ಕಳೆದ ತಿಂಗಳು ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಉಡುಪಿಯ ತಂಡವೊಂದು - ವಿವೇಕ ಜೂನಿಯರ್ ಕಾಲೇಜು, ಕೋಟದಲ್ಲಿ ನಡೆಸಿದ ನಾಟಕದ ಒಂದು ದೃಷ್ಯ. ಧಾರವಾಡದ ’ನೀನಾಸಂ’ ತಂಡವೊಂದರಿಂದ ನಾಟಕ ಪ್ರದರ್ಶನ ಅಂತ ಕುಣಿದಾಡಿಕೊಂಡು ಹೋದರೆ, ಕಾರಣಾಂತರದಿಂದ ಅವರು ಬರದೆ ಜನತೆಯನ್ನು ನಿರಾಸೆಗೊಳಿಸಬಾರದೆಂದು ಈ ನಾಟಕವನ್ನು ಪ್ರದರ್ಶಿಸಲಾಯಿತು. ಸುಮಾರು ೪೦ ಜನ ಸೇರಿದ್ದ ನಾಟಕಕ್ಕೆ ಕೊನೆಯವರೆಗೂ ಉಳಿದದ್ದು ೧೦-೧೫ ಜನ (ರೇಟಿಂಗ್ ಕೊಡೋ ಹೊಸ ವಿಧಾನ). ಅಂದಹಾಗೇ ನಾಟಕದ ಹೆಸರು ’ಸಂಸಾರ ಅಪಾರ್ಟ್ಮೆಂಟ್’. ಕಥಾವಸ್ತು... ಬೇಡ ಬಿಡಿ ಇತ್ತೀಚೆಗಿನ ಯಾವುದಾದರೂ ಸಾಂಸಾರಿಕ ಚಲನಚಿತ್ರ ನೋಡಿ.
ಇನ್ನಷ್ಟು ಚಿತ್ರಗಳು:
Samsara Apartment |
ಏನಾಯ್ತು ನಮ್ಮ ನಾಟಕಗಳಿಗೆ?
ReplyDeleteಪೈಪೋಟಿ ಎದುರಿಸಲು ತಾಕತ್ತು ಇಲ್ಲವಾಯಿತೇ?
ಸಮಯ ಸಿಕ್ಕಾಗ ನಮ್ಮ ಕಡೆ ಬನ್ನಿ....
ReplyDeletehttp://pravi-manadaaladinda.blogspot.com
ಪಾಲವ್ರೇ...ನಿಜ ನೋಡಿ...ನನಗೆ ತಿಳಿದ ಮಟ್ಟಿಗೆ ನಾಟಕ ಈಗೀಗ ಕೇವಲ ಶೋಕಿಗಾಗಿ ಅನ್ನೋಹಾಗಾಗಿದೆ...ನಮ್ಮ ಹಳ್ಳಿಗಳಿಗೆ ಬರುತ್ತಿದ್ದ ಡ್ರಾಮಾ ಕಂಪನಿಗಳದ್ದು ಕಾಯಕವಾಗಿತ್ತು...
ReplyDeleteಮನದಾಳದಿಂದ, ಜಲನಯನ,
ReplyDeleteನಾನು ಬರೆದಿದ್ದು ಈ ನಾಟಕದ ಬಗ್ಗೆ, ಇಂದಿನ ಎಲ್ಲಾ ನಾತಕದ ಬಗ್ಗೆ ಅಲ್ಲ!