ಕ್ಯಾಮರಾದ ಸೆನ್ಸರ್ ಎಷ್ಟು ಸಮಯ ನೀವು ತೆಗೆಯುವ ಚಿತ್ರವನ್ನು ನೋಡುತ್ತದೆಯೋ ಆ ಕಾಲಾವಧಿಯೇ "Shutter Speed". ಇದನ್ನು ಸಾಮಾನ್ಯವಾಗಿ ೧/೧೦೦೦, ೧/೨೦೦, ೧/೬೦ ಮುಂತಾದ ಕ್ಷಣದ ಭಾಗದಲ್ಲಿ ಅಳೆಯುತ್ತಾರೆ. ಇಲ್ಲಿ ಭಾಜಕ ಕ್ಷಣದ ಭಾಗವನ್ನೂ, ಭಾಜ್ಯ ಕ್ಷಣವನ್ನೂ ಸೂಚಿಸುತ್ತದೆ. ಆದ್ದರಿಂದ ಭಾಜಕ ಹೆಚ್ಚಾದಂತೆಲ್ಲಾ "Shutter Speed" ಜಾಸ್ತಿಯಾಗುತ್ತದೆ ಮತ್ತು ಕ್ಯಾಮರಾದ ಸೆನ್ಸರ್ ಕಡಿಮೆ ಬೆಳಕನ್ನು ಪಡೆಯುತ್ತದೆ. "Shutter Speed" ೧/೬೦ ಗಿಂತ ಕಡಿಮೆ ಇದ್ದ ಪಕ್ಷದಲ್ಲಿ ಸಾಮಾನ್ಯವಾಗಿ ತೆಗೆದ ಚಿತ್ರದಲ್ಲಿ ಅಸ್ಪಷ್ಟತೆ ಇರುವುದರಿಂದ, ಇಂತಹ ಸಂದರ್ಭದಲ್ಲಿ ಟ್ರೈಪೋಡ್ ನ ನೆರವು ಅಗತ್ಯವಿರುತ್ತದೆ.
ನೀವು ತೆಗೆಯ ಹೊರಟ ಚಿತ್ರಕ್ಕೆ ಯಾವ "Shutter Speed" ಎಂದು ಅದರ ಚಲನೆಯನ್ನು ಗಮನಿಸಿ ನಿರ್ಧರಿಸಬಹುದು. ವೇಗವಾಗಿ ಚಲಿಸುವ ವಾಹನ, ಹರಿಯುವ ನೀರು, ಉಯ್ಯಾಲೆಯಲ್ಲಿ ಆಡುತ್ತಿರುವ ಮಕ್ಕಳು ಮುಂತಾದ ಚಲಿಸುವ ವಿಷಯವಾಗಿದ್ದಲ್ಲಿ, ಹೆಚ್ಚಿನ "Shutter Speed" ಬಳಸಿ, ಆ ಚಲನೆಯನ್ನು ನಿಮ್ಮ ಚಿತ್ರದಲ್ಲಿ ಸ್ತಬ್ಧಗೊಳಿಸಬಹುದು. ಗುಡ್ಡ, ಬೆಟ್ಟ, ಮರ ಮುಂತಾದ ಚಲಿಸದ ವಿಷಯವಾಗಿದ್ದಲ್ಲಿ ಇದನ್ನು ಕಡಿಮೆಮಾಡಬಹುದು. ಕೆಳಗಿನ ಚಿತ್ರದಲ್ಲಿ ಜೇನಿನ ಚಲನೆಯನ್ನು ಸ್ತಬ್ಧಗೊಳಿಸಲು ನಾನು ಉಪಯೋಗಿಸಿದ "Shutter Speed" ೧/೫೦೦.
ಮೇಲೆ ತಿಳಿಸಿದಂತೆ ಚಲಿಸುವ ವಸ್ತುಗಳನ್ನು ಸ್ತಬ್ಧಗೊಳಿಸಲು ಹೆಚ್ಚಿನ "Shutter Speed" ಅಗತ್ಯ ಇದೆಯಾದರೂ ಕೆಲವೊಂದು ಸಂದರ್ಭದಲ್ಲಿ, ಕಡಿಮೆ "Shutter Speed" ಉಪಯೋಗಿಸಿ ಚಲನೆಯ ಪರಿಣಾಮವನ್ನು ನಿಮ್ಮ ಚಿತ್ರದಲ್ಲಿ ಸೆರೆಹಿಡಿಯಬಹುದು.
ಈ ಕೆಳಗಿನ ಎರಡು ಚಿತ್ರ ಅದಕ್ಕೆ ಉದಾಹರಣೆ.
ಇಲ್ಲಿ ಸೈಕಲ್ ಸವಾರನನ್ನು ನನ್ನ ವಿಷಯವನ್ನಾಗಿಸಿಕೊಂಡು, ಚಲನೆಯನ್ನು ನನ್ನ ಚಿತ್ರದಲ್ಲಿ ಸೆರೆಹಿಡಿಯಲು ಕಡಿಮೆ "Shutter Speed" (೧/೧೫) ಬಳಸಿದ್ದೇನೆ. ಇಲ್ಲಿ ಸವಾರ ಸ್ಪಷ್ಟವಾಗಿದ್ದು, ಹಿನ್ನೆಲೆ ಅಸ್ಪಷ್ಟವಾಗಿದ್ದು ಚಲನೆಯನ್ನು ಬಿಂಬಿಸುತ್ತಿದೆ (panning).
