ಕಳಸದ ದೇವಸ್ಥಾನದ ಹಿಂದೆ ಇದ್ದ ಗುಡ್ಡದ ಮೇಲೆ ಮಂಟಪದಂತಿದ್ದ ರಚನೆಯ ಕಡೆ ಬೊಟ್ಟು ಮಾಡಿ ’ಅದೇನು’ ಎಂದು ನನ್ನ ಅಣ್ಣನ ಹತ್ತಿರ ಕೇಳಿದೆ. ’ಓ ಅದಾ, ಫಾರೆಸ್ಟಿನವರು ಕಟ್ಟಿಸಿದ ವೀಕ್ಷಣಾ ಗೋಪುರ, ಅಲ್ಲಿ ನಿಂತರೆ ಕಳಸ ಪೇಟೆ ಚೆಂದ ಕಾಣ್ಸುತ್ತೆ. ಫೋಟೋ ತೆಗೀಬೇಕು ಅಂತಿದ್ರೆ ಹೋಗೋಣ’ ಅಂತಂದ. ’ಈಗ ಬೇಡ ಸಂಜೆ ಕತ್ತಲಾದ ಮೇಲೆ ಹೋಗೋಣ’ ಎಂದೆ.
ರಾತ್ರಿಯ ವೇಳೆಯಲ್ಲಿ ವಾಹನದ ಹೆಡ್-ಲೈಟ್ ಮೂಡಿಸುವ ಬೆಳಕಿನ ಜಾಡನ್ನು ಸೆರೆಹಿಡಿದಂತಹ ಚಿತ್ರವನ್ನು ಈ ಹಿಂದೆ ಅನೇಕ ಬಾರಿ ಅಂತರ್ಜಾಲದಲ್ಲಿ ನೋಡಿದಾಗಲೆಲ್ಲವೂ ಇಂತದ್ದೊಂದು ಚಿತ್ರ ತೆಗೀಬೇಕು ಅಂತ ಅಂದುಕೊಳ್ತಾ ಇದ್ದೆ. ಅಂದುಕೊಂಡಿದ್ದೇನೋ ನಿಜವಾದರೂ ಅದಕ್ಕಾಗಿ ಒಮ್ಮೆಯೂ ಪ್ರಯತ್ನಿಸಿದ್ದಿಲ್ಲ. ಈಗ ಹೇಗೂ ನೋಟಕ್ಕೆ ಒಳ್ಳೆಯ ಕೋನ ದೊರೆತಿದೆ. ರಾತ್ರಿ ಪೇಟೆಯ ಬೆಳಕಿನ ಜೊತೆ ದೇವಸ್ಥಾನದ ರಥಬೀದಿಯಲ್ಲಿ ಓಡಾಡುವ ವಾಹನದ ಬೆಳಕೂ ಸೇರಿದರೆ ಚಂದ ಕಾಣಬಹುದಲ್ಲವೇ ಎಂದು ನನ್ನ ಊಹೆ.
ಸಂಜೆಯ ನಂತರ ಸುಮಾರು ಎಂಟು ಗಂಟೆಯ ಸಮಯದಲ್ಲಿ ಕಾಲ್ನೆಡಿಗೆಯಲ್ಲಿ ಗುಡ್ಡ ಹತ್ತಲಾರಂಭಿಸಿದೆವು. ಮಣ್ಣಿನ ಹಾದಿ ಇದ್ದುದರಿಂದಲೂ ಮತ್ತು ಗುಡ್ಡ ಅಷ್ಟೇನೂ ಕಡಿದಾಗಿರದೆ, ಚಿಕ್ಕದಾಗಿದ್ದರಿಂದ ನಿರಾಯಾಸವಾಗಿ ಗುಡ್ಡದ ನೆತ್ತಿ ತಲುಪಿದೆವು. ದಾರಿಯಲ್ಲಿ ಬರುತ್ತಾ ಒಂದು ಕುತೂಹಲಕಾರಿಯಾದ ಘಟನೆ ನಡೆಯಿತು. ಮೇಲೆ ಮೇಲಕ್ಕೆ ಬರುತ್ತಿದ್ದಂತೆ, ನಮ್ಮ ಪಿಸುಗುಡುವ ದನಿಗೋ ಅಥವಾ ಟಾರ್ಚಿನ ಬೆಳಕಿಗೋ, ಅಲ್ಲಲ್ಲಿ ಮರದ ಮೇಲೆ ಮಲಗಿದ್ದ ಹಕ್ಕಿಗಳು ಅಸಮಾಧಾನ ಮಾಡಿಕೊಂಡು ಗಲಾಟೆ ಮಾಡಲಾರಂಭಿಸಿದೆವು. ನಮ್ಮ ತಪ್ಪಿನ ಅರಿವಾಗಿ ಟಾರ್ಚಿನ ಬೆಳಕಿನ್ನು ಆರಿಸಿ, ಮೌನದಿಂದ ಮುಂದುವರಿದ ಮೇಲೆ ಅವು ಸುಮ್ಮನಾದವು.
