Monday, May 23, 2011

ಫೋಟೋ ಕಳ್ಳರಿದ್ದಾರೆ ಎಚ್ಚರಿಕೆ!

ನೀವು ತೆಗೆದ ಚಿತ್ರಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಅಂತರ್ಜಾಲಕ್ಕೆ ಸೇರಿಸ ಹೊರಟಿದ್ದೀರ? ಸ್ವಲ್ಪ ನಿಧಾನಿಸಿ, ಯಾಕೆಂದರೆ "ಫೋಟೋ ಕಳ್ಳರಿದ್ದಾರೆ ಎಚ್ಚರಿಕೆ!".  ದಿನೇ ದಿನೇ ಹೆಚ್ಚುತ್ತಿರುವ ವೃತ್ತ ಪತ್ರಿಕೆಗಳೇ ಈ ಕಳ್ಳತನ ಮಾಡುತ್ತಿರುವುದು ವಿಷಾದದ ವಿಚಾರ.

ಕಳ್ಳತನ ಏಕೆ, ಹೇಗೆ?

ಇದು instant ಕಾಲ. ಆಹಾರದಿಂದ ಹಿಡಿದು ಸುದ್ದಿಯವರೆಗೂ ನಮಗಿರುವುದು ಅವಸರವೇ. ಮಾಹಿತಿಯ ಪರಿಶೀಲನೆಗೇ ಸಮಯವಿಲ್ಲದಿರುವಾಗ ಪತ್ರಿಕೆಯಲ್ಲಿ ಪ್ರಕಟವಾಗುವ ಲೇಖನದ ಜೊತೆಗೆ ಮುದ್ರಿತವಾಗುವ ಚಿತ್ರಗಳನ್ನು ಪಡೆಯಲು ಬಿಡುವೆಲ್ಲಿದೆ. ಗೂಗಲ್, ಯಾಹೂ ಮೊದಲಾದ ಹುಡುಕು ತಾಣಗಳಲ್ಲಿ ನಿಮ್ಮ ಲೇಖನಕ್ಕೆ ಬೇಕಾದ ಕೀ-ವರ್ಡ್ ಹೊಡೆದರೆ ಲಕ್ಷಾಂತರ ಚಿತ್ರಗಳು ಕ್ಷಣಾರ್ಧದಲ್ಲಿ ಲಭಿಸುತ್ತದೆ. ಅದರಲ್ಲಿ ಕೆಲವನ್ನು ಆಯ್ದು, ತಮಗೆ ಬೇಕಾದಂತೆ ಮಾರ್ಪಡಿಸಿ ಪತ್ರಿಕೆಯಲ್ಲಿ ಪ್ರಕಟಿಸಿದರಾಯ್ತು. ಪುಕ್ಕಟೆಯಾಗಿ ಸಿಗುವ ಸರಕು ಬೇರೆ, ಛಾಯಾಗ್ರಾಹಕನಿಗೆ ಹಣ ಕೊಡುವ ಅಗತ್ಯವೂ ಇಲ್ಲ.

ಏಕೆ ಕದಿಯಬಾರದು


ಅಂತರ್ಜಾಲದ ಹುಡುಕು ತಾಣಗಳು ನಿಮಗೆ ಬೇಕಾದ ಚಿತ್ರವನ್ನು ಹುಡುಕಿ ಕೊಡುತ್ತದಾದರೂ ಆ ಚಿತ್ರದ ಸಂಪೂರ್ಣ ಹಕ್ಕು  ಚಿತ್ರ ತೆಗೆದವರ ಅಥವಾ ಅದನ್ನು ಅಂತರ್ಜಾಲಕ್ಕೆ ಸೇರಿಸಿದವರದ್ದಾಗಿರುತ್ತದೆ. ಅವರ ಅನುಮತಿಯಿಲ್ಲದೆಯೇ ಯಾವುದೇ ರೀತಿಯಲ್ಲಿ ಅದನ್ನು ಉಪಯೋಗಿಸುವುದು ಅನೀತಿ ಮಾತ್ರವಲ್ಲ ಅಪರಾಧ ಕೂಡ.ಚಿತ್ರ ತೆಗೆದವನ, ತೆಗೆಯಿಸಿಕೊಂಡವನ ವ್ಯಕ್ತಿ ಸ್ವಾತಂತ್ರ್ಯಕ್ಕೆ ಇದು ಧಕ್ಕೆಯುಂಟುಮಾಡುತ್ತದೆ. ಆದರೆ ಕಳ್ಳತನ ಮಾಡುವವರು ಇದರ ಹಿಂದೆ ಇನ್ನೊಬ್ಬರ ಪರಿಶ್ರಮ ಅಡಗಿದೆ ಎಂಬುದನ್ನು ಸುಲಭದಲ್ಲಿ ಮರೆಯುತ್ತಾರೆ. 


