Saturday, November 29, 2008

Aperture ಮತ್ತು Depth of Field

Shutter Speed ಅಲ್ಲದೇ ಛಾಯಾಗ್ರಹಣದಲ್ಲಿ ಬೆಳಕನ್ನು ನಿಯಂತ್ರಿಸಲು ಸಹಾಯಕವಾಗುವ ಇನ್ನೊಂದು ಅಂಶ "Aperture" ಅಥವಾ ಬೆಳಕಿಂಡಿ. ಚಿತ್ರ ತೆಗೆಯುವಾಗ ಲೆನ್ಸನ ತೆರವು ಎಷ್ಟು ದೊಡ್ಡದಿರುತ್ತ ದೋ ಅದೇ ಬೆಳಕಿಂಡಿ. ಈ ತೆರವು ದೊಡ್ಡದಾದಷ್ಟೂ ಕ್ಯಾಮರಾದ ಸೆನ್ಸರ್ಗೆ ತಲುಪುವ ಬೆಳಕಿನ ಪ್ರಮಾಣ ಅಧಿಕವಾಗಿರುತ್ತದೆ. ಬೆಳಕಿಂಡಿಯನ್ನು ಛಾಯಾಗ್ರಹಣದಲ್ಲಿ f/2.8, f/4, f/5.2, f/8 ಎಂದು 'f-stops'ಎಂಬ ಮಾನ ದಂಡದಿಂದ ಅಳೆಯುತ್ತಾರೆ. ಇಲ್ಲಿ 'f-stops'ನ ಬೆಲೆ ಜಾಸ್ತಿಯಾದಂತೆ ಬೆಳಕಿಂಡಿಯ ಗಾತ್ರ ಕಿರಿದಾಗುತ್ತದೆ ಮತ್ತು ಸೆನ್ಸರ್ಗೆ ತಲುಪುವ ಬೆಳಕಿನ ಪ್ರಮಾಣ ಕಡಿಮೆಯಾಗುತ್ತದೆ. ಉದಾಹರಣೆಗೆ f/8 ಗಿಂತ f/2.8ನ ಬೆಳಕಿಂಡಿ ದೊಡ್ಡದು.



ಆದರೆ ಈ ಬೆಳಕಿಂಡಿ ಕೇವಲ ಬೆಳಕನ್ನು ನಿಯಂತ್ರಿಸುವುದೂ ಅಲ್ಲದೇ "Depth of Field"ನ ಮೇಲೂ ತನ್ನ ಪರಿಣಾಮ ಬೀರುತ್ತದೆ. ಪಕ್ಕದ ಚಿತ್ರದಲ್ಲಿ ಮರದೆಲೆಯ ಚಿಗುರು ಸ್ಪುಟವಾಗಿ ಕಾಣಿಸಿ ಹಿಂದಿನ ಗುಡ್ಡವು ಅಸ್ಪಷ್ಟವಾಗಿದೆ. ಅಂದರೆ ಈ ಚಿತ್ರದಲ್ಲಿ "Depth of Field"ಕಡಿಮೆಯಿದೆ. ಇಲ್ಲಿ ಚಿಗುರು ನನ್ನ ಪ್ರಧಾನ ವಿಷಯವಾಗಿದ್ದು, ಚಿತ್ರ ನೋಡುವವರ ಗಮನ ಹಿನ್ನೆಲೆಗೆ ಸರಿಯುವುದನ್ನು ತಡೆಯಲು ಅದನ್ನು ಅಸ್ಪಷ್ಟವಾಗಿಸಲು ನಾನು ಬಳಸಿದ ಬೆಳಕಿಂಡಿ f/3.5. ಅಂದರೆ ಬೆಳಕಿಂಡಿ ಹೆಚ್ಚಾದಂತೆಲ್ಲಾ "Depth of Field" ಕಡಿಮೆಯಾಗುತ್ತದೆ. ಇದೇ ಚಿತ್ರವನ್ನು f/8 ನಿಂದ ತೆಗೆದಿದ್ದರೆ "Depth of Field" ಜಾಸ್ತಿಯಾಗಿ ಗುಡ್ಡವೂ ಸ್ಪಷ್ಟವಾಗಿ ಕಾಣಿಸುತ್ತಿತ್ತು.