ನೆತ್ತಿಯ ಮೇಲೆ ಸಿಮೆಂಟ್ ನೆಲವಿದ್ದುದರಿಂದ ಟ್ರೈಪಾಡ್ ನಿಲ್ಲಿಸುವಲ್ಲಿ ಹೆಚ್ಚಿನ ಶ್ರಮ ಪಡಬೇಕಾಗಿರಲಿಲ್ಲ. ಈ ಟ್ರೈಪಾಡ್ ನಿಲ್ಲಿಸಬೇಕಾದರೆ ಅದರ ಒಂದು ಕಾಲು ನಾವು ತೆಗಯಹೊರಟ ಚಿತ್ರದ ವಿಷಯದ ಕಡೆ ಇದ್ದರೆ, ಅದರ ಇನ್ನೆರಡು ಕಾಲಿನ ನಡುವೆ ಸಾಕಷ್ಟು ಸ್ಥಳಾವಕಾಶ ಒದಗಿ ಚಿತ್ರ ತೆಗೆಯಲು ಅನುಕೂಲ. ಟ್ರೈಪಾಡಿಗೆ ಕ್ಯಾಮೆರಾ ಸಿಕ್ಕಿಸಿ, ವಿವ್ ಫೈಂಡರಿನಲ್ಲಿ ಯಾವ ಫ್ರೇಮ್ ತೆಗೆಯಬಹುದು ಎಂದು ಲೆಕ್ಕಾಚಾರ ಹಾಕಿದೆ. ಅಪಾರ್ಚರ್ ಪ್ರಿಯಾರಿಟಿ ಮೋಡಿನಲ್ಲಿ ಕ್ಯಾಮರಾದ ISO ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಮಾಡಿ ಕೊಂಡು, ಅಪಾರ್ಚರ್ ಚಿಕ್ಕದು ಮಾಡುತ್ತಾ ಬಂದೆ. ISO 250, Aperture f20, 30 ಸೆಕೆಂಡ್ shutter speedನಲ್ಲಿ ನನ್ನ ಕ್ಯಾಮರಾ ಸಹಜವಾದ exposure ತೋರಿಸಿತು. ಇನ್ನು ಫೋಕಸಿಂಗ್, ಕತ್ತಲೆಯಲ್ಲಿ ಫೋಕಸ್ ಮಾಡುವುದು ನಿಜಕ್ಕೂ ಕಷ್ಟದ ಕೆಲಸ. ಆಟೋ ಪೋಕಸ್ ಆದರೆ ಚೆನ್ನಾಗಿ ಬೆಳಗಿದ ಯಾವುದಾದರೂ ವಸ್ತುವಿಗೆ ಫೋಕಸ್ ಮಾಡಬೇಕಾಗುತ್ತದೆ. ಇದರಿಂದ ಕ್ಯಾಮರಾದ ಫೋಕಸ್ infiniteಗೆ ಹೊಂದಿಕೊಳ್ಳುವುದು ಮತ್ತು ಅಪಾರ್ಚರ್ ತೆರವು ಚಿಕ್ಕದಿರುವುದರಿಂದ ಫ್ರೇಮಿನ ಮೊದಲಿಂದ ಕೊನೆಯವರೆಗೂ ಸ್ಪುಟವಾದ ಚಿತ್ರ ಮೂಡುತ್ತದೆ. ಇದು ಸಾಧ್ಯವಾಗದೇ ಹೊದರೆ ಕ್ಯಾಮರಾದ focusing modeನ್ನು manualಗೆ ಬದಲಿಸಿ, infiniteಗೆ ಹೊಂದಿಸಬಹುದು.
ಇನ್ನು ಕ್ಯಾಮರಾದ ಬಟನ್ ಅಮುಕಲು ಕಾಯಬೇಕಿದ್ದುದು ವಾಹನ ರಸ್ತೆಯನ್ನು ಪ್ರವೇಶಿಸುವುದಕ್ಕಾಗಿ ಮಾತ್ರ. ಹಾಗೇ ಪ್ರವೇಶಿಸಿದ ಮೇಲೆ ತೆಗೆದ ಚಿತ್ರ ಈ ಕೆಳಗಿನದು. ರಸ್ತೆಯಲ್ಲಿ ಕಾಣುವ ಕೆಂಪಗಿನ ಬೆಳಕಿನ ಜಾಡು ನನ್ನ ದಿಕ್ಕಿನಿಂದ ದೂರ ಸರಿಯುತ್ತಿರುವ ವಾಹನದ್ದು, ಇನ್ನೊಂದು ಬಣ್ಣದ್ದು ನಾನಿದ್ದ ಕಡೆಗೆ ಬರುತ್ತಿರುವ ವಾಹನದ್ದು. ಈ ಚಿತ್ರ ೩೦ ಸೆಕೆಂಡು ಇಲ್ಲಿ ಏನೇನಾಯಿತು ಎಂದು ಸೆರೆಹಿಡಿದಿಟ್ಟಿದೆ. ಚಳಿ, ಗಾಬರಿಯಿಂದ ಕೆಲವೊಮ್ಮೆ ಬಟನ್ ಅಮುಕುವ ವೇಳೆಯಲ್ಲಾಗುವ ಕ್ಯಾಮರಾದ ಕುಲುಕಾಟವನ್ನು ತಡೆಗಟ್ಟಲು self timer ಅಥವಾ remote ಬಳಸಬಹುದು. ಚಿತ್ರ ತೆಗೆದ ಸ್ವಲ್ಪ ಹೊತ್ತಿನ ನಂತರ ವಾತಾವರಣದಲ್ಲಿ ಮೋಡ ಕವಿಯಲಾರಂಭಿಸಿ, ಪೇಟೆಯಲ್ಲಿ ವಿದ್ಯುತ್ ನಿಲುಗಡೆ ಕೂಡ ಆಯಿತು. ಮಂಜಿನಲ್ಲಿ ಮಸುಕಾದ ಹಿನ್ನೆಲೆಯಿಂದಿಣುಕುವ ಮರಗಳನ್ನು ನೋಡುತ್ತಾ ಅಲ್ಲೇ ಸ್ವಲ್ಪ ಹೊತ್ತು ಕುಳಿತು, ಮನೆಗೆ ಮರಳಿದೆವು.
ಚಿತ್ರ ತೆಗೆದ ಮೇಲೆ ನನ್ನ ಬಳಿ ಇದ್ದ ಜೂಮ್ ಲೆನ್ಸ್ ಮನೆಯಲ್ಲೇ ಬಿಟ್ಟು ಬಂದುದಕ್ಕಾಗಿ ಹಲುಬಿದೆ. ಲ್ಯಾಂಡ್-ಸ್ಕೇಪ್ ತೆಗೆಯಲು ಜೂಮ್ ಲೆನ್ಸ್ ಅಗತ್ಯವಿರುವುದಿಲ್ಲವೆಂಬ ನನ್ನ ಅನಿಸಿಕೆಯನ್ನು ಮರುವಿಮರ್ಷೆ ಮಾಡಿಕೊಳ್ಳಬೇಕು. ಅದು ಇದ್ದಿದ್ದರೆ ಬರೀ ರಸ್ತೆಯನ್ನು ಮಾತ್ರ ವಿಷಯವಾಗಿರಿಸಿಕೊಂಡು ಬೆಳಕಿನ ಜಾಡಿನಿಂದ ಫ್ರೇಮನ್ನು ಪರಿಣಾಮಕಾರಿಯಾಗಿ ತುಂಬಿಸಬಹುದಿತ್ತು. ಒಂದರ್ಥದಲ್ಲಿ ಇದು ನಿಜವಾಗಿಯೂ ಬೆಳಕಿನ ಜಾಡೇ ಮುಖ್ಯವಾಗಿರುವ ಚಿತ್ರ ಅಲ್ಲ, ರಾತ್ರಿಯ ನೋಟ ಅನ್ನಬಹುದು.
