- ಕೀಟಗಳ ಪ್ರಭೇದಕ್ಕೆ ಸೇರಿದ ಸೊಳ್ಳೆಯ ಉದ್ದ ಸಾಮಾನ್ಯವಾಗಿ ೧೬ ಮಿ.ಮಿ.ಗಿಂತ ಕಡಿಮೆ ಹಾಗೂ ಇದರ ತೂಕ ೨.೫ ಮಿ.ಗ್ರಾಂ.ವರೆಗಿದೆ.
- ಇದು ನಿರಂತರವಾಗಿ ೧ ರಿಂದ ೪ ಗಂಟೆಯವರೆಗೆ ಹಾರಬಲ್ಲದ್ದಾಗಿದ್ದು, ಗಂಟೆಗೆ ೧ರಿಂದ ೨ ಕಿ.ಮೀ.ನಂತೆ, ಒಂದೇ ಬಾರಿಗೆ ೧೦ಕಿ.ಮೀ.ವರೆಗೆ ಕ್ರಮಿಸಬಲ್ಲದು.
- ಬೆಳಿಗ್ಗಿನ ಸಮಯದಲ್ಲಿ ತಂಪಾದ ಸ್ಥಳಗಳಲ್ಲಿ ವಿಶ್ರಮಿಸುವ ಇವುಗಳು, ಸಂಜೆಯ ನಂತರ ಮತ್ತು ರಾತ್ರಿಯ ವೇಳೆ ತಮ್ಮ ಆಹಾರ ಅರಸಿ ಹೊರಡುತ್ತವೆ.
- ಹೆಣ್ಣು ಮತ್ತು ಗಂಡು ಸೊಳ್ಳೆಗಳೆರಡೂ ಮಕರಂದ ಅಥವಾ ಗಿಡದ ರಸ ಹೀರಿ ಬದುಕುವುದಾದರೂ, ಹೆಣ್ಣು ಸೊಳ್ಳೆ ಪ್ರಾಣಿಗಳ ರಕ್ತ ಕುಡಿಯುವುದೂ ಅಲ್ಲದೇ, ಕೆಲವು ಮಾರಣಾಂತಿಕ ಕಾಯಿಲೆ ಹರಡುವುದೂ ಉಂಟು.
- ಹೆಣ್ಣು ಸೊಳ್ಳೆಗೆ ಅದರ ಅಂಡಾಣು(ಮೊಟ್ಟೆ) ಬೆಳೆಯಲು ಹೆಚ್ಚಿನ ಪ್ರೋಟೀನ್ ಮತ್ತು ಕಬ್ಬಿಣದ ಸತ್ವದ ಅವಶ್ಯಕತೆಯಿರುವುದರಿಂದ , ಬದುಕಲು ರಕ್ತದ ಅವಶ್ಯಕತೆ ಇರದಿದ್ದರೂ ಇತರ ಪ್ರಾಣಿಗಳ ಮೇಲೆ ಈ ಅವಲಂಭನೆ.
- ಇದರ ಜೊಲ್ಲು ರಕ್ತ ಹೆಪ್ಪುಗಟ್ಟವುದನ್ನು ತಡೆದು, ಲೀಲಾಜಾಲವಾಗಿ ರಕ್ತ ಹೀರಲು ಸಹಾಯ ಮಾಡುತ್ತದೆ.
- ಕೆಲವು ಬಗೆಯ ಸೊಳ್ಳೆ(Toxorhynchites) ಪ್ರಾಣಿಗಳ ರಕ್ತ ಹೀರದೆ, ಇತರ ಸೊಳ್ಳೆಗಳ ಲಾರ್ವಾವನ್ನು ಕಬಳಿಸುತ್ತವೆ. ಇಂತಹ ಸೊಳ್ಳೆಗಳನ್ನ, ಸೊಳ್ಳೆ ನಿಯಂತ್ರಣಕ್ಕೆ ಬಳಸಿ ಯಶಸ್ಸು ಕಂಡಿದ್ದಾರೆ.