ಕದಿಯುವುದನ್ನು ತಡೆಗಟ್ಟುವುದು ಹೇಗೆ?


ಫ್ಲಿಕರ್, ಫೋಟೋ ಬಕೆಟ್ ಮೊದಲಾದ  ಚಿತ್ರ ತಾಣಗಳಲ್ಲಿ ನೀವು ಸೇರಿಸಿದ ಚಿತ್ರಗಳು ಹುಡುಕು ತಾಣಗಳಲ್ಲಿ ಕಾಣಿಸದಿರುವಂತೆ, ಡೌನ್ ಲೋಡ್ ಮಾಡಿಕೊಳ್ಳದಂತೆ ಸೆಟ್ಟಿಂಗ್ ಮಾಡಬಹುದು. ಚಿತ್ರದ ಮೇಲೆ ಕಾಪಿ ರೈಟ್ ವಾಟರ್ ಮಾರ್ಕ್ ಹಾಕುವುದೂ ಕೂಡ ಈ ನಿಟ್ಟಿನಲ್ಲಿ ಒಳ್ಳೆಯದು.

ಕದ್ದರೆ ಏನು ಮಾಡಬಹುದು


ಪತ್ರಿಕೆಯ ಪ್ರತಿಯನ್ನು ಸಂಗ್ರಹಿಸಿ ಈ ಮೂಲಕ ನಿಮ್ಮ ಹಕ್ಕು ಉಲ್ಲಂಘನೆಯಾದ ಬಗ್ಗೆ ಸಂಪಾದಕರಿಗೆ ಪತ್ರ ಬರೆದು ಬಹಿರಂಗ ಕ್ಷಮಾಪಣಾ ಪತ್ರ, ಪರಿಹಾರ ಕೇಳಬಹುದು. ನಿಮಗೆ ಸಂಪಾದಕರಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಲ್ಲಿ ಲಾಯರಿಂದ ನೋಟೀಸ್ ಕಳುಹಿಸಬಹುದು. ಇದಕ್ಕೂ ಪ್ರತಿಕ್ರಿಯೆ ಬಾರದಿದ್ದರೆ ಪತ್ರಿಕೆಯ ಮೇಲೆ ಕೇಸ್ ಹಾಕಿಸಿ, ಈ ವಿಚಾರವಾಗಿ ಬೇರೆ ಪತ್ರಿಕೆಯಲ್ಲಿ ಅಥವಾ ಬ್ಲಾಗಿನಲ್ಲಿ ಬರೆಯಬಹುದು.

ಇಷ್ಟಕ್ಕೂ ನಾನಿದನ್ನೆಲ್ಲಾ ಬರೆದದ್ದಕ್ಕೆ ಕಾರಣವಿದೆ. ಈಚೆಗೆ ಶಿವಮೊಗ್ಗದ ಪತ್ರಿಕೆಯೊಂದು ನನ್ನ ಕುಟುಂಬದ ಹೆಣ್ಣು ಮಗಳೊಬ್ಬಳ ಫೋಟೋವನ್ನು ನನ್ನ ಫ್ಲಿಕರ್ ಅಕೌಂಟಿನಿಂದ ಕದ್ದು, ತಮಗೆ ಬೇಕಾದಂತೆ ಮಾರ್ಪಡಿಸಿ ಲೇಖನದೊಂದಿಗೆ ಪ್ರಕಟಪಡಿಸಿತ್ತು. ಆ ಲೇಖನದ ಲೇಖಕರು ತಮ್ಮ ಫೇಸ್-ಬುಕ್ ಅಕೌಂಟಿನಲ್ಲಿ ಇದರ ಚಿತ್ರ ಪ್ರತಿಯೊಂದನ್ನು ಹಾಕಿ ತಮ್ಮ ಸ್ನೇಹಿತರನ್ನು ಟ್ಯಾಗ್ ಮಾಡಿದ್ದರು. ಇದನ್ನು ನೋಡಿದ ನನ್ನ ಸ್ನೇಹಿತರೊಬ್ಬರು ನನಗೆ ವಿಷಯ ತಿಳಿಸಿದಾಗ ಗಾಬರಿಯಾಯ್ತು.  ಆಕೆಗೆ ಪತ್ರಿಕೆಯಲ್ಲಿ ತನ್ನ ಚಿತ್ರ ಪ್ರಕಟವಾಗಿರುವುದು ಇಷ್ಟದ ವಿಷಯವಲ್ಲ. ನನಗೂ ನನ್ನ ಫೋಟೋ ಅನುಮತಿಯಿಲ್ಲದೇ  ವಾಣಿಜ್ಯ ಉದ್ದೇಶಕ್ಕಾಗಿ ಬಳಸುವುದು ಇಷ್ಟವಿಲ್ಲ.

