Aperture, Shutter Speed, ISOಗಳನ್ನು ಉಪಯೋಗಿಸಿಕೊಂಡು ಛಾಯಾಗ್ರಹಣದಲ್ಲಿ ಬೆಳಕನ್ನು ನಿಯಂತ್ರಿಸಬಹುದು. ಚಿತ್ರಕ್ಕೆ ಎಷ್ಟು ಬೆಳಕು ಬೇಕು ಎಂಬುದನ್ನು ಕ್ಯಾಮರಾದ ಮೀಟರಿಂಗ್ ಸೂಚಿಸುತ್ತದೆ. ಸಾಮಾನ್ಯವಾಗಿ ಕ್ಯಾಮರಾದಲ್ಲಿ ೦.೩, ೦.೪ ಮಧ್ಯಂತರದಲ್ಲಿ -೨.೦ ರಿಂದ ೨.೦ ವರೆಗೆ ಮೀಟರಿಂಗ್ ಗುರುತು ಇರುತ್ತದೆ. ಅಂದರೆ -೨.೦, -೧.೭, -೧.೩,-೧.೦, -೦.೭, -೦.೩, ೦, ೦.೩, ೦.೭, ೧.೦, ೧.೩, ೧.೭, ೨.೦ ಎಂದು ಗುರುತಿರುವ ಸ್ಕೇಲಿನಂತೆ ಇರುತ್ತದೆ. ಇಲ್ಲಿ ಮೀಟರಿಂಗ್ ಬೆಲೆ ಋಣಾತ್ಮಕ ಸಂಖ್ಯೆ ತೋರಿಸುತ್ತಿದ್ದರೆ ನಿಮ್ಮ ಚಿತ್ರ ಅಂಡರ್ ಎಕ್ಸ್-ಫೋಸಾಗಿದೆಯೆಂದೂ, ಧನಾತ್ಮಕ ಬೆಲೆ ಸೂಚಿಸುತ್ತಿದ್ದರೆ ಓವರ್-ಎಕ್ಸ್-ಪೋಸಾಗಿದೆಯೆಂದೂ, ೦ ಸೂಚಿಸುತ್ತಿದ್ದರೆ ಸರಿಯಾಗಿ ಎಕ್ಸ್-ಪೋಸಾಗಿದೆಯೆಂದು ಸೂಚಿಸುತ್ತದೆ.
ಲ್ಯಾಂಡ್-ಸ್ಕೇಪುಗಳಂತೆ ಇಡೀ ಚಿತ್ರವೇ ನಿಮ್ಮ ವಿಷಯವಾಗಿರಬಹುದು ಅಥವಾ ಪೋರ್ಟ್ರೈಟ್, ಮಾಕ್ರೋಗಳಂತೆ ಚಿತ್ರದ ಕೆಲವು ಭಾಗ ಮಾತ್ರ ನಿಮ್ಮ ವಿಷಯವಾಗಿರಬಹುದು. ಅಂದರೆ ಕೆಲವೊಮ್ಮೆ ಇಡೀ ಚಿತ್ರ ಸರಿಯಾಗಿ ಎಕ್ಸ್-ಪೋಸ್ ಆಗಿದೆಯೇ ನೋಡಿಕೊಳ್ಳಬೇಕು, ಇನ್ನು ಕೆಲವೊಮ್ಮೆ ಚಿತ್ರದ ಕೆಲವು ಭಾಗ ಮಾತ್ರ ಸರಿಯಾಗಿ ಎಕ್ಸ್-ಪೋಸ್ ಆಗಿದೆಯೇ ನೋಡಿಕೊಳ್ಳಬೇಕು. ಈ ಅನುಕೂಲಕ್ಕಾಗಿ ಸಾಮಾನ್ಯ ಕ್ಯಾಮರಾದಲ್ಲಿ ಮಾಟ್ರಿಕ್ಸ್, ಸೆಂಟರ್ ವೈಟೆಡ್, ಕ್ರಾಸ್ ಹೈರ್ ಮೊದಲಾದ ಮೀಟರಿಂಗ್ ಮೋಡುಗಳಿರುತ್ತವೆ. ಈಗ ಈ ಮೀಟರಿಂಗ್ ಮೋಡಿನ ವಿಧ ಮತ್ತು ಉಪಯೋಗವನ್ನು ತಿಳಿದುಕೊಳ್ಳೋಣ.
ಮ್ಯಾಟ್ರಿಕ್ಸ್ ಮೀಟರಿಂಗ್ ಮೋಡ್:
ಮ್ಯಾಟ್ರಿಕ್ಸ್ ಮೀಟರಿಂಗ್ ಮೋಡು ಚಿತ್ರದ ಚೌಕಟ್ಟಿನೊಳಗಿರುವ ಬೇರೆ ಬೇರೆ ಭಾಗಗಳಲ್ಲಿನ ಬೆಳಕಿನ ತೀವ್ರತೆಯನ್ನು ಅಳೆದು, ಈ ಅಳತೆಯನ್ನು ಸರಾಸರಿಯಂತೆ ಒಂದುಗೂಡಿಸಿ ಚಿತ್ರಕ್ಕೆ ಬೇಕಾದ ಒಟ್ಟು ಬೆಳಕಿನ ಪ್ರಮಾಣವನ್ನು ಸೂಚಿಸುತ್ತದೆ.
ಈ ಮೇಲಿನ ಲ್ಯಾಂಡ್-ಸ್ಕೇಪಿನಲ್ಲಿ ಮುನ್ನೆಲೆಯ ಗುಡ್ಡ ಮರ, ನಡುನೆಲೆಯ ಗುಡ್ಡ, ಹಿನ್ನೆಲೆಯ ಚಂದ್ರನನ್ನೊಳಗೊಂಡ ಆಗಸ ಒಟ್ಟಿನಲ್ಲಿ ನಿಸರ್ಗವು ನನ್ನ ವಿಷಯವಾದ್ದರಿಂದ ಎಲ್ಲವನ್ನೂ ಸರಿಯಾಗಿ ಎಕ್ಸ್-ಪೋಸ್ ಮಾಡಲು ಮ್ಯಾಟ್ರಿಕ್ಸ್ ಮೀಟರಿಂಗ್ ಬಳಸಿದ್ದೇನೆ. ಹೆಚ್ಚಿನ ಕ್ಯಾಮರಾದಲ್ಲಿ ಇದು ಸಾಮಾನ್ಯವಾಗಿ ಆಯ್ಕೆಯಾಗಿರುವ ಮೀಟರಿಂಗ್ ಮೋಡ್.
ಸೆಂಟರ್ ವೈಟೆಡ್ ಮೀಟರಿಂಗ್ ಮೋಡ್:
ಸೆಂಟರ್ ವೈಟೆಡ್ ಮೀಟರಿಂಗ್ ಮೋಡು ಮ್ಯಾಟ್ರಿಕ್ಸ್ ಮೀಟರಿಂಗಿನಂತೆಯೇ ಚಿತ್ರದ ಚೌಕಟ್ಟಿನೊಳಗಿನ ಹಲವು ಭಾಗಗಳಲ್ಲಿನ ಬೆಳಕಿನ ತೀವ್ರತೆಯನ್ನು ಅಳೆಯುವುದಾದರೂ ಮಧ್ಯಭಾಗಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದೆ.
ಈ ಮೇಲಿನ ಚಿತ್ರವನ್ನು ಹೋಟೆಲಿನ ಒಳಗಡೆಯಿಂದ ತೆಗೆದದ್ದು. ಮಧ್ಯಾಹ್ನದ ಸಮಯವಾದ್ದರಿಂದ ಹೊರಗಡೆ ಪ್ರಖರ ಬೆಳಕು ಮತ್ತು ಹೋಟೆಲಿನ ಒಳಗಡೆ ಕಡಿಮೆ ಬೆಳಕಿತ್ತು. ಅಂದರೆ ಒಳಗಡೆಯ ಮತ್ತು ಹೊರಗಡೆಯ ಬೆಳಕಿನ ವ್ಯತ್ಯಾಸ ಜಾಸ್ತಿ ಇತ್ತು. ಇಲ್ಲಿ ನನ್ನ ವಿಷಯ ಜನರಾಗಿದ್ದು, ಮ್ಯಾಟ್ರಿಕ್ಸ್ ಮೀಟರಿಂಗ್ ಉಪಯೋಗಿಸಿದಲ್ಲಿ ಅಂಡರ್-ಎಕ್ಸ್-ಪೋಸಾಗುವ ಸಾಧ್ಯತೆ ಇತ್ತು. ಆದ್ದರಿಂದ ಮೀಟರಿಂಗ್ ಮೋಡನ್ನು ಸೆಂಟರ್ ವೈಟೆಡ್ಗೆ ಬದಲಿಸಿ, ನನ್ನ ವಿಷಯದ ಮೇಲೆ ಬೀಳುತ್ತಿರುವ ಬೆಳಕನ್ನು ಅಳೆದು, ಮರು ಸಂಯೋಜಿಸಿ ತೆಗೆದೆ. ಇಲ್ಲಿ ವಿಷಯ ಸರಿಯಾಗಿ ಎಕ್ಸ್-ಪೋಸಾಗಿದ್ದು, ಹಿನ್ನೆಲೆ ಓವರ್-ಎಕ್ಸ್-ಪೋಸಾಗಿದ್ದು ಗಮನಿಸಬಹುದು.
