Tuesday, July 13, 2010

ಕೃಷ್ಣಸುಂದರಿಯ ಬಳಿಯಲ್ಲಿ

ಅವರ ಮನೆಯ ಕಡೆ ಹೆಜ್ಜೆ ಇಡುತ್ತಿದಂತೆಯೇ ನನ್ನ ಕಾಲೆಲ್ಲಾ ಕಣ್ಣಾಗಿತ್ತು. ಒಂದು ರೀತಿಯ ಅಳುಕು, ಭಯ ನನ್ನೆದಯನಾವರಿಸಿತ್ತು. ದಾರಿಯ ಅಕ್ಕ ಪಕ್ಕದ ಪೊದೆಯಲ್ಲಿ ಏನಾದರೂ ಮಿಸುಕಾಡಿದರೂ ಸಾಕು ಅಪ್ರಯತ್ನ ಪೂರ್ವಕವಾಗಿ ಮೈ ರೋಮ ನಿಮಿರಿ, ಭಯದ ರೋಮಾಂಚನವನ್ನುಂಟುಮಾಡಿತ್ತು. ಮನೆಯ ಕದ ತಟ್ಟುತ್ತಿದಂತೆಯೇ ನನ್ನ ಹೃದಯದ ಬಡಿತದ ಸದ್ದೂ ಅದರೊಡನೆ ಮಿಳಿತಗೊಂಡು ತಾಳ ಹಾಕಿದಂತೆ ಭಾಸವಾಯಿತು. ಒಳಗಡೆಯಿಂದ "ಯಾರು" ಎಂಬ ಹೆಂಗಸೊಬ್ಬರ ದನಿಗೆ ಮಾರುತ್ತರ ಕೊಡಲೂ ಬಾಯಿ ಒಣಗಿದಂತಾಗಿತ್ತು. ಆಕೆಯ ಹೆಜ್ಜೆ ಬಾಗಿಲ ಹತ್ತಿರ ಹತ್ತಿರ ಬರುತ್ತಿದ್ದಂತೆ ನನ್ನೊಳಗಿನ ಭಯ ನೂರ್ಮಡಿಸಿತು. ಬಾಗಿಲು ತೆರೆದ ಕೂಡಲೇ ಅದು ನನ್ನ ಮೇಲೆ ನುಗ್ಗಿ ಬಂದರೆ...

ಬಾಗಿಲು ತೆರೆದ ನಂತರ ಕಾಣಿಸಿದ್ದು, ಪ್ರಶ್ನಾರ್ಥಕ ನೋಟ ಬೀರಿದ ಇಳಿ ವಯಸ್ಸಿನ ಹೆಂಗಸನ್ನು. ನನ್ನ ಪರಿಚಯ ಮಾಡಿಕೊಡುತ್ತಾ, "ನಿನ್ನೆ ಫೋನ್ ಮಾಡಿದ್ದೆನಲ್ಲಾ ಬರುತ್ತೇನೆಂದು, ’ಅವರು’ ಇದ್ದಾರ" ಎಂದು ಕೇಳಿದೆ. "ಈಗಷ್ಟೆ ಒಬ್ರು ಫೋನ್ ಮಾಡಿದ್ರು ಇನ್ನೊಂದ್ ಅರ್ಧಗಂಟೇಲಿ ಬರ್ತಾರೆ ಕೂತಿರಿ", ಎಂದು ಒಳಗೆ ಆಹ್ವಾನಿಸಿದರು. "ಸರಿ, ಆದರೆ ನಿನ್ನೆ ಹಿಡಿದ ಕಾಳಿಂಗ ಸರ್ಪ.." ನನ್ನ ಮಾತನ್ನು ತಡೆಹಿಡಿದು ಆಕೆಯೇ ಮುಂದುವರಿಸಿದರು. "ನೀವು ಈಗ ಬಾಗಿಲ ಪಕ್ಕದ ಒಂದು ಗೋಣಿ ಚೀಲದ ಮೇಲೆ ಕೈ ಇಟ್ಟಿದ್ದೀರಲ್ಲ, ಅದ್ರ ಕೆಳಗೆ ಒಂದು ಪಂಜರ ಇದೆ ಅದ್ರೊಳಗೆ ಆರಾಮಾಗಿ ನಿದ್ರೆ ಮಾಡ್ತಾ ಇದೆ" ಎಂದುತ್ತರಿಸಿದರು.