- ಡ್ರಾಗನ್ ಫ್ಲೈಯ ಆಹಾರ ಕೂಡ ಸೊಳ್ಳೆಯ ಲಾರ್ವಾ ಆಗಿದ್ದು, ಸೊಳ್ಳೆಯ ಸಂತತಿ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
ಮಾಹಿತಿ: ವಿಕಿಪೀಡಿಯಾ
ಚಿತ್ರ ಕೃಪೆ: ಪಾಲ
ಪಾಲಚಂದ್ರ...
ReplyDeleteಎಂಥ ಚಂದದ ಫೋಟೊ ಇದು..?
ಸೊಳ್ಳೆ ಇಷ್ಟವಾಗದಿದ್ದರೂ...
ಫೋಟೊ ಇಷ್ಟವಾಯಿತು...
ಮಾಹಿತಿ ಕೂಡ ಚೆನ್ನಾಗಿದೆ...
ರಾತ್ರಿವೇಳೆ ಮನೆ ಕಿಡಕಿ., ಬಾಗಿಲು ಮುಚ್ಚಿಡುವದು
ಒಳ್ಳೆಯದು.. ಅನ್ನುತ್ತಿದ್ದೀರಾ..!
ಅಭಿನಂದನೆಗಳು...
photography nimmadaa..?
ReplyDeleteಪ್ರಾಕಾಶ್,
ReplyDeleteಪ್ರತಿಕ್ರಿಯೆಗೆ ಧನ್ಯವಾದ, ಚಿತ್ರ ನಾನೆ ತೆಗೆದದ್ದು.
ಹೂ ರಾತ್ರಿ ಮನೆ ಕಿಟ್ಕಿ, ಬಾಗ್ಲು ಹಾಕ್ಕೊಳ್ಳೊದು ಒಳ್ಳೇದು, ಬೆಂಗ್ಳೂರಲ್ಲಿ ಡ್ರಾಗನ್ ಫ್ಲೈ ಬೇರೆ ಇಲ್ಲ :)
--
ಪಾಲ
ಪಾಲಚಂದ್ರ,
ReplyDeleteಸೊಳ್ಳೆ ಫೋಟೊ ಚೆನ್ನಾಗಿದೆ....ತಾಂತ್ರಿಕವಾಗಿಯೂ ಉತ್ತಮವಾಗಿದೆ.....ಮಾಹಿತಿಯೂ ಉಪಯುಕ್ತ.....
ಇವತ್ತು ಯಾರ ಬ್ಲಾಗಿಗೂ ಹೋಗಲೂ ಮನಸ್ಸಾಗುತ್ತಿಲ್ಲ....ನನ್ನ ಲೇಖನದ ಹ್ಯಾಂಗೋವರಿನಿಂದ ಹೊರಬರಲು ಆಗಿರಲಿಲ್ಲ....ನಿಮ್ಮ ಉಳಿದ ಲೇಖನ ನಾಳೆ ನೋಡುತ್ತೇನೆ......
ಶಿವು,
ReplyDeleteಪ್ರತಿಕ್ರಿಯೆಗೆ, ಧನ್ಯವಾದ.
ತುಂಬಾ ಭಾವುಕರು ನೀವು, ಸಂಬಂಧದ ಬಗ್ಗೆ ಮನ ಮುಟ್ಟುವಂತೆ ಬರೆದಿದ್ದೀರ.
--
ಪಾಲ
ಸೊಳ್ಳೆನೂ ಇಷ್ಟು handsome/cute ಆಗಿರತ್ತೆ ನೋಡಕ್ಕೆ ಅಂತ ಗೊತ್ತಿರ್ಲಿಲ್ಲ :)
ReplyDeleteಫೋಟೋ ಸಕತ್ತಾಗಿದೆ.
ಲಕ್ಷ್ಮಿ,
ReplyDeleteನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ :)
--
ಪಾಲ