ಈ ಮೇಲಿನ ಎರಡು ಚಿತ್ರಗಳಲ್ಲಿ ಮಿಡತೆ ನನ್ನ ವಿಷಯ. ಆದರೆ ಸೂಕ್ಷವಾಗಿ ಗಮನಿಸಿದಾಗ ಇವೆರಡರ ನಡುವಿನ "Depth of Field" ವ್ಯತ್ಯಾಸ ತಿಳಿಯುತ್ತದೆ. ಮೊದಲ ಚಿತ್ರದಲ್ಲಿ ಕಣ್ಣು, ಮುಖ ಮಾತ್ರ ಸ್ಪುಟವಾಗಿದ್ದರೆ, ಎರಡನೆಯದರಲ್ಲಿ ಕಣ್ಣು, ಕಾಲು, ರೆಕ್ಕೆ ಎಲ್ಲವೂ ಸ್ಪುಟವಾಗಿದೆ. ಮೊದಲ ಚಿತ್ರಕ್ಕೆ f/3.5 ಹಾಗೂ ಎರಡನೆಯದ್ದಕ್ಕೆ f/8 ಬಳಸಿದ್ದರಿಂದ ಈ ವ್ಯತ್ಯಾಸ.



ಸಾಮಾನ್ಯವಾಗಿ "landscape"ನಲ್ಲಿ
ಮುನ್ನೆಲೆ, ನಡುನೆಲೆ('middle ground'ಗೆ ಪರ್ಯಾಯವಾಗಿ), ಹಿನ್ನೆಲೆ ಎಲ್ಲವೂ ಸ್ಪುಟವಾಗಿರಬೇಕಾದ್ದರಿಂದ ಕಡಿಮೆ ಬೆಳಕಿಂಡಿಯನ್ನು ಉಪಯೋಗಿಸಬಹುದು. ಕೆಳಕಿನ ಚಿತ್ರದಲ್ಲಿ ಮುನ್ನೆಲೆಯ ಮಂಟಪ, ನಡುನೆಲೆಯ ಹುಲು ಮಾನವರು, ಹಿನ್ನೆಲೆಯ ಬೆಟ್ಟ ಎಲ್ಲವೂ ಸ್ಪುಟವಾಗಿ ಕಾಣಿಸಲು f/8 ಬಳಸಿದ್ದೇನೆ.



portrait ಮತ್ತು Macro ದಲ್ಲಿ ಕೇವಲ ವಿಷಯಕ್ಕೆ ಮಹತ್ವ ಕೊಡುವುದರಿಂದ ಹೆಚ್ಚಿನ ಬೆಳಕಿಂಡಿಯನ್ನು ಉಪಯೋಗಿಸಿ ಉಳಿದದ್ದನ್ನು ಅಸ್ಪಷ್ಟವಾಗಿಸಬಹುದು. ಈ ಕೆಳಗಿನ ಚಿತ್ರದಲ್ಲಿ ಹಿನ್ನೆಲೆಯನ್ನು ಅಸ್ಪಷ್ಟವಾಗಿಸಲು ನಾನು ಬಳಸಿದ ಬೆಳಕಿಂಡಿ f/3.5


6 comments:

  1. ಉಪಯುಕ್ತ ಮಾಹಿತಿ,
    ಹಂಚಿಕೊಂಡಿದ್ದಕ್ಕೆ ನನ್ನಿ...

    ReplyDelete
  2. ನಾಲ್ಕನೆಯ ಚಿತ್ರದಲ್ಲಿ ಎಡಗಡೇಯಲ್ಲಿರುವವರು ನೀವೇ ತಾನೆ?

    ReplyDelete
  3. ಪಾಲಚಂದ್ರ ಸಾರ್, ಫೋಟೋಗ್ರಫಿಯಲ್ಲಿ ಕನ್ನಡದಲ್ಲಿ ಅವುಗಳ ತಾಂತ್ರಿಕ ಪದಗಳ್ಳನ್ನು ಅನುವಾದ ಮಾಡಿ ಹೇಳುವುದು ಸುಲಭದ ಕೆಲಸವಲ್ಲ. ಅದನ್ನು ನೀವು ಚೆನ್ನಾಗಿ ಮಾಡುತ್ತಿದ್ದೀರಿ. ಫೋಟೋ ಸಮೇತ ಮಾಹಿತಿ ನೀಡುತ್ತಿದ್ದೀರಿ. good ಕನ್ನಡದಲ್ಲಿ ಇದು ಬೇಕಿತ್ತು. ಮುಂದುವರಿಸಿ.......

    ReplyDelete
  4. ಅನಿಲ್,

    ಧನ್ಯವಾದ, ಅಂದಹಾಗೆ ಆ ಹುಲುಮಾನವ ನಾನೇ..

