ಮನೇ ಮನೇ ನನ್ನ ಮನೇ
--
ಕುವೆಂಪು

ಕವಿ ಮನೆ
ಮಿತ್ರರಿಗೆ, ಮಾತಿಲ್ಲಿ ಮೈಲಿಗೆ! ಸುಮ್ಮನಿರಿ
ಮೌನವ ಮಹತ್ತಿಲ್ಲಿ, ಈ ಬೈಗುಹೊತ್ತಿನಲಿ
ಕವಿಶೈಲದಲಿ, ಮುತ್ತಿಬಹ ಸಂಜೆಗತ್ತಲಲಿ
--
ಕುವೆಂಪು

ಕವಿ ಸಮಾಧಿ
ಓ ಕವಿಶೈಲ, ನಿನ್ನ
ಸಂಪದವನೆನಿತು ಬಣ್ಣಿಸಲಳವು ಕವನದಲಿ?
ಬೆಳಗಿನಲಿ ಬೈಗಿನಲಿ ಮಾಗಿಯಲಿ ಚೈತ್ರದಲಿ
ಮಳೆಯಲ್ಲಿ ಮಂಜಿನಲಿ ಹಗಲಿನಲಿ ರಾತ್ರಿಯಲಿ
ದೃಶ್ಯ ವೈವಿಧ್ಯಮಂ ರಚಿಸಿ ನೀಂ ಭುವನದಲಿ
ಸ್ವರ್ಗವಾಗಿಹೆ ನನಗೆ
--
ಕುವೆಂಪು

ಟಿ.ಎಸ್.ವೆಂ., ಬಿ.ಎಂ.ಶ್ರೀ., ಕು.ವೆಂ.ಪು., ಪೂ.ಚಂ.ತೇ. ಹಸ್ತಾಕ್ಷರ
I missed it... :-(
ReplyDeleteಸದ್ದಿರದ..
ReplyDeleteಪಸಿರುಡೆಯ..
ಮಲೆನಾಡ..
ಬನಗಳಲಿ..
ಮೊರೆವ ತೊರೆ ಎಡೆಯಲ್ಲಿ..
ಗುಡಿಸಲೊಂದಿರಲಿ..
ಅಲ್ಲಿ ಗಿಳಿಗೊರವಂಕರಗಳು..
ಕೋಗಿಲೆಗಳಿಂಚರವು..
ಕಲೆಯು.. ಅಲೆ ಅಲೆಯಾಗಿ ತೇಲಿ ಬರುತಲಿರಲಿ.... !!
ಇದು ಕವಿಪುಂಗವ ಕುವೆಂಪುರವರ ಗೀತೆ..
ಬಾಲ್ಯದಲ್ಲಿ ಓದಿದ ಈ ಹಾಡು ನೆನಪಾಯಿತು..
ಅವರ ಮನೆ ನೋಡಿ..
ಎಂಥಹ ಅದ್ಭುತ ಕವಿ ಅಲ್ಲವಾ?
ಪಾಲ ಚಂದದ ಫೋಟೊಗಳಿಗೆ ನಿಮಗೆ ಧನ್ಯವಾದಗಳು...
ದಿವ್ಯಾ,
ReplyDeleteಯಾವಾಗ? ಇನ್ನೊಮ್ಮೆ ಹೋಗ್ಬನ್ನಿ.. ಅಲ್ಲಿಯ ಸಂಜೆಯಂತೂ ತುಂಬಾ ಚೆಂದ, ಅದೂ ಹನಿ ಹನಿ ಮಳೆ ಇದ್ದರೆ ಮಾತು, ಜೊತೆ ಏನೂ ಬೇಡ ಅನ್ಸುತ್ತೆ.
ಪ್ರಕಾಶ್,
ReplyDeleteಹೌದು ಸುಂದರ ಕವಿತೆ, ಸುಂದರ ಪರಿಸರ.. ಪ್ರತೀ ಬಾರಿ ನನ್ನ ಬ್ಲಾಗ್ ಪೋಸ್ಟಿಗೆ ಪೂರಕ ಮಾಹಿತಿ ಒದಗಿಸಿಕೊಡುತ್ತಿರುವುದಕ್ಕೆ ಧನ್ಯವಾದ.
ಪಾಲ..
ReplyDeleteನಿಮ್ಮ ಫೋಟೊಗಳು ಹಾಗಿರುತ್ತವೆ..
ದಯವಿಟ್ಟು ಕುವೆಂಪುರವರ ಫೊಟೊ ಹಾಕಲು ಸಾಧ್ಯವಾ?
ನೆಟ್ಟಿನಿಂದ ಎಲ್ಲಾದರೂ ಹುಡುಕಿ..ಪ್ಲೀಸ್.. ಚೆನ್ನಾಗಿರುತ್ತದೆ...
ತುಂಬಾ ಚೆಂದದ ಚಿತ್ರಗಳು. ಒಮ್ಮೆ ಕವಿಶೈಲಕ್ಕೆ ಹೋಗಬೇಕು ಅದು ಮಳೆಗಾಳದಂದು. ಅಮ್ಮ ಚಿತ್ರಗಳು ಪ್ರಚೋದಿಸಿವೆ.
ReplyDeleteಧನ್ಯವಾದಗಳು.
ಬಹಳ ಒಳ್ಳೆಯ ಚಿತ್ರಗಳು, ಪಾಲ ನಿಮ್ಮ ಚಿತ್ರ'ಪಾಲ'ನೆ ಬಹಳ ಚೆನ್ನಾಗಿದೆ, ಧನ್ಯವಾದಗಳು
ReplyDeleteಮನಮುಟ್ಟುವ ಚಿತ್ರಗಳು ಪಾಲ ಸರ್. ಹಸ್ತಾಕ್ಷರಗಳನ್ನೂ ಕಲೆ ಹಾಕಿದ್ದೀರಿ.
ReplyDeleteಧನ್ಯವಾದಗಳು
ಅನ೦ತ್
wow.awesome!!.Liked first photo very much.:))
ReplyDeleteHave plans to go there in my next visit!
ಕವಿ ಶೈಲ ದ ಬಗ್ಗೆ ತುಂಬಾ ಚಂದದ ಚಿತ್ರಗಳ ಮಾಹಿತಿ.ಚೆನ್ನಾಗಿದೆ.
ReplyDeleteಚಿತ್ರಗಳ ಮಾಹಿತಿ ಚೆನ್ನಾಗಿದೆ. ಧನ್ಯವಾದಗಳು...
ReplyDelete