥ್ಯಾಂಕ್ಸ್ :) ಪ್ರಯತ್ನಿಸುತ್ತೇನೆ.
--
ಪಾಲ
Pala,,, r u a proffessional photographer???? irabahudu anta nanna anisike,,, watte pic's Pala,, naanu nam garden flowers mele koota Chitte photo tegeyoke tumba kashtapattidini,, Shivu helid haage ee sari try maadi, swalpanadru Chitte photo tegitini ;),,thanx to Shivu.
ReplyDeletehmmmm helod martidde,, ele mele koota Chitte nimmanna nodi bhaya pattitthu ansatte,,, houda????