    ಶಿವು,
    ನಿಮ್ಮ ಪ್ರೋತ್ಸಾಹಕ್ಕೆ ನನ್ನ ವಂದನೆಗಳು.. ಒಂದು ವೇಳೆ ತಪ್ಪಿದ್ದಲ್ಲಿ ಅಥವಾ ಹೆಚ್ಚಿನ ವಿಷಯ ಬರೆಯಬೇಕಾಗಿದ್ದಲ್ಲಿ ದಯವಿಟ್ಟು ನಿಮ್ಮ ಅನುಭವ ಹಂಚಿಕೊಳ್ಳಿ

    --
    ಪಾಲ

    ReplyDelete
  5. ನಾನು ಅಪರ್ಚರ್ ಬಗ್ಗೆ ಕೇಳಿದ್ದೆನೆ ಹೊರತು ಅರ್ಥ ಮಾಡಿಕೊಂಡಿರಲಿಲ್ಲ. ನೀವು ಅದನ್ನು ಉದಾಹರಣೆಗಳ ಸಮೇತ ವಿವರಿಸಿ ಅರ್ಥವಾಗುವಂತೆ ಬರೆದಿದ್ದೀರಿ. ಧನ್ಯವಾದಗಳು.

    ReplyDelete
  6. ಹರೀಶ್,
    ಅನಿಸಿಕೆಗೆ ವಂದನೆಗಳು.
    --
    ಪಾಲ

    ReplyDelete

ವರ್ಗ

Amomum (1) ficus krishnae (1) Gangtok (1) Nikon 40mm f/2.8 Micro (10) paris (1) Sikkim (8) snow (1) Yuksom (5) ಅನಿಮೇಟೆಡ್ (1) ಅನುಭವ ಕಥನ (7) ಅಮೂರ್ತ (1) ಆಟೋಟ (2) ಆಫಿಡ್ (1) ಇರುವೆ (6) ಉಡುಪಿ (4) ಉಯ್ಯಾಲೆ (1) ಉರಗ (3) ಏರಿ (1) ಒಂಟಿ ಚಕ್ರದ ಸೈಕಲ್ (1) ಒಯ್ಯುಗೆ (6) ಕದ (1) ಕಂದು ಏಲಕ್ಕಿ (1) ಕನ್ನಡ (2) ಕಪ್ಪು ಏಲಕ್ಕಿ (1) ಕಪ್ಪು-ಬಿಳುಪು (5) ಕಂಬಳ (1) ಕಂಬಳಿಹುಳು (2) ಕವನ (15) ಕವಿ ಶೈಲ (1) ಕಸರತ್ತು (1) ಕಳಸ (1) ಕಳ್ಳತನ (1) ಕಾವೇರಿ (1) ಕಾಳಾವಾರ ಬೆಟ್ಟ (1) ಕಾಳಿಂಗ ಸರ್ಪ (1) ಕಿಸ್ಕಾರ (1) ಕೀಟ ಪ್ರಪಂಚ (35) ಕುಂದಾಪುರ (1) ಕುವೆಂಪು (1) ಕೃಷಿ (9) ಕೃಷಿ ಮೇಳ (4) ಕೆರೆ (2) ಕೆಲಸ (2) ಕೆಸು (2) ಕೆಳದಿ (1) ಕೊಕ್ಕರೆ ಬೆಳ್ಳೂರು (1) ಕೋಟ (8) ಖಗೋಳ ಗಡಿಯಾರ (1) ಗವಿ (1) ಗುಡಿ ಕೈಗಾರಿಕೆ (1) ಗುಡ್ಡ (2) ಗುಹೆ (1) ಚಾರಣ (3) ಚಿಕ್ಕಮಗಳೂರು (1) ಚಿಟ್ಟಾಣಿ (1) ಚಿಟ್ಟೆಗಳು (3) ಚಿತ್ರ ಪುಟ (102) ಚಿತ್ರದುರ್ಗ (1) ಚಿತ್ರಪುಟ (1) ಚೌಕಾಶಿ (1) ಛಾಯಾಗ್ರಹಣ (24) ಜನ ಜೀವನ (52) ಜನಪದ (2) ಜರ್ಮನಿ (1) ಜಲಪಾತ (1) ಜೆಕ್ ಗಣರಾಜ್ಯ (4) ಜೇಡ (3) ಜೇನು ಸಾಕಣೆ (1) ಜೋಡಿ (1) ತರಕಾರಿ (2) ತುಮಕೂರು (2) ತೆಂಗಿನ ಕಾಯಿ (1) ತೆಂಗಿನ ತೋಟ (1) ದಸರ (4) ದೇವವೃಂದ (1) ದೇವಸ್ಠಾನ (1) ದೇವಸ್ಥಾನ (1) ದೊಡ್ಡ ಏಲಕ್ಕಿ (1) ಧಾರವಾಡ (1) ನಗರ (1) ನಂಬಿಕೆ (1) ನಾಟಕ (1) ನೀರ್ಹಕ್ಕಿ (6) ಪತಂಗ (1) ಪತ್ರಿಕೋದ್ಯಮ (1) ಪಶ್ಚಿಮ ಘಟ್ಟ (2) ಪಾರ್ಕ್ (1) ಪಾಳು (1) ಪುಸ್ತಕ ಬಿಡುಗಡೆ (1) ಪೋರ್ಟ್ರೈಟ್ (8) ಪ್ಯಾನಿಂಗ್ (1) ಪ್ರಬಂಧ (2) ಪ್ರವಾಸ ಕಥನ (3) ಪ್ರಾಹ (1) ಪ್ಲಾಸ್ಟಿಕ್ (1) ಬಕೇಟ್ (1) ಬಂಡಿ (1) ಬಣ್ಣ (1) ಬನವಾಸಿ (1) ಬಳ್ಳಿ (1) ಬಾಗಿಲು (1) ಬಾರ್ಕೂರು (1) ಬೀಗ (1) ಬೆಂಕಿ (1) ಬೆಂಗಳೂರಿನ ಚಿತ್ರಗಳು (5) ಬೆಂಗಳೂರು (27) ಬೆಳಕು (1) ಬೇಸಾಯ (1) ಬ್ರಹ್ಮಾವರ (1) ಭಾರತ ಬಂದ್ (1) ಭಿಕ್ಷುಕರು (1) ಮಕ್ಕಳು (10) ಮಗು (1) ಮಂಜು (2) ಮಮ್ಮಮ್ (3) ಮಲೆನಾಡು (1) ಮಳೆ (1) ಮಳೆಗಾಲ (2) ಮಾರಿಕಣಿವೆ (1) ಮುಸ್ಸಂಜೆ (1) ಮೇಲುಕೋಟೆ (2) ಮೇವು (1) ಮೈಸೂರು (7) ಮೋಡ (2) ಮ್ಯಾಕ್ರೋ (12) ಯಕ್ಷಗಾನ (2) ರಸ್ತೆ (5) ರಾತ್ರಿ ನೋಟ (3) ರೈಮ್ (1) ರೈಲು (2) ರೈಲುಹಳಿ (1) ಲಲಿತ ಪ್ರಬಂಧ (6) ಲೇಪಾಕ್ಷಿ (1) ವಂಡಾರ್ (1) ವಾಸ್ತು ಶಿಲ್ಪ (1) ವಾಹನ (2) ವಿವೇಕ (1) ವಿಸ್ತರಣೆ (1) ವ್ಯಕ್ತಿ ವಿಷಯ (3) ವ್ಯಾಪಾರ (1) ಶಾಲೆ (1) ಶಿರಸಿ (1) ಶಿರಸಿ. ಸೈಕಲ್ (1) ಶಿಲ್ಪ (1) ಶಿವನಸಮುದ್ರ (1) ಶುಭಾಶಯ (2) ಸಣ್ಣ ಕಥೆ (4) ಸಂತೆ (2) ಸಮುದ್ರ (2) ಸಮುದ್ರ ಜೀವಿ (2) ಸಸ್ಯ ಪ್ರಪಂಚ (12) ಸಾಕು ಪ್ರಾಣಿ (4) ಸಾಗಾಟ (1) ಸಾಸ್ತಾನ (1) ಸಿಕ್ಕಿಂ (3) ಸೈಕಲ್ (5) ಸೈಕಲ್ ಯಾತ್ರೆ (1) ಸ್ಕಂದಗಿರಿ (1) ಸ್ತೂಪ (1) ಸ್ಪರ್ಧೆ (1) ಹಕ್ಕಿಗಳು (21) ಹರಿಹರ (1) ಹಳ್ಳಿ (3) ಹಿಮ (1) ಹೂಗಳು (5) ಹೂವು (1) ಹೊಸ ವರ್ಷ (1) ಹೋಂ ಸ್ಟೇ (1) ಹೌರಾ (1)