Thursday, August 12, 2010

ಮಳೆಗಾಲದ ಸೈಕಲ್ ಸವಾರಿ

ಕಳೆದ ವರ್ಷದ ಮಳೆಗಾಲ ಮುಗಿಯುತ್ತಾ ಬಂದ ಸಮಯ. ಹಾಸನದಲ್ಲಿ ನನ್ನ ಸ್ನೇಹಿತನೊಬ್ಬನ ಮದುವೆ ಮುಗಿಸಿ ಊರಿಗೆ ಹೊರಟಿದ್ದೆ. ಶಿರಾಡಿ ಘಾಟಿ, ಮಧ್ಯಾಹ್ನ ೩ರ ಸಮಯ, ಸುತ್ತ ಎಲ್ಲಾ ಕಡೆ ಮಂಜು ಮುಸುಕಿದ ವಾತಾವರಣ, ಸೋನೆ ಮಳೆ, ಸ್ವಚ್ಛ ಹವೆ, ತೋಯ್ದ ಮರಗಳು ಐಪಾಡ್ ಕಿವಿಯಲ್ಲಿ "ಎಲ್ಲೋ ಮಳೆಯಾಗಿದೆಯೆಂದು" ಹಾಡು ಕೇಳಿಸುತಿತ್ತು. ಊರಿನವರೆಗೂ ಟಿಕೇಟ್ ಕೊಂಡಿದ್ದರೂ, ಈಗಲೇ ಊರಿಗೆ ಯಾಕೆ ಹೋಗಬೇಕು ಎಂಬ ಪ್ರಶ್ನೆ ಎದ್ದಿತು. ತಡಮಾಡಲಿಲ್ಲ, ಎದ್ದು ಡ್ರೈವರ್ ಬಳಿ ಬಸ್ ನಿಲ್ಲಿಸಲು ಹೇಳಿ ಅಲ್ಲಿಯೇ ಇಳಿದುಕೊಂಡೆ. ಕೊಡೆಯಿಲ್ಲ, ರೈನು ಕೋಟಿಲ್ಲ, ಮಳೆಯಲ್ಲೇ ನೆನೆಯುತ್ತಾ ಘಾಟಿ ಇಳಿಯತೊಡಗಿದೆ. ಕತ್ತಲಾಗದೇ, ಹೊಟ್ಟೆಗೆ ಏನಾದರೂ ಸಿಕ್ಕಿದ್ದರೆ ಜೀವನದ ಕೊನೆಯವರೆಗೂ ಹಾಗೆಯೇ ನಡೆಯುತ್ತಿದೆನೇನೋ. ಹಾಗಾಗಲಿಲ್ಲ, ಸಿಕ್ಕ ಲಾರಿಯೊಂದನ್ನು ಹತ್ತಿಕೊಂಡು ಕುಕ್ಕೆ ಸುಬ್ರಮಣ್ಯ ತಲುಪಿದೆ. ಕುಮಾರಧಾರೆ ಸೇತುವೆ ಮೀರಿ ಹರಿಯುತ್ತಿತ್ತು, ಕರಾವಳಿಯ ಧಾರಾಕಾರ ಮಳೆ, ಮಲೆನಾಡ ಹಸಿರು. ದೇವಸ್ಥಾನಕ್ಕೂ ಹೋಗದೆ ರಥ ಬೀದಿ, ಹೊಳೆಯ ಬದಿ ಒಬ್ಬನೇ ತಿರುಗಾಡಿಕೊಂಡು, ರಾತ್ರಿ ರೂಮನ್ನು ಬಾಡಿಗೆಗೆ ಕೊಂಡು ಬೆಳೆಗೆದ್ದು ಮನೆಗೆ ಹೊರಟೆ..

