ನಿನ್ನೆ ಬೆಳಿಗ್ಗೆ ಎದ್ದಕೂಡ್ಲೇ ಮನೆಯಿಂದ ಫೋನು, "ಹೊರಗೆ ಹೋಯ್ಬೇಡ ಅಕ್ಕಾ, ಎಂಥಾತ್ತೋ ಏನೋ.. ಮನೇಲೆ ಆಯ್ಕೋ" ಅಂತ. ಸರಿ ಅಂತ ತಲೆ ಆಡ್ಸಿ ತಿಂಡಿ ತಿಂದು ಕೂತಿದ್ದೆ. ಬರೀ ಬಂದಲ್ಲ ಗಲಾಟೆ ಎಲ್ಲಾಗುತ್ತೆ, ಇಲ್ಲೇ ಮನೆ ಹತ್ರ ಒಂದು ರೌಂಡ್ ನೋಡ್ಕೊಂಡು ಬರೋಣ ಅಂತ ಹೊರಟೆ.
ಹೊರಗಡೆ ಬಂದ್ರೆ ಅಂಗಡಿಯೆಲ್ಲಾ ಬಾಗಿಲು, ಅದರ ಮುಂದೆ ಹರಟೆ ಹೊಡೀತಾ ಕೂತೀರೋ ಜನಗಳು.
ಕರ್ನಾಟಕ ಸರ್ಕಾರದ ಉದ್ಯಮ ಸಾರ್, ಬಾಗ್ಲು ಹಾಕ್ಲೇ ಬೇಕು
ಖಾಲಿ ಖಾಲಿ ರೋಡು, ಅಲ್ಲಲ್ಲಿ ಒಂದೆರೆಡು ಸ್ವಂತ ವಾಹನಗಳು
ಹೋಟೆಲ್ ಮುಚ್ಚಿದ್ರೂ ಅರ್ಧ ಬಾಗಿಲು ತೆರೆದ ಬೇಕರಿಗಳು
ಕೇನ್-ಓ-ಲಾ ಇಲ್ಲದಿದ್ರೂ ರಸ್ತೆ ಬದಿಯ ಕಬ್ಬಿನಹಾಲಿನ ಅಂಗಡಿ
ತರಕಾರಿ ಅಂಗಡಿ ಮುಚ್ಚಿದ್ರೂ ಸೈಕಲ್-ತಳ್ಳೋ ತರಕಾರಿ ಗಾಡಿ
ಸಂಪೂರ್ಣ ತೆರೆದಿದ್ದ ಮೆಡಿಕಲ್ ಶಾಪು, ಹಣ್ಣಿನಂಗಡಿ, ATM, ಹಾಲಿನಂಗಡಿ
ಆಟದ ಮೈದಾನದ ಇಂಚಿಂಚೂ ಬಿಡದೆ ಸದುಪಯೋಗಪಡಿಸಿಕೊಂಡ ಹುಡುಗ್ರು
ಖಾಲಿ ರಸ್ತೇಲಿ ಟೈರಾಟಾಡೋ ಹುಡುಗ್ರು
ಖಾಲಿ ರೋಡು, ಜಾಲಿ ರೈಡು
ಹೆಚ್ಚಿನ ದುಡ್ಡು ಕಲೆಕ್ಟ್ ಆಗದೇ ಬಂದ್ಗೆ ಶಾಪ ಹಾಕ್ತಾ ಇರೋ ಭಿಕ್ಷುಕಿ
ತಮ್ಮ ಶಟ್ಟರನ್ನೇ ರೋಲ್ ಮಾಡಿಕೊಂಡ್ ರೋಲಿಂಗ್ ಶಟ್ಟರ್ಸ್ ಅಂಗಡಿ
ಕೂಲಿ ಕೆಲ್ಸ ಮುಗ್ಸಿ ಬೇಗ ಮನೆಗೆ ಬರ್ತಾ ಇರೋ ಜನರು
ಮುಚ್ಚಿದ ಸಾಫ್ಟ್-ವೇರ್ ಕಂಪೆನಿ
ಗಿರಾಕಿ ಇಲ್ಲದ ದೇವಸ್ಥಾನ
ಮುಚ್ಚಿದ ಕಾಲೇಜು
ಸಂಜೆ ಮೇಲೆ ಬೇಕಾಗಬಹುದು ಅಂತ ಹೂವು ಕಟ್ತಾ ಇರೋರು
ಸೆಕ್ಯುರಿಟಿಗೆ ಅಂತ ಪೋಲೀಸರು
ಬಂದಿನ ಸುತ್ತ ಖ್ಯಾತರಾದವರು
ತಿಳಿಯದಂತೆ ಹೆಚ್ಚು ಕಡಿಮೆ ೮-೧೦ ಕಿ.ಮೀ ಕಾಲ್ನಡಿಗೇಲೇ ಪೂರೈಸಿದ್ದೆ. ಹಿಂದಿನ ಎರಡು ದಿನ ಜ್ವರ ಅಂತ ಮನೆಲಿ ಬಿದ್ಕೊಂಡಿದ್ರೂ ನನ್ನ ಅಮೋಘ ಕಾಲಿನ ಶಕ್ತಿಯ ಬಗ್ಗೆ ಅತೀವ ಹೆಮ್ಮೆ ಆಯ್ತು. ರಾತ್ರಿ ಮಲ್ಗಿದ್ರೆ ಸವಿ ಕನಸು; ವಾಹನ ದಟ್ಟಣಿಯಿಲ್ಲದ ಸ್ವಚ್ಛ ಸುಂದರ ಬೆಂಗಳೂರು, ನನ್ನಂತೆ ಬರೀ ಕಾಲ್ನೆಡಿಗೆಯಲ್ಲಿ ಸುತ್ತುತ್ತಾ ಇರೋ ಬೆಂಗಳೂರಿಗರು.. ಆಹಾ..