ಕ್ರಾಸ್ ಹೇರ್ (ಸ್ಪಾಟ್) ಮೀಟರಿಂಗ್ ಮೋಡ್:
ಮೇಲಿನೆರಡು ಮೀಟರಿಂಗ್ ಮೋಡುಗಳಿಗೆ ಭಿನ್ನವಾಗಿ ಕ್ರಾಸ್ ಹೇರ್ ಮೀಟರಿಂಗ್ ಮೋಡಿನಲ್ಲಿ ಚಿತ್ರದ ಚೌಕಟ್ಟಿನ ಒಂದು ಭಾಗದ (ಸಾಮಾನ್ಯವಗಿ ಮಧ್ಯ ಭಾಗದ) ಬೆಳಕಿನ ಪ್ರಮಾಣವನ್ನು ಮಾತ್ರ ಪರಿಗಣಿಸುತ್ತದೆ. ಬೆಳಕಿನ ವ್ಯತ್ಯಾಸ ತುಂಬಾ ವ್ಯತಿರಿಕ್ತವಾಗಿದ್ದ ಪಕ್ಷದಲ್ಲಿ ಇದನ್ನು ಉಪಯೋಗಿಸಬಹುದು.
ಈ ಮೇಲಿನ ಚಿತ್ರದಲ್ಲಿ ಬೆಳಕು ವಿಶಿಷ್ಟವಾಗಿದ್ದು ನನ್ನ ವಿಷಯದ ಮೇಲೆ ಅದರ ಪ್ರಮಾಣ ಅನಿರ್ಧಿಷ್ಟವಾಗಿ ಹರಡಿದೆ. ಮ್ಯಾಟ್ರಿಕ್ಸ್ ಮೀಟರಿಂಗ್ ಉಪಯೋಗಿಸಿದ್ದಲ್ಲಿ ಮುಖದ ಕೆಲವು ಭಾಗ ಓವರ್-ಎಕ್ಸ್-ಪೋಸಾಗಿ ಉಳಿದ ಭಾಗ ಸರಿಯಾಗಿ ಎಕ್ಸ್-ಪೋಸಾಗುತ್ತಿತ್ತು. ಅದೂ ಅಲ್ಲದೇ ಹಿನ್ನೆಲೆ ಸಂಪೂರ್ಣ ಕತ್ತಲಾಗಿದ್ದುದರಿಂದ ಬೆಳಕಿನ ಪ್ರಮಾಣವನ್ನು ತಪ್ಪಾಗಿ ಅಳೆಯುವ ಸಾಧ್ಯತೆ ಇತ್ತು. ಆದ್ದರಿಂದ ಕ್ರಾಸ್ ಹೇರ್ ಮೀಟರಿಂಗ್ ಮೋಡ್ ಬಳಸಿ ನನಗೆ ಬೇಕಾದ ಮುಖದ ಭಾಗದ ಬೆಳಕನ್ನು ಅಳೆದು ಮರು ಸಂಯೋಜಿಸಿ ತೆಗೆದೆ. ಬೆಳಕನ್ನು ಅಳೆಯುವಲ್ಲಿ ಹಿನ್ನೆಲೆಯನ್ನು ಕಡೆಗಣಿಸಿದ್ದು, ಹಿನ್ನೆಲೆ ಸಂಪೂರ್ಣ ಕತ್ತಲಿರುವುದನ್ನು ಗಮನಿಸಬಹುದು.
ಇದೇ ರೀತಿ ಈ ಮೇಲಿನ ಚಂದ್ರನ ಚಿತ್ರ ಕೂಡ ಕ್ರಾಸ್ ಹೇರ್ ಮೀಟರಿಂಗ್ ಉಪಯೋಗಿಸಿ ತೆಗೆದದ್ದು. ಇಲ್ಲಿಯೂ ಚಂದ್ರನ ಸುತ್ತಲಿನ ಆಗಸಕ್ಕೂ ಚಂದ್ರನಿಗೂ ಇರುವ ಬೆಳಕಿನ ವ್ಯತ್ಯಾಸ ಅಧಿಕ.
ಲ್ಯಾಂಡ್-ಸ್ಕೇಪು, ಪೋರ್ಟ್ರೈಟ್ ಉದಾಹರಣೆಗೆ ಕೊಟ್ಟಿದ್ದಷ್ಟೆ. ಇದರರ್ಥ ಲ್ಯಾಂಡ್-ಸ್ಕೇಪುಗಳಿಗೆ ಕೇವಲ ಮ್ಯಾಟ್ರಿಕ್ಸ್ ಮೀಟರಿಂಗ್ ಮೋಡ್ ಮತ್ತು ಪೋರ್ಟ್ರೈಟ್ಗಳಿಗೆ ಕೇವಲ ಸೆಂಟರ್ ವೈಟೆಡ್/ ಕ್ರಾಸ್ ಹೇರ್ ಮೀಟರಿಂಗ್ ಮೋಡ್ ಉಪಯೋಗಿಸಬೇಕೆಂದಲ್ಲ.ಬೆಳಕಿನ ವ್ಯತ್ಯಾಸಕ್ಕೆ, ವಿಷಯಕ್ಕೆ ಅನುಗುಣವಾಗಿ ಈ ಮೇಲಿನ ವಿವಿಧ ಮೀಟರಿಂಗ್ ಮೋಡುಗಳನ್ನು ಬಳಸಿಕೊಳ್ಳಬಹುದು. ಹೆಚ್ಚಿನ ಛಾಯಾಗ್ರಾಹಕರು ಪೋರ್ಟ್ರೈಟ್ಗಳಿಗೆ ಸೆಂಟರ್ ವೈಟೆಡ್ ಅಥವಾ ಕ್ರಾಸ್ ಹೇರ್ ಮೀಟರಿಂಗ್ ಮೋಡ್ ಬಳಸುವರು.
ಚಿತ್ರ ಕೃಪೆ: ಪಾಲ
ಅನುಭವಿಸದೇ ಹಾಡಿದ ಹಾಡು ಹಾಡಲ್ಲ, ಅನುಭವಿಸದೇ ಬಿಡಿಸಿದ ಚಿತ್ರ ಚಿತ್ರವಲ್ಲ, ಅನುಭವಿಸದೇ ಬರೆದ ಬರಹ ಬರಹವಲ್ಲ!
Saturday, May 16, 2009
Subscribe to:
Post Comments (Atom)
ವರ್ಗ
Amomum
(1)
ficus krishnae
(1)
Gangtok
(1)
Nikon 40mm f/2.8 Micro
(10)
paris
(1)
Sikkim
(8)
snow
(1)
Yuksom
(5)
ಅನಿಮೇಟೆಡ್
(1)
ಅನುಭವ ಕಥನ
(7)
ಅಮೂರ್ತ
(1)
ಆಟೋಟ
(2)
ಆಫಿಡ್
(1)
ಇರುವೆ
(6)
ಉಡುಪಿ
(4)
ಉಯ್ಯಾಲೆ
(1)
ಉರಗ
(3)
ಏರಿ
(1)
ಒಂಟಿ ಚಕ್ರದ ಸೈಕಲ್
(1)
ಒಯ್ಯುಗೆ
(6)
ಕದ
(1)
ಕಂದು ಏಲಕ್ಕಿ
(1)
ಕನ್ನಡ
(2)
ಕಪ್ಪು ಏಲಕ್ಕಿ
(1)
ಕಪ್ಪು-ಬಿಳುಪು
(5)
ಕಂಬಳ
(1)
ಕಂಬಳಿಹುಳು
(2)
ಕವನ
(15)
ಕವಿ ಶೈಲ
(1)
ಕಸರತ್ತು
(1)
ಕಳಸ
(1)
ಕಳ್ಳತನ
(1)
ಕಾವೇರಿ
(1)
ಕಾಳಾವಾರ ಬೆಟ್ಟ
(1)
ಕಾಳಿಂಗ ಸರ್ಪ
(1)
ಕಿಸ್ಕಾರ
(1)
ಕೀಟ ಪ್ರಪಂಚ
(35)
ಕುಂದಾಪುರ
(1)
ಕುವೆಂಪು
(1)
ಕೃಷಿ
(9)
ಕೃಷಿ ಮೇಳ
(4)
ಕೆರೆ
(2)
ಕೆಲಸ
(2)
ಕೆಸು
(2)
ಕೆಳದಿ
(1)
ಕೊಕ್ಕರೆ ಬೆಳ್ಳೂರು
(1)
ಕೋಟ
(8)
ಖಗೋಳ ಗಡಿಯಾರ
(1)
ಗವಿ
(1)
ಗುಡಿ ಕೈಗಾರಿಕೆ
(1)
ಗುಡ್ಡ
(2)
ಗುಹೆ
(1)
ಚಾರಣ
(3)
ಚಿಕ್ಕಮಗಳೂರು
(1)
ಚಿಟ್ಟಾಣಿ
(1)
ಚಿಟ್ಟೆಗಳು
(3)
ಚಿತ್ರ ಪುಟ
(102)
ಚಿತ್ರದುರ್ಗ
(1)
ಚಿತ್ರಪುಟ
(1)
ಚೌಕಾಶಿ
(1)
ಛಾಯಾಗ್ರಹಣ
(24)
ಜನ ಜೀವನ
(52)
ಜನಪದ
(2)
ಜರ್ಮನಿ
(1)
ಜಲಪಾತ
(1)
ಜೆಕ್ ಗಣರಾಜ್ಯ
(4)
ಜೇಡ
(3)
ಜೇನು ಸಾಕಣೆ
(1)
ಜೋಡಿ
(1)
ತರಕಾರಿ
(2)
ತುಮಕೂರು