ಮೊನ್ನೆ ಮಲೆನಾಡ ಪ್ರವಾಸ ಕೈಗೊಂಡಾಗಲೂ ಇದೇ ಆಗಿದ್ದು. ಜೋಗ ನೋಡಿದ ನಂತರ ನಾವು ಹೋಗಬೇಕಾಗಿದ್ದುದು ಯಾವುದೋ ಮಠವನ್ನು ನೋಡಲು, ಸುಮಾರು ೨ ಗಂಟೆ ವಾಹನದಲ್ಲಿ ಕುಳಿತು ಪಯಣ. ಹಾಗೇ ಸಾಗುತ್ತಾ ಇದ್ದಾಗ ವಿಶಾಲವಾದ ಗದ್ದೆಬಯಲು ಎದುರಾಯಿತು. ಈಗಷ್ಟೆ ನೆಟ್ಟಿ ಮಾಡಿದ್ದು, ಹಚ್ಚ ಹಸುರು. ಕ್ಯಾಬ್ ನಿಲ್ಲಿಸಲು ಹೇಳಿ ಕೂಡಲೇ ಕೆಳಗಿಳಿದೆ. ರಾಜ ಮಾರ್ಗದ ಮಗ್ಗುಲಲ್ಲಿ ಕಿರಿದಾದ ರಸ್ತೆ, ಅಕ್ಕ ಪಕ್ಕದಲ್ಲಿ ಗದ್ದೆ, ಡೊಂಕಾದ ರಸ್ತೆಯ ದೂರದಲ್ಲಿ ಸೈಕಲ್ ಸವಾರ. ನಾನು ಫೋಟೋ ತೆಗೆಯುವುದರೊಳಗೆ ಆತ ಮುಂದೆ ಹೋಗಬಹುದೆಂದು ಓಡತೊಡಗಿದೆ. ಇನ್ನೇನು ಹತ್ತಿರ ಬಂದೆ, ಅಷ್ಟರಲ್ಲಿ ಆತ ಹೋಗಿಯಾಗಿತ್ತು. ಹಿಂದೆ ನೋಡಿದೆ, ಮಿತ್ರ ಅನಿಲ್ ಹಿಂಬಾಲಿಸುತ್ತಿದ್ದನು. ಅವನ ಮುಖ ನೋಡಿ, "ಹೋಗ್ಬೇಕಾ ಮಠಕ್ಕೆ?" ಕೇಳಿದೆ. ಆತನಿಗೂ ಸ್ಥಳ ಹಿಡಿಸಿದ್ದರಿಂದ ಹಳ್ಳಿಯ ದಾರಿ, ಗದ್ದೆಯ ಅಂಚಿನಲ್ಲಿ ನಡೆಯುತ್ತಾ, ರೈತರೊಂದಿಗೆ ಮಾತಿಗಿಳಿಯುತ್ತಾ, ನನಗೆ ಬೇಕಾದ ಚಿತ್ರ ತೆಗೆಯುತ್ತಾ ಸಂತೋಷವಾಗಿದ್ದೆ. ಉಳಿದವರು ತಮ್ಮ ಪ್ರಯಾಣ ಮುಂದುವರೆಸಿದರು. ಹಾಗೆಯೇ ಕೆಳಗಿನವು ನಾ ಸೆರೆಹಿಡಿದ ಸೈಕಲ್ ಚಿತ್ರಗಳು.

ಮಳೆಯಲ್ಲಿ ತೋಯ್ದ ಸೈಕಲ್

BICYCLE PARKING

ಡಬ್ಬಲ್ ರೈಡಿನ ಮಜಾ

BICYCLE DOUBLE RIDE

ಮೋಡವನ್ನು ಹಿಂಬಾಲಿಸಿ

Chase the cloud

ಪರಿಸರ ಸ್ನೇಹಿ ವಾಹನ

CYCLIST


"If we admit that human life can be ruled by reason, then all possibility of life is destroyed."
— Leo Tolstoy

12 comments:

 1. ಚೆನ್ನಾಗಿದೆ :)
  http://en.wikipedia.org/wiki/Paradox_of_hedonism
  ಇವತ್ತು ಈ ಲಿಂಕ್ ನ ಫ್ರೆಂಡ್ ಒಬ್ಬ ಕಳಿಸಿದ್ದ, ನೀನು ಹಾಕಿದ Leo Tolstoy ಮಾತುಗಳನ್ನ ನೋಡಿ ಅದ್ಯಾಕೋ ನೆನ್ಪಾಯ್ತು... :)

  ReplyDelete
 2. ಪ್ರವಾಸ ಕಥನ ಮತ್ತು ಚಿತ್ರಗಳು..ಎರಡೂ ಚೆ೦ದ..


