- ಜಾನುವಾರು ಬೆಳ್ಳಕ್ಕಿ (Cattle Egret) ಏಶ್ಯಾ, ಆಫ್ರಿಕಾ, ಯೂರೋಪ್ನಂತಹ ಉಷ್ಣವಲಯ ಹಾಗೂ ಸಮಶೀತೋಷ್ಣವಲಯಗಳಲ್ಲಿ ಕಂಡುಬರುವ, ಕೊಕ್ಕರೆಯನ್ನು ಹೋಲುವ ಅಚ್ಚ ಬಿಳಿ ಬಣ್ಣದ ಹಕ್ಕಿ.
- ಇದರ ಅಗಲ ೮೮-೯೬ ಸೆ.ಮೀ. (ರೆಕ್ಕೆ ಬಿಡಿಸಿದಾಗ), ಉದ್ದ ೪೬-೫೬ ಸೆ.ಮೀ, ಹಾಗೂ ೨೭೦-೫೧೨ ಗ್ರಾಂಗಳವರೆಗೆ ತೂಗುತ್ತದೆ.
- ಬಲಿಷ್ಟ ಹಳದಿ ಬಣ್ಣದ ಕೊಕ್ಕು, ಗಿಡ್ಡಗಿನ ಅಗಲವಾದ ಕುತ್ತಿಗೆ(ಇತರ ಕೊಕ್ಕರೆ ಜಾತಿಯ ಹಕ್ಕಿಗಳಿಗೆ ಹೋಲಿಸಿದಲ್ಲಿ), ಗೂನು ಬೆನ್ನಿನ ನಿಲುವು, ಬಿಳಿ ಬಣ್ಣದ ಗರಿ, ಬೂದು ಮಿಶ್ರಿತ ಹಳದಿ ಬಣ್ಣದ ಕಾಲು.
- ಈ ಹಕ್ಕಿಗಳು ಕೂಡುವ ಸಮಯದಲ್ಲಿ ನೆತ್ತಿ, ಬೆನ್ನು ಮತ್ತು ಎದೆಯ ಮೇಲೆ ಕಿತ್ತಳೆ ಬಣ್ಣದ ಗರಿ ಮತ್ತು ಕಣ್ಪೊರೆ, ಕೊಕ್ಕು, ಕಾಲುಗಳು ಕೆಂಪು ಬಣ್ಣ ತಳೆಯುತ್ತದೆ. ಗಂಡು ಹಕ್ಕಿ ಹೆಣ್ಣಿಗಿಂತ ಉದ್ದನೆಯ ಪುಕ್ಕವನ್ನು ಹೊಂದಿರುತ್ತದೆ.
- ನೀರಿನ ಒರತೆಯ ಬಳಿ, ಮರ ಗಿಡಗಳ ಕಡ್ಡಿಯಿಂದ ಗೂಡು ಕಟ್ಟಿ, ಇತರ ನೀರಿನ ಹಕ್ಕಿಗಳೊಂದಿಗೆ ಸಾಮೂಹಿಕವಾಗಿ ನೆಲೆಸುತ್ತದೆ.
- ಕೆಲವು ಜಾತಿಯ ಜಾನುವಾರು ಬೆಳ್ಳಕ್ಕಿಗಳು, ವಲಸೆ ಹೋಗುವುದೂ ಉಂಟು.
- ಆಹಾರ ಕೆರೆ, ಜವುಗು ಪ್ರದೇಶದಲ್ಲಿನ ಕಪ್ಪೆ, ಏಡಿ, ಪುಡಿ ಮೀನುಗಳೂ ಅಲ್ಲದೇ ಸಾಮಾನ್ಯವಾಗಿ ದನ, ಎಮ್ಮೆ ಮೊದಲಾದ ಜಾನುವಾರುಗಳು ಹುಲ್ಲು ಮೇಯುವಲ್ಲಿ ಹಾರುವ ಕೀಟಗಳನ್ನೂ, ಜಾನುವಾರಿನ ಮೇಲಿನ ಪರಾವಲಂಭಿ ಜೀವಿಗಳನ್ನೂ ತಿನ್ನುತ್ತದೆ.
- ಮೊಟ್ಟೆ ಇಟ್ಟು ಮರಿ ಮಾಡುವ ಕಾಲ, ನವೆಂಬರಿನಿಂದ ಫೆಬ್ರವರಿಯವರೆಗೆ.
ಮಾಹಿತಿ ಆಧಾರ: ವಿಕಿ ಪೀಡಿಯಾ
ಚಿತ್ರ ಕೃಪೆ: ಪಾಲ
ಪಾಲಚಂದ್ರ...
ReplyDeleteಚಂದದ ಫೋಟೊಗಳೊಡನೆ...
ಉಪಯುಕ್ತ.. ಮಾಹಿತಿ..
ನಮ್ಮೂರಲ್ಲಿ ಈ ಬೆಳ್ಳಕ್ಕಿಗಳು ಬಹಳ..
ನಿರುಪದ್ರವಿ ಪಕ್ಷಿಗಳು..
ಲೇಖನ , ಬರಹ ಚೆನ್ನಾಗಿದೆ...
ಪಾಲ ಚಂದ್ರ,
ReplyDeleteಚಿತ್ರ ಸಂತೆಯಿಂದ ನೀವು ಯಾವಾಗ ಹೋದಿರಿ ಅಂತ ನನಗೆ ತಿಳಿಯಲಿಲ್ಲ.....
ಬೆಳ್ಳಕ್ಕಿ ಫೋಟೊಗಳು ಮತ್ತು ಅದರ ಬಗ್ಗೆ ಲೇಖನಗಳು ಚೆನ್ನಾಗಿವೆ....ಮುಂದುವರಿಸಿ......
ಪ್ರಕಾಶ್,
ReplyDeleteನೀವು ಹೇಳಿದಂತೆಯೇ ಇವು ನಿರುಪದ್ರವ ಜೀವಿಗಳು, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ.
ಶಿವು,
ಚಿತ್ರ ಸಂತೆಯಿಂದ ೫.೩೦ ರ ಹಾಗೆ ಹೋದೆ, ಫೋಟೋ ತೆಗೆಯೋ ಮೂಡ್ ಇರ್ಲಿಲ್ಲ. ವಂದನೆಗಳು
--
ಪಾಲ