(2)
ತೆಂಗಿನ ಕಾಯಿ
(1)
ತೆಂಗಿನ ತೋಟ
(1)
ದಸರ
(4)
ದೇವವೃಂದ
(1)
ದೇವಸ್ಠಾನ
(1)
ದೇವಸ್ಥಾನ
(1)
ದೊಡ್ಡ ಏಲಕ್ಕಿ
(1)
ಧಾರವಾಡ
(1)
ನಗರ
(1)
ನಂಬಿಕೆ
(1)
ನಾಟಕ
(1)
ನೀರ್ಹಕ್ಕಿ
(6)
ಪತಂಗ
(1)
ಪತ್ರಿಕೋದ್ಯಮ
(1)
ಪಶ್ಚಿಮ ಘಟ್ಟ
(2)
ಪಾರ್ಕ್
(1)
ಪಾಳು
(1)
ಪುಸ್ತಕ ಬಿಡುಗಡೆ
(1)
ಪೋರ್ಟ್ರೈಟ್
(8)
ಪ್ಯಾನಿಂಗ್
(1)
ಪ್ರಬಂಧ
(2)
ಪ್ರವಾಸ ಕಥನ
(3)
ಪ್ರಾಹ
(1)
ಪ್ಲಾಸ್ಟಿಕ್
(1)
ಬಕೇಟ್
(1)
ಬಂಡಿ
(1)
ಬಣ್ಣ
(1)
ಬನವಾಸಿ
(1)
ಬಳ್ಳಿ
(1)
ಬಾಗಿಲು
(1)
ಬಾರ್ಕೂರು
(1)
ಬೀಗ
(1)
ಬೆಂಕಿ
(1)
ಬೆಂಗಳೂರಿನ ಚಿತ್ರಗಳು
(5)
ಬೆಂಗಳೂರು
(27)
ಬೆಳಕು
(1)
ಬೇಸಾಯ
(1)
ಬ್ರಹ್ಮಾವರ
(1)
ಭಾರತ ಬಂದ್
(1)
ಭಿಕ್ಷುಕರು
(1)
ಮಕ್ಕಳು
(10)
ಮಗು
(1)
ಮಂಜು
(2)
ಮಮ್ಮಮ್
(3)
ಮಲೆನಾಡು
(1)
ಮಳೆ
(1)
ಮಳೆಗಾಲ
(2)
ಮಾರಿಕಣಿವೆ
(1)
ಮುಸ್ಸಂಜೆ
(1)
ಮೇಲುಕೋಟೆ
(2)
ಮೇವು
(1)
ಮೈಸೂರು
(7)
ಮೋಡ
(2)
ಮ್ಯಾಕ್ರೋ
(12)
ಯಕ್ಷಗಾನ
(2)
ರಸ್ತೆ
(5)
ರಾತ್ರಿ ನೋಟ
(3)
ರೈಮ್
(1)
ರೈಲು
(2)
ರೈಲುಹಳಿ
(1)
ಲಲಿತ ಪ್ರಬಂಧ
(6)
ಲೇಪಾಕ್ಷಿ
(1)
ವಂಡಾರ್
(1)
ವಾಸ್ತು ಶಿಲ್ಪ
(1)
ವಾಹನ
(2)
ವಿವೇಕ
(1)
ವಿಸ್ತರಣೆ
(1)
ವ್ಯಕ್ತಿ ವಿಷಯ
(3)
ವ್ಯಾಪಾರ
(1)
ಶಾಲೆ
(1)
ಶಿರಸಿ
(1)
ಶಿರಸಿ. ಸೈಕಲ್
(1)
ಶಿಲ್ಪ
(1)
ಶಿವನಸಮುದ್ರ
(1)
ಶುಭಾಶಯ
(2)
ಸಣ್ಣ ಕಥೆ
(4)
ಸಂತೆ
(2)
ಸಮುದ್ರ
(2)
ಸಮುದ್ರ ಜೀವಿ
(2)
ಸಸ್ಯ ಪ್ರಪಂಚ
(12)
ಸಾಕು ಪ್ರಾಣಿ
(4)
ಸಾಗಾಟ
(1)
ಸಾಸ್ತಾನ
(1)
ಸಿಕ್ಕಿಂ
(3)
ಸೈಕಲ್
(5)
ಸೈಕಲ್ ಯಾತ್ರೆ
(1)
ಸ್ಕಂದಗಿರಿ
(1)
ಸ್ತೂಪ
(1)
ಸ್ಪರ್ಧೆ
(1)
ಹಕ್ಕಿಗಳು
(21)
ಹರಿಹರ
(1)
ಹಳ್ಳಿ
(3)
ಹಿಮ
(1)
ಹೂಗಳು
(5)
ಹೂವು
(1)
ಹೊಸ ವರ್ಷ
(1)
ಹೋಂ ಸ್ಟೇ
(1)
ಹೌರಾ
(1)
ಪಾಲಚಂದ್ರ.....
ReplyDeleteಒಳ್ಳೆಯ ವಿಷಯವನ್ನು ...
ತಿಳಿಯುವ ಹಾಗೆ ವಿವರಿಸಿಕೊಟ್ಟಿರುವಿರಿ...
ನನ್ನ ಕೆಲವು ಸಂಶಯಗಳನ್ನು ನಿವಾರಿಸಿದ್ದೀರಿ....
ಛಾಯಾಗ್ರಹಣದ ಇನ್ನಷ್ಟು ವಿಷಯಗಳು ಬರೆಯಿರಿ...
ನಿಮ್ಮ ಹಳೆಯ ಲೇಖನಗಳೂ ಉಪಯುಕ್ತವಾಗಿವೆ....
ತುಂಬಾ ತುಂಬಾ ಧನ್ಯವಾದಗಳು....
ಪಾಲಚಂದ್ರ,
ReplyDeleteಕ್ಯಾಮೆರಾ ಮೀಟರಿಂಗ್ ಬಗ್ಗೆ ಅರಿಯಲು ನೀವು ಚಿತ್ರಗಳ ಉದಾಹರಣೆ ಸಮೇತ ವಿವರಿಸಿರುವುದು ತುಂಬಾ ಚೆನ್ನಾಗಿದೆ. ಮ್ಯಾಟ್ರಿಕ್ಸ್ ಮೀಟರಿಂಗ್ ಉದಾಹರಣೆಗೆ ನೀವು ಆರಿಸಿಕೊಂಡ ಚಿತ್ರದಲ್ಲಿ ಆಕಾಶ ಭಾಗ ಹೆಚ್ಚಾಗಿದೆ. ಅದರಿಂದ ಅದು ಫೋಕಸ್ ಆದರೂ ಆಗದಿದ್ದರೂ ತಿಳಿಯುವುದಿಲ್ಲ. ಅದರ ಬದಲಾಗಿ ಆಕಾಶವಿಲ್ಲದ ಲ್ಯಾಂಡ್‌ಸ್ಕೇಪ್ ಚಿತ್ರವಿದ್ದಿದ್ದರೆ ಅದರ ಹಿನ್ನೆಲೆಯಿಂದ ಮುನ್ನಲೆವರೆಗೆ ಮತ್ತು ಎಡದಿಂದ ಬಲಭಾಗದವರೆಗೆ ಮ್ಯಾಟ್ರಿಕ್ಸ್ ಮೀಟರಿಂಗ್ ನ ಸಂಪೂರ್ಣ ಉಪಯೋಗದ ಚಿತ್ರಣ ಕಂಡು ಬರುತ್ತಿತ್ತೆಂದು ನನ್ನ ಅನಿಸಿಕೆ.
ಹಾಗೇ ಸೆಂಟರ್ ವೈಟೆಡ್ ಮೀಟರಿಂಗ್ ಮೋಡ್ ಗಾಗಿ ಈಗ ಉದಾಹರಿಸಿರುವ ಚಿತ್ರ ಚೆನ್ನಾಗಿದರೂ ಹೊರಗಿನ ಬೆಳಕು ಹೀಗಿರುವುದಕ್ಕಿಂತ ಸ್ವಲ್ಪ ಕಡಿಮೆ ಇರುವಂತ ಮತ್ತು ಅದಕ್ಕಿಂತ ಸ್ವಲ್ಪ ಕಡಿಮೆ ಬೆಳಕು ಮುಖ್ಯವಸ್ತುವಿನ ಮೇಲೆ ಬಿದ್ದಿರುವಂತ ಚಿತ್ರ ಆಯ್ಕೆ ಮಾಡಿಕೊಂಡಿದ್ದರೇ ಸೊಗಸಿತ್ತು. ಅಂದರೆ ನಾನು ಹೇಳುವುದೇನೆಂದರೆ ಮದ್ಯಾಹ್ನದ ಸಮಯ ಬಿಟ್ಟು ಬೆಳಿಗ್ಗೆ ಅಥವ ಸಂಜೆ ಸಮಯ ಇದೇ ಚಿತ್ರವನ್ನು ತೆಗೆದಿದ್ದಲ್ಲಿ ಅದರ ಬೆಳಕಿನ ವಿನ್ಯಾಸ ಮುಖ್ಯವಸ್ತು[ಹುಡುಗಿಯರ ಮೇಲೆ]ಬಿದ್ದು ಸುಲಭವಾಗಿ ಅರ್ಥವಾಗುತ್ತಿತ್ತೆಂದು ನನ್ನ ಭಾವನೆ...
ಮತ್ತೆ ಕ್ರಾಸ್ ಮೀಟರಿಂಗ್ ಗೆ ಆಯ್ಕೆ ಮಾಡಿಕೊಂಡಿರುವ ಚಿತ್ರಗಳು ಚೆನ್ನಾಗಿವೆ...
