ಕುವೆಂಪು "ನೆನಪಿನ ದೋಣಿಯಲ್ಲಿ" ತಮ್ಮ ಅಜ್ಜಿಯನ್ನು ನೆನಪಿಸಿಕೊಳ್ಳುವ ಸಂದರ್ಭ ಸ್ವಾರಸ್ಯಕರವಾಗಿದೆ. ಅಡುಗೆ ಮನೆಯಲ್ಲಿ ಮೊಮ್ಮಗನಿಗಾಗಿ, ಅನ್ನ ಅಕ್ಕಿ ಹಿಟ್ಟಿಗೆ ಬಾಳೆಯ ಹಣ್ಣನ್ನು ಕಲಸಿ ನುರಿದು, ಸೀ ಅಪ್ಪು ತಯಾರಿಸುತ್ತಿರುತ್ತಾರೆ. ನಂತರ ದಪ್ಪ ರೊಟ್ಟಿ ತಟ್ಟಿ ಹೆಂಚಿನಲ್ಲಿ ಬೇಯಿಸುತ್ತಿರುತ್ತಾರೆ. ಕತ್ತಲೆಯ ಗವಿಯಂತಹ ಅಡುಗೆ ಕೋಣೆಯಲ್ಲಿ ಕೇವಲ ಒಲೆಯ ಕೆಂಬೆಳಕು ಅಜ್ಜಿಯ ಶೀರ್ಣವದನದ ಮೇಲೆ ಬಿದ್ದು ತನ್ನ ಛಾಯಾಲೀಲೆಯನ್ನು ತೋರಿಸುತ್ತಿರುತ್ತದೆ. ಹಾಗೆಯೇ ಆ ಸೀ ಕಂಪಿನ ಆಘ್ರಾಣ ಅಪ್ಯಾಯಮಾನವಾಗಿರುವಂತೆಯೇ ಅದರ ರುಚಿಯೂ ಕೂಡ ಸವಿಯಾಗಿಯೇ ಇದ್ದಿರಬಹುದು ಎಂದು ನೆನೆದು, ನೆನಪನ್ನು ಮಡದಿಯ ಬಳಿ ಹೇಳಿಕೊಳ್ಳುತ್ತಾರೆ. ಆದರೆ ಅವರ ಮಡದಿ "ಅದು ನಿಮಗೆ ಅಂದು ರುಚಿಯಾಗಿ ಕಂಡಿರಬಹುದು, ಈಗ ಅದನ್ನು ಮಾಡಿದರೆ ನೀವು ತಿನ್ನುತ್ತೀರೋ ಇಲ್ಲವೋ" ಎಂದು ಸಂಶಯ ವ್ಯಕ್ತ ಪಡಿಸುತ್ತಾರೆ. ಇದನ್ನು ನಿರಾಕರಿಸಿ ಕುವೆಂಪು "ನೋಡೋಣ, ನೀವು ಮಾಡಿ ಕೊಡಿ; ನಂತರ ಹೇಳುತ್ತೇನೆ" ಎಂದುತ್ತರಿಸುತ್ತಾರೆ.