  ಅನ೦ತ್

  ReplyDelete
 3. ಪಾಲ ಅವರೆ, ನಿಮ್ಮ ನಡಿಗೆಯಲ್ಲಿನ ಆಸಕ್ತಿ ಇಂತಹ ಸೈಕಲ್‌ ಸವಾರಿಗಳ ಚಿತ್ರಗಳನ್ನು ಕೊಟ್ಟಿದೆ.
  ಧನ್ಯವಾದಗಳು.

  ReplyDelete
 4. ಅರವಿಂದ,
  ಚೆನ್ನಾಗಿದೆ ಕಣೋ ನೀ ಕೊಟ್ಟ ಲಿಂಕು, ಥ್ಯಾಂಕ್ಸ್

  ಪ್ರಕಾಶ್, ಅನಂತರಾಜ್,
  ನಿಮ್ಮ ಪ್ರೋತ್ಸಾಹಕ್ಕೆ ವಂದನೆಗಳು

  ಚಂದ್ರಶೇಖರ್,
  ಈಗೀಗ ಸೈಕಲ್ ಸವಾರಿಲೂ ಆಸಕ್ತಿ ಬರ್ತಾ ಇದೆ.. ವಂದನೆಗಳು

  ReplyDelete
 5. ಮಳೆಗಾಲದ ಸೊಗಸು ನಿಮ್ಮ ಫೋಟೋಗಳಲ್ಲಿ ವ್ಯಕ್ತವಾಗಿದೆ.

  ReplyDelete
 6. ಸುಂದರ ಚಿತ್ರಗಳು........

  ReplyDelete
 7. Nice shots pala :) The photos cool my mind :)

  ReplyDelete
 8. ಸುನಾಥ್, ಗುರುಮೂರ್ತಿ, ಶಾಮಲಾ, ಪ್ರತಿಭಾ
  ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ತುಂಬಾ ಧನ್ಯವಾದ

  ReplyDelete
 9. ಪಾಲಚಂದ್ರರವರೇ, ಬೇಸಿಗೆಯ ಅತ್ಯಂತ ಹೆಚ್ಚಿನ ಸೆಖೆ ಇರುವ ಇಂದಿನ ದಿನಗಳಲ್ಲಿ (ಇಲ್ಲಿ, ದುಬೈಯಲ್ಲಿ) ಮಳೆಗಾಲದ ಸೈಕಲ್ ಸವಾರಿ ಚಿತ್ರಗಳನ್ನು ನೋಡಿ ಸ್ವತಃ ತೋಯ್ದಷ್ಟು ಸಂತೋಷವಾಯಿತು. ಮನೆಗೆ ಫೋನ್ ಮಾಡಿದಾಗ ಎಲ್ಲರೂ ಕೇಳುವುದು ಒಂದೇ? ಇವತ್ತು ಎಷ್ಟು ಸೆಖೆ ಇದೆ? ನಲವತ್ತೈದು, ನಲವತ್ತೆಂಟು ಡಿಗ್ರಿ ಎಂದರೆ ಹೌದೇ ಎಂದು ಅಚ್ಚರಿಪಡುತ್ತಾರೆ. ಆದರೆ ನಿಜವಾಗಿ ನಲವತ್ತೆಂಟು ಡಿಗ್ರಿ ಬಿಸಿಯಲ್ಲಿ ತೋಯ್ದವರಿಗೇ ಆ ಬಿಸಿಯ ಅನುಭವ ಗೊತ್ತು. ತಮ್ಮ ಚಿತ್ರಗಳು ಮತ್ತು ಲೇಖನ ಮಲೆನಾಡಿನಲ್ಲಿ ಒಂದು ಕೈಯಲ್ಲಿ ಕೊಡೆ ಹಿಡಿದು ಇನ್ನೊಂದು ಕೈಯಲ್ಲಿ ಸೈಕಲ್ ಬ್ಯಾಲೆನ್ಸ್ ಮಾಡುತ್ತಾ ಮಳೆಗಾಲ ಕಳೆದದ್ದು ನೆನಪಿಗೆ ತಂದಿತು. ಧನ್ಯವಾದಗಳು - ಅರ್ಶದ್ ಹುಸೇನ್ ಎಂ.ಹೆಚ್, ದುಬೈ

