ಹಾದಿಯಿರದ ಕಾನನದಲಿ ಸವಿಯಿದೆ;
ತೀರದ ಏಕಾಂತದಲಿ ಸೊಬಗಿದೆ;
ಕಡಲಾಳದಲಿ, ಅಲೆಯ ಸಂಗೀತದಲಿ,
ಕಟ್ಟುಪಾಡಿರದ ಸಮಾಜವಿದೆ;
ಮನುಜರಲಿ ಒಲವು ಕಡಿಮೆಯೆಂದಲ್ಲ,
ಆದರೆ ನಿಸರ್ಗವೆನಗೆ ಹೆಚ್ಚು ಮೆಚ್ಚು.
ಚಿತ್ರ ಕೃಪೆ: ಪಾಲ [ಮೂಲ ಬರಹ ಓದಲು ಚಿತ್ರದ ಮೇಲೆ ಕ್ಲಿಕ್ಕಿಸಿ]
ಅನುಭವಿಸದೇ ಹಾಡಿದ ಹಾಡು ಹಾಡಲ್ಲ, ಅನುಭವಿಸದೇ ಬಿಡಿಸಿದ ಚಿತ್ರ ಚಿತ್ರವಲ್ಲ, ಅನುಭವಿಸದೇ ಬರೆದ ಬರಹ ಬರಹವಲ್ಲ!
ಹಾದಿಯಿರದ ಕಾನನ ಕಠೋರ
ReplyDeleteಏಕಾಂತದಲಿ ತೀರದ ಸೊಬಗು
ಕಡಲಾಳದಲಿ ಭಯಂಕರ ರುದ್ರನಾದ
ಸೂತ್ರವಿಲ್ಲದ ಗಾಳಿಪಟದಂತೆ
ಮನುಜರು ಹೃದಯವಂತರೆಂದಲ್ಲ
ಬುದ್ಧಿ ಮೇಲಿದ್ದರೆ ಇದು ಅಚ್ಚು ಮೆಚ್ಚು
ನನಗೆ ಬುದ್ಧಿಗಿಂತ ಹೃದಯವೇ ಮೇಲು. ನನಗೆ ಮೂಲವೇ ಹೆಚ್ಚು ಮೆಚ್ಚು.
ರಾಜೀವ,
ReplyDeleteನಿಮ್ಮ ಭಿನ್ನ ದೃಷ್ಟಿಕೋನವನ್ನು ಸುಂದರ ಪದಗಳೊಂದಿಗೆ ಹಂಚಿಕೊಂಡಿದ್ದಕ್ಕೆ ಧನ್ಯವಾದ.
ಸಕತ್ ಆಗಿದೆ ಪಾಲಣ್ಣ :)
ReplyDeleteಇಂತಿ
ವಿನಯ
<< ನಿಮ್ಮ ಭಿನ್ನ ದೃಷ್ಟಿಕೋನವನ್ನು >>
ReplyDeleteನನ್ನ ದೃಷ್ಟಿಕೋನ?
" ನನಗೆ ಮೂಲವೇ ಹೆಚ್ಚು ಮೆಚ್ಚು "
ಇದು ಕಾಣಿಸದೇ ಹೋಯಿತೆ?
<<" ನನಗೆ ಮೂಲವೇ ಹೆಚ್ಚು ಮೆಚ್ಚು "
ReplyDeleteಇದು ಕಾಣಿಸದೇ ಹೋಯಿತೆ
>>
ರಾಜೀವ,
ಹುಂ ಕಣ್ರೀ :(
ಪಾಲ,
ReplyDeleteಮೂಲ ಕವನ ಬಹಳ ಚೆನ್ನಾಗಿದೆ...
ನಿಮ್ಮ ಭಾವನುವಾದ ಕೂಡ ಸೊಗಸಾಗಿದೆ.. ಎರಡು ಮಾತಿಲ್ಲ..
ಪಾಲಚಂದ್ರ,
ReplyDeleteಫೋಟೋ ಚೆನ್ನಾಗಿದೆ..
ಕವನ ಚೆನ್ನಾಗಿದೆ. Engagement ಆದಮೇಲೆ ಬರೆಯುವ ಹಾಗು ಫೋಟೋಗ್ರಫಿ ಹವ್ಯಾಸಗಳು ಕಡಿಮೆ ಆಗಿದೆ ಅನಿಸುತ್ತೆ.
ReplyDeleteಕಾರಂತ್
ಚಂದದ ಪೋಟೋಗೆ ಚಂದದ ಕವನ. ಧನ್ಯವಾದ
ReplyDelete-ಧರಿತ್ರಿ
ಸರ್, ಕವನದ ಸಾಲುಗಳು ಹಾಗೂ ಅದಕ್ಕೆ ಹೊಂದಿಕೊಂಡಂತಹ ಚಿತ್ರ ಎರಡೂ ಒಂದಕ್ಕೊಂದು ಹೊಂದಿಕೊಂಡಿವೆ. ಧನ್ಯವಾದಗಳು.
ReplyDeleteಕವನ ಸೊಗಸಾಗಿದೆ....
ReplyDelete