ಇವರ ಸವಾಲನ್ನು ಸ್ವೀಕರಿಸಿ, ಅವರ ಮಡದಿ ಸೀ ಅಪ್ಪು ತಯಾರಿಸಿ ಅವರ ಮುಂದಿಟ್ಟರೆ, ಅದು ನೋಡುವುದಕ್ಕೂ ಕನಿಕರಕ್ಕೆ ಅರ್ಹವಾದ ವಸ್ತುವಾಗಿ ತೋರುತ್ತದೆ. ಅವರ ಮಾತಿನಲ್ಲೇ ಹೇಳುವುದಾದರೆ "ತುಟಿಗೆ ರಂಗು ಬಳಿದು ಕೊಂಡು, ಅತ್ಯಂತ ನವೀನ ಶೈಲಿಯಲ್ಲಿ ಕೇಶವಿನ್ಯಾಸ ರಚಿಸಿಕೊಂಡು, ಮನ ಮೋಹಿಸುವ ತೆಳು ಬಣ್ಣದ ಸೀರೆಯುಟ್ಟು ದರ್ಶನೀಯವಾದ ಅಂಗಭಾಗಗಳನ್ನು ಧ್ವನಿಪೂರ್ವಕವೆಂಬಂತೆ ಪ್ರದರ್ಶಿಸುತ್ತಾ ನಿಂತಿರುವ ಅರ್ವಾಚೀನ ’ಅಂಗಡಿ ಹುಡುಗಿ’ಯರ ಮುಂದೆ ಹರಳೆಣ್ಣೆ ಹಚ್ಚಿ, ಮರದ ಬಾಚಣಿಗೆಯಲ್ಲಿ ಬಾಚಿ, ಹರಳೆಲೆ ಹಾಕಿ ಮಂಡೆ ಕಟ್ಟಿಕೊಂಡು, ಮೈಯೆಲ್ಲಾ ಮುಚ್ಚುವಂತೆ ಜಡ್ಡು ಸೀರೆಯುಟ್ಟಿರುವ ಗತಕಾಲದ ಮುದುಕಿಯಂತೆ ಈ ಸೀ ಅಪ್ಪು, ಜಾಮೂನು, ಜಿಲೇಬಿ ಮೊದಲಾದ ಆಧುನಿಕ ತಿಂಡಿಗಳ ಮುಂದೆ". ಆದರೆ ಏನೂ ಮಾಡುವ ಹಾಗಿಲ್ಲ ಸೀ ಅಪ್ಪುವಿನ ಮರ್ಯಾದೆ ಹಾಗೂ ಅಜ್ಜಿಯ ಗೌರವದ ಪ್ರಶ್ನೆ ಎಂದು ತಿನ್ನಲು ಆರಂಭಿಸುತ್ತಾರೆ. ಆದರೆ ಮೊದಲನೇ ತುತ್ತು ಅವರ ನೆನಪಿನ ರುಚಿಯನ್ನು ಸುಳ್ಳಾಗಿಸುತ್ತದೆ. ಆದರೆ ಅದನ್ನು ಮಡದಿಗೆ ಹೇಳಿ, ಸೀ ಅಪ್ಪುವಿನ ಮರ್ಯಾದೆ ಕಳೆಯಬಾರದೆಂಬ ಉದ್ದೇಶದಿಂದ, ಅಗಿದು ನಾಲಗೆಗೆ ರುಚಿ ತೋರಿಸದೆ ನುಂಗತೊಡಗುತ್ತಾರೆ. ಇವರು ತಿನ್ನುವುದನ್ನು ಗಮನಿಸುತ್ತಿದ್ದ ಮಡದಿ "ಅಜ್ಜಿಯ ಸೀ ಅಪ್ಪು ಚೆನ್ನಾಗಿದೆಯಲ್ಲವೇ" ಎಂದು ಕುಹಕದಿಂದ ಪ್ರಶ್ನಿಸುತ್ತಾರೆ. ಆದರೆ ಕುವೆಂಪು ಸೋಲನ್ನೊಪ್ಪದೆ "ನಿಮಗೆ ಅಜ್ಜಿಯ ಪರಿಣತೆ ಎಲ್ಲಿಂದ ಬರಬೇಕು" ಎಂಬ ಉತ್ತರ ನೀಡಿ ಸೀ ಅಪ್ಪುವಿನ ಮರ್ಯಾದೆ ಉಳಿಸುತ್ತಾರೆ.