ದಯವಿಟ್ಟು ಕ್ಷಮಿಸಿ, ನಿಮ್ಮ ಅಮೋಘ ಕನಸು ನನಸಾಗುವ ಲಕ್ಷಣಗಳು ಕಾಣ್ತಾ ಇಲ್ಲ!
ReplyDeleteಹ್ಹ ಹ್ಹ ಹ್ಹಾ......
ಚನ್ನಾಗಿದೆ.
super ano :)
ReplyDeleteಪಾಲ..
ReplyDeleteಸಕ್ಕತ್... ಬಂದ್ ನಲ್ಲಿ ಬೆಂಗಳೂರು ತುಂಬಾ ಚೆನ್ನಾಗಿದೆ. ನೀವು ಕಷ್ಟಪಟ್ಟು ೮-೧೦ ಕಿ.ಮೀ ನಡೆದು ನೋಡಿದ್ದಲ್ಲದೆ, ನಮಗೂ ತೋರಿಸಿದ್ದಕ್ಕೆ... ಧನ್ಯವಾದಗಳು..... ಚಿತ್ರಗಳಿಗೆ ನಿಮ್ಮ ತಲೆಬರಹಗಳೂ.. ಚೆನ್ನಾಗಿವೆ......
ಫೋಟೋಗಳು ತುಂಬಾ ಚೆನ್ನಾಗಿವೆ.ಬಂದ್ ನಲ್ಲೂ ಕ್ಯಾಮೆರಾಗೆ ಫುಲ್ ಕೆಲಸ ಕೊಟ್ಟಿದ್ದೀರ.ಧನ್ಯವಾದಗಳು.
ReplyDeleteಬಂದ್ ಪರಿಣಾಮದ ಎಲ್ಲ ಮುಖಗಳನ್ನು ತೋರುವ ಸುಂದರ ಚಿತ್ರಗಳನ್ನು ಹಾಗು captionಗಳನ್ನು ಕೊಟ್ಟಿದ್ದೀರಿ. ಧನ್ಯವಾದಗಳು.
ReplyDeleteಫಾಲ ಅವರೆ, ಭಾರತ ಬಂದ್ - ಈ ದಿನದ ಜನಜೀವನದ ಚಿತ್ರಣವನ್ನು ಉತ್ತಮವಾಗಿ ಸೆರೆಹಿಡಿದಿದ್ದೀರಿ... ಅದಕ್ಕೆ ಕೊಟ್ಟ ಬರಹಗಳೂ ಅಷ್ಟೇ ಸೊಗಸಾಗಿವೆ...
ReplyDeletesooper pics pala :)
ReplyDeleteಚಿತ್ರಗಳೆಲ್ಲಾ ಬೆಂಗಳೂರು ಬಂದ್'ನ ಹಲವು ಮುಖಗಳನ್ನ ತೋರಿಸುವಲ್ಲಿ ಸಫಲವಾಗಿವೆ. ಚಿತ್ರಗಳು ಚೆನ್ನಾಗಿ ಬಂದಿವೆ. ಬೆಂಗಳೂರು ಬಂದ್ ಸಂಧರ್ಭವನ್ನು ಅತ್ಯುತ್ತಮವಾಗಿ ಉಪಯೋಗಿಸಿಕೊಂಡಿದ್ದೀರಿ.
ReplyDeleteಎಲ್ಲರಿಗೂ ಒಂದು ದಿನ ರಜಾ ಸಿಗ್ತು ಅನ್ನಿ
ReplyDeleteಪ್ರತಿಕ್ರಿಯಿಸಿದ ಎಲ್ಲರಿಗೂ ನನ್ನಿ
ReplyDelete