ಅನುಭವಿಸದೇ ಹಾಡಿದ ಹಾಡು ಹಾಡಲ್ಲ, ಅನುಭವಿಸದೇ ಬಿಡಿಸಿದ ಚಿತ್ರ ಚಿತ್ರವಲ್ಲ, ಅನುಭವಿಸದೇ ಬರೆದ ಬರಹ ಬರಹವಲ್ಲ!
Wednesday, June 30, 2010
Subscribe to:
Post Comments (Atom)
ವರ್ಗ
Amomum
(1)
ficus krishnae
(1)
Gangtok
(1)
Nikon 40mm f/2.8 Micro
(10)
paris
(1)
Sikkim
(8)
snow
(1)
Yuksom
(5)
ಅನಿಮೇಟೆಡ್
(1)
ಅನುಭವ ಕಥನ
(7)
ಅಮೂರ್ತ
(1)
ಆಟೋಟ
(2)
ಆಫಿಡ್
(1)
ಇರುವೆ
(6)
ಉಡುಪಿ
(4)
ಉಯ್ಯಾಲೆ
(1)
ಉರಗ
(3)
ಏರಿ
(1)
ಒಂಟಿ ಚಕ್ರದ ಸೈಕಲ್
(1)
ಒಯ್ಯುಗೆ
(6)
ಕದ
(1)
ಕಂದು ಏಲಕ್ಕಿ
(1)
ಕನ್ನಡ
(2)
ಕಪ್ಪು ಏಲಕ್ಕಿ
(1)
ಕಪ್ಪು-ಬಿಳುಪು
(5)
ಕಂಬಳ
(1)
ಕಂಬಳಿಹುಳು
(2)
ಕವನ
(15)
ಕವಿ ಶೈಲ
(1)
ಕಸರತ್ತು
(1)
ಕಳಸ
(1)
ಕಳ್ಳತನ
(1)
ಕಾವೇರಿ
(1)
ಕಾಳಾವಾರ ಬೆಟ್ಟ
(1)
ಕಾಳಿಂಗ ಸರ್ಪ
(1)
ಕಿಸ್ಕಾರ
(1)
ಕೀಟ ಪ್ರಪಂಚ
(35)
ಕುಂದಾಪುರ
(1)
ಕುವೆಂಪು
(1)
ಕೃಷಿ
(9)
ಕೃಷಿ ಮೇಳ
(4)
ಕೆರೆ
(2)
ಕೆಲಸ
(2)
ಕೆಸು
(2)
ಕೆಳದಿ
(1)
ಕೊಕ್ಕರೆ ಬೆಳ್ಳೂರು
(1)
ಕೋಟ
(8)
ಖಗೋಳ ಗಡಿಯಾರ
(1)
ಗವಿ
(1)
ಗುಡಿ ಕೈಗಾರಿಕೆ
(1)
ಗುಡ್ಡ
(2)
ಗುಹೆ
(1)
ಚಾರಣ
(3)
ಚಿಕ್ಕಮಗಳೂರು
(1)
ಚಿಟ್ಟಾಣಿ
(1)
ಚಿಟ್ಟೆಗಳು
(3)
ಚಿತ್ರ ಪುಟ
(102)
ಚಿತ್ರದುರ್ಗ
(1)
ಚಿತ್ರಪುಟ
(1)
ಚೌಕಾಶಿ
(1)
ಛಾಯಾಗ್ರಹಣ
(24)
ಜನ ಜೀವನ
(52)
ಜನಪದ
(2)
ಜರ್ಮನಿ
(1)
ಜಲಪಾತ
(1)
ಜೆಕ್ ಗಣರಾಜ್ಯ
(4)
ಜೇಡ
(3)
ಜೇನು ಸಾಕಣೆ
(1)
ಜೋಡಿ
(1)
ತರಕಾರಿ
(2)
ತುಮಕೂರು
(2)
ತೆಂಗಿನ ಕಾಯಿ
(1)
ತೆಂಗಿನ ತೋಟ
(1)
ದಸರ
(4)
ದೇವವೃಂದ
(1)
ದೇವಸ್ಠಾನ
(1)
ದೇವಸ್ಥಾನ
(1)