ಕಳೆದ ಬಾರಿ ಊರಿಗೆ ಹೋಗಿದ್ದಾಗ ನನ್ನ ಅಜ್ಜಿಯ ನೆನಪಾಗದಿದ್ದರೂ ಚಿಕ್ಕಂದಿನಲ್ಲಿ ನಾನು ತಯಾರಿಸಿಕೊಳ್ಳುತ್ತಿದ್ದ ಲಾಲಿ ಪಪ್ಪಿನ ನೆನಪಾದದ್ದಂತೂ ನಿಜ. ಇದನ್ನು ತಯಾರಿಸಲು ಯಾರು ಹೇಳಿಕೊಟ್ಟರೋ ಸರಿಯಾಗಿ ನೆನಪಿಲ್ಲ, ಊಹಿಸುವುದಾದರೆ ನನ್ನ ಚಿಕ್ಕ ಅಕ್ಕನೇ ಇರಬೇಕು. ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಹುಣಸೇ ಹಣ್ಣು, ಬೆಲ್ಲ, ಮೆಣಸಿನ ಪುಡಿ ಅಥವಾ ಹಸಿ ಮೆಣಸು, ಉಪ್ಪು, ಜೀರಿಗೆಯ ಮಿಶ್ರಣವನ್ನು ಕಲ್ಲು ಗುಂಡಿನ ಸಹಾಯದಿಂದ ಒಂದಕ್ಕೊಂದು ಹೊಂದಿಕೊಳ್ಳುವಂತೆ ಗುದ್ದಿ,ಉಂಡೆಮಾಡಿ, ಅದಕ್ಕೊಂದು ತೆಂಗಿನ ಗರಿಯ ಕಡ್ಡಿಯೊಂದನ್ನು ಸಿಕ್ಕಿಸಿ, ಜೊಲ್ಲು ಸುರಿಸುತ್ತಾ ಸವಿಯುತ್ತಿದ್ದೆ. ಅದನ್ನು ಕಲ್ಲು ಗುಂಡಿನಲ್ಲಿ ಗುದ್ದುತ್ತಿರಬೇಕಾದರೇ ಲಾಲಾರಸ ಉಕ್ಕುವಾಗ, ಇನ್ನು ತಿನ್ನುವಾಗ ಜೊಲ್ಲು ಸುರಿಯದೇ ಇದ್ದೀತೆ? ಅಂಗಡಿಯ ಲಾಲಿ ಪಪ್ಪಾದರೆ ಬರೀ ಸಿಹಿ, ಆದರೆ ನಾವು ತಾಯಾರಿಸಿದ್ದೋ, ಹುಳಿ, ಸಿಹಿ, ಖಾರ, ಉಪ್ಪು; ಆಹಾ ಎಂತಹ ರುಚಿ.
ಮನೆಯಲ್ಲಿ ಯಾರೂ ಇಲ್ಲದ ವೇಳೆ ಇದನ್ನು ಮಾಡಿಕೊಳ್ಳಲು ಅಂದಿನ ಕಾರಣ ಹಿರಿಯರಿಂದ ಬೈಯ್ಯಿಸಿಕೊಳ್ಳಬಾರದೆಂದು. ಆದರೆ ಬೆಳೆದು ನಿಂತ ಮಗ, ಹೀಗೆ ತೆಂಗಿನ ಗರಿಯ ಕಡ್ಡಿ ಸಿಕ್ಕಿಸಿಕೊಂಡು ಲಾಲಿ ಪಪ್ಪನ್ನು ತಿನ್ನುತ್ತಿದ್ದರೆ, ಹಿರಿಯರು ಏನೆಂದುಕೊಂಡಾರು ಎಂಬುದು ಇಂದಿನ ಕಾರಣ. ಅದೊಂದು ಮಧ್ಯಾಹ್ನ ಅಪ್ಪ, ಅಮ್ಮ ಊರ ಕೇರಿಯ ಮನೆಯೊಂದರಲ್ಲಿ ಯಾವುದೋ ಪೂಜೆಯ ನಿಮಿತ್ತ ತೆರಳಿದ್ದರು. ನಾನು ಮಾತ್ರ ಜನರಿಂದ ಕೆಲವು ದಿನವಾದರೂ ದೂರ ಇರುವ ನೆಪದಿಂದ ಕಾರ್ಯಕ್ರಮ ತಪ್ಪಿಸಿಕೊಂಡು ಮನೆಯಲ್ಲೇ ಉಳಿದಿದ್ದೆ. ಆಗ ಮೊದಲಿಗೆ ನನ್ನ ನೆನಪಿಗೆ ಬಂದಿದ್ದೇ ಈ ನನ್ನ ಲಾಲಿ ಪಪ್ಪು. ಮನೆಯ ಬಾಗಿಲನ್ನು ಸರಿದು, ಅಡುಗೆ ಮನೆಯನ್ನು ತಡಕಾಡಿ ನನಗೆ ಬೇಕಿದ್ದ ಸಾಮಗ್ರಿಯನ್ನು ತೆಗೆದುಕೊಂಡು, ಕಳಸದ ಅಂಬಾ ತೀರ್ಥದಲ್ಲಿ ಆರಿಸಿಕೊಂಡು ತಂದಿದ್ದ ಕಲ್ಲು ಗುಂಡಿನಿಂದ ಆ ಮಿಶ್ರಣವನ್ನು ಗುದ್ದಲಾರಂಭಿಸಿದೆ. ಗುದ್ದುವಾಗ ಮತ್ತದೇ ಲಾಲಾ ರಸದ ಸ್ರವಿಕೆ! ಅಂತೂ ಮಿಶ್ರಣ ಹದವಾಗಿ ಬೆರೆತ ನಂತರ, ತೋಟಕ್ಕೆ ತೆರಳಿ ತೆಂಗಿನ ಗರಿಯೊಂದರಿಂದ ಕಡ್ಡಿಯನ್ನು ಸಿಗಿದು, ಮಿಶ್ರಣದ ಉಂಡೆಗೆ ಚುಚ್ಚಿ ಬಾಯಲ್ಲಿರಿಸಿದೆ. ಹುಳಿ, ಸಿಹಿ, ಖಾರ, ಉಪ್ಪು, ಮತ್ತದೇ ಬಾಲ್ಯದ ರುಚಿ ಹಾಗೂ ಅದು ಕೇವಲ ನೆನಪಿನ ರುಚಿಯಾಗಿರಲಿಲ್ಲ!
