ಮನದ ಸೊಬಗ ಬಯಸಿದ್ದೆ,
ಮೈಯ ಅಲಂಕಾರವನಲ್ಲ
ಕಣ್ತುಂಬ ತುಂಬು ಪ್ರೀತಿಯ ಬಯಸಿದ್ದೆ,
ತುಟಿಯ ನಗುವನಲ್ಲ
ಮೊಗದಲಿ ಕಾತರದ ನಿರೀಕ್ಷೆಯ ಬಯಸಿದ್ದೆ,
ಅಗಲಿಕೆಯ ನಿರಾಳತೆಯನಲ್ಲ
ಭೇಟಿಯ ಮಧುರ ಎದೆಬಡಿತವ ಬಯಸಿದ್ದೆ,
ಮೈಯ ಸ್ಪರ್ಷವನಲ್ಲ
ಏಕಾಂತದಲಿ ಜೊತೆ ನಡೆಯ ಬಯಸಿದ್ದೆ,
ಗದ್ದಲದೊಳು ಧಾವಿಸಲಲ್ಲ
ಪ್ರೀತಿಯ ಕೈತುತ್ತು ಬಯಸಿದ್ದೆ,
ರುಚಿ ಅಡುಗೆಯನಲ್ಲ
ಸತ್ಯದ ಸೌಂದರ್ಯವ ಬಯಸಿದ್ದೆ,
ಸುಳ್ಳು ಹಿತನುಡಿಯನಲ್ಲ
ಸಂತಸದಿಂದಿರಬೇಕೆಂದು ಬಯಸಿದ್ದೆ,
ಮುಖವಾಡ ಧರಿಸಲಲ್ಲ
ತುಂಬಾನೇ ಚೆನ್ನಾಗಿದೆ ರೀ, ಭಾಳ ಇಷ್ಟ ಆಯ್ತು.
ReplyDeleteಗೀತಾ,
ReplyDelete"ಅನುಭವ ಮಂಟಪ"ಕ್ಕೆ ಸ್ವಾಗತ, ನಿಮ್ಮ ಅನಿಸಿಕೆಗೆ ವಂದನೆಗಳು.
ಕವನ ತುಂಬಾ ಇಷ್ಟ ಆಯ್ತು.....
ReplyDeleteಚೆನ್ನಾಗಿದೆ...
ReplyDeleteಸೂಪರ್
ReplyDeletechennagide. Kepp it up!
ReplyDeleteಪಾಲಚಂದ್ರ,
ReplyDeleteವಾಸ್ತವಕ್ಕೆ ಹತ್ತಿರವಾಗಿದೆ...
ಬಯಕೆಯ ಭಾವುಕತೆಯಲ್ಲಿ ಮಿಂದೆದ್ಧೆ....
ReplyDeleteತುಂಬಾ ಚೆನ್ನಾಗಿದೆ....
Chennagide pala......
ReplyDeleteBardad yaru...?
ಕವನ + Photo ತುಂಬಾ ಚೆನ್ನಾಗಿದೆ.
ReplyDeleteಪ್ರತಿಕ್ರಿಯಿಸಿದ ಎಲ್ಲರಿಗೂ ವಂದನೆಗಳು
ReplyDeleteಬಹಳ ಚೆನ್ನಾಗಿದೆ.
ReplyDelete