ಒಮ್ಮೆ ಮೈ ಜುಮ್ಮೆಂದರೂ ತೋರಿಸಿಕೊಳ್ಳದೇ, ಗೂಡಿನ ಮೇಲೆ ಹೆದರಿಕೆಯಿಲ್ಲದೇ ಕೈಯಿಟ್ಟು ನಿಂತಿದ್ದ ನನ್ನ ಧೈರ್ಯಕ್ಕೆ ನಾನೇ ಮೆಚ್ಚಿ "ಈಗ ನೋಡಬಹುದಾ" ಕೇಳಿದೆ. "ಹೋ ಬನ್ನಿ", ಎಂದು ಮನೆಯಾಕೆ ಹೊರಗೆ ಕರೆದುಕೊಂಡು ಹೋಗಿ ಗೋಣಿ ಚೀಲವನ್ನು ಎತ್ತಿದಾಗ, ಪಂಜರದೊಳಗೆ ಪಾಪದ ಪ್ರಾಣಿಯಂತೆ ಸುರುಳಿ ಸುತ್ತಿ ಮಲಗಿರುವ ಕಾಳಿಂಗ ಸರ್ಪವನ್ನು ತೋರಿಸಿದರು. ತುದಿ ಮೊದಲು ಗೊತ್ತಾಗದ ನೀಳ ಕಾಯ, ಕಡು ಗಪ್ಪು ಮಿನುಗುವ ಮೈಬಣ್ಣ, ಮಧ್ಯೆ ಮಧ್ಯೆ ಪಟ್ಟೆಗಳು, ಗಮನಿಸಬಹುದಾದ ಉಸಿರಿನ ಏರಿಳಿತ. ಮತ್ತೆ ಮನೆಯೊಳಗೆ ತೆರಳಿ ಸಮಯ ಹೋಗದಿದ್ದುದಕ್ಕೆ ಮನೆಯವರು ಕೊಟ್ಟ ಬಾಳೆ ಹಣ್ಣು, ಕಾಫಿ ಮುಗಿಸುತ್ತಾ ಮಾತನಾಡುತ್ತಾ ಕುಳಿತೆವು.

ಸುಮಾರು ಅರ್ಧ ಗಂಟೆಯ ನಂತರ ನಾವು ಕಾಯಿತ್ತಿದ್ದ ಪ್ರಫುಲ್ಲ ಭಟ್ಟರ ಆಗಮನವಾಯಿತು. ಸುಮಾರು ಅರವತ್ತರ ಆಸು ಪಾಸಿನ ಭಟ್ಟರು, ಕಂಡ ಕೂಡಲೇ ಕೈಕುಲುಕಿ ಮಾತನಾಡಿಸಿ "ತುಂಬಾ ಹೊತ್ತಾಯ್ತೇನೋ ಬಂದಿದ್ದು" ಎಂದರು. ಈವರೆಗೆ ಪೇಪರಿನಲ್ಲಿ ಪ್ರಕಟವಾಗಿದ್ದ ಅವರ ಬಗೆಗಿನ ಲೇಖನಗಳು, ಚಿತ್ರಗಳನ್ನು ತೋರಿಸುತ್ತಾ ತಮ್ಮ ಅನುಭವ ಹಂಚಿಕೊಂಡರು.

ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮನೆ, ತೋಟಕ್ಕೆ ದಾರಿ ತಪ್ಪಿ ಬಂದ ಹಾವುಗಳನ್ನು ಹಿಡಿದು ಅರಣ್ಯ ಪಾಲಕರ ನೆರವಿನೊಂದಿಗೆ ಮತ್ತೆ ಕಾಡಿಗೆ ಬಿಡುವುದು ಇವರ ಹವ್ಯಾಸಗಳಲ್ಲೊಂದು. ಕಳಸದಲ್ಲಿ ಸ್ವಂತ ಮನೆ, ಆದಾಯಕ್ಕೆ ತೋಟ, ಬಾಡಿಗೆ ಮನೆ ಇರುವುದರಿಂದ ಈ ಕಾಯಕವನ್ನು ಯಾವುದೇ ಫಲಾಪೇಕ್ಷೆಯಿಲ್ಲದೇ ಕೆಲವು ವರ್ಷಗಳಿಂದ ಮಾಡುತ್ತಾ ಬಂದಿದ್ದಾರೆ. "ಕಾಳಿಂಗ ಸರ್ಪ, ಹೆಬ್ಬಾವು, ಕೊಳಕು ಮಂಡಲ, ನಾಗರ ಹಾವು ಹೀಗೆ ಸುಮಾರು ವರ್ಷಕ್ಕೆ ೨೦೦-೨೫೦ ಹಾವುಗಳಿಗೆ ಮರುನೆಲೆ ಕಾಣಿಸುತ್ತೇನೆ" ಎನ್ನುತ್ತಾರೆ ಭಟ್ಟರು. ತಮ್ಮ ೧೫ನೇ ವರ್ಷದಿಂದ ಸ್ವಯಂ ಪ್ರೇರಣೆಯಿಂದ ಹಾವು ಹಿಡಿಯುವುದನ್ನು ಆಟವಾಗಿಸಿಕೊಂಡ ಭಟ್ಟರು, ಅವುಗಳ ಉಳಿವಿಗಾಗಿ ತಮ್ಮನ್ನು ತೊಡಗಿಸಿಕೊಂಡಿರುವುದು ಸಂತಸದ ವಿಷಯ.

ಕೇವಲ ಹಾವು ಹಿಡಿದು ಕಾಡಿಗೆ ಬಿಡುವುದು ಮಾತ್ರವಲ್ಲ, ಜನರಿಗೆ ಶಾಲಾ ಮಕ್ಕಳಿಗೆ ಹಾವುಗಳ ಬಗ್ಗೆ ಅರಿವು ಮೂಡಿಸುವುದನ್ನೂ ಕೂಡ ಮಾಡುತ್ತಾ ಬಂದಿದ್ದಾರೆ. "ತೀರ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಹಾವು ಮನುಷ್ಯರನ್ನು ಕಡಿಯಬಹುದು. ತಪ್ಪಿಸಿಕೊಳ್ಳಲು ಒಂದು ಚಿಕ್ಕ ಅವಕಾಶ ಸಿಕ್ಕಿದರೂ ಮನುಷ್ಯರಿಂದ ದೂರ ಇರುವುದಕ್ಕೇ ಇಷ್ಟ ಪಡುತ್ತವೆ" ಎನ್ನುತ್ತಾರೆ. ಹಾವುಗಳು ನಮ್ಮ ಸಂಸ್ಕೃತಿ, ದೇವತೆಗಳೊಂದಿಗೆ ಬೆರೆತಿವೆ, ಅವುಗಳನ್ನು ರಕ್ಷಿಸುವುದು ನನ್ನ ಕರ್ತವ್ಯ ಎಂದು ಈ ಕೆಲಸ ಮಾಡುತ್ತೇನಷ್ಟೆ ಅಲ್ಲದೇ ಇದರಿಂದ ನಾನು ಬೇರಾವ ಪ್ರತಿಫಲವನ್ನೂ ಬಯಸುವುದಿಲ್ಲ ಎನ್ನುತ್ತಾರೆ. ಇದುವರೆಗೂ ಇವರು ಹಿಡಿದ ಹಾವುಗಳಲ್ಲಿ ಅತೀ ಉದ್ದದ್ದು, ಕೊಪ್ಪದ ಬಳಿ ಹಿಡಿದ ೧೬ ಅಡಿ ಉದ್ದದ ಕಾಳಿಂಗ ಸರ್ಪವಂತೆ. ಒಂದು ಕೋಲು, ಕೈಗೆ ಗ್ಲೌಸು ಹಾವು ಹಿಡಿದ ನಂತರ ಅದನ್ನು ತುಂಬಿಸಲು ಗೋಣಿ ಚೀಲ ಇವಿಷ್ಟು ಹಾವು ಹಿಡಿಯಲು ಅವರು ಬಳಸುವ ಉಪಕರಣಗಳು. ಗ್ಲೌಸು ಹಾವಿನ ಬಾಯಿಯಿಂದ ಹೊರಬರುವ ವಿಷ ಕೈಯ ಗಾಯಕ್ಕೆ, ಉಗುರಿನ ಸಂದಿಗೆ ಹೋಗಬಾರದೆಂದು ಹಾಕುತ್ತಾರಲ್ಲದೇ, ಅದರಿಂದ ಮತ್ತೇನೂ ಪ್ರಯೋಜನವಿಲ್ಲ ಎನ್ನುತ್ತಾರೆ. ಅಂದಹಾಗೇ ಈ ಹಾವು ಭಟ್ಟರು ಹಿಡಿದ ೧೫೧ನೇ ಕಾಳಿಂಗ ಸರ್ಪವಂತೆ.

