
ಇತ್ತೀಚೆಗೆ ಕಂಪ್ಲಿಗೆ ಹೋದಾಗ ತೆಗೆದ ಚಿತ್ರ. ಸಂಜೆಯ ವಾಯುವಿಹಾರಕ್ಕೆ ತೆರಳಿ, ಕತ್ತಲಲ್ಲಿ ಮರಳುವಾಗ, ನನ್ನ ಎದುರುಗಡೆ ಹೆಂಗಸೊಬ್ಬರು ದಿನದ ಕೆಲಸ ಮುಗಿಸಿ, ಹೊರೆಯನ್ನು ತಲೆಯ ಮೇಲಿರಿಸಿಕೊಂಡು ಮನೆಗೆ ಹೊರಟಿದ್ದರು. ಎದುರುಗಡೆಯಿಂದ ವಾಹನವೊಂದು ಬಂದಾಗ ನನಗೆ ಕಂಡಿದ್ದು ಈ ಮೇಲಿನಂತ ಕಾಣಿಸಿದ ದೃಷ್ಯ. ಕತ್ತಲಾಗಿದೆಯೆಂದು ಒಳಗಿಟ್ಟ ಕ್ಯಾಮರಾ ಹೊರಗೆ ತೆಗೆದು, ಈ ಚಿತ್ರ ತೆಗೆಯಬಹುದೇ ಎಂದು ಚಿಂತಿಸುತ್ತಾ, ISO ೬೪೦೦ಕ್ಕೆ ಇರಿಸಿಕೊಂಡು, -೪ ಸ್ಟೆಪ್ ಎಕ್ಸ್-ಪೋಶರ್ ಕಾಂಪನ್ಸೇಶನ್ ಉಪಯೋಗಿಸಿ ತೆಗೆದ ಚಿತ್ರ. ದಾರಿಯಲ್ಲಿ ಎರಡೂ ಕಡೆಯಿಂದ ವಾಹನಗಳು ಓಡಾಡುತ್ತಿತ್ತಾದ್ದರಿಂದ, ನನಗೆ ಬೇಕಾದ ಮುಂದಿನಿಂದ ಬೀಳುವಂತಹ ವಾಹನದ ಬೆಳಕಿನ ಸಂಯೋಜನೆಗಾಗಿ ಆಕೆಯ ಹಿಂದೆ ೧ ಕಿ.ಮೀ ನಡೆಯಬೇಕಾಗಿ ಬಂತು.