ಇದೇ ಲೇಖನದಲ್ಲಿ ಪತ್ರಿಕೆಯವರು ಬಳಸಿದ ಇನ್ನೊಂದು ಚಿತ್ರದ್ದೂ ಇದೇ ಕಥೆ. ಅಂತರ್ಜಾಲದಿಂದ ಹುಡುಕಿದ ಈ ಚಿತ್ರಕ್ಕೆ ವಾಟರ್-ಮಾರ್ಕ್ ನಲ್ಲಿ ಕಾಪಿರೈಟ್ ಹಾಕಿದ್ದರೂ ಪತ್ರಿಕೆಯವರು ಅದನ್ನು ಅಳಿಸುವ ಜಾಣತನ ತೋರಿದ್ದಾರೆ.

ಪೇಸ್-ಬುಕ್ಕಿನಲ್ಲಿ ಲೇಖಕರು ಹಾಕಿಕೊಂಡ ಪ್ರತಿಯನ್ನು ತೆಗೆಯುವಂತೆ ಆದೇಶಿಸಿದ ನಂತರ ಲೇಖಕರು ಚಿತ್ರವನ್ನು ತೆಗೆದು, "ಇನ್ನು ಮುಂದೆ ತನಗೆ ಬರೆಯುವುದು ಬೇಡವೆನಿಸುತ್ತಿದೆ" ಎಂದು status ಹಾಕಿಕೊಂಡಿದ್ದರು. ಇದೇ ರೀತಿ ಕಳ್ಳತನವಾದರೆ ನನ್ನಂತವರಿಗೂ ಇನ್ನು ಮುಂದೆ ಚಿತ್ರವನ್ನು ಅಂತರ್ಜಾಲದಲ್ಲಿ ಪ್ರಕಟಿಸಲು ಮನಸ್ಸು ಬಾರದೇನೋ! ನಾನೇನಾದರೂ ನನ್ನ ಚಿತ್ರಕ್ಕೆ ಆ ಪತ್ರಿಕೆಯ ಒಂದು ಬರಹ ಹೊಂದುತ್ತದೆ ಎಂದು ಅವರ ಅನುಮತಿಯಿಲ್ಲದೇ ಅದನ್ನು ನನ್ನ ಬ್ಲಾಗಿನಲ್ಲಿ ಪ್ರಕಟಿಸಿದ್ದರೆ ಪತ್ರಿಕೆಯವರು ಸುಮ್ಮನಿರುತ್ತಿದ್ದರೇ?

ಇದರ ಬಗ್ಗೆ ನನ್ನ ಆಕ್ಷೇಪ ವ್ಯಕ್ತ ಪಡಿಸಿದಾಗ "ವಿಷಾದವಿದೆ"  ಎಂಬ ವಿಷಯದೊಂದಿಗೆ ಸಂಪಾದಕರು ಒಂದು ದಿನದ ನಂತರ ಪತ್ರಿಸಿದ್ದರು. ಅವರ ಪ್ರತಿಕ್ರಿಯೆಯಲ್ಲಿ ತಮ್ಮ ಸಮರ್ಥನೆಯಿತ್ತೇ ಹೊರತು ತಾವು ಮಾಡಿದ್ದು ತಪ್ಪು, ನಿಮ್ಮಲ್ಲಿ ಕ್ಷಮೆಯಾಚಿಸುತ್ತೇನೆ ಎಂಬುದರ ಕುರಿತು ಒಂದು ವಾಕ್ಯವೂ ಇಲ್ಲ. ನಿಮಗೆ ಕ್ರೆಡಿಟ್ ಕೊಡಬೇಕಿತ್ತು ಎನ್ನುವುದು ಅವರ ಅಭಿಪ್ರಾಯವೇ ಹೊರತು ನನ್ನ ಅಪ್ಪಣೆ ಪಡೆಯಬೇಕಿತ್ತೆಂಬ ತಿಳಿವು ಅವರಿಗಿಲ್ಲ.

