Tuesday, July 20, 2010

ಸ್ಕಂದಗಿರಿಯ ಜನಜಾತ್ರೆ

ಗೆಳೆಯಂದಿರಾದ ಹರ್ಷ, ಗೋಪಿ, ಗಿರಿ ಜೊತೆ ಕೈಗೊಂಡ ಸ್ಕಂದಗಿರಿಯ ಚಾರಣ. ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಮಾರ್ಗವಾದ ರಾಷ್ಟ್ರೀಯ ಹೆದ್ದಾರಿ ೭ ರಲ್ಲಿ ಸುಮಾರು ೫೦ ಕಿ.ಮೀ. ಸಾಗಿ ಈ ಸ್ಥಳ ತಲುಪಬೇಕು. ಬೆಂಗಳೂರಿಗೆ ಹತ್ತಿರವಾದ್ದರಿಂದ ಸಾಮಾನ್ಯವಾಗಿ ಜನರು ರಾತ್ರಿ ಚಾರಣ ಮಾಡುತ್ತಾರೆ. ಬೆಳಿಗ್ಗಿನ ಸೂರ್ಯೋದಯ ನೋಡಿ ವಾಪಾಸು ಬರುವುದು ರೂಢಿ. ಅಪರಾತ್ರಿಯಲ್ಲೂ ಗುಡ್ಡದ ಕೆಳಗೆ ಸ್ಥಳೀಯರು ಕರಡಿ, ಹಾವು (ಒಬ್ಬ ಸ್ಥಳೀಯನಂತೂ ಇಲ್ಲಿ ಅನಕೊಂಡ ಇದೆ ಅಂತ ಬೆದರಿಸಿದ!) ಇತ್ಯಾದಿ ಪ್ರಾಣಿಗಳ ಹೆದರಿಕೆ ಹುಟ್ಟಿಸಿ ಮಾರ್ಗದರ್ಶಿಯಾಗುವ ಅಭಿಲಾಷೆ ತೋರಿಸಿ, ಬಾಯಿಗೆ ಬಂದ ಮೊತ್ತ ಕೇಳುವುದು ಸಾಮಾನ್ಯ.

ಅಬ್ಬ ಈ ಜನ ಮುಗೀತು ಅಂತ ಮೇಲ್ಗಡೆ ಹೋದ್ರೆ, ಈಗಾಗಲೇ ಬಂದವರು, ಇನ್ನೂ ಬರಲಿರುವವರ ಜನಸಾಗರ; ಮೇಲೆ ಗಣೇಶನ ಒಂದು ಮುರುಕಲು ಗುಡಿ, ಅಲ್ಲೇ ಟೀ, ಆಮ್ಲೇಟ್, ನೂಡಲ್ಸ್ ಮಾಡುವ ಹುಡುಗರು. ಒಟ್ಟಲ್ಲಿ ಚಾರಣಕ್ಕಿಂತ ಬಸ್ ನಿಲ್ದಾಣದ ನೆನಪು ಹುಟ್ಟಿಸುವುದೇ ಜಾಸ್ತಿ.

ಟೀ ಅಂಗಡಿಯಲ್ಲಿ ಹಾಲು ಕುದಿಸುತ್ತಿರುವ ದೃಷ್ಯ.

CSC_6804

ನಿಮಗೇನಾದರೂ ಈ ಸ್ಥಳವನ್ನು ನೋಡುವ ಅಭಿಲಾಷೆ ಇದ್ದರೆ, ನನ್ನ ಅಭ್ಯಂತರವಿಲ್ಲ; ಆದರೂ ನನ್ನ ಸಲಹೆ ಇದಕ್ಕಿಂತ ಒಮ್ಮೆ ಮೆಜೆಸ್ಟಿಕ್ಕಿಗೆ ಭೇಟಿ ಕೊಡಿ.

ಇನ್ನಷ್ಟು ಚಿತ್ರಗಳು:

Skandagiri July 2010

14 comments:

 1. ಹಾಹಾ! ಕೊನೆಯ ಸಲಹೆ ತುಂಬ ವಾಸ್ತವವಾದಿಯಾಗಿದೆ!

