Friday, June 03, 2011

ರೆಕ್ಕೆ ಮುರಿದ ಹಕ್ಕಿಗೆ ರೇಖಿ ಚಿಕಿತ್ಸೆ

ಭಾನುವಾರದ ಬೆಳಿಗ್ಗಿನ ಜಾವ, ಇನ್ನೂ ಹಾಸಿಗೆಯಿಂದ ಎದ್ದಿರಲಿಲ್ಲ...  ಎದುರು ಮನೆಯ ಚಿಕ್ಕಪ್ಪನ ಮಗ ಬಂದು, "ಪಾಲಣ್ಣ, ಪಾಲಣ್ಣ ಬೇಗ ಬಾ.. ತೋಟದಲ್ಲಿ ಒಂದು ಹಕ್ಕಿ... ಹಾರುಕಾತ್ತಿಲ್ಲ ಅದ್ಕೆ.. ಇರ್ವೆ ಮುತ್ತಿತ್ " ಎಂದು ಕರೆದಾಗ ಒಂದು ರೀತಿಯ ಕಿರಿಕಿರಿಯಾಯ್ತು. ಕರುಣೆ, ಮಮಕಾರ ಪ್ರಾಣಿ ಪ್ರಪಂಚದಲ್ಲಿಲ್ಲ. ಅವು ಸಹಜವಾಗಿ ಜೀವಿಸುವಂಥದ್ದು. ಯಾವುದು ಸಬಲವೋ ಅದು ಬದುಕುತ್ತದೆ.. ಎಂಬೆಲ್ಲಾ ಆಲೋಚನೆ ಹೊಳೆದು ತಮ್ಮನಿಗೆ ವಿವರಿಸ ಹೊರಟರೆ, "ಏ ಎಂಥದಾ ನೀನು, ಪಾಪ ಅದು" ಎಂದು ನನ್ನ ಕೈ ಹಿಡಿದು ಎಳೆದುಕೊಂಡೇ ಹೊರಟ.



ತೆಂಗಿನ ಸಿಪ್ಪೆಯ ರಾಶಿಯ ಬುಡದಲ್ಲಿ ಒಂದು ಮೈನಾ ಹಕ್ಕಿ ತೆವಳುತ್ತಿತ್ತು. ಹತ್ತಿರ ಹೋದರೆ ಹುದುಗಿಕೊಳ್ಳುವ ಪ್ರಯತ್ನ. ಮೈಮುತ್ತಲಾರಂಭಿಸಿದ್ದ ಕೆಂಪು ಇರುವೆಗಳು. ಅದಕ್ಕೋ ಹಾರಲಾರದ ಅಸಹಾಯಕತೆ. ತಮ್ಮನ ಬಳಿ ಒಂದು ಬಕೇಟ್ ತರಲು ಹೇಳಿ, ನಾನು ಒಂದೊಂದೇ ಕಾಯಿಸಿಪ್ಪೆಯನ್ನು ಹಕ್ಕಿಯ ಮೇಲೆ ಬೀಳದಂತೆ ತೆಗೆಯಲಾರಂಭಿಸಿದೆ. ಹಕ್ಕಿಯನ್ನು ಹಿಡಿಯ ಹೊರಟರೆ ಮತ್ತೆ ಸಿಪ್ಪೆಯೊಳಗೆ ಹುದುಗಿಕೊಳ್ಳುವ ಪ್ರಯತ್ನ. ಇನ್ನಷ್ಟು ಸಿಪ್ಪೆ ತೆಗೆದು ಬದಿಗೆ ಹಾಕಿ, ಅದಕ್ಕೆ ಹುದುಕಿಕೊಳ್ಳುಲು ಅವಕಾಶ ಸಿಗದಂತೆ ಮಾಡಿ, ಹಿಡಿಯ ಹೊರಟೆ. ಮೆತ್ತಗಿನ, ಹಗುರ ಶರೀರ ಕೈಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿತ್ತು. ಬಿಗಿಯಾಗಿ ಹಿಡಿದರೆ ಎಲ್ಲಿ ಹೊಸಕಿ ಹೋಗುವುದೋ ಎಂಬ ಹೆದರಿಕೆ. ಅಂತೂ ಹಕ್ಕಿ ಬಕೇಟು ಸೇರಿತು.