  ReplyDelete
 10. These photos just prompt me to go for a mansoon ride... waiting for one to happen soon..

  ReplyDelete

ವರ್ಗ

Amomum (1) ficus krishnae (1) Gangtok (1) Nikon 40mm f/2.8 Micro (10) paris (1) Sikkim (8) snow (1) Yuksom (5) ಅನಿಮೇಟೆಡ್ (1) ಅನುಭವ ಕಥನ (7) ಅಮೂರ್ತ (1) ಆಟೋಟ (2) ಆಫಿಡ್ (1) ಇರುವೆ (6) ಉಡುಪಿ (4) ಉರಗ (3) ಏರಿ (1) ಒಂಟಿ ಚಕ್ರದ ಸೈಕಲ್ (1) ಒಯ್ಯುಗೆ (6) ಕದ (1) ಕಂದು ಏಲಕ್ಕಿ (1) ಕನ್ನಡ (2) ಕಪ್ಪು ಏಲಕ್ಕಿ (1) ಕಪ್ಪು-ಬಿಳುಪು (5) ಕಂಬಳ (1) ಕಂಬಳಿಹುಳು (2) ಕವನ (15) ಕವಿ ಶೈಲ (1) ಕಸರತ್ತು (1) ಕಳಸ (1) ಕಳ್ಳತನ (1) ಕಾವೇರಿ (1) ಕಾಳಾವಾರ ಬೆಟ್ಟ (1) ಕಾಳಿಂಗ ಸರ್ಪ (1) ಕಿಸ್ಕಾರ (1) ಕೀಟ ಪ್ರಪಂಚ (35) ಕುಂದಾಪುರ (1) ಕುವೆಂಪು (1) ಕೃಷಿ (9) ಕೃಷಿ ಮೇಳ (4) ಕೆರೆ (2) ಕೆಲಸ (2) ಕೆಸು (2) ಕೆಳದಿ (1) ಕೊಕ್ಕರೆ ಬೆಳ್ಳೂರು (1) ಕೋಟ (8) ಖಗೋಳ ಗಡಿಯಾರ (1) ಗವಿ (1) ಗುಡಿ ಕೈಗಾರಿಕೆ (1) ಗುಡ್ಡ (2) ಗುಹೆ (1) ಚಾರಣ (3) ಚಿಕ್ಕಮಗಳೂರು (1) ಚಿಟ್ಟಾಣಿ (1) ಚಿಟ್ಟೆಗಳು (3) ಚಿತ್ರ ಪುಟ (101) ಚಿತ್ರದುರ್ಗ (1) ಚಿತ್ರಪುಟ (1) ಚೌಕಾಶಿ (1) ಛಾಯಾಗ್ರಹಣ (24) ಜನ ಜೀವನ (52) ಜನಪದ (2) ಜರ್ಮನಿ (1) ಜಲಪಾತ (1) ಜೆಕ್ ಗಣರಾಜ್ಯ (4) ಜೇಡ (3) ಜೇನು ಸಾಕಣೆ (1) ಜೋಡಿ (1) ತರಕಾರಿ (2) ತುಮಕೂರು (2) ತೆಂಗಿನ ಕಾಯಿ (1) ತೆಂಗಿನ ತೋಟ (1) ದಸರ (4) ದೇವವೃಂದ (1) ದೇವಸ್ಠಾನ (1) ದೊಡ್ಡ ಏಲಕ್ಕಿ (1) ಧಾರವಾಡ (1) ನಂಬಿಕೆ (1) ನಾಟಕ (1) ನೀರ್ಹಕ್ಕಿ (6) ಪತಂಗ (1) ಪತ್ರಿಕೋದ್ಯಮ (1) ಪಶ್ಚಿಮ ಘಟ್ಟ (2) ಪಾಳು (1) ಪುಸ್ತಕ ಬಿಡುಗಡೆ (1) ಪೋರ್ಟ್ರೈಟ್ (8) ಪ್ರಬಂಧ (2) ಪ್ರವಾಸ ಕಥನ (3) ಪ್ರಾಹ (1) ಪ್ಲಾಸ್ಟಿಕ್ (1) ಬಕೇಟ್ (1) ಬಂಡಿ (1) ಬಣ್ಣ (1) ಬನವಾಸಿ (1) ಬಳ್ಳಿ (1) ಬಾಗಿಲು (1) ಬಾರ್ಕೂರು (1) ಬೀಗ (1) ಬೆಂಗಳೂರಿನ ಚಿತ್ರಗಳು (5) ಬೆಂಗಳೂರು (24) ಬೇಸಾಯ (1) ಬ್ರಹ್ಮಾವರ (1) ಭಾರತ ಬಂದ್ (1) ಭಿಕ್ಷುಕರು (1) ಮಕ್ಕಳು (10) ಮಂಜು (2) ಮಮ್ಮಮ್ (3) ಮಲೆನಾಡು (1) ಮಳೆ (1) ಮಳೆಗಾಲ (2) ಮಾರಿಕಣಿವೆ (1) ಮುಸ್ಸಂಜೆ (1) ಮೇಲುಕೋಟೆ (2) ಮೈಸೂರು (7) ಮೋಡ (2) ಮ್ಯಾಕ್ರೋ (12) ಯಕ್ಷಗಾನ (2) ರಸ್ತೆ (5) ರಾತ್ರಿ ನೋಟ (3) ರೈಮ್ (1) ರೈಲು (2) ರೈಲುಹಳಿ (1) ಲಲಿತ ಪ್ರಬಂಧ (6) ಲೇಪಾಕ್ಷಿ (1) ವಂಡಾರ್ (1) ವಾಸ್ತು ಶಿಲ್ಪ (1) ವಾಹನ (2) ವಿವೇಕ (1) ವ್ಯಕ್ತಿ ವಿಷಯ (3) ವ್ಯಾಪಾರ (1) ಶಾಲೆ (1) ಶಿರಸಿ (1) ಶಿರಸಿ. ಸೈಕಲ್ (1) ಶಿಲ್ಪ (1) ಶಿವನಸಮುದ್ರ (1) ಶುಭಾಶಯ (2) ಸಣ್ಣ ಕಥೆ (4) ಸಂತೆ (2) ಸಮುದ್ರ (2) ಸಮುದ್ರ ಜೀವಿ (2) ಸಸ್ಯ ಪ್ರಪಂಚ (12) ಸಾಕು ಪ್ರಾಣಿ (4) ಸಾಸ್ತಾನ (1) ಸಿಕ್ಕಿಂ (3) ಸೈಕಲ್ (5) ಸೈಕಲ್ ಯಾತ್ರೆ (1) ಸ್ಕಂದಗಿರಿ (1) ಸ್ತೂಪ (1) ಸ್ಪರ್ಧೆ (1) ಹಕ್ಕಿಗಳು (21) ಹಳ್ಳಿ (3) ಹಿಮ (1) ಹೂಗಳು (5) ಹೊಸ ವರ್ಷ (1) ಹೋಂ ಸ್ಟೇ (1) ಹೌರಾ (1)