ನಾನು ಹೊರಡುವ ಮುಂಚೆ ಭಟ್ಟರು, "ಹಾವನ್ನ ಹೊರಗೆ ತೆಗಿತೀನಿ, ನೊಡ್ಕೊಂಡು ಹೋಗಿ" ಎಂದರು. ಇದುವರೆಗೆ ಬರೀ ಜೂನಲ್ಲಿ ಕಾಳಿಂಗ ಸರ್ಪ ನೋಡಿದ್ದರಿಂದ, ಈ ಅವಕಾಶ ಕಳೆದುಕೊಳ್ಳುವ ಮನಸ್ಸಿರಲಿಲ್ಲ. "ಗೂಡಿಂದ ತೆಗಿಬೇಕಾದ್ರೆ ಅಡ್ಡಿಲ್ಲ, ಮತ್ತೆ ಗೂಡಿಗೆ ಹಾಕಬೇಕಾದಾಗ ಮಾತ್ರ ಅದರ ಬಾಲ ಸ್ವಲ್ಪ ಹಿಡಿದುಕೊಳ್ಳಬೇಕಾಗುತ್ತದೆ", ಎಂದಂದು ನನ್ನ ಪ್ರತಿಕ್ರಿಯೆಗೂ ಕಾಯದೇ ಗೂಡಿನ ಬಾಗಿಲು ತೆರೆದು ಹಾವನ್ನು ಹೊರಗೆ ತೆಗೆದೇ ಬಿಟ್ಟರು. ಛಾಯಾಗ್ರಹಣದ ನಿಯಮ ಎಲ್ಲಾ ಮರೆತು ನನಗೆ ಹೇಗೆ ತೆಗೆಯೋಕೆ ಬರುತ್ತೋ ಅಂತೆಯೇ ಕ್ಯಾಮರಾದಿಂದ ಕ್ಲಿಕ್ಕಿಸತೊಡಗಿದೆ.

ಕಾಳಿಂಗಾಭರಣರಾಗಿ ಭಟ್ಟರು
CSC_6348

ಹಾವಿನ ಕ್ಲೋಸ್-ಅಪ್ ತೆಗೆಯೋಕೆ ಪ್ರಯತ್ನಿಸಿದ್ದು
CSC_6353

ಅಷ್ಟರಲ್ಲೇ ಭಟ್ಟರಿಗೆ ಹಾವು ಹಿಡಿಯಲು ಇನ್ನೊಂದು ಕರೆ ಬಂದುದರಿಂದ, ಹಾವನ್ನು ಮರಳಿ ಗೂಡಿಗೆ ಹಾಕಲು ನಿರ್ಧರಿಸಿದರು. ನನ್ನ ಪುಣ್ಯಕ್ಕೆ ಪಕ್ಕದ ಮನೆಯವರು ಬಂದುದರಿಂದ ಅದರ ಬಾಲ ಹಿಡಿಯುವ ಕಷ್ಟ ತಪ್ಪಿತು. ಅಂದ ಹಾಗೇ ಭಟ್ಟರ ದೂರವಾಣಿ ಸಂಖ್ಯೆ: ೯೪೮ ೦೦೭ ೫೨೦೨.

CSC_6352

17 comments:

  1. Pala,

    ಮೈ ನವಿರೇಳಿಸುವ ದ್ರಶ್ಯ. ಸೂಪರ್.

