ಒಂಭತ್ತನೇ ತರಗತಿಯಿಂದ ಬರೆಯಲಾರಂಭಿಸಿದ ಡೈರಿ, ನಾನು ಬ್ಲಾಗ್ ಪ್ರಪಂಚಕ್ಕೆ ಕಾಲಿಡುವವರೆಗೂ ಮುಂದುವರಿಸಿಕೊಂಡು ಬಂದಿದ್ದೇನೆ. ಆ ನನ್ನ ಹಳೇಯ ಡೈರಿಗಳನ್ನ ತೆಗೆದು ನೋಡಿದರೆ ನಾ ಮೆಚ್ಚಿದ ಪುಸ್ತಕಗಳ ಬಗ್ಗೆ, ನಾ ಮೆಚ್ಚಿದ ಜನರು, ವಿದ್ಯಾಭ್ಯಾಸ, ಇತರ ಚಟುವಟಿಕೆ, ಅಲ್ಲಲ್ಲಿ ಫೋಟೋಗಳು,ಪತ್ರಗಳು, ಸಂಗ್ರಹಿಸಿದ ಹಕ್ಕಿ ಪುಕ್ಕಗಳು, ಕೆಲಸದ ಆರಂಭದ ದಿನಗಳು ಇನ್ನೂ ಏನೇನೋ, ಅದೂ ನನ್ನ ಬರವಣಿಗೆಯಲ್ಲೇ.
ಇಂದಿಗೆ ಸುಮಾರು ೩ ವರ್ಷದ ಹಿಂದೆ ನನ್ನ ಬ್ಲಾಗ್ ಅಕೌಂಟ್ ತೆರೆದಿದ್ದರೂ, ಇಲ್ಲಿ ಬರೆಯಲಾರಂಭಿಸಿದ್ದು ಜುಲೈ ೨೦೦೮ರಿಂದ. "ನಿಮ್ಮ ಪ್ರೀತಿಯನ್ನು ನಿವೇದಿಸುವ ಮುನ್ನ" ಎಂಬ ಪ್ರಬಂಧದಿಂದ ತೊಡಗಿದ ಬರಹ ಕೆಲವು ಪ್ರವಾಸ ಕಥನ, ಅನುಭವ ಕಥನ, ಕವನ, ಛಾಯಗ್ರಹಣಕ್ಕೆ ಸಂಬಂಧಿಸಿದ ಲೇಖನಗಳು, ಲಲಿತ ಪ್ರಬಂಧ, ಕೆಲವು ಚಿತ್ರಗಳನ್ನು ಪೋಸ್ಟ್ ಮಾಡಿದ್ದೇನೆ.
ನನ್ನ ಇತರ ಹವ್ಯಾಸಗಳ ಆಸಕ್ತಿಯ ದೆಸೆಯಿಂದ ಬರೆಯಲು ಹೆಚ್ಚಿನ ಸಮಯ ವಿನಿಯೋಗಿಸಲು ಸಾಧ್ಯವಾಗುತ್ತಿಲ್ಲ. ಸಿಗುವ ಅಲ್ಪ ಸಮಯದಲ್ಲಿ ಏನು ಬರೆಯಬೇಕೆಂದೂ ತೋಚುತ್ತಿಲ್ಲ. ಆದ್ದರಿಂದ ಬರವಣಿಗೆಗೆ ತಾತ್ಕಾಲಿಕ ವಿರಾಮ ಕೊಡುತ್ತಿದ್ದೇನೆ. ನಿಮ್ಮೆಲ್ಲರ ಸ್ನೇಹ, ಪ್ರೋತ್ಸಾಹಕ್ಕೆ ನನ್ನ ತುಂಬು ಹೃದಯದ ಕೃತಜ್ಞತೆಗಳು. ಮತ್ತೆ ಬರೆಯಬೇಕೆನಿಸಿದಾಗ ಬರೆಯುತ್ತೇನೆ, ಅಲ್ಲಿಯವರೆಗೂ ಬಿಡುವಿದ್ದಾಗ ನಿಮ್ಮ ಲೇಖನಗಳನ್ನು ಓದಲು ಖಂಡಿತಾ ಬರುತ್ತೇನೆ. ತಿಳಿಯದೇ ನನ್ನ ಪ್ರತಿಕ್ರಿಯೆಯಿಂದ ನಿಮ್ಮ ಮನಸ್ಸನ್ನು ನೋಯಿಸಿದ್ದಲ್ಲಿ ಕ್ಷಮೆಯಿರಲಿ.
ನಾನು ತೆಗೆಯುವ ಫೋಟೋ ನೋಡಲು ಆಸಕ್ತಿಯಿದ್ದಲ್ಲಿ ನನ್ನ
ಫ್ಲಿಕರ್ ಎಕೌಂಟ್ಗೆ ಭೇಟಿ ನೀಡಬಹುದು.
-
ಪಾಲ