  ReplyDelete
 2. ಪಾಲ ಅವರೆ,
  ಚೆನ್ನಾಗಿದೆ... ಫೋಟೋ ಮತ್ತು ಕೊನೆಯ ಮೆಜೆಸ್ಟಿಕ್‌ ... ಸಾಲು.. ಆದರೂ, ಇನ್ನೊಂದಿಷ್ಟು ಚಿತ್ರಗಳು ಇದ್ದಿದ್ದರೆ... ಅದರ ಮಜಾ ಬೇರೆ ಇರುತ್ತಿತ್ತು...

  ಸ್ನೇಹದಿಂದ,

  ReplyDelete
 3. ನಾನು ಸಂಸಾರ ಸಮೇತ ಅಲ್ಲಿಗೆ ಹೋಗಬೇಕು ಅಂಥ ಅಂದುಕೊಂಡಿದ್ದೆ.
  ಸರಿ ಬಿಡಿ ಮೆಜೆಸ್ಟಿಕ್‌ ಇನ್ನೊಮ್ಮೆ ಹೋದರಾಯಿತು :)

  ReplyDelete
 4. ಸರಿ ಬಿಡಿ,
  ಮೆಜೆಸ್ಟಿಕ್ ದರ್ಶನ ಸರಳ, ಸುಲಭ ಅಲ್ವಾ?
  ಅಲ್ಲಿಗೆ ಹೋಗೋದು......

  ReplyDelete
 5. ಪಾಲಚಂದ್ರ ಚಂದ್ರ,

  ನಾನು ಕಳವಾರ ಬೆಟ್ಟಕ್ಕೆ ಟ್ರಕ್ಕಿಂಗ್ ಹೋಗಿದ್ದೇನೆ. ಸೂಪರ್ ಆಗಿದೆ. ರಾತ್ರಿ ಅಲ್ಲಿ ಉಳಿದುಕೊಂಡಿದ್ದೆ. ಕ್ಯಾಮರಾ ಮಾತ್ರ ಹೊಯ್ದಿರಲಿಲ್ಲವಾದ್ದರಿಂದ ಫೋಟೊಗ್ರಫಿ ಇರಲಿಲ್ಲ. ರಾತ್ರಿ ಅನುಭವ ಸೂಪರ್. ನಿಮ್ಮ ಫೋಟೊಗಳು ಚೆನ್ನಾಗಿವೆ.

  ReplyDelete
 6. ನಾವು ಹೋಗ ಬೇಕು,,, ಅನ್ಕೊಂಡ್ ಇದೇವೆ, ನೋಡೋಣ....ಒಂದು ದಿನ ಟೈಮ್ ಸಿಕ್ಕಾಗ...ಹೋಗಿ ಬರ್ತೇವೆ,,
  ಫೋಟೋ ತುಂಬಾ ಚೆನ್ನಾಗಿ ಇದೆ...

  ReplyDelete
 7. ಟೀ ಅಂಗಡಿಯಲ್ಲಿ ಹಾಲು ಕುದಿಸುತ್ತಿರುವ ದೃಷ್ಯದ ಚಿತ್ರವೇ ಒಂದು ದೃಶ್ಯಕಾವ್ಯ.

  ReplyDelete
 8. ಪ್ರತಿಕ್ರಿಯಿಸಿದ ಎಲ್ಲರಿಗೂ ವಂದನೆಗಳು

  ReplyDelete
 9. ಈ ಸ್ಥಳಕ್ಕೆ ಸರಿಯಾದ ಅವಧಿ ನಲ್ಲಿ ಹೋದ್ರೆ ಬಹಳ ಚೆನ್ನಾಗಿರತ್ತೆ...ರಾತ್ರಿ ಟ್ರೆಕ್ ಮಾಡೋದು ಎಂಥವರಿಗೂ ಒಳ್ಳೆ ಅನುಭವ... ನೀವು ಖಂಡಿಸ್ತ ಇರೋ ಥರ ಅದರಲ್ಲೂ ಮೆಜೆಸ್ಟಿಕ್ ಅಂತ ಕೀಳು ಮತ್ತದಲ್ಲನ್ತು ಇಲ್ಲ. ನಾನು ೩-೪ ಬಾರಿ ಅಲ್ಲಿ ಗೆ ಹೋಗಿದ್ದೀನಿ, ಪ್ರತಿ ಬಾರಿಯ ಅನುಭವ ಬೇರೆ ರೀತಿ ಅಲ್ಲಿ ಇತ್ತು, ಟ್ರೆಕ್ ಮಾಡೋದೇ ಹವ್ಯಾಸ ಇರೋವ್ರಿಗೆ ಬೆಂಗಳೂರಿನಿಂದ ಸಲ್ಪ ಮಟ್ಟಕ್ಕೆ ಮುಕ್ತಿ ಸಿಗಲಿಕ್ಕೆ ಒಂದು ಅದ್ಭುತ ತಾಣ ಅಂತ ಹೇಳ್ತಿನಿ....!! - Ramya

  ReplyDelete
 10. Ramya,
  "ಅನುಭವ ಮಂಟಪ"ಕ್ಕೆ ಸ್ವಾಗತ. ನಿಮ್ಮಂತೆ ಛಾಯಾಗ್ರಾಹಕ ಮಿತ್ರರಾದ ಶಿವು ಕೂಡ ಸ್ಕಂದಗಿರಿಯನ್ನು ಮೆಚ್ಚಿಕೊಂಡಿದ್ದಾರೆ. ನಿಮ್ಮ ವ್ಯತಿರಿಕ್ತ ಅನುಭವ ತಿಳಿಸಿದ್ದಕ್ಕೆ ವಂದನೆಗಳು. ಚಾರಣಕ್ಕೆ ಸ್ಕಂದಗಿರಿಗೆ ಹೊರಟು ನಿಂತವರಿಗೆ ಸ್ಪೂರ್ತಿಯಾಗಬಹುದು. ಅಂತೆಯೇ ಸರಿಯಾದ ಸಮಯ ಯಾವುದೆಂದು ತಿಳಿಸಿದರೆ ಅನುಕೂಲ.

  ReplyDelete

ವರ್ಗ

Amomum (1) ficus krishnae (1) Gangtok (1) Nikon 40mm f/2.8 Micro (10) paris (1) Sikkim (8) snow (1) Yuksom (5) ಅನಿಮೇಟೆಡ್ (1) ಅನುಭವ ಕಥನ (7) ಅಮೂರ್ತ (1) ಆಟೋಟ (2) ಆಫಿಡ್ (1) ಇರುವೆ (6) ಉಡುಪಿ (4) ಉರಗ (3) ಏರಿ (1) ಒಂಟಿ ಚಕ್ರದ ಸೈಕಲ್ (1) ಒಯ್ಯುಗೆ (6) ಕದ (1) ಕಂದು ಏಲಕ್ಕಿ (1) ಕನ್ನಡ (2) ಕಪ್ಪು ಏಲಕ್ಕಿ (1) ಕಪ್ಪು-ಬಿಳುಪು (5) ಕಂಬಳ (1) ಕಂಬಳಿಹುಳು (2) ಕವನ (15) ಕವಿ ಶೈಲ (1) ಕಸರತ್ತು (1) ಕಳಸ (1) ಕಳ್ಳತನ (1) ಕಾವೇರಿ (1) ಕಾಳಾವಾರ ಬೆಟ್ಟ (1) ಕಾಳಿಂಗ ಸರ್ಪ (1) ಕಿಸ್ಕಾರ (1) ಕೀಟ ಪ್ರಪಂಚ (35) ಕುಂದಾಪುರ (1) ಕುವೆಂಪು (1) ಕೃಷಿ (9) ಕೃಷಿ ಮೇಳ (4) ಕೆರೆ (2) ಕೆಲಸ (2) ಕೆಸು (2) ಕೆಳದಿ (1) ಕೊಕ್ಕರೆ ಬೆಳ್ಳೂರು (1) ಕೋಟ (8) ಖಗೋಳ ಗಡಿಯಾರ (1) ಗವಿ (1) ಗುಡಿ ಕೈಗಾರಿಕೆ (1) ಗುಡ್ಡ (2) ಗುಹೆ (1) ಚಾರಣ (3) ಚಿಕ್ಕಮಗಳೂರು (1) ಚಿಟ್ಟಾಣಿ (1) ಚಿಟ್ಟೆಗಳು (3) ಚಿತ್ರ ಪುಟ (101) ಚಿತ್ರದುರ್ಗ (1) ಚಿತ್ರಪುಟ (1) ಚೌಕಾಶಿ (1) ಛಾಯಾಗ್ರಹಣ (24) ಜನ ಜೀವನ (52) ಜನಪದ (2) ಜರ್ಮನಿ (1) ಜಲಪಾತ (1) ಜೆಕ್ ಗಣರಾಜ್ಯ (4) ಜೇಡ (3) ಜೇನು ಸಾಕಣೆ (1) ಜೋಡಿ (1) ತರಕಾರಿ (2) ತುಮಕೂರು (2) ತೆಂಗಿನ ಕಾಯಿ (1) ತೆಂಗಿನ ತೋಟ (1) ದಸರ (4) ದೇವವೃಂದ (1) ದೇವಸ್ಠಾನ (1) ದೊಡ್ಡ ಏಲಕ್ಕಿ (1) ಧಾರವಾಡ (1) ನಂಬಿಕೆ (1) ನಾಟಕ (1) ನೀರ್ಹಕ್ಕಿ (6) ಪತಂಗ (1) ಪತ್ರಿಕೋದ್ಯಮ (1) ಪಶ್ಚಿಮ ಘಟ್ಟ (2) ಪಾಳು (1) ಪುಸ್ತಕ ಬಿಡುಗಡೆ (1) ಪೋರ್ಟ್ರೈಟ್ (8) ಪ್ರಬಂಧ (2) ಪ್ರವಾಸ ಕಥನ (3) ಪ್ರಾಹ (1) ಪ್ಲಾಸ್ಟಿಕ್ (1) ಬಕೇಟ್ (1) ಬಂಡಿ (1) ಬಣ್ಣ (1) ಬನವಾಸಿ (1) ಬಳ್ಳಿ (1) ಬಾಗಿಲು (1) ಬಾರ್ಕೂರು (1) ಬೀಗ (1) ಬೆಂಗಳೂರಿನ ಚಿತ್ರಗಳು (5) ಬೆಂಗಳೂರು (24) ಬೇಸಾಯ (1) ಬ್ರಹ್ಮಾವರ (1) ಭಾರತ ಬಂದ್ (1) ಭಿಕ್ಷುಕರು (1) ಮಕ್ಕಳು (10) ಮಂಜು (2) ಮಮ್ಮಮ್ (3) ಮಲೆನಾಡು (1) ಮಳೆ (1) ಮಳೆಗಾಲ (2) ಮಾರಿಕಣಿವೆ (1) ಮುಸ್ಸಂಜೆ (1) ಮೇಲುಕೋಟೆ (2) ಮೈಸೂರು (7) ಮೋಡ (2) ಮ್ಯಾಕ್ರೋ (12) ಯಕ್ಷಗಾನ (2) ರಸ್ತೆ (5) ರಾತ್ರಿ ನೋಟ (3) ರೈಮ್ (1) ರೈಲು (2) ರೈಲುಹಳಿ (1) ಲಲಿತ ಪ್ರಬಂಧ (6) ಲೇಪಾಕ್ಷಿ (1) ವಂಡಾರ್ (1) ವಾಸ್ತು ಶಿಲ್ಪ (1) ವಾಹನ (2) ವಿವೇಕ (1) ವ್ಯಕ್ತಿ ವಿಷಯ (3) ವ್ಯಾಪಾರ (1) ಶಾಲೆ (1) ಶಿರಸಿ (1) ಶಿರಸಿ. ಸೈಕಲ್ (1) ಶಿಲ್ಪ (1) ಶಿವನಸಮುದ್ರ (1) ಶುಭಾಶಯ (2) ಸಣ್ಣ ಕಥೆ (4) ಸಂತೆ (2) ಸಮುದ್ರ (2) ಸಮುದ್ರ ಜೀವಿ (2) ಸಸ್ಯ ಪ್ರಪಂಚ (12) ಸಾಕು ಪ್ರಾಣಿ (4) ಸಾಸ್ತಾನ (1) ಸಿಕ್ಕಿಂ (3) ಸೈಕಲ್ (5) ಸೈಕಲ್ ಯಾತ್ರೆ (1) ಸ್ಕಂದಗಿರಿ (1) ಸ್ತೂಪ (1) ಸ್ಪರ್ಧೆ (1) ಹಕ್ಕಿಗಳು (21) ಹಳ್ಳಿ (3) ಹಿಮ (1) ಹೂಗಳು (5) ಹೊಸ ವರ್ಷ (1) ಹೋಂ ಸ್ಟೇ (1) ಹೌರಾ (1)