ದೊಡ್ಡ ಏಲಕ್ಕಿ
(1)
ಧಾರವಾಡ
(1)
ನಗರ
(1)
ನಂಬಿಕೆ
(1)
ನಾಟಕ
(1)
ನೀರ್ಹಕ್ಕಿ
(6)
ಪತಂಗ
(1)
ಪತ್ರಿಕೋದ್ಯಮ
(1)
ಪಶ್ಚಿಮ ಘಟ್ಟ
(2)
ಪಾರ್ಕ್
(1)
ಪಾಳು
(1)
ಪುಸ್ತಕ ಬಿಡುಗಡೆ
(1)
ಪೋರ್ಟ್ರೈಟ್
(8)
ಪ್ಯಾನಿಂಗ್
(1)
ಪ್ರಬಂಧ
(2)
ಪ್ರವಾಸ ಕಥನ
(3)
ಪ್ರಾಹ
(1)
ಪ್ಲಾಸ್ಟಿಕ್
(1)
ಬಕೇಟ್
(1)
ಬಂಡಿ
(1)
ಬಣ್ಣ
(1)
ಬನವಾಸಿ
(1)
ಬಳ್ಳಿ
(1)
ಬಾಗಿಲು
(1)
ಬಾರ್ಕೂರು
(1)
ಬೀಗ
(1)
ಬೆಂಕಿ
(1)
ಬೆಂಗಳೂರಿನ ಚಿತ್ರಗಳು
(5)
ಬೆಂಗಳೂರು
(27)
ಬೆಳಕು
(1)
ಬೇಸಾಯ
(1)
ಬ್ರಹ್ಮಾವರ
(1)
ಭಾರತ ಬಂದ್
(1)
ಭಿಕ್ಷುಕರು
(1)
ಮಕ್ಕಳು
(10)
ಮಗು
(1)
ಮಂಜು
(2)
ಮಮ್ಮಮ್
(3)
ಮಲೆನಾಡು
(1)
ಮಳೆ
(1)
ಮಳೆಗಾಲ
(2)
ಮಾರಿಕಣಿವೆ
(1)
ಮುಸ್ಸಂಜೆ
(1)
ಮೇಲುಕೋಟೆ
(2)
ಮೇವು
(1)
ಮೈಸೂರು
(7)
ಮೋಡ
(2)
ಮ್ಯಾಕ್ರೋ
(12)
ಯಕ್ಷಗಾನ
(2)
ರಸ್ತೆ
(5)
ರಾತ್ರಿ ನೋಟ
(3)
ರೈಮ್
(1)
ರೈಲು
(2)
ರೈಲುಹಳಿ
(1)
ಲಲಿತ ಪ್ರಬಂಧ
(6)
ಲೇಪಾಕ್ಷಿ
(1)
ವಂಡಾರ್
(1)
ವಾಸ್ತು ಶಿಲ್ಪ
(1)
ವಾಹನ
(2)
ವಿವೇಕ
(1)
ವಿಸ್ತರಣೆ
(1)
ವ್ಯಕ್ತಿ ವಿಷಯ
(3)
ವ್ಯಾಪಾರ
(1)
ಶಾಲೆ
(1)
ಶಿರಸಿ
(1)
ಶಿರಸಿ. ಸೈಕಲ್
(1)
ಶಿಲ್ಪ
(1)
ಶಿವನಸಮುದ್ರ
(1)
ಶುಭಾಶಯ
(2)
ಸಣ್ಣ ಕಥೆ
(4)
ಸಂತೆ
(2)
ಸಮುದ್ರ
(2)
ಸಮುದ್ರ ಜೀವಿ
(2)
ಸಸ್ಯ ಪ್ರಪಂಚ
(12)
ಸಾಕು ಪ್ರಾಣಿ
(4)
ಸಾಗಾಟ
(1)
ಸಾಸ್ತಾನ
(1)
ಸಿಕ್ಕಿಂ
(3)
ಸೈಕಲ್
(5)
ಸೈಕಲ್ ಯಾತ್ರೆ
(1)
ಸ್ಕಂದಗಿರಿ
(1)
ಸ್ತೂಪ
(1)
ಸ್ಪರ್ಧೆ
(1)
ಹಕ್ಕಿಗಳು
(21)
ಹರಿಹರ
(1)
ಹಳ್ಳಿ
(3)
ಹಿಮ
(1)
ಹೂಗಳು
(5)
ಹೂವು
(1)
ಹೊಸ ವರ್ಷ
(1)
ಹೋಂ ಸ್ಟೇ
(1)
ಹೌರಾ
(1)
ಪಾಲ....