    Ravi

    ReplyDelete
  2. ನೀವು ಬರೆದಿರೊದನ್ನ ಓದೊವಾಗ್ಲೆ ತುಂಬಾ ಭಯ ಆಯ್ತು. ಆ ಕೃಷ್ಣಸುಂದರಿ ಬಳಿಯಲ್ಲೇ ಇದೆಯೇನೊ ಅನ್ನೊಹಾಗೆ. ಅಯ್ಯಯ್ಯೊ Close-up photo ನೋಡ್ತಾ ಇದ್ರೆ ಮೈ ಜುಂಮ್ ಅಂತಿದೆ. ಇನ್ನು ಗೂಡಿನ ಮೇಲೆ ಕೈ ಇಟ್ಟಿದೆನೆ ಅಂತ ಹೇಳ್ತಿರೋ ನಿಮ್ಗೆ ಹೇಗಾಗಿರ್ಬಹುದು ಅಲ್ವಾ? ಪಕ್ಕದ ಮನೆಯವರು ಬಾರದೆ ಹೊಗಿದ್ರೆ??? ಹ್ಹ ಹ್ಹ..

    ReplyDelete
  3. I love 2nd pic.... Very beautyful closeup.

    Also nice write up. Tkx

    ReplyDelete
  4. ಭಟ್ಟರಿಗೆ ಹಾಗು ನಿಮಗೆ ಧನ್ಯವಾದಗಳು. ಆದರೆ, ಕಾಳಿಂಗ ಸರ್ಪದ close up ನೋಡುತ್ತಿದ್ದಂತೆ, ನಿಜಕ್ಕೂ ಭಯವಾಯಿತು.

    ReplyDelete
  5. ಪಾಲ
    ಮೈ ಜ್ಹುಮ್ಮೆನ್ನುತ್ತಿದೆ

    ReplyDelete
  6. ಹಾವುಗಳಿಗೆ ಬದ್ರ ನೆಲೆ ಒದಗಿಸುತ್ತಿರೋ ಭಟ್ಟರಿಗೂ ಈ ವಿಷಯವನ್ನ ನಮ್ಮೊಡನೆ ಹಂಚಿಕೊಂಡ ನಿಮಗೂ ಧನ್ಯವಾದಗಳು.. ಕೃಷ್ಣಸುಂದರಿ close-up ನಲ್ಲಿ ಭಯ ಹುಟ್ಟಿಸುತ್ತಾಳೆ...

    ReplyDelete
  7. pala olle writeup, ninage time adre Agumbe nali iro Witekar King Cobra Observation campge hogi ba ... mostly ega GowriShankar adanna nodkothirbekku, luck idre haavu goodu mathe motte nodakke sigathe....

    ReplyDelete
  8. We tend to leave all the things we're holding in our hands and escape even if we see an ordinary snake in front of us. Here he is holding a poisonous snake in one hand and a mobile phone in the other hand and having a chat. :)

    ReplyDelete
  9. ಪಾಲಚಂದ್ರ,

    ಕಾಳಿಂಗ ಸರ್ಪವೆಂದಕೂಡಲೆ ಒಮ್ಮೆ ದಿಗಿಲಾಗುವುದು ಖಂಡಿತ. ಅಂಥದ್ದರಲ್ಲಿ ಈ ಭಟ್ಟರು ಹೀಗೆ ಕತ್ತಿಗೆ ಹಾಕಿಕೊಂಡು ಬಾಯಿ ಹಿಡಿದಿರುವುದು ನೋಡಿದರೆ.....
    ಫೋಟೋ ಕೂಡ ಚೆನ್ನಾಗಿ ತೆಗೆದಿದ್ದೀರಿ...

    ReplyDelete
  10. ಪಾಲ,
    ಚಿತ್ರಗಳು ಸುಂದರವಾಗಿದೆ. ಕಾಳಿ೦ಗದ ಹತ್ತಿರದ ಚಿತ್ರ ಮೈ ಜುಮ್ಮೆನಿಸುತ್ತದೆ. ಭಟ್ಟರ ಉರಗಪ್ರೇಮಕ್ಕೆ ಮತ್ತು ಅವುಗಳ ರಕ್ಷಣೆಯ ಅವರ ಸಂಕಲ್ಪಕ್ಕೆ ನಮ್ಮ ನಮನಗಳು. ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು.