DSC_2595
ಬಕೇಟಿನಲ್ಲಿ ಮೈನಾ

ಪುಟ್ಟ ಗರಟವೊಂದರಲ್ಲಿ ತಮ್ಮ ನೀರು ತಂದು ಹಕ್ಕಿಯ ಬಳಿಯಲ್ಲಿರಿಸಿದ. ಅದಕ್ಕೆ ಎದ್ದು ನೀರು ಕುಡಿಯಲಿಕ್ಕೂ ಆಗದ ಅಸಹಾಯಕತೆ. ಒಂದೆರಡು ತೊಟ್ಟು ನೀರನ್ನು ಹಾಗೆಯೇ ಕೊಕ್ಕಿಕೆ ಇಳಿಸಿದ್ದಾಯಿತು. "ಹಸ್ವಾತಿತ್ತೇನೋ, ಎಂತ ತಿಂಬುಕೆ ಕೊಡ್ವ", ತಮ್ಮ ಕೇಳುತ್ತಿದ್ದಾಗ... ಮೈನಾ ಹುಳು ಹುಪ್ಪಟೆ ತಿನ್ನೋದಲ್ವ, ಕಾಳೂ ತಿನ್ನುತ್ತೆ ಇರ್ಬೇಕು.. ಭತ್ತವೋ, ಹೆಸರು ಕಾಳೋ, ತರಕಾರಿಯೋ, ಹಣ್ಣೋ, ಎಂದು ಯೋಚಿಸುವುದರೊಳಗಾಗಿ ತಮ್ಮ ಒಂದು ಹಿಡಿ ಅಕ್ಕಿಯನ್ನು ತಂದು ಹಾಕಿದ್ದ.

DSC_2600
ಹಕ್ಕಿಯ ಕಾಲ್ಗಳು

 ನಾನು ಚಿತ್ರ ತೆಗೆಯುವುದರಲ್ಲಿದ್ದೆ. ಇಷ್ಟರೊಳಗೆ ಮನೆಯ ಕೆಲವು ಮಂದಿಗೂ ವಿಷಯ ತಿಳಿದು ಧಾವಿಸಿ ಬಂದರು. ತಂಗಿಯಂತೂ ಕಣ್ಣೀರು ಸುರಿಸುವುದೊಂದು ಬಾಕಿ. "ಓನಾಯ್ತು ನಿಂಗೆ, ಯಾಕೆ ಹಾರುದಿಲ್ಲ", ಎಂದು ನವಿರಾಗಿ ಸವರುತ್ತಿದ್ದಳು.  "ನಾನು ರೇಖಿ ಮಾಡುದಾ, ಗುಣ ಆತ್ ಅದ್ಕೆ", ಆಕೆಯ ಪ್ರಶ್ನೆಗೆ "ನಿನ್ ರೇಖಿ ಎಲ್ಲಾ ನಂಬ್ಕಿ ಆಧಾರದ್ ಅದ್ಕೆ ನಿನ್ ಮೇಲೆ ಹೆಂಗ್ ನಂಬ್ಕಿ ಬತ್" ಎಂದರೂ ಆಕೆ ಸವರುವುದನ್ನು ಮುಂದುವರಿಸಿದ್ದಳು. ಒಂದೈದು ನಿಮಿಷವಾಗಿತ್ತೇನೋ.. ಆಕೆಗೆ ನಿಲ್ಲಿಸಲು ಹೇಳಿ ಅದರ ಕ್ಲೋಸ್-ಅಪ್ ಚಿತ್ರ ತೆಗೆಯಲು ಹೊರಟೆ.