ReplyDeleteಅದ್ಭುತವಾಗಿದೆ ರೀ ಚಿತ್ರ.... ನಿಮ್ಮ ವಿವರಣೆ ಕೂಡಾ ಚೆನ್ನಾಗಿದೆ. ಕಳಸದಲ್ಲಿ ಇಷ್ಟು ಸುಂದರ ನೋಟ ಅನ್ನೋ thought itself is thrilling !! ಧನ್ಯವಾದಗಳು..... ಒಳ್ಳೆಯ ಚಿತ್ರ ತೋರ್ಸಿದ್ದಕ್ಕೆ.......
ಶ್ಯಾಮಲ
ತುಂಬಾ ಚೆನ್ನಾಗಿದೆ ಚಿತ್ರ.. ಹಾಗೆಯೆ ವಿವರಣೆ ಕೂಡಾ.. ಚೆಂದದ ಚಿತ್ರ ತೋರಿಸಿದ್ದಕ್ಕೆ ಧನ್ಯವಾದಗಳು...
ReplyDeleteದಿಲೀಪ್ ಹೆಗಡೆ
ಚಿತ್ರ ಮತ್ತು ವಿವರಣೆ ಇಷ್ಟವಾಯಿತು.ಅಭಿನಂದನೆಗಳು.
ReplyDeleteವೆರಿ ನೈಸ್ ಫೋಟೋ... ಇದರ ಸೆಟ್ಟಿಂಗ್ ಬಗ್ಗೆ ಹೇಳಿದ್ದೀರ , ನಾನು ಒಮ್ಮೆ ಟ್ರೈ ಮಾಡುತ್ತೇನೆ.....ಬಟ್ ನನ್ನ ಕ್ಯಾಮೆರಾದಲ್ಲಿ ೩೦ ಸೆಕೆಂಡ್ shutter speed ಇದೆಯೋ ಇಲ್ವೋ ಗೊತ್ತಿಲ್ಲ,,, ಆದರು ಟ್ರೈ ಮಾಡುತ್ತೇನೆ.....
ReplyDeleteGuru
ಕಳಸ ಇಷ್ಟು ಚಂದ ಕಾಣುತ್ತಾ?
ReplyDeleteರಸ್ತೆಯಲ್ಲಿ ಓಡಾಡುವಾಗ ಕಾಣದ ಸೌಂದರ್ಯ ಈಗ ನೋಡಿ ಹೇಗೆ ಕಾಣ್ತಿದೆ?
ಫೋಟೋ ಚನ್ನಾಗಿದೆ.
‘ರಾತ್ರಿಯಲ್ಲಿ ಕಳಸದ ರಸ್ತೆ’ ಚಿತ್ರ ಚೆನ್ನಾಗಿದೆ. ಕೆಳಗೆ ಇರುವ ಹೂವುಗಳ ಚಿತ್ರಗಳೂ ಸಹ ಆಕರ್ಷಕವಾಗಿವೆ. ಅಭಿನಂದನೆಗಳು.
ReplyDeleteಚಿತ್ರ ತುಂಬಾ ಚೆನ್ನಾಗಿದೆ. ಹಾಗೆಯೇ ಸಲಹೆ ಕೂಡಾ ಅನುಕರಣನೀಯ.
ReplyDeleteಪಾಲಚಂದ್ರ
ReplyDeleteನಿಮ್ಮ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ.
ಅದ್ಭುತ !!!
ReplyDeleteಗುರುಗಳೆ ,
ನೀವು ವೃತ್ತಿಯ ಛಾಯಾಗ್ರಹಕರೋ ಹೌದೋ ಅಥವಾ ಇಲ್ಲವೋ ?
ಬಸವರಾಜು,
ReplyDeleteಅನುಭವ ಮಂಟಪಕ್ಕೆ ಸ್ವಾಗತ. ಪ್ರತಿಕ್ರಿಯೆಗೆ ಧನ್ಯವಾದ. ಛಾಯಾಗ್ರಹಣ ನನ್ನ ಹವ್ಯಾಸವಷ್ಟೇ.