    ReplyDelete
  11. ಅಬ್ಬಾ! ಹಾವಂದ್ರೆ ನಾನು ದೂರ. ಚಿತ್ರಗಳನ್ನು ನೋಡಿಯೇ ಬೆಚ್ಚಿಬಿದ್ದೆ. ಭಟ್ರು ಚೆನ್ನಾಗಿ ಕಾಣಿಸ್ತಿದ್ದಾರೆ, ಹಾವನ್ನು ಧರಿಸಿ.

    ReplyDelete
  12. WOW, very nice. Thumba chennagiddale ee krishna sundari.

    ReplyDelete

ವರ್ಗ

Amomum (1) ficus krishnae (1) Gangtok (1) Nikon 40mm f/2.8 Micro (10) paris (1) Sikkim (8) snow (1) Yuksom (5) ಅನಿಮೇಟೆಡ್ (1) ಅನುಭವ ಕಥನ (7) ಅಮೂರ್ತ (1) ಆಟೋಟ (2) ಆಫಿಡ್ (1) ಇರುವೆ (6) ಉಡುಪಿ (4) ಉಯ್ಯಾಲೆ (1) ಉರಗ (3) ಏರಿ (1) ಒಂಟಿ ಚಕ್ರದ ಸೈಕಲ್ (1) ಒಯ್ಯುಗೆ (6) ಕದ (1) ಕಂದು ಏಲಕ್ಕಿ (1) ಕನ್ನಡ (2) ಕಪ್ಪು ಏಲಕ್ಕಿ (1) ಕಪ್ಪು-ಬಿಳುಪು (5) ಕಂಬಳ (1) ಕಂಬಳಿಹುಳು (2) ಕವನ (15) ಕವಿ ಶೈಲ (1) ಕಸರತ್ತು (1) ಕಳಸ (1) ಕಳ್ಳತನ (1) ಕಾವೇರಿ (1) ಕಾಳಾವಾರ ಬೆಟ್ಟ (1) ಕಾಳಿಂಗ ಸರ್ಪ (1) ಕಿಸ್ಕಾರ (1) ಕೀಟ ಪ್ರಪಂಚ (35) ಕುಂದಾಪುರ (1) ಕುವೆಂಪು (1) ಕೃಷಿ (9) ಕೃಷಿ ಮೇಳ (4) ಕೆರೆ (2) ಕೆಲಸ (2) ಕೆಸು (2) ಕೆಳದಿ (1) ಕೊಕ್ಕರೆ ಬೆಳ್ಳೂರು (1) ಕೋಟ (8) ಖಗೋಳ ಗಡಿಯಾರ (1) ಗವಿ (1) ಗುಡಿ ಕೈಗಾರಿಕೆ (1) ಗುಡ್ಡ (2) ಗುಹೆ (1) ಚಾರಣ (3) ಚಿಕ್ಕಮಗಳೂರು (1) ಚಿಟ್ಟಾಣಿ (1) ಚಿಟ್ಟೆಗಳು (3) ಚಿತ್ರ ಪುಟ (102) ಚಿತ್ರದುರ್ಗ (1) ಚಿತ್ರಪುಟ (1) ಚೌಕಾಶಿ (1) ಛಾಯಾಗ್ರಹಣ (24) ಜನ ಜೀವನ (52) ಜನಪದ (2) ಜರ್ಮನಿ (1) ಜಲಪಾತ (1) ಜೆಕ್ ಗಣರಾಜ್ಯ (4) ಜೇಡ (3) ಜೇನು ಸಾಕಣೆ (1) ಜೋಡಿ (1) ತರಕಾರಿ (2) ತುಮಕೂರು (2) ತೆಂಗಿನ ಕಾಯಿ (1) ತೆಂಗಿನ ತೋಟ (1) ದಸರ (4) ದೇವವೃಂದ (1) ದೇವಸ್ಠಾನ (1) ದೇವಸ್ಥಾನ (1) ದೊಡ್ಡ ಏಲಕ್ಕಿ (1) ಧಾರವಾಡ (1) ನಗರ (1) ನಂಬಿಕೆ (1) ನಾಟಕ (1) ನೀರ್ಹಕ್ಕಿ (6) ಪತಂಗ (1) ಪತ್ರಿಕೋದ್ಯಮ (1) ಪಶ್ಚಿಮ ಘಟ್ಟ (2) ಪಾರ್ಕ್ (1) ಪಾಳು (1) ಪುಸ್ತಕ ಬಿಡುಗಡೆ (1) ಪೋರ್ಟ್ರೈಟ್ (8) ಪ್ಯಾನಿಂಗ್ (1) ಪ್ರಬಂಧ (2) ಪ್ರವಾಸ ಕಥನ (3) ಪ್ರಾಹ (1) ಪ್ಲಾಸ್ಟಿಕ್ (1) ಬಕೇಟ್ (1) ಬಂಡಿ (1) ಬಣ್ಣ (1) ಬನವಾಸಿ (1) ಬಳ್ಳಿ (1) ಬಾಗಿಲು (1) ಬಾರ್ಕೂರು (1) ಬೀಗ (1) ಬೆಂಕಿ (1) ಬೆಂಗಳೂರಿನ ಚಿತ್ರಗಳು (5) ಬೆಂಗಳೂರು (27) ಬೆಳಕು (1) ಬೇಸಾಯ (1) ಬ್ರಹ್ಮಾವರ (1) ಭಾರತ ಬಂದ್ (1) ಭಿಕ್ಷುಕರು (1) ಮಕ್ಕಳು (10) ಮಗು (1) ಮಂಜು (2) ಮಮ್ಮಮ್ (3) ಮಲೆನಾಡು (1) ಮಳೆ (1) ಮಳೆಗಾಲ (2) ಮಾರಿಕಣಿವೆ (1) ಮುಸ್ಸಂಜೆ (1) ಮೇಲುಕೋಟೆ (2) ಮೇವು (1) ಮೈಸೂರು (7) ಮೋಡ (2) ಮ್ಯಾಕ್ರೋ (12) ಯಕ್ಷಗಾನ (2) ರಸ್ತೆ (5) ರಾತ್ರಿ ನೋಟ (3) ರೈಮ್ (1) ರೈಲು (2) ರೈಲುಹಳಿ (1) ಲಲಿತ ಪ್ರಬಂಧ (6) ಲೇಪಾಕ್ಷಿ (1) ವಂಡಾರ್ (1) ವಾಸ್ತು ಶಿಲ್ಪ (1) ವಾಹನ (2) ವಿವೇಕ (1) ವಿಸ್ತರಣೆ (1) ವ್ಯಕ್ತಿ ವಿಷಯ (3) ವ್ಯಾಪಾರ (1) ಶಾಲೆ (1) ಶಿರಸಿ (1) ಶಿರಸಿ. ಸೈಕಲ್ (1) ಶಿಲ್ಪ (1) ಶಿವನಸಮುದ್ರ (1) ಶುಭಾಶಯ (2) ಸಣ್ಣ ಕಥೆ (4) ಸಂತೆ (2) ಸಮುದ್ರ (2) ಸಮುದ್ರ ಜೀವಿ (2) ಸಸ್ಯ ಪ್ರಪಂಚ (12) ಸಾಕು ಪ್ರಾಣಿ (4) ಸಾಗಾಟ (1) ಸಾಸ್ತಾನ (1) ಸಿಕ್ಕಿಂ (3) ಸೈಕಲ್ (5) ಸೈಕಲ್ ಯಾತ್ರೆ (1) ಸ್ಕಂದಗಿರಿ (1) ಸ್ತೂಪ (1) ಸ್ಪರ್ಧೆ (1) ಹಕ್ಕಿಗಳು (21) ಹರಿಹರ (1) ಹಳ್ಳಿ (3) ಹಿಮ (1) ಹೂಗಳು (5) ಹೂವು (1) ಹೊಸ ವರ್ಷ (1) ಹೋಂ ಸ್ಟೇ (1) ಹೌರಾ (1)