Wednesday, November 11, 2009

ಹುಡುಕಾಟ

ಹುಡುಕುತಿರುವೆ ಏನೋ
ಎಂದೋ ಹೊಂದಿದವನಂತೆ
ನಿನ್ನೆ ಹೊಂದಿ, ಇಂದು
ಕಳೆದವನಂತೆ

ಬಯಸುತಿರುವೆ ಏನೋ
ಎಂದೋ ಬಳಸಿದವನಂತೆ
ನಿನ್ನೆ ಬಳಸಿ, ಇಂದು
ತೊರೆದವನಂತೆ

ಕಾಯುತಿರುವೆ ಏಕೋ
ಎಂದೋ ಜೊತೆಯಿದ್ದಂತೆ
ನಿನ್ನೆ ಇದ್ದು, ಇಂದು
ಅಗಲಿದವನಂತೆ

ಹಲುಬುತಿರುವೆ ಅದೇಕೋ
ಎಂದೋ ಬಾಳಿದವನಂತೆ
ನಿನ್ನೆ ಬಾಳಿ, ಇಂದೇ
ಸಾಯುವವನಂತೆ!

5 comments:

SavithaSR said...

ಕವನ ಚೆಂದಿದೆ ಪಾಲ...ಓದುತ್ತಾ ಹಾಗೇ ರೈನರ್ ಮಾರಿಯಾರ ಈ ಸಾಲುಗಳು ನೆನಪಾದವು..."ಗೆಳೆಯಾ ನಿನ್ನ ಏಕಾಂತವನ್ನು ಪ್ರೀತಿಸು..ಏಕಾಂತವು ನಿನಗೆ ನೀಡುವ ನೋವನ್ನು ಹಾಡನ್ನಾಗಿ ಮಾಡು..."
-ಸವಿತ

ಕ್ಷಣ... ಚಿಂತನೆ... bhchandru said...

paala avare, kavana sogasaagide. raaga samyojisi haaduvantide.
chandru

ಸಾಗರದಾಚೆಯ ಇಂಚರ said...

ಪಾಲ ಅವರೇ,
ಹುಡುಕಿ, ಖಂಡಿತ ಸಿಗುತ್ತೆ
ಸುಂದರ ಕವನ

K.N.Aithal said...

thumba chennagide pala.... especially koneya charana....so meaninfull......thanks for the nice song.

ಗೌತಮ್ ಹೆಗಡೆ said...

ಪದ್ಯದ ಶೈಲಿ ಹಾಗು ಪದ ಪ್ರಯೋಗ ಮಸ್ತ್;)

Post a Comment