ನಿಮಗೂ ಮುಂದೊಂದು ದಿನ ಈ ಪರಿಸ್ಥಿತಿ ಎದುರಾಗಬಹುದು. ಪತ್ರಿಕೋದ್ಯಮದವರ ಈ ನಡವಳಿಕೆಗೆ ಕಡಿವಾಣ ಹಾಕಲು ಸೂಕ್ತ ಕ್ರಮ ಕೈಗೊಳ್ಳುವುದೊಳಿತು.

14 comments:

 1. ನಿಜಕ್ಕೂ ಬೇಸರ ತರಿಸುವ ವಿಷಯ...ಪ್ರಕಟಣೆಗೆ ಮೊದಲು ನಿಮ್ಮ ಅನುಮತಿ ಪಡೆಯಬೇಕಿತ್ತು.

  ReplyDelete
 2. ಕಂಡಿತ ಈ ರೀತಿ ಮಾಡಬಾರದಾಗಿತ್ತು.. ಚಿತ್ರವನ್ನು ಪ್ರಕಟಿಸಿದ್ದರೂ ಚಿತ್ರವನ್ನು ತೆಗೆದವನರ ಹೆಸರನ್ನು ಚಿತ್ರದಲ್ಲಿ ಸೇರಿಸಬೇಕಿತ್ತು. ಇದು ಉತ್ತಮರ ಲಕ್ಷಣವಂತೂ ಅಲ್ಲವೇ ಅಲ್ಲ.

  ReplyDelete
 3. ಈ ಪತ್ರಿಕೆಯ ಹೆಸರನ್ನು ನೀವು ಕೊಡಬೇಕಾಗಿತ್ತು. ಕಳ್ಳನಿಗೆ ತನ್ನ ಮುಖ ಕಂಡಂತಾಗುತ್ತಿತ್ತು.

  ReplyDelete
 4. ಬಿಟ್ಟಿಯಾಗಿ ದೊರಕುವ ಮಾಹಿತಿಯ ದುರ್ಬಳಕೆ ಅದೂ ವಾಣಿಜ್ಯ ಉದ್ದೇಶಕ್ಕೆ ತುಂಬಾ ಕೆಟ್ಟ ಬುದ್ಧಿ. ನಾನೂ ನೋಡಿದ್ದೆ ಆ ಲೇಖಕರ ಫೇಸ್-ಬುಕ್ ಪುಟ. ಸಮಾಜೋದ್ಧಾರದ ಜವಾಬ್ದಾರಿ ಹೊತ್ತಿರುವ ಪತ್ರಿಕೆಯ ಸಂಪಾದಕರೂ ಒಂದು ಕ್ಷಮಾರ್ಪಣೆಯ ಯೋಚನೆ ಮಾಡಿಲ್ಲ ಹಾಗೂ ಇಂಥಹ ಲೇಖಕರಿಗೆ ಕಡಿವಾಣ ಹಾಕುವುದು ಸಾಧ್ಯವಿಲ್ಲ ಎಂದರೆ ತುಂಬಾ ಬೇಸರದ ವಿಷಯ. ಕಳ್ಳನಿಗೂ ಒಂದು ನೈತಿಕತೆ ಇರುತ್ತದೆ. ಸಾಮಾನ್ಯ ವಿಷಯಗಳಾದರೆ ಬೇರೆ ಸಂಗತಿ. ಅದು ಬಿಟ್ಟು ಇತರರ ವೈಯುಕ್ತಿಕ ಚಿತ್ರ/ವಿಷಯಗಳನ್ನು ಕದಿಯುವ ಉಸಾಬರಿ ಏಕೆ? ಅದು ಎಷ್ಟು ನೋವು ತರುವ ವಿಷಯ ಎಂಬ ಸಾಮಾನ್ಯ ಜ್ಞಾನ ಇಲ್ಲವೇ ಇವರಿಗೆ? ಒಂದು ವೇಳೆ ಕ್ಷಮೆ ಕೇಳಿದರೂ, ಪತ್ರಿಕೆಯ ಪ್ರತಿಗಳು ಈಗಾಗಲೇ ಹಂಚಿ ಹೋಗಿವೆ. ಇದರ ನಷ್ಟ ತುಂಬಲು ಸಿದ್ಧರಿದ್ದಾರೆಯೇ ಲೇಖಕರು? ಇಷ್ಟೆಲ್ಲಾ ಮಾಡಿ, ಕ್ಷಮೆಯೂ ಕೇಳದೆ "ಬರೆಯಲು ಇಷ್ಟವಿಲ್ಲವಾಗಿದೆ" ಎನ್ನುವ status ಯಾವ ಪುರುಷಾರ್ಥಕ್ಕೆ?