ಅನುಭವಿಸದೇ ಹಾಡಿದ ಹಾಡು ಹಾಡಲ್ಲ, ಅನುಭವಿಸದೇ ಬಿಡಿಸಿದ ಚಿತ್ರ ಚಿತ್ರವಲ್ಲ, ಅನುಭವಿಸದೇ ಬರೆದ ಬರಹ ಬರಹವಲ್ಲ!
Sunday, January 11, 2009
Subscribe to:
Post Comments (Atom)
ವರ್ಗ
Amomum
(1)
ficus krishnae
(1)
Gangtok
(1)
Nikon 40mm f/2.8 Micro
(10)
paris
(1)
Sikkim
(8)
snow
(1)
Yuksom
(5)
ಅನಿಮೇಟೆಡ್
(1)
ಅನುಭವ ಕಥನ
(7)
ಅಮೂರ್ತ
(1)
ಆಟೋಟ
(2)
ಆಫಿಡ್
(1)
ಇರುವೆ
(6)
ಉಡುಪಿ
(4)
ಉಯ್ಯಾಲೆ
(1)
ಉರಗ
(3)
ಏರಿ
(1)
ಒಂಟಿ ಚಕ್ರದ ಸೈಕಲ್
(1)
ಒಯ್ಯುಗೆ
(6)
ಕದ
(1)
ಕಂದು ಏಲಕ್ಕಿ
(1)
ಕನ್ನಡ
(2)
ಕಪ್ಪು ಏಲಕ್ಕಿ
(1)
ಕಪ್ಪು-ಬಿಳುಪು
(5)
ಕಂಬಳ
(1)
ಕಂಬಳಿಹುಳು
(2)
ಕವನ
(15)
ಕವಿ ಶೈಲ
(1)
ಕಸರತ್ತು
(1)
ಕಳಸ
(1)
ಕಳ್ಳತನ
(1)
ಕಾವೇರಿ
(1)
ಕಾಳಾವಾರ ಬೆಟ್ಟ
(1)
ಕಾಳಿಂಗ ಸರ್ಪ
(1)
ಕಿಸ್ಕಾರ
(1)
ಕೀಟ ಪ್ರಪಂಚ
(35)
ಕುಂದಾಪುರ
(1)
ಕುವೆಂಪು
(1)
ಕೃಷಿ
(9)
ಕೃಷಿ ಮೇಳ
(4)
ಕೆರೆ
(2)
ಕೆಲಸ
(2)
ಕೆಸು
(2)
ಕೆಳದಿ
(1)
ಕೊಕ್ಕರೆ ಬೆಳ್ಳೂರು
(1)
ಕೋಟ
(8)
ಖಗೋಳ ಗಡಿಯಾರ
(1)
ಗವಿ
(1)
ಗುಡಿ ಕೈಗಾರಿಕೆ
(1)
ಗುಡ್ಡ
(2)
ಗುಹೆ
(1)
ಚಾರಣ
(3)
ಚಿಕ್ಕಮಗಳೂರು
(1)
ಚಿಟ್ಟಾಣಿ
(1)
ಚಿಟ್ಟೆಗಳು
(3)
ಚಿತ್ರ ಪುಟ
(102)
ಚಿತ್ರದುರ್ಗ
(1)
ಚಿತ್ರಪುಟ
(1)
ಚೌಕಾಶಿ
(1)
ಛಾಯಾಗ್ರಹಣ
(24)
ಜನ ಜೀವನ
(52)
ಜನಪದ
(2)
ಜರ್ಮನಿ
(1)
ಜಲಪಾತ
(1)
ಜೆಕ್ ಗಣರಾಜ್ಯ
(4)
ಜೇಡ
(3)
ಜೇನು ಸಾಕಣೆ
(1)
ಜೋಡಿ
(1)
ತರಕಾರಿ
(2)
ತುಮಕೂರು
(2)
ತೆಂಗಿನ ಕಾಯಿ
(1)
ತೆಂಗಿನ ತೋಟ
(1)
ದಸರ
(4)
ದೇವವೃಂದ
(1)
ದೇವಸ್ಠಾನ
(1)
ದೇವಸ್ಥಾನ
(1)
ದೊಡ್ಡ ಏಲಕ್ಕಿ
(1)
ಧಾರವಾಡ