DSC_2598
ಹಕ್ಕಿಯ ಕ್ಲೋಸ್-ಅಪ್

ಚಿತ್ರ ತೆಗೆದದ್ದೇ ತಡ, ತನ್ನ ಎಲ್ಲಾ ಸಾಮರ್ಥ್ಯ ಒಗ್ಗೂಡಿಸಿ ಹಕ್ಕಿ ಹಾರಲು ಅನುವಾಯಿತು. ಹೆಚ್ಚಿಗೆ ಎತ್ತರ ಹಾರಲಾರದೇ ನೆಲದ ಮಟ್ಟದಿಂದಲೇ ತೋಟದ ಕಡೆಗೆ ಹಾರಿತು. ದಾಸವಾಳ ಗಿಡಕ್ಕೆ ಢಿಕ್ಕಿ ಹೊಡೆಯಿತಾದರೂ, ಸಾವರಿಸಿಕೊಂಡು ಮುನ್ನುಗ್ಗಿ ನುಗ್ಗೆ ಗಿಡದ ಮೇಲೆ ಕುಳಿತುಕೊಂಡಿತು. "ಕಂಡ್ಯ ನಾನ್ ಬಳ್ಚಿದ್ದಕ್ಕೇ ಅದಕ್ಕೆ ಗುಣ ಆಯಿ ಹಾರಿ ಹೋದ್" ಎಂದು ತಂಗಿ ಉದ್ಗರಿಸಿದಳು. "ನಾನೂ ನೀರು, ಅಕ್ಕಿ ಹಾಕಿದ್ದೆ", ತಮ್ಮ ತನ್ನ ದನಿಗೂಡಿಸಿದ. ನಮ್ಮನ್ನು ನೋಡಿ ಅದಕ್ಕೆ ಹೆದರಿಕೆಯಾಗಿ, ಶಕ್ತಿ ಮೀರಿ ಪ್ರಯತ್ನಿಸಿದ್ದರಿಂದ ಹಾರಲು ಸಾಧ್ಯವಾಯ್ತು ಎಂದು ಏನೂ ಮಾಡದ ನಾನು ನನ್ನ ನಿಲುವನ್ನು ಸಮರ್ಥಿಸಿಕೊಂಡೆ.

9 comments:

  1. ಮಾಣಿ, ಲೇಖನ ಬಾರಿ ಸಾಪಿತ್ತು. ಹಾಂಗೆ ಫೋಟೋನು ಲಾಯ್ಕಿತ್ತು

    ReplyDelete
  2. ಪಾಲ,
    ಓದಿನ ಕೊನೆಗೆ, ಬಹಳ ಸಂತೋಷವನ್ನು ಅನುಭವಿಸಿದೆ.

    ReplyDelete
  3. ನಿಮ್ಮ ಪ್ರಾಣಿ ಪ್ರೇಮವನ್ನು ಮೆಚ್ಚಲೇ ಬೇಕು...
    ಧನ್ಯವಾದಗಳು

    ReplyDelete
  4. Good to see you writing again :)

    ReplyDelete
  5. hoi!!! pala mama est dina ait maraya nin kathe odadhe!! , laykit marre...

    ReplyDelete
  6. ಲೇಖನ ತಂಬಾ ಚೆನ್ನಾಗಿದೆ... ಹಾಗೆಯೇ ನಿಮ್ಮ ಪ್ರಾಣಿ ಪ್ರೀತಿಯೂ ಕೂಡ

    ReplyDelete
  7. ಫಾಲ, ಹಕ್ಕಿಗೆ ರೆಕ್ಕೆಯೇ ಜೀವನ. ರೆಕ್ಕೆ ಮುರಿದರೆ ಹಕ್ಕಿಯ ಬದುಕು ದುಸ್ತರ. ಹಾರಲಾಗದ ಅಥವಾ ಭೂಮಿಯ ಮಟ್ಟಕ್ಕೋ ಚಿಕ್ಕಗಿಡಗಳ ಮಟ್ಟಕ್ಕೋ ಆಯಾಸಪಟ್ಟು ಹಾರುವ ಹಕ್ಕಿ ಬಹಳ ಕಾಲ ಬದುಕುವುದಿಲ್ಲ. ಸೃಷ್ಟಿಯ ಹಲವಾರು ಅನಿವಾರ್ಯತೆಗಳಲ್ಲಿ ಮನುಷ್ಯ ಅಪಘಾತಕ್ಕೆ ಈಡಾಗಿ ಅಂಗಾಂಗಗಳನ್ನು ಕಳೆದುಕೊಂಡಂತೇ ಉಳಿದ ಪ್ರಾಣಿಗಳು ಅದುಹೇಗೋ ಸಂಕಷ್ಟಗಳಿಗೆ ಈಡಾಗುತ್ತವೆ. ಇಲ್ಲಿ ಮನುಷ್ಯ ಇತರರ ಸಹಾಯದಿಂದ ಬದುಕಬಹುದು, ಆದರೆ ಉಳಿದ ಜೀವಿಗಳು ಪರಾವಲಂಬಿಗಳಲ್ಲ, ಮೇಲಾಗಿ ಅವುಗಳನ್ನು ತಿಂದು ಬದುಕುವ ಇನ್ನಾವುದೋ ಪ್ರಾಣಿ/ಪಕ್ಷಿಗಳು ಅವುಗಳ ದೌರ್ಬಲ್ಯವನ್ನು ಕಂಡು ದಾಳಿ ಇಟ್ಟು ತಿಂದುತೇಗಬಹುದು. ಅಬಲೆ ಹೆಣ್ಣನ್ನು ಹಿಂದಕ್ಕೆ ಕೆಲವೊಮ್ಮೆ ರೆಕ್ಕೆ ಮುರಿದ ಹಕ್ಕಿಗೆ ಹೋಲಿಸುತ್ತಿದ್ದರು. ಲೇಖನ ಜೊತೆಗಿರುವ ಚಿತ್ರಗಳು ಕಣ್ಣೀರು ತರಿಸಿದವು.

    ReplyDelete

ವರ್ಗ

Amomum (1) ficus krishnae (1) Gangtok (1) Nikon 40mm f/2.8 Micro (10) paris (1) Sikkim (8) snow (1) Yuksom (5) ಅನಿಮೇಟೆಡ್ (1) ಅನುಭವ ಕಥನ (7) ಅಮೂರ್ತ (1) ಆಟೋಟ (2) ಆಫಿಡ್ (1) ಇರುವೆ (6) ಉಡುಪಿ (4) ಉಯ್ಯಾಲೆ (1) ಉರಗ (3) ಏರಿ (1) ಒಂಟಿ ಚಕ್ರದ ಸೈಕಲ್ (1) ಒಯ್ಯುಗೆ (6) ಕದ (1) ಕಂದು ಏಲಕ್ಕಿ (1) ಕನ್ನಡ (2) ಕಪ್ಪು ಏಲಕ್ಕಿ (1) ಕಪ್ಪು-ಬಿಳುಪು (5) ಕಂಬಳ (1) ಕಂಬಳಿಹುಳು (2) ಕವನ (15) ಕವಿ ಶೈಲ (1) ಕಸರತ್ತು (1) ಕಳಸ (1) ಕಳ್ಳತನ (1) ಕಾವೇರಿ (1) ಕಾಳಾವಾರ ಬೆಟ್ಟ (1) ಕಾಳಿಂಗ ಸರ್ಪ (1) ಕಿಸ್ಕಾರ (1) ಕೀಟ ಪ್ರಪಂಚ (35) ಕುಂದಾಪುರ (1) ಕುವೆಂಪು (1) ಕೃಷಿ (9) ಕೃಷಿ ಮೇಳ (4) ಕೆರೆ (2) ಕೆಲಸ (2) ಕೆಸು (2) ಕೆಳದಿ (1) ಕೊಕ್ಕರೆ ಬೆಳ್ಳೂರು (1) ಕೋಟ (8) ಖಗೋಳ ಗಡಿಯಾರ (1) ಗವಿ (1) ಗುಡಿ ಕೈಗಾರಿಕೆ (1) ಗುಡ್ಡ (2) ಗುಹೆ (1) ಚಾರಣ (3) ಚಿಕ್ಕಮಗಳೂರು (1) ಚಿಟ್ಟಾಣಿ (1) ಚಿಟ್ಟೆಗಳು (3) ಚಿತ್ರ ಪುಟ (102) ಚಿತ್ರದುರ್ಗ (1) ಚಿತ್ರಪುಟ (1) ಚೌಕಾಶಿ (1) ಛಾಯಾಗ್ರಹಣ (24) ಜನ ಜೀವನ (52) ಜನಪದ (2) ಜರ್ಮನಿ (1) ಜಲಪಾತ (1) ಜೆಕ್ ಗಣರಾಜ್ಯ (4) ಜೇಡ (3) ಜೇನು ಸಾಕಣೆ (1) ಜೋಡಿ (1) ತರಕಾರಿ (2) ತುಮಕೂರು (2) ತೆಂಗಿನ ಕಾಯಿ (1) ತೆಂಗಿನ ತೋಟ (1) ದಸರ (4) ದೇವವೃಂದ (1) ದೇವಸ್ಠಾನ (1) ದೇವಸ್ಥಾನ (1) ದೊಡ್ಡ ಏಲಕ್ಕಿ (1) ಧಾರವಾಡ (1) ನಗರ (1) ನಂಬಿಕೆ (1) ನಾಟಕ (1) ನೀರ್ಹಕ್ಕಿ (6) ಪತಂಗ (1) ಪತ್ರಿಕೋದ್ಯಮ (1) ಪಶ್ಚಿಮ ಘಟ್ಟ (2) ಪಾರ್ಕ್ (1) ಪಾಳು (1) ಪುಸ್ತಕ ಬಿಡುಗಡೆ (1) ಪೋರ್ಟ್ರೈಟ್ (8) ಪ್ಯಾನಿಂಗ್ (1) ಪ್ರಬಂಧ (2) ಪ್ರವಾಸ ಕಥನ (3) ಪ್ರಾಹ (1) ಪ್ಲಾಸ್ಟಿಕ್ (1) ಬಕೇಟ್ (1) ಬಂಡಿ (1) ಬಣ್ಣ (1) ಬನವಾಸಿ (1) ಬಳ್ಳಿ (1) ಬಾಗಿಲು (1) ಬಾರ್ಕೂರು (1) ಬೀಗ (1) ಬೆಂಕಿ (1) ಬೆಂಗಳೂರಿನ ಚಿತ್ರಗಳು (5) ಬೆಂಗಳೂರು (27) ಬೆಳಕು (1) ಬೇಸಾಯ (1) ಬ್ರಹ್ಮಾವರ (1) ಭಾರತ ಬಂದ್ (1) ಭಿಕ್ಷುಕರು (1) ಮಕ್ಕಳು (10) ಮಗು (1) ಮಂಜು (2) ಮಮ್ಮಮ್ (3) ಮಲೆನಾಡು (1) ಮಳೆ (1) ಮಳೆಗಾಲ (2) ಮಾರಿಕಣಿವೆ (1) ಮುಸ್ಸಂಜೆ (1) ಮೇಲುಕೋಟೆ (2) ಮೇವು (1) ಮೈಸೂರು (7) ಮೋಡ (2) ಮ್ಯಾಕ್ರೋ (12) ಯಕ್ಷಗಾನ (2) ರಸ್ತೆ (5) ರಾತ್ರಿ ನೋಟ (3) ರೈಮ್ (1) ರೈಲು (2) ರೈಲುಹಳಿ (1) ಲಲಿತ ಪ್ರಬಂಧ (6) ಲೇಪಾಕ್ಷಿ (1) ವಂಡಾರ್ (1) ವಾಸ್ತು ಶಿಲ್ಪ (1) ವಾಹನ (2) ವಿವೇಕ (1) ವಿಸ್ತರಣೆ (1) ವ್ಯಕ್ತಿ ವಿಷಯ (3) ವ್ಯಾಪಾರ (1) ಶಾಲೆ (1) ಶಿರಸಿ (1) ಶಿರಸಿ. ಸೈಕಲ್ (1) ಶಿಲ್ಪ (1) ಶಿವನಸಮುದ್ರ (1) ಶುಭಾಶಯ (2) ಸಣ್ಣ ಕಥೆ (4) ಸಂತೆ (2) ಸಮುದ್ರ (2) ಸಮುದ್ರ ಜೀವಿ (2) ಸಸ್ಯ ಪ್ರಪಂಚ (12) ಸಾಕು ಪ್ರಾಣಿ (4) ಸಾಗಾಟ (1) ಸಾಸ್ತಾನ (1) ಸಿಕ್ಕಿಂ (3) ಸೈಕಲ್ (5) ಸೈಕಲ್ ಯಾತ್ರೆ (1) ಸ್ಕಂದಗಿರಿ (1) ಸ್ತೂಪ (1) ಸ್ಪರ್ಧೆ (1) ಹಕ್ಕಿಗಳು (21) ಹರಿಹರ (1) ಹಳ್ಳಿ (3) ಹಿಮ (1) ಹೂಗಳು (5) ಹೂವು (1) ಹೊಸ ವರ್ಷ (1) ಹೋಂ ಸ್ಟೇ (1) ಹೌರಾ (1)