ಒಟ್ಟಾರೆ ನಿಮ್ಮ ಕ್ಯಾಮೆರಾ ಪಾಠದ ಮದ್ಯೆ ನಾನು ಬಂದು ಹೇಳಿದ ವಿಚಾರಗಳು ನಿಮಗೆ ಮತ್ತು ಇತರ ಬ್ಲಾಗಿಗರಿಗೆ ಇರಿಸುಮುರಿಸುಂಟಾಗುವುದಿಲ್ಲವೆಂದು ಭಾವಿಸುತ್ತೇನೆ...ಧನ್ಯವಾದಗಳು
ಪಾಟ ಚೆನ್ನಾಗಿದೆ, ಅಂತೆಯೇ ಉದಾಹರಣೆಗಳು.
ReplyDeleteಶಿವು,
ಫೋಕಸಿಂಗಿಗೆ ಮತ್ತು ಮೀಟರಿಂಗ್ ಮೋಡಿಗೆ ಸಂಬಂಧ ಇಲ್ಲವಲ್ಲ. ನಿಮ್ಮ ಕಾಮೆಂಟು ಅರ್ಥ ಆಗಲಿಲ್ಲ, ಸ್ವಲ್ಪ ವಿವರಿಸಬಹುದೇ?
ಪಾಲ ಅವರೇ..
ReplyDeleteಉಪಯುಕ್ತ ಮಾಹಿತಿ....ಎಸ್ಟೋ ವಿಷಯಗಳು ಗೊತ್ತಿರಲಿಲ್ಲ .....ಚಿತ್ರಗಳ ಸಮೇತ ತಿಳಿಸಿ ಹೇಳಿದಕ್ಕೆ ಧನ್ಯವಾದಗಳು.....
ಗುರು
ಪ್ರಕಾಶ್,
ReplyDeleteನಿಮ್ಮ ಪ್ರೋತ್ಸಾಹಕ್ಕೆ ವಂದನೆಗಳು.
ಶಿವು,
ಲ್ಯಾಂಡ್ ಸ್ಕೇಪು ಚಿತ್ರದಲ್ಲಿ ಮುನ್ನೆಲೆಯ ಗುಡ್ಡ, ಹಿನ್ನೆಲೆಯ ಗುಡ್ಡ, ಆಕಾಶ ಇವಿಷ್ಟು ಇವೆ. ಇಲ್ಲಿ ಮುನ್ನೆಲೆಯ ಗುಡ್ಡಕ್ಕೆ ಮುಂಜಾನೆಯ ನೇರ ಬೆಳಕು ಬಿದ್ದಿದೆ. ಆದ್ದರಿಂದ ಬೇರೆ ಬೇರೆ ಗುಡ್ಡ ಪ್ರತಿಫಲಿಸುವ ಬೆಳಕಿನ ಪ್ರಮಾಣದಲ್ಲಿ ಕೊಂಚ ವ್ಯತ್ಯಾಸವಿದೆ, ಅದೂ ಅಲ್ಲದೇ ಅವೆರಡರ ಅಂತರ ಕೂಡ ಇದಕ್ಕೆ ಕಾರಣ. ಒಂದೊಂದು ವಿಷಯವೂ ತನ್ನದೇ ಆದ ಪ್ರಮಾಣದಲ್ಲಿ ಬೆಳಕನ್ನು ಪ್ರತಿಫಲಿಸುವುದು. ಇದಕ್ಕೆ ಆ ವಸ್ತುವಿನ ಮೇಲೆ ಬೀಳುವ ಬೆಳಕಿನ ಪ್ರಮಾಣ ಮತ್ತು ಅದರ ಗುಣ ಕಾರಣ. ಅಂತೆಯೇ ಆಕಾಶ, ಗುಡ್ಡದ ಪ್ರತಿಫಲಿಸುವ ಗುಣಕ್ಕಿಂತ ಭಿನ್ನವಾಗಿದೆ. ಮ್ಯಾಟ್ರಿಕ್ಸ್ ಮೀಟರಿಂಗ್ ಇಲ್ಲಿ ಎಲ್ಲಾ ವಸ್ತುವಿನ ಮೇಲ್ಮೈ ಲಕ್ಷಣವನ್ನಳೆದು, ಸರಾಸರಿ ಎಕ್ಸ್-ಪೋಷರ್ ಸೂಚಿಸುವಲ್ಲಿ ಸಫಲವಾಗಿದೆ ಎಂದು ನನ್ನ ಅನಿಸಿಕೆ.
ಎರಡನೇ ಚಿತ್ರಕ್ಕೆ ಛಾಯಾಗ್ರಹಣದ "ಗೋಲ್ಡನ್ ಅವರ್ ಶೂಟಿಂಗ್" ಪ್ರಕಾರ ನೀವು ಹೇಳಿದ ವಿಷಯ ಸರಿ. ಆದರೆ ನಾನು ಕೊಟ್ಟ ವಿವರಣೆಗೆ ಈ ಉದಾಹರಣೆ ಸೂಕ್ತ ಎಂದು ನನ್ನನಿಸಿಕೆ. ಇಲ್ಲಿ ಇದು ಒಳಗಡೆಯ ಮತ್ತು ಹೊರಗಡೆಯ ನಡುವಿನ ಬೆಳಕಿನ ತೀವ್ರತೆಯ ವ್ಯತ್ಯಾಸ ತೋರಿಸುತ್ತಿದೆ. ಅಂತೆಯೇ ಈ ಚಿತ್ರದ ನೆಗೆಟಿವ್ ಪಾಯಿಂಟು ಮೇಲ್ಗಡೆ ಔಟ್ ಆಫ್ ಫೋಕಸ್ ಆಗಿರೋ ದೀಪ, ಆದರೆ ವಿವರಣೆಗೆ ಅದರ ಸಂಬಂಧವಿಲ್ಲವಾದ್ದರಿಂದ ಅದರ ಕಡೆ ಹೆಚ್ಚು ಗಮನ ಹರಿಸಿಲ್ಲ.
ನಿಮ್ಮ ಸಲಹೆಗಳಿಗೆ ಯಾವಾಗಲೂ ಸ್ವಾಗತ, ಪ್ರತಿಕ್ರಿಯೆಗೆ ವಂದನೆಗಳು.
ಸಿಂಚನ,
ನನ್ನ ಬ್ಲಾಗಿಗೆ ಸ್ವಾಗತ, ನಿಮ್ಮ ಅನಿಸಿಕೆಗೆ ವಂದನೆಗಳು.
ಗುರು,
ನಿಮ್ಮ ಪ್ರೋತ್ಸಾಹಕ್ಕೆ ವಂದನೆಗಳು.
ಉಪಯುಕ್ತ ಮಾಹಿತಿ
ReplyDeleteಪಾಲಚಂದ್ರ,
ReplyDeleteಮೊದಲ ಚಿತ್ರದಲ್ಲಿ ನಿಮ್ಮ ಅನಿಸಿಕೆ ಸರಿಯಾಗಿದೆ. ಆದರೆ ನಾನು ಇಲ್ಲಿ ಫೋಕಸ್ ಅನ್ನುವ ವಿಚಾರವನ್ನು ಸ್ವಲ್ಪ ಗಮನಕ್ಕೆ ತೆಗೆದುಕೊಂಡಿದ್ದೇನೆ. ಅದ್ದರಿಂದ ಅದರ ಬಗ್ಗೆ ಹೇಳಿದ್ದೇನೆ...ಆಷ್ಟೆ.
ಎರಡನೇ ಚಿತ್ರದಲ್ಲೂ ಕೂಡ ನಾನು ಹೇಳಿದ್ದೇನೆಂದರೆ ಒಂದು ಚಿತ್ರ ಪ್ರದರ್ಶನಕ್ಕಾಗಲಿ, ನೋಡುವುದಕ್ಕಾಗಲಿ, ಅಥವ ಇಂಥಹ ಉದಾಹರಣೆಗಳಿಗಾಗಲಿ ತೋರಿಸುವಾಗ ಬೇರೆಯವರಿಗೆ ಸುಲಭವಾಗಿ ತಲುಪಬೇಕೆನ್ನುವುದು ನನ್ನ ಬಯಕೆ. ಅದೇ ಕಾರಣಕ್ಕೆ ಗೋಲ್ಡನ್ ಆವರ್ ಶೂಟಿಂಗ್‌ನಲ್ಲಿ ಚಿತ್ರ ಸುಲಭವಾಗಿ ತಲುಪುತ್ತದೆ ಅನ್ನುವುದು ನನ್ನ ಅನಿಸಿಕೆ..