(1)
ನಗರ
(1)
ನಂಬಿಕೆ
(1)
ನಾಟಕ
(1)
ನೀರ್ಹಕ್ಕಿ
(6)
ಪತಂಗ
(1)
ಪತ್ರಿಕೋದ್ಯಮ
(1)
ಪಶ್ಚಿಮ ಘಟ್ಟ
(2)
ಪಾರ್ಕ್
(1)
ಪಾಳು
(1)
ಪುಸ್ತಕ ಬಿಡುಗಡೆ
(1)
ಪೋರ್ಟ್ರೈಟ್
(8)
ಪ್ಯಾನಿಂಗ್
(1)
ಪ್ರಬಂಧ
(2)
ಪ್ರವಾಸ ಕಥನ
(3)
ಪ್ರಾಹ
(1)
ಪ್ಲಾಸ್ಟಿಕ್
(1)
ಬಕೇಟ್
(1)
ಬಂಡಿ
(1)
ಬಣ್ಣ
(1)
ಬನವಾಸಿ
(1)
ಬಳ್ಳಿ
(1)
ಬಾಗಿಲು
(1)
ಬಾರ್ಕೂರು
(1)
ಬೀಗ
(1)
ಬೆಂಕಿ
(1)
ಬೆಂಗಳೂರಿನ ಚಿತ್ರಗಳು
(5)
ಬೆಂಗಳೂರು
(27)
ಬೆಳಕು
(1)
ಬೇಸಾಯ
(1)
ಬ್ರಹ್ಮಾವರ
(1)
ಭಾರತ ಬಂದ್
(1)
ಭಿಕ್ಷುಕರು
(1)
ಮಕ್ಕಳು
(10)
ಮಗು
(1)
ಮಂಜು
(2)
ಮಮ್ಮಮ್
(3)
ಮಲೆನಾಡು
(1)
ಮಳೆ
(1)
ಮಳೆಗಾಲ
(2)
ಮಾರಿಕಣಿವೆ
(1)
ಮುಸ್ಸಂಜೆ
(1)
ಮೇಲುಕೋಟೆ
(2)
ಮೇವು
(1)
ಮೈಸೂರು
(7)
ಮೋಡ
(2)
ಮ್ಯಾಕ್ರೋ
(12)
ಯಕ್ಷಗಾನ
(2)
ರಸ್ತೆ
(5)
ರಾತ್ರಿ ನೋಟ
(3)
ರೈಮ್
(1)
ರೈಲು
(2)
ರೈಲುಹಳಿ
(1)
ಲಲಿತ ಪ್ರಬಂಧ
(6)
ಲೇಪಾಕ್ಷಿ
(1)
ವಂಡಾರ್
(1)
ವಾಸ್ತು ಶಿಲ್ಪ
(1)
ವಾಹನ
(2)
ವಿವೇಕ
(1)
ವಿಸ್ತರಣೆ
(1)
ವ್ಯಕ್ತಿ ವಿಷಯ
(3)
ವ್ಯಾಪಾರ
(1)
ಶಾಲೆ
(1)
ಶಿರಸಿ
(1)
ಶಿರಸಿ. ಸೈಕಲ್
(1)
ಶಿಲ್ಪ
(1)
ಶಿವನಸಮುದ್ರ
(1)
ಶುಭಾಶಯ
(2)
ಸಣ್ಣ ಕಥೆ
(4)
ಸಂತೆ
(2)
ಸಮುದ್ರ
(2)
ಸಮುದ್ರ ಜೀವಿ
(2)
ಸಸ್ಯ ಪ್ರಪಂಚ
(12)
ಸಾಕು ಪ್ರಾಣಿ
(4)
ಸಾಗಾಟ
(1)
ಸಾಸ್ತಾನ
(1)
ಸಿಕ್ಕಿಂ
(3)
ಸೈಕಲ್
(5)
ಸೈಕಲ್ ಯಾತ್ರೆ
(1)
ಸ್ಕಂದಗಿರಿ
(1)
ಸ್ತೂಪ
(1)
ಸ್ಪರ್ಧೆ
(1)
ಹಕ್ಕಿಗಳು
(21)
ಹರಿಹರ
(1)
ಹಳ್ಳಿ
(3)
ಹಿಮ
(1)
ಹೂಗಳು
(5)
ಹೂವು
(1)
ಹೊಸ ವರ್ಷ
(1)
ಹೋಂ ಸ್ಟೇ
(1)
ಹೌರಾ
(1)
super pala
ReplyDeletebayalli lalarasa suritha ide....
ReplyDeletenaanu dhairyavaagi laalipappu maaDkoND tintini. lollipop tagondu cheepkondu DVG road nalli ODaadi namma appa ammange shock kottidini.eSht beLedidyaa...yaak heegella maaDtyaa anta keLidre...aasegU vayassigu sambandha illa antini. :-)
ReplyDeleteneevenantiri ?
ಪಾಲಚಂದ್ರ....
ReplyDeleteಚಂದವಾದ ಲೇಖನ...
ಸರಳವಾದ ಭಾಷೆಯಲ್ಲಿ..ಭಾವಪೂರ್ಣವಾಗಿ ಬರೆದಿದ್ದೀರಿ...
ನಿಮ್ಮ ಬ್ಲೋಗ್ ನನಗಿಷ್ಟವಾಯಿತು...
ನಿಮ್ಮ ಅನುಮತಿಯಿಲ್ಲದೆ ನಾನು "ಅನುಸರಿಸುತ್ತಿದ್ದೇನೆ..
ಕ್ಷಮೆಯಿರಲಿ...
ಅಭಿನಂದನೆಗಳು...
ಶ್ರೀಹರ್ಷ,
ReplyDeleteಮತ್ತೆ ತಡಾ ಏಕೆ, ಮನೆಗೆ ಹೋಗಿ ಮಾಡಿ ನೋಡು.
--
ಪಾಲ
ಲಕ್ಷ್ಮೀಯವರೇ,
ReplyDeleteತುಂಬಾ ಧೈರ್ಯ ರೀ ನಿಮಗೆ :) ನೀವು ಹೇಳೋದು ಸರಿ, ಆಸೆಗೂ ವಯಸ್ಸಿಗೂ ಸಂಬಂಧವಿಲ್ಲ. ಇನ್ನೊಂದು ಮಾತಿನಲ್ಲಿ ಹೇಳೋದಾದ್ರೆ ಆಸೆ ಇಲ್ದೇ ಇರೋನೆ ನಿಜವಾಗಿಯೂ ವಯಸ್ಸಾದೋನು. ಆದ್ರೆ ಆಸೆ ಇನ್ನೊಬ್ಬರಿಗೆ ತೊಂದ್ರೆ ಕೊಡೋ ದುರಾಸೆಯಾಗ್ದೇ ಇದ್ರೆ ಸರಿ ಅಷ್ಟೆ.
ಅಂದಹಾಗೇ ನಿನ್ನೆ ಡಿವಿಜಿ ರೋಡಲ್ಲಿ ಲಾಲಿ ಪಾಪ್ ತಿಂತಾ ಹೋಗ್ತಿರೋ ಒಂದು ಹುಡ್ಗೀ ನೋಡಿದೆ, ನೀವೇನಾ ಅಂತಾ ಅನುಮಾನ..
--
ಪಾಲ
ಪ್ರಕಾಶ್,
ReplyDelete"ಅನುಭವ ಮಂಟಪಕ್ಕೆ" ಸ್ವಾಗತ. ನನ್ನ ಬ್ಲಾಗ್ ನಿಮಗಿಷ್ಟವಾಗಿದ್ದಕ್ಕೆ ಸಂತೋಷ, ಅಂತೆಯೇ ಲೇಖನದ ಬಗೆಗಿನ ಮೆಚ್ಚುಗೆಗೆ ವಂದನೆಗಳು.