ಈ ಚಿತ್ರದಲ್ಲಿ ಬೆಂಕಿಯ ಜಾಡನ್ನು ಚಿತ್ರಿಸಲು ನಾನು ಬಳಸಿದ್ದು ೧೫ ಕ್ಷಣಗಳಷ್ಟು ದೀರ್ಘವಾದ "Shutter Speed".
ಹಾಗಾಗಿ ಛಾಯಾಗ್ರಹಣದಲ್ಲಿ "Shutter Speed" ನ್ನು ಬೆಳಕು ಹಾಗು ಚಲನೆಯನ್ನು ನಿಯಂತ್ರಿಸಲು ಉಪಯೋಗಿಸಬಹುದು.
ನಿಮ್ಮ ಛಾಯಾಗ್ರಹಣದಲ್ಲಿ ಷಟರ್ ಸ್ಫೀಡ್ ಬಗ್ಗೆ ಒಳ್ಳೆಯ ಉದಾಹರಣೆಯ ಸಮೇತ ಬರೆದಿದ್ದೀರಿ. ಅದಕ್ಕೆ ತಕ್ಕಂತೆ ನಿಮ್ಮ ಫೋಟೊಗಳು ತಾಂತ್ರಿಕವಾಗಿ ಚೆನ್ನಾಗಿವೆ. ಇದೇ ರೀತಿಯ ಪ್ರಯೋಗಗಳನ್ನು ನನ್ನ ಬ್ಲಾಗಿನಲ್ಲಿ ಹಾಕಿದ್ದೇನೆ. ಒಮ್ಮೆ ಬಿಡುವು ಮಾಡಿಕೊಂಡು ಬನ್ನಿ.....
ReplyDeleteಶಿವು,
ReplyDeleteಬರಹ ಓದಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ನಾನು ಆಭಾರಿ.. ನಿಮ್ಮ ತಾಣದಲ್ಲಿರುವ ಹಳ್ಳಿಯ ಚಿತ್ರಣ ನೋಡಿ ತುಂಬಾ ಸಂತೋಷವಾಯಿತು.. ತಾಂತ್ರಿಕ ಹಾಗೂ ವಿಷಯದ ದೃಷ್ಟಿಯಿಂದ ನಿಮ್ಮ ಚಿತ್ರಗಳು ಚೆನ್ನಾಗಿವೆ.
ಪಾಲಚಂದ್ರ ಅವರೇ, ಉದಾಹರಣೆ ಸಮೇತ ಉತ್ತಮ ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು.
ReplyDeleteಹರೀಶ್,
ReplyDeleteವಂದನೆಗಳು, ಭೇಟಿ ಕೊಡುತ್ತಿರಿ.
--
ಪಾಲ
ಸಕ್ಕತ್ ಫೋಟೋಸ್ ಸಾರ್, ತುಂಬಾ ಚೆನ್ನಾಗಿದೆ,
ReplyDeleteಯುಗಾದಿ ದಿನದಂದು ಒಳ್ಳೆ ಉಡುಗೊರೆ ಕೊಟ್ಟದ್ದಕ್ಕೆ ಹೃತ್ಪೂರ್ವಕ ಧನ್ಯವಾದಗಳು :-)
Thanks a lot for the detailed info. I want to buy a camera for family/outdoor photography. Kindly suggest a good camera whose value is less than Rs. 10k.
ReplyDeletePrasanna, Bangalore
Prasanna,
ReplyDeleteUsually I don't recommend any particular model, because always there will be new models available in market. So based on your requirement and budget you can better decide yourself. The model I suggest might not be your choice in future.
But I can point you how to decide which camera suits your needs. Please read this: http://palachandra.blogspot.com/2010/04/blog-post.html
Based on this if you shortlist 2/3 models then email me your selection. I would be happy to assist you to further drill down.
Thanks for your reply. But the problem is that I do not know any of these jargons/features in depth. Infact, only after going thru' that article, I sent the earlier comment as you would be the right person to suggest. Hence kindly sugegst 2-3 make and models. As said earlier, I am not a professional photographer and not into any major photography activities. I will be using it only during outdoor/family functions. Hence is the request.
ReplyDeleteHi Prasanna,
ReplyDeleteDo not buy any camera based on others suggestion. There is nothing called good/bad camera. Its like if the camera suits your need/easy to take pictures. Now I know your need but to check if you like to use it please do visit the showroom.
I can suggest you a showroom if you are in Bangalore:
FOTOCIRCLE
Ground Floor, ShopNo: 7, 8, 9, Behind Escalator,
Brigade Plaza, SC Road,
Near Anand Rao Circle,
Bangalore -560 009
Phone: 080-22872572 / 22874356
you can touch and feel the camera if you visit the showroom, also you get latest model in the market.
Thanks a lot.
ReplyDeletePrasanna,
ReplyDeleteI saw this camera model today.. looks good: http://www.photographyblog.com/reviews/kodak_easyshare_z981_review/