  ReplyDelete
 5. ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದ..

  ಸುನಾಥ್, ರವೀಂದ್ರ,
  ಪತ್ರಿಕೆಯ ಹೆಸರು ಬಹಿರಂಗ ಪಡಿಸದೇ ಇದ್ದಿದ್ದಕ್ಕೆ ಕಾರಣವಿದೆ. ಪತ್ರಿಕೆಯ ಎಡಿಟರ್ ಜೊತೆ ಮಾತನಾಡಿದಾಗ, "ನಿಮ್ಮ personal photo searchನಲ್ಲಿ ಬರುವಂತೆ ಏಕೆ ಹಾಕಿದ್ದು.. ಪೋಟೋ ಹಾಕಿ ಸರ್ಕ್ಯುಲೇಶನ್ ಜಾಸ್ತಿ ಮಾಡೋ ಅಗತ್ಯ ನಮಗಿಲ್ಲ.. ಸರ್ಚಿನಲ್ಲಿ ಬಂದ ಫೋಟೋ ಓಪನ್ ಸೋರ್ಸ್.. ಅದನ್ನು ಬಳಸಿಕೊಳ್ಳಬಹುದು" ಎಂಬ ಉದ್ದಟತನದ ಮಾತನ್ನಾಡಿದ್ದಾರೆ.. ಅವರಿಗೆ ಅವರ limitation ತೋರಿಸಬೇಕಾದರೆ.. ಕೇಸ್ ಹಾಕಬೇಕಾಗುತ್ತದೆ.. ಆ ಉದ್ದೇಶದಿಂದ ಇನ್ನೂ ಪತ್ರಿಕೆಯ ಹೆಸರು ಬಹಿರಂಗ ಪಡಿಸಲಿಲ್ಲ.. ಮುಂದೇನಾಗುತ್ತದೆ ಎಂದು ತಿಳಿಸುತ್ತೇನೆ..

  ReplyDelete
 6. ಆಹಾ... ಓಪನ್ ಸೋರ್ಸ್ ಅಂತಾ...

  ಪಾಲ, ನಾವು ನಿನ್ನ ಜೊತೆ ಇದ್ದೇವೆ, ಕಲಿಸೋಣ ಪಾಠ!

  ReplyDelete
 7. He he he, 'Searched photos are Open Source!!!'.. atrociously ridiculous. How stupid these people can turn out to be!!

  I suggest u go ahead and put a case. Teach them a lesson to start behaving reasonably.

  ReplyDelete
 8. ಗಾಂಪತನದ ಪರಮಾವಧಿ ಆ ಮಾತು. ಓಪನ್ ಸೋರ್ಸ್ ಫೋಟೋಗಳಿಗೆ ಯಾವಾಗ ಬಂತಪ್ಪ? ತಮಾಷೆಯಾಗಿದೆ. ಕ್ರಿಯೇಟಿವ್ ಕಾಮನ್ಸ್ ಮುಕ್ತ ಹಂಚಿಕೆ ಕೇಳಿದ್ದೇನೆ ಅಷ್ಟೇ. ಅದರಲ್ಲೂ ಅದರದ್ದೇ ಆದ licensing ಇದೆ. ಇದ್ದುದ್ದನ್ನೆಲ್ಲ ಬೇಕಾಬಿಟ್ಟಿ ಕಿತ್ತುಕೊಳ್ಳುವುದಕ್ಕೆ ಪ್ರಪಂಚದ ಯಾವ license ನಿಯಮಗಳೂ ಅನುವು ಮಾಡುವುದಿಲ್ಲ. ಓಪನ್ ಸೋರ್ಸ್ ಬಗ್ಗೆ ಇಷ್ಟೆಲ್ಲಾ ಮಾತಾಡುವವರಿಗೆ ಮೂಲ ಕತೃವಿಗೆ ಕೊಡಬೇಕಾದ ಕ್ರೆಡಿಟ್ ಬಗ್ಗೆ ಜಾಣ ಮರೆವೆ?