ಹಾಗೆಯೇ ನಿಮ್ಮ ಅನುಮತಿ ಇಲ್ಲದೇ ನಿಮ್ಮನ್ನು ನನ್ನ ಸ್ನೇಹ ಕೂಟಕ್ಕೆ ಸೇರಿಸಿದ್ದೇನೆ. ಕ್ಷಮಿಸುವ ಸರದಿ ನಿಮ್ಮದು.
--
ಪಾಲ
ಪಾಲಚಂದ್ರ,
ReplyDeleteಎಂಥ ಪ್ರಸಂಗಗಳನ್ನು ನೆನಪಿಸುತ್ತಿದ್ದೀರಿ.....ನೀವು ಹೇಳಿದ ಲಾಲಿಪಪ್ಪನ್ನು[ಹುಣಸೇ ಹಣ್ಣು, ಬೆಲ್ಲ,......]ನಾನು ನನ್ನ ತಂಗಿ ಕದ್ದು ಮುಚ್ಚಿ ಚಿಕ್ಕಂದಿನಲ್ಲಿ ಮಾಡಿಕೊಳ್ಳುತ್ತಿದ್ದೆವು ಮಾಡಿದ ಮೇಲೆ ನಾನು ಹೆಚ್ಚು ತೆಗೆದುಕೊಂಡು ಅವಳಿಗೆ ಏಮಾರಿಸುತ್ತಿದ್ದೆ.....ನಾನದನ್ನು ಇಷ್ಟಪಟ್ಟು ಜಾಸ್ತಿ ತಿಂದು ಬಾಯೆಲ್ಲಾ ಹುಳಿ ಹುಳಿಯಾಗಿ ಹಲ್ಲುಗಳು ಜುಂ ಅನ್ನುತ್ತಿದ್ದವು....ಏನನ್ನು ತಿನ್ನಲೂ ಆಗುತ್ತಿರಲಿಲ್ಲ.......ಅದರು ಮತ್ತೆ ಕೆಲವು ದಿನಗಳ ನಂತರ ಅದೇ ನಮಗೆ ಬೇಕಿತ್ತು.....
ಮತ್ತೆ ಕುವೆಂಪುರವರ ಸೀ ಅಪ್ಪು ಪ್ರಸಂಗವನ್ನು ಸೊಗಸಾಗಿ ವಿವರಿಸಿದ್ದೀರಿ....ಥ್ಯಾಂಕ್ಸ್.....
ಶಿವು,
ReplyDeleteನಿಮ್ಮ ತಂಗಿಯ ನೆನಪುಗಳನ್ನು ಸೊಗಸಾಗಿ ಬರೆದಿದ್ದೀರಿ. ಹೊಸ ತಂಗಿಯನ್ನು ಪಡೆದದ್ದಕ್ಕೆ ಅಭಿನಂದನೆಗಳು.
ನನ್ನ ನೆನಪುಗಳೊಂದಿಗೆ ನಿಮ್ಮೀ ಅನುಭವ ಹಂಚಿಕೊಂಡಿದ್ದಕ್ಕೆ ತುಂಬಾ ಧನ್ಯವಾದ
--
ಪಾಲ
ಸಕ್ಕತ್ತಾಗಿ ಬರ್ದಿದ್ಯ.....
ReplyDeleteನಾವು ಕೂಡ ಚಿಕ್ಕೋರಿರೊವಾಗ Medical ನಲ್ಲಿ Hajmola ತಿನ್ನೊಕೆ
ReplyDeleteಅಮ್ಮ ಹಣ ಕೊಡಲ್ಲ ಅಂತ ಯಾರಿಗು ಗೊತ್ತಾಗದ ಹಾಗೆ ಇದನ್ನ ಮಾಡಿ
ತಿಂತಾ ಇತ್ತು...:)
ಬಾಲ್ಯದ ಸವಿ ನೆನಪು ಗಳನ್ನ ಮೆಲುಕು ಹಾಕೊಕೆ ಈ ನಿಮ್ ಕಥನ ಸಹಾಯ ಮಾಡಿದೆ.
ಧನ್ಯವಾದ...