ಧನ್ಯವಾದಗಳು
ಸಿಂಚನರವರೆ,
ಪಾಲಚಂದ್ರ ಹೇಳಿರುವುದು ಮೀಟರಿಂಗ್ ಬಗ್ಗೆ ಆದರೂ ನಾನು ಇಲ್ಲಿ ಅದರ ಜೊತೆಗೆ ಫೋಕಸಿಂಗ್ ವಿಚಾರಕ್ಕೂ ಒತ್ತು ಕೊಟ್ಟಿದ್ದೇನೆ. ಕಾರಣ ನಾವು ಯಾವುದೇ ಚಿತ್ರಗಳನ್ನು ಕ್ಲಿಕ್ಕಿಸಿದಾಗ ಅದನ್ನು ದೊಡ್ಡ ಸೈಜಿನಲ್ಲಿ ಪ್ರಿಂಟ್[12x18]ಅಥವ ಅದಕ್ಕಿಂತ ದೊಡ್ಡದಾಗಿ ಬೇಕಾದಾಗ ಮೀಟರಿಂಗ್ ಜೊತೆಗೆ ಫೋಕಸ್ ಸರಿಯಾಗಿಲ್ಲದಿದ್ದಲ್ಲಿ ಪ್ರಿಂಟ್ ಮಾಡಲು ಸಾಧ್ಯವಾಗುವುದಿಲ್ಲ. ಮೊದಲು ಚಿಕ್ಕ ಪ್ರಿಂಟ್ ನೋಡಿದಾಗ ಸುಂದರವಾಗಿ ಕಂಡರೂ ದೊಡ್ಡದು ಮಾಡುವಾಗ ಅದರ ಫೋಕಸಿಂಗ್ ಸರಿಯಾಗಿ ಇಲ್ಲದಿದ್ದಲ್ಲಿ ದೊಡ್ಡ ಪ್ರಿಂಟ್ ಮಾಡಲಾಗುವುದಿಲ್ಲ....ನಿಮ್ಮ ಸಂಶಯ ನಿವಾರಣೆಯಾಗಿರಬಹುದು ಅಂಥ ನನ್ನ ಭಾವನೆ. ಧನ್ಯವಾದಗಳು
ಶಿವು,
ReplyDeleteನಿಮ್ಮಿಂದ ಇಂತಹ ಪ್ರತಿಕ್ರಿಯೆ ನಿರೀಕ್ಷಿಸಿರಲಿಲ್ಲ! ನಿಮ್ಮ ಪ್ರತಿಕ್ರಿಯೆಯಿಂದ ಖಂಡಿತವಾಗಿಯೂ ನನ್ನ ಸಂಶಯ ನಿವಾರಣೆಯಾಗಿಲ್ಲ. ನೀವು ಫೋಕಸಿಂಗ್ ಮೋಡ್ ಮತ್ತು ಮೀಟರಿಂಗ್ ಮೋಡಿನ ಮಧ್ಯೆ ಗೊಂದಲದಿಂದ ಈ ಪ್ರತಿಕ್ರಿಯೆ ನೀಡಿರಬಹುದೆಂದು ನನ್ನ ಊಹೆ. ನೀವು ಕೊಟ್ಟ ಉತ್ತರ ಹಾರಿಕೆಯ ಉತ್ತರದಂತಿದೆ. ದೊಡ್ಡ ಗಾತ್ರದ ಪ್ರಿಂಟ್ ತೆಗೆಯುವುದು ಹೆಚ್ಚಿನ ಮೆಗಾ ಪಿಕ್ಸೆಲ್ ಅಥವಾ ರಾ ಇಮೇಜಿನಿಂದ ಸಾಧ್ಯ. ನಿಮಗೆ ಮೇಲಿನ ಲ್ಯಾಂಡ್ ಸ್ಕೇಪಿನಲ್ಲಿ ಫೋಕಸಿಂಗ್ ಸರಿಯಾಗಿ ಉಪಯೋಗಿಸಿಲ್ಲವೆಂದು ಯಾರು ಹೇಳಿದ್ದು? ಲೇಖಕರು ಪೋಕಸಿಂಗ್ ಬಗ್ಗೆ ಇಲ್ಲಿ ಪ್ರಸ್ತಾಪಿಸಿಯೇ ಇಲ್ಲ!
ಇನ್ನು ಎರಡನೇ ಚಿತ್ರದ ಬಗೆಗೆ ನೀವು ಕೊಟ್ಟ ವಿವರಣೆ ಅಳ್ಳಕವಾಗಿದೆ. "ಗೋಲ್ಡನ್ ಅವರ್"ನಲ್ಲಿ ಚಿತ್ರ ತೆಗೆದರೆ ಚೆನ್ನಾಗಿ ಚಿತ್ರ ಬರುತ್ತೆಂಬ ರೂಢಿ ಅಷ್ಟೆ. ಅದರರ್ಥ ಬೇರೆ ಸಮಯದಲ್ಲಿ ತೆಗೆದ ಚಿತ್ರ ಚೆನ್ನ ಅಲ್ಲ ಅಂತ ಅಲ್ಲ. ಛಾಯಾಗ್ರಹಣದಲ್ಲಿ ನಿಯಮವೆಂಬುದಿಲ್ಲ ಇರುವುದು ಬರೀ ಗೈಡ್-ಲೈನ್ ಅಷ್ಟೆ. ಇಷ್ಟಕ್ಕೂ ಕೊನೇಯ ಚಂದ್ರನ ಚಿತ್ರ "ಗೋಲ್ಡನ್ ಅವರ್"ನಲ್ಲಿ ತೆಗೆದಿಲ್ಲವಷ್ಟೆ.
ನಿಮ್ಮ ಕಾಮೆಂಟು ಒಬ್ಬ ಫೋಟೋಗ್ರಾಫರಿನ ಕಾಮೆಂಟು ಅಲ್ಲವೆಂದು ಹೇಳಲು ವಿಷಾದಿಸುತ್ತೇನೆ. ನಿಮ್ಮಷ್ಟು ಫೋಟೋ ತೆಗೆದು ರೂಢಿಯಿಲ್ಲದಿದ್ದರೂ ನನ್ನ ಓದಿನ ತಿಳಿವು ನಿಮ್ಮ ಕಾಮೆಂಟಿಗೆ ವ್ಯತಿರಿಕ್ತವಾಗಿದೆ. ಸಾಧ್ಯವಾದರೆ ಅರಿವು ಮೂಡಿಸುವ ಕಾಮೆಂಟ್ ಹಾಕಿರಿ, ಇಲ್ಲವಾದರೆ ಕಾಮೆಂಟ್ ಮಾಡದಿದ್ದಲ್ಲಿ ಉತ್ತಮ!
ಸಿಂಚನರವರೆ,
ReplyDeleteನಾನು ಹೇಳಿದ ವಿಚಾರದಲ್ಲಿ ಖಂಡಿತ ಗೊಂದಲವಿಲ್ಲ. ಮೀಟರಿಂಗ್ ಜೊತೆಗೆ ಫೋಕಸಿಂಗ್ ಕಡೆಗೂ ಗಮನ ಕೊಡಿ ಅಂತ ಹೇಳಿದ್ದೆನಷ್ಟೆ. ಮೀಟರಿಂಗ್ ಬಗ್ಗೆ ಪಾಲಚಂದ್ರ ಹೇಳಿರುವುದು ಸರಿ. ನಾನು ಇಲ್ಲಿ ಆಕಾಶದ ವಿಚಾರವನ್ನು ಏಕೆ ಹೇಳಿದೆನೆಂದರೆ ಅದರ ಫೋಕಸ್ ಗೊತ್ತಾಗುವುದಿಲ್ಲ. ಆದರೂ ನಿಮ್ಮ ಪ್ರಕಾರ ಆಕಾಶವಿರುವ ಆ ಫೋಟೊ ಚೆನ್ನಾಗಿ ಕಾಣುತ್ತದೆ. ನನ್ನ ಪ್ರಕಾರ ಆಕಾಶವಿಲ್ಲದಿದ್ದಲ್ಲಿ ಆ ಭಾಗವೂ ಫೋಕಸ್ ಆಗಿ ಇನ್ನಷ್ಟು ಚೆಂದ ಕಾಣುತ್ತದೆ. ಒಟ್ಟಾರೆ ಇದಕ್ಕಿಂತ ಉತ್ತಮ ಫೋಟೋ ಬಳಸಬಹುದೆಂದು ಅಥವ ಆ ನಿಟ್ಟಿನಲ್ಲಿ ಪ್ರಯತ್ನಿಸಬಹುದೆಂದು ಹೇಳುವ ಪ್ರಯತ್ನವಷ್ಟೆ. ಇಲ್ಲಿ ಎಲ್ಲರೂ ಕಲಿಯುತ್ತಿರುವುದರಿಂದ ಸುಮ್ಮನೆ ಹೊಗಳುವುದಕ್ಕಿಂತ ಮತ್ತಷ್ಟು ಉತ್ತಮ ಗುಣಮಟ್ಟಕ್ಕೆ ತೊಡಗಿಸಿಕೊಳ್ಳಲಿ ಅಂತ ಹೇಳುವ ಉದ್ದೇಶವಿದೆ.
ಇನ್ನೂ ನೀವೇ ಹೇಳಿದಂತೆ ರಾ ಅಥವ ಹೈ ರೆಸಲ್ಯೂಷನ್‌ನಲ್ಲಿ ಕ್ಲಿಕ್ಕಿಸಿದ ಚಿತ್ರಗಳೆಲ್ಲಾ ಫೋಕಸ್ ಆಗಿರದಿದ್ದಲ್ಲಿ ದೊಡ್ಡದಾಗಿ ಪ್ರಿಂಟ್ ಮಾಡಲು ಸಾಧ್ಯವಿದೆ. ಆದರೆ ಉಪಯೋಗವಿಲ್ಲ.[ಫೋಕಸ್ ಆಗಿಲ್ಲದಿದ್ದರೂ ನೀವು ಪ್ರಿಂಟ್ ಮಾಡಿಸಬಹುದು ಅಂತ ನಿಮಗನ್ನಿಸಿದರೆ ನನ್ನದೇನು ಅಭ್ಯಂತರವಿಲ್ಲ.] ಇಲ್ಲಿ ಪಾಲಚಂದ್ರ ಫೋಕಸಿಂಗ್ ಬಗ್ಗೆ ಹೇಳಿರದಿದ್ದರೂ ಮೀಟರಿಂಗ್ ಜೊತೆಗೆ ಅದರ ಕಡೆಗೂ ಗಮನಕೊಡಿ ಅಂತ ಹೇಳುವ ಉದ್ದೇಶವಷ್ಟೆ.
ಇನ್ನೂ ಎರಡನೇ ಉದಾಹರಣೆಯಲ್ಲಿ ಇದಕ್ಕಿಂತ ಉತ್ತಮ ಚಿತ್ರ ಬಳಸಬಹುದಿತ್ತು ಅಥವ ಆ ರೀತಿಯಲ್ಲಿ ಕ್ಲಿಕ್ಕಿಸಲು ಪ್ರಯತ್ನಿಸಬಹುದು ಅಂತ ಹೇಳಿದ್ದೇನಷ್ಟೆ. ಮತ್ತೆ ನಾನೇನು ಗೋಲ್ಡನ್ ಅವರ್ ಅಂತ ಪ್ರಸ್ತಾಪಿಸಿಲ್ಲ. ಅದನ್ನು ಲೇಖಕರು ಹೇಳಿರುವುದರಿಂದ ನೀವು ಅವರನ್ನು ಕೇಳುವುದು ಒಳಿತು. ನನಗೆ ನೆರಳು ಬೆಳಕು ಹಿತಮಿತವಾಗಿದ್ದಲ್ಲಿ ಎಲ್ಲಾ ಸಮಯವೂ ಗೋಲ್ಡನ್ ಆವರ್ ಅಂತಲೇ ಭಾವನೆ. ಇಲ್ಲಿ ಹೊರಬೆಳಕು ಹೆಚ್ಚಾಗಿ ಬ್ಲೀಜ್ ಆಗಿದೆ.ಬ್ಲೀಚ್ ಆಗಿರದ ಸಮಯದಲ್ಲಿ ಇದೇ ಚಿತ್ರವನ್ನು ತೆಗೆದು ಇದೇ ವಿಚಾರವನ್ನು ಹೇಳೀದರೆ ಚಿತ್ರವೂ ಎಲ್ಲರಿಗೂ ಇಷ್ಟವಾಗುತ್ತದೆ ಅಂತ ಹೇಳುವ ಉದ್ದೇಶವಷ್ಟೆ. ಆ ನಿಟ್ಟಿನಲ್ಲಿ ಮತ್ತಷ್ಟು ಚೆಂದ ಫೋಟೋ ತೆಗೆಯಲಿ ಅಂತ ಹೇಳುವ ಪ್ರಯತ್ನ....
ನಾನು ಈ ವಿಚಾರವನ್ನು ಬರೆದು ಅರ್ಥ ಮಾಡಿಸಲು ಸಾಧ್ಯವಾಗದ್ದರಿಂದ ಪಾಲಚಂದ್ರ ಜೊತೆ ಫೋನಿನಲ್ಲಿ ಮಾತಾಡಿದೆ. ನಾನು ಹೇಳುವ ಉದ್ದೇಶ ಅವರಿಗೆ ಆರ್ಥವಾಗಿದೆ.
ಮತ್ತೆ ನೀವು ನನ್ನ ಬ್ಲಾಗಿನ "ನಾ ನಿನ್ನ ಮದುವೆಯಾಗೋಲ್ಲ ಅಂದೆ....ಅವಳು ಬಹ್ಮಕುಮಾರಿಗೆ ಸೇರಿದಳು...." ಲೇಖನಕ್ಕೆ ಪ್ರತಿಕ್ರಿಯಿಸಿದವರಲ್ವೇ....
ಅದರಲ್ಲಿ ನೀವು ಜ್ಯೋತಿಯವರು ಮತ್ತು ಶಂಕರ್ ಪ್ರಸಾದ್‌ರವರ ಪ್ರತಿಕ್ರಿಯೆಗಳಿಗೆ ಸ್ವಲ್ಪ ಖಾರವಾಗಿ ಪ್ರತಿಕ್ರಿಯಿಸಿದಿರಿ...ಕೊನೆಗೆ ನಾನು ಎಲ್ಲದಕ್ಕೂ ಸರಿಯಾದ ಉತ್ತರಗಳನ್ನು ಕೊಟ್ಟ ನಂತರ ಆ ಟಾಪಿಕ್ ಬದಲಾಯಿಸಿ ನನ್ನ ಫೋಟೋಗ್ರಫಿ ಡಿಸ್ಟಿಂಗ್ಷನ್ ಬಗ್ಗೆ ಅಭಿನಂದನೆ ಬರೆದವರು ಅಲ್ಲವೇ...
ಮತ್ತೆ ಫೋಟೋಗ್ರಫಿಯ ಬಗ್ಗೆ ಪ್ರಾಕ್ಟಿಕಲ್ಲಾಗಿ ಹೆಚ್ಚು ತೊಡಗಿಸಿಕೊಂಡು ಅನುಭವಗಳಿಸಿ...ನಂತರ ಪುಸ್ತಕದ ವಿಚಾರಗಳನ್ನು ಗಮನಿಸಿದರೆ ಒಳ್ಳೆಯದು ಅಂತ ನನ್ನ ಭಾವನೆ.
ಕೊನೆಯಲ್ಲಿ ನಾನು ಹೇಳುವುದೇನೆಂದರೆ., ಇಲ್ಲಿ ನೀವು ಶಿವು ಹೇಳಿದ್ದು ಸರಿಯೆನಿಸಿ ಸ್ವೀಕರಿಸಬಹುದು...ಅಥವ ಶಿವುಗೆ ಏನು ಗೊತ್ತಿಲ್ಲ ಅಂತ ಬಿಟ್ಟುಬಿಡಲುಬಹುದು...ಆಯ್ಕೆ ನಿಮ್ಮದು.
ಧನ್ಯವಾದಗಳು.
ಶಿವು ಅವರೇ,
ReplyDelete[ಮ್ಯಾಟ್ರಿಕ್ಸ್ ಮೀಟರಿಂಗ್ ಉದಾಹರಣೆಗೆ ನೀವು ಆರಿಸಿಕೊಂಡ ಚಿತ್ರದಲ್ಲಿ ಆಕಾಶ ಭಾಗ ಹೆಚ್ಚಾಗಿದೆ. ಅದರಿಂದ ಅದು ಫೋಕಸ್ ಆದರೂ ಆಗದಿದ್ದರೂ ತಿಳಿಯುವುದಿಲ್ಲ. ಅದರ ಬದಲಾಗಿ ಆಕಾಶವಿಲ್ಲದ ಲ್ಯಾಂಡ್‌ಸ್ಕೇಪ್ ಚಿತ್ರವಿದ್ದಿದ್ದರೆ ಅದರ ಹಿನ್ನೆಲೆಯಿಂದ ಮುನ್ನಲೆವರೆಗೆ ಮತ್ತು ಎಡದಿಂದ ಬಲಭಾಗದವರೆಗೆ ಮ್ಯಾಟ್ರಿಕ್ಸ್ ಮೀಟರಿಂಗ್ ನ ಸಂಪೂರ್ಣ ಉಪಯೋಗದ ಚಿತ್ರಣ ಕಂಡು ಬರುತ್ತಿತ್ತೆಂದು ನನ್ನ ಅನಿಸಿಕೆ.]
ಇದು ನೀವು ಮೊದಲು ಹಾಕಿದ ಕಾಮೆಂಟಿನ ತುಣುಕು.
[ಫೋಕಸಿಂಗಿಗೆ ಮತ್ತು ಮೀಟರಿಂಗ್ ಮೋಡಿಗೆ ಸಂಬಂಧ ಇಲ್ಲವಲ್ಲ. ನಿಮ್ಮ ಕಾಮೆಂಟು ಅರ್ಥ ಆಗಲಿಲ್ಲ, ಸ್ವಲ್ಪ ವಿವರಿಸಬಹುದೇ?]
ನಿಮ್ಮ ಕಾಮೆಂಟು ಓದಿದ ನಂತರ ನನಗೆದ್ದ ಗೊಂದಲಕ್ಕೆ ನಾನು ಹಾಕಿದ ಪ್ರತಿಕ್ರಿಯೆ.
[ಪಾಲಚಂದ್ರ ಹೇಳಿರುವುದು ಮೀಟರಿಂಗ್ ಬಗ್ಗೆ ಆದರೂ ನಾನು ಇಲ್ಲಿ ಅದರ ಜೊತೆಗೆ ಫೋಕಸಿಂಗ್ ವಿಚಾರಕ್ಕೂ ಒತ್ತು ಕೊಟ್ಟಿದ್ದೇನೆ. ಕಾರಣ ನಾವು ಯಾವುದೇ ಚಿತ್ರಗಳನ್ನು ಕ್ಲಿಕ್ಕಿಸಿದಾಗ ಅದನ್ನು ದೊಡ್ಡ ಸೈಜಿನಲ್ಲಿ ಪ್ರಿಂಟ್[12x18]ಅಥವ ಅದಕ್ಕಿಂತ ದೊಡ್ಡದಾಗಿ ಬೇಕಾದಾಗ ಮೀಟರಿಂಗ್ ಜೊತೆಗೆ ಫೋಕಸ್ ಸರಿಯಾಗಿಲ್ಲದಿದ್ದಲ್ಲಿ ಪ್ರಿಂಟ್ ಮಾಡಲು ಸಾಧ್ಯವಾಗುವುದಿಲ್ಲ. ಮೊದಲು ಚಿಕ್ಕ ಪ್ರಿಂಟ್ ನೋಡಿದಾಗ ಸುಂದರವಾಗಿ ಕಂಡರೂ ದೊಡ್ಡದು ಮಾಡುವಾಗ ಅದರ ಫೋಕಸಿಂಗ್ ಸರಿಯಾಗಿ ಇಲ್ಲದಿದ್ದಲ್ಲಿ ದೊಡ್ಡ ಪ್ರಿಂಟ್ ಮಾಡಲಾಗುವುದಿಲ್ಲ....ನಿಮ್ಮ ಸಂಶಯ ನಿವಾರಣೆಯಾಗಿರಬಹುದು ಅಂಥ ನನ್ನ ಭಾವನೆ]
ನಿಮ್ಮ ಮೊದಲ ಕಾಮೆಂಟು ಓದಿದಾಗ ಅನಿಸಿದ್ದು ಮ್ಯಾಟ್ರಿಕ್ಸ್ ಮೀಟರಿಂಗ್ ಉಪಯೋಗ ಫೋಕಸ್ಸಿಗೆ ಎಂದು. ನಾನು ಇದರ ಬಗ್ಗೆ ಪ್ರಶ್ನಿಸಿದಾಗ ನೀವು ಮೀಟರಿಂಗ್ ಮೋಡ್ ವಿಷಯವನ್ನು ಚರ್ಚೆಯಿಂದ ಹೊರ ಹಾಕಿ ಶಾರ್ಪ್ನೆಸ್ಸನ್ನು ತೆಗೆದುಕೊಂಡಿರಿ. ಒಂದು ಚಿತ್ರಕ್ಕೆ ಕಂಪೋಸಿಶನ್ ಹೇಗೆ ಮುಖ್ಯವೋ ಶಾರ್ಪ್ನೆಸ್ ಕೂಡ ಅಂತೆಯೇ ಮುಖ್ಯ. ಕೇವಲ ಹೆಚ್ಚಿನ ರೆಸೆಲ್ಯೂಶನ್ ಇದ್ದ ಮಾತ್ರಕ್ಕೆ ಯಾರೂ ದೊಡ್ಡ ಪ್ರಿಂಟ್ ಹಾಕೋದಿಲ್ಲ. ಅಥವಾ ಶಾರ್ಪ್ನೆಸ್ ಚೆನ್ನಾಗಿದ್ದು ಕಡಿಮೆ ರೆಸೆಲ್ಯೂಶನ್ ಚಿತ್ರವನ್ನು ದೊಡ್ಡ ಪ್ರಿಂಟ್ ಹಾಕಲು ಆಗುವುದೂ ಇಲ್ಲ. ಇಲ್ಲಿ ಶಾರ್ಪ್ನೆಸ್ ಬಗೆಗಿನ ನಿಮ್ಮ ಕಾಮೆಂಟ್ ಲೇಖಕರು ಆರಿಸಿಕೊಂಡ ವಿಷಯಕ್ಕೆ ಹೊರತಾಗಿದೆ. ಲೇಖಕರು ಶಾರ್ಪ್ನೇಸ್ಸನ್ನು ವಿಷಯವಾಗಿ ತೆಗೆದುಕೊಂಡು ಮೇಲಿನ ಉದಾಹರಣೆ ಕೊಟ್ಟಿದ್ದಲ್ಲಿ ನಿಮ್ಮ ಕಾಮೆಂಟು ಪರಿಶೀಲಿಸಬಹುದಿತ್ತೋ ಏನೋ. ಅದೂ ಅಲ್ಲದೇ ಮೇಲಿನ ಚಿತ್ರದಲ್ಲಿ ಮೋಡಗಳ ಪ್ಯಾಟರ್ನ್ ಇಲ್ಲ ಮತ್ತು ಆಗಸಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟಿದ್ದು ಕಂಡು ಬಂದಿಲ್ಲ. ಕೊಟ್ಟಿದ್ದಿದ್ದರೆ ಆಗಸದ ರೇಶಿಯೋ ಚಿತ್ರದಲ್ಲಿ ಹೆಚ್ಚಿರುತ್ತಿತ್ತು. ಆದ್ದರಿಂದ ಪ್ರಾಮುಖ್ಯತೆ ಇಲ್ಲದ ಭಾಗದಲ್ಲಿ ರೇಸರ್ ಶಾರ್ಪ್ನೆಸ್ ಬಯಸುವುದು ಸೂಕ್ತವಲ್ಲ.
ಎರಡನೆಯ ಚಿತ್ರ ಬ್ಯಾಕ್ ಲಿಟ್ಗೆ ಒಳ್ಳೆಯ ಉದಾಹರಣೆ ಎಂದು ನನ್ನ ಅನಿಸಿಕೆ. ನೀವು ಹೇಳಿದಂತೆಯೇ ಸಂಜೆಯೋ, ಮುಂಜಾನೆಯೋ ಇದನ್ನು ತೆಗೆದಿದ್ದಲ್ಲಿ ಸೆಂಟರ್ ವೈಟೆಡ್ ಅಥವಾ ಕ್ರಾಸ್ ಹೇರ್ ಮೀಟರಿಂಗ್ ಮೋಡಿನ ಅವಶ್ಯಕತೆ ಇರುತ್ತಿರಲಿಲ್ಲ. ಸಂಜೆ ತೆಗೆದರೆ ಚಿತ್ರ ಇನ್ನೂ ಸುಂದರವಾಗಿ ಬರುತ್ತಿತ್ತೆನ್ನುವುದರಲ್ಲಿ ಎರಡು ಮಾತಿಲ್ಲ, ಆದರೆ ಮಧ್ಯಾಹ್ನವೇ ತೆಗೆಯಬೇಕಾದ ಅನಿವಾರ್ಯತೆಯಿದ್ದಲ್ಲಿ, ಲೇಖಕರು ಚಿತ್ರ ತೆಗೆಯಲು ಬಳಸಿದ ಕ್ರಮ ಸರಿಯಾಗಿಯೇ ಇದೆಯೆಂದು ನನ್ನನಿಸಿಕೆ.
ನಿಮ್ಮ ಉದ್ದೇಶ ಒಳ್ಳೆಯದಿರಬಹುದು. ಆದರೆ ನಿಮ್ಮ ಕಾಮೆಂಟು ವಿಷಯಾಂತರದಂತೆ ತೋರಿ, ಓದುಗರ ಗೊಂದಲ ಹೆಚ್ಚಿಸುತ್ತದೆಯೇ ಹೊರತು ಅನುಕೂಲವಾಗುವುದಿಲ್ಲ ಎಂಬುದು ನನ್ನ ಅರಿಕೆ. ಅದೇ ಸಬ್ಜೆಕ್ಟ್, ಅದೇ ಕಾಂಟೆಕ್ಸ್ಟ್, ಅದೇ ಬೆಳಕು ಇದ್ದ ಪಕ್ಷದಲ್ಲಿ, ನಿಮಗೆ ಇವೇ ಚಿತ್ರ ತೆಗೆಯಬೇಕಾದ ಅನಿವಾರ್ಯತೆಯಿದ್ದಲ್ಲಿ ನೀವು ಯಾವ ರೀತಿ ಮೀಟರಿಂಗ್ ಮೋಡನ್ನು ಬಳಸುತ್ತಿದ್ದೀರಿ ಎಂದು ತಿಳಿಸಿದ್ದರೆ ನಿಮ್ಮ ಕಾಮೆಂಟಿನ ಉದ್ದೇಶ ಸಾರ್ಥಕವಾಗುತ್ತಿತ್ತು. ನಿಮ್ಮ ಅನುಭವದಲ್ಲಿ ಹೇಗೆ ಮೀಟರಿಂಗ್ ಮೋಡನ್ನು ನಿಮ್ಮನುಕೂಲಕ್ಕೆ ತಕ್ಕಂತೆ ಬಳಸಿಕೊಂಡಿರಿ ಎಂಬುದನ್ನು ತಿಳಿಸಿದ್ದರೆ ಓದುಗರಿಗೆ ಅನುಕೂಲವಾಗುತ್ತಿತ್ತು. ಅದು ಬಿಟ್ಟು ಲೇಖನದ ಮೂಲ ವಿಷಯವನ್ನೇ ಹೊರಳಿಸಿ ಬೇರೆ ವಿಷಯದ ಬಗ್ಗೆ ಚರ್ಚಿಸುವುದು ಸರಿಯಲ್ಲ. ಒಂದು ವೇಳೆ ಲೇಖಕರು ನಾನೊಂದು ಅತ್ಯುತ್ತಮ ಚಿತ್ರ ತೆಗೆದಿದ್ದೇನೆ ಇದರ ಬಗ್ಗೆ ನಿಮ್ಮ ಅನಿಸಿಕೆ ಏನು ಎಂದು ಈ ಚಿತ್ರವನ್ನು ಬ್ಲಾಗಿನಲ್ಲಿ ಹಾಕಿದ್ದರೆ ನಿಮ್ಮ ಕಾಮೆಂಟು ಸೂಕ್ತ (ಲೇಖಕರ ಕ್ಷಮೆ ಕೋರಿ). ಅವಿರಿಗ್ಯಾವುದೋ ಅನಿವಾರ್ಯತೆ ಇದ್ದು ಈ ಚಿತ್ರವನ್ನು ಅದೇ ಸಮಯದಲ್ಲಿ ತೆಗೆದದ್ದಿರಬಹುದು. ಮ್ಯಾಟ್ರಿಕ್ಸ್ ಮೀಟರಿಂಗ್ ಬದಲು ಸೆಂಟರ್ ವೈಟೆಡ್ ಬಳಸಿದ್ದರಿಂದ, ನಿರೀಕ್ಷೆಗಿಂತ ಉತ್ತಮ ಚಿತ್ರ ದೊರೆತಿರಬಹುದು.
ನಿಮ್ಮ ಬ್ಲಾಗಿನ "ನಾ ನಿನ್ನ ಮದುವೆಯಾಗೋಲ್ಲ ಅಂದೆ....ಅವಳು ಬಹ್ಮಕುಮಾರಿಗೆ ಸೇರಿದಳು...." ವಿಷಯವನ್ನು ಮತ್ತೆ ಇಲ್ಲಿ ಪ್ರಸ್ತಾಪಿಸಿ ವಿಷಯಾಂತರ ಮಾಡುತ್ತಿರುವಿರಿ. (ಲೇಖಕರ ಕ್ಷಮೆ ಕೋರಿ) ನನ್ನ ಪ್ರತಿಕ್ರಿಯೆ ಖಾರವೋ ಸಿಹಿಯೋ ತಿಳಿದಿಲ್ಲ. ನೀವು ಈ ಬ್ಲಾಗಿಗೆ ಬಂದು ಚಿತ್ರದ ಬಗ್ಗೆ ಹೇಗೆ ನಿಮ್ಮ ಅಭಿಪ್ರಾಯ ತಿಳಿಸಿದಿರೋ ಅಂತೆಯೇ ಆ ಪೋಸ್ಟಿನಲ್ಲಿ ಇತರರು ಹಾಕಿದ ಕಾಮೆಂಟಿಗೆ ನನ್ನ ಅಭಿಪ್ರಾಯ ತಿಳಿಸಿದೆ ಅಷ್ಟೆ (ವಿಷಯಾಂತರಿಸದೆ). ನೀವು ಕೊಟ್ಟ ಉತ್ತರ ಸರಿಯಾಗಿದ್ದು ಎನ್ನುವುದು ನಿಮ್ಮ ಅರಿವು. ಅಲ್ಲಿ ಪ್ರತಿಕ್ರಿಯಿಸಿದ ಹಲವರಿಗೆ ನೀವು ಕೊಟ್ಟ ಉತ್ತರವನ್ನು ಸಾವಧಾನವಾಗಿ ಕುಳಿತು ನೋಡಿರಿ, ಒಂದಕ್ಕೊಂದು ಹೊಂದಿಕೆಯೇ ಇಲ್ಲವೆನ್ನುವುದು ನಿಮಗೇ ಗೋಚರವಾಗುತ್ತದೆ. ನಾನು ನಿಮಗೆ ಈ ವರೆಗೂ ಅಭಿನಂದನೆ ಸೂಚಿಸಿಯೇ ಇಲ್ಲ. ನಿಮ್ಮ ಬ್ಲಾಗನ್ನು ಮರು ಪರಿಶೀಲಿಸಿ. ಇದರ ಬಗ್ಗೆ ಹೇಳುವುದೆಲ್ಲಾ ನಿಮ್ಮ ಬ್ಲಾಗಿನಲ್ಲೇ ಹೇಳಿದ್ದೀನಿ, ನನ್ನ ಬ್ಲಾಗಿನಲ್ಲಿ ಅದರ ಬಗ್ಗೆ ಲೇಖನವನ್ನೂ ಬರೆದಿದ್ದೀನಿ. ಇನ್ನೂ ಹೆಚ್ಚಿನ ವಿವರಣೆ ಬೇಕಾಗಿದ್ದಲ್ಲಿ ನನ್ನ/ನಿಮ್ಮ ಬ್ಲಾಗಿನಲ್ಲಿ ಕಾಮೆಂಟಿಸಿ, ಚರ್ಚಿಸೋಣ.
ನನ್ನನ್ನು ನಾನು ಛಾಯಾಗ್ರಹಣದಲ್ಲಿ ತೊಡಗಿಸಿಕೊಂಡಿರುವೆನೆಂದು ನಿಮಗ್ಯಾರು ತಿಳಿಸಿದ್ದು. ನನ್ನ ಕುತೂಹಲದ ವಿಷಯ ಸಾಕಷ್ಟಿವೆ. ಸಂಗೀತದ ಬಗ್ಗೆ ನನಗೆ ಆಸಕ್ತಿಯಿದ್ದು ಅದರ ಬಗ್ಗೆ ತಿಳಿದುಕೊಂಡೆನೆಂದರೆ ನಾನೇನು ಹಾಡಲೇ ಬೇಕೆಂದಿಲ್ಲ. ವಿಜ್ಞಾನದ ವಿಷಯದಲ್ಲಿ ನನಗೆ ಆಸಕ್ತಿಯಿದೆ, ಓದಿ ತಿಳಿದುಕೊಳ್ಳುತ್ತೇನೆಂದ ಮಾತ್ರಕ್ಕೆ ನಾನೇನು ವಿಜ್ಞಾನಿಯಾಗಬೇಕಿಲ್ಲ.
ನಿಮಗೆ ಗೊತ್ತಿರುವುದು ಸಾವಿರ ಇರಬಹುದು. ಆದರೆ ವಿಷಯ ಯಾರಿಗೆ ಎಷ್ಟು ತಿಳಿದಿದೆ ಎಂಬುದು ಮುಖ್ಯವಲ್ಲ. ಇಲ್ಲಿ ಬರೆದ ವಿಷಯಕ್ಕೆ ನಿಮ್ಮ ಕಾಮೆಂಟು ಎಷ್ಟು ಪೂರಕ ಎಂಬುದು ನನ್ನ ಪ್ರಶ್ನೆ ಅಷ್ಟೆ. ಇಷ್ಟು ಬರೆದ ನಂತರವೂ ನಾನು ಹೇಳ ಹೊರಟದ್ದು ನಿಮಗೆ ತಿಳಿದಿಲ್ಲವೆಂದಾದಲ್ಲಿ ಮುಂದೆ ಪ್ರತಿಕ್ರಿಯಿಸುವ ಅವಶ್ಯಕತೆಯಿಲ್ಲ. ನೀವು ಪ್ರತಿಕ್ರಿಯಿಸಿದರೂ ಮರುಪ್ರತಿಕ್ರಿಯೆ ನೀಡಲು ನನಗೆ ಬಿಡುವಿಲ್ಲ.
ಪರಂಜಪೆಯವರೇ,
ReplyDeleteಪ್ರತಿಕ್ರಿಯೆಗೆ ವಂದನೆಗಳು.
ಶಿವು, ಸಿಂಚನ,
ಬಂದು ಮರು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದ. ಈ ರೀತಿಯ ಚರ್ಚೆ ಪುಟದ ಅಳತೆಯನ್ನು ಹಿಗ್ಗಿಸುತ್ತಿದೆಯೇ ಹೊರತು, ಮೀಟರಿಂಗ್ ಮೋಡಿನ ಬಗ್ಗೆ ಹೆಚ್ಚಿನ ಮಾಹಿತಿ ಒದಗಿಸುವಲ್ಲಿ ವಿಫಲವಾಗುತ್ತಿದೆ. ದಯವಿಟ್ಟು ಈ ಚರ್ಚೆಯನ್ನು ಇಲ್ಲಿಗೆ ನಿಲ್ಲಿಸುವುದೊಳಿತು.
ಫಾಲ ಅವರೆ, ಮೀಟರಿಂಗ... ಇದರ ವಿಚಾರದ ಪಾಠಗಳು ಚೆನ್ನಾಗಿವೆ. ಹೈಎಂಡ್ ಕ್ಯಾಮೆರಾಗಳಲ್ಲಿನ ವಿಚಾರಗಳು ಎಂದು ನನ್ನ ಅನಿಸಿಕೆ. ಉತ್ತುಮ ಪಾಠ. ಧನ್ಯವಾದಗಳು.
ReplyDeleteಕ್ಷಣಚಿಂತನೆ,
ReplyDeleteಮೀಟರಿಂಗ್ ಮೋಡುಗಳು ಇತ್ತೀಚೆಗೆ ಸಾಮಾನ್ಯ ಡಿಜಿಟಲ್ ಕ್ಯಾಮರಾದಲ್ಲು ಬರುತ್ತಿವೆ. ನಿಮ್ಮ ಕ್ಯಾಮರಾ ಯಾವುದೆಂದು ತಿಳಿಸಿದರೆ, ಅದರಲ್ಲಿ ಈ ಅನುಕೂಲ ಇದೆಯೋ ಇಲ್ಲವೋ ತಿಳಿಸಲು ಪ್ರಯತ್ನಿಸುವೆ.
ಬಣ್ಣ ಎಲ್ಲಾ ಚೇಂಜ್ ಆಗಿದೆ...ತುಂಬಾ ಚರ್ಚೆಯಾಗಿಬಿಟ್ಟಿದೆ.
ReplyDelete-ಧರಿತ್ರಿ
Sir, nimma pratikriyege dhanyavaadagalu. nanna baLi iruva camera Sony Cybershot DSC650 mattondu Olympus Superzoon115 (film). mattonmme dhanyavaadgaLu
ReplyDeleteಧರಿತ್ರಿ,
ReplyDeleteಬಣ್ಣ ಎಲ್ಲಾ ಬದಲಾಗಿದ್ದಲ್ಲ, ಬದಲಾಯಿಸಿದ್ದು :)
ಕ್ಷಣಚಿಂತನೆ,
ನಿಮ್ಮ ಕ್ಯಾಮರಾದಲ್ಲಿ ಮ್ಯಾಟ್ರಿಕ್ಸ್ ಮತ್ತು ಕ್ರಾಸ್ ಹೇರ್ ಇದೆ.. ಸೆಂಟರ್ ವೈಟೆಡ್ ಇಲ್ಲ.
ಪಾಲ,
ReplyDeleteಮಾಹಿತಿ ಚೆನ್ನಾಗಿದೆ, ಗೊತ್ತಿಲ್ಲದವರಿಗೆ ಸವಿವರವಾಗಿ ತಿಳಿಸಿದ್ದೀರಿ.
ಧನ್ಯವಾದಗಳು
nice information, wnated to contact you. Ramesh
ReplyDeleteThis comment has been removed by a blog administrator.
ReplyDelete