  ReplyDelete
 9. ಪಾಲಚಂದ್ರ ಇಂಥ ಅನುಭವ ನನಗೂ ಆಗಿದೆ. ಈಗ ಇದನ್ನು ತೀರ್ವವಾಗಿ ಪ್ರತಿಭಟಿಸುವ ಕಾಲಬಂದಿದೆ. ಅನುಮತಿಯಿಲ್ಲದೆ ಹೀಗೆ ಕದ್ದು ಪ್ರಕಟಿಸುವ ಪತ್ರಿಕೆಗೆ ಮತ್ತು ಆ ಸಂಪಾದಕರಿಗೆ ನಾಚಿಕೆಯಾಗುವುದಿಲ್ಲವೇ? ಇವರು ನಮ್ಮ ರಾಜಕಾರಣಿಗಳಿಗಿಂತ ಕೀಳು ಮಟ್ಟಕ್ಕೆ ಇಳಿದಿದ್ದಾರೆ ಅನ್ನಿಸುತ್ತೆ.
  ಅವರಿಗೆ ಬುದ್ಧಿ ಕಲಿಸುವ ಕಾಲ ಬಂದಿದೆ. ನೀವು ಕೇಸ್ ಹಾಕುವಾಗ ನಮಗೂ ತಿಳಿಸಿ ನಾವು ಬೆಂಬಲಿಸುತ್ತೇವೆ.

  ReplyDelete
 10. ಪಾಲ ,
  ಈಗ್ಗೆ ಕೆಲವು ತಿಂಗಳುಗಳ ಹಿಂದೆ , ನಿಮ್ಮ ಬ್ಲಾಗ್ ನ ಬಗ್ಗೆ ಒಂದು ಪ್ರಸಿದ್ಧ ದಿನಪತ್ರಿಕೆ ಯಲ್ಲಿ ನೋಡಿದ್ದೆ.
  ಅದರಲ್ಲಿ ನೀವು ತೆಗೆದ ಭಾವಚಿತ್ರ(ಮಳೆಯಲ್ಲಿ ಸೈಕಲ್ ಸವಾರನೊಬ್ಬ ಛತ್ರಿ ಹಿಡಿದಿರುವುದು) ಕೂಡ ಪ್ರಕಟಗೊಂಡಿತ್ತು .
  ಇದು ನಿಮ್ಮ ಅನುಮತಿ ತೆಗೆದು ಕೊಂಡ ಮೇಲೆ ಪ್ರಕತಿಸಿದ್ದಾ ಹೇಗೆ ?
  ಇಂತಿ ,
  ಸುಮನ್

  ReplyDelete
 11. ಕೊನೆಗೂ ಸಂಪಾದಕರು ತಮ್ಮ ಪತ್ರಿಕೆಯಲ್ಲಿ ಬಹಿರಂಗವಾಗಿ ವಿಷಾದ ಕೇಳಿದ್ದಾರೆ.. ಅದೂ ಕಾನೂನಿನ ಬೆದರಿಕೆ ಒಡ್ಡಿದ್ದಕ್ಕೆ!

  ಸುಮನ್,
  ಹೌದು ಆ ಪತ್ರಿಕೆಯವರೂ ನನ್ನ ಬ್ಲಾಗಿನ ಒಂದು ಚಿತ್ರ ಅನುಮತಿಯಿಲ್ಲದೆಯೇ ಪ್ರಕಟಿಸಿದ್ದರು. ಆದರೆ ಅಲ್ಲಿಯ ಬರಹ ನನ್ನ ಬಗ್ಗೆಯಿತ್ತು ಮತ್ತು ಆ ಚಿತ್ರ ತೆಗೆದವರಿಗೆ ಕ್ರೆಡಿಟ್ ಕೊಡಲಾಗಿತ್ತು. ಆದರೆ ಈ ಪತ್ರಿಕೆಯವರು ಹುಡುಗಿಯೊಬ್ಬಳ ಚಿತ್ರವನ್ನು ನನ್ನ ಅನುಮತಿಯಿಲ್ಲದೆಯೇ, ನನಗೆ ಕ್ರೆಡಿಟ್ ಕೂಡ ಕೊಡದೇ ಹಾಕಬಾರದಿತ್ತು... ಮೊದಲನೆಯದ್ದು ಸರಿ ಎಂದೇನಲ್ಲ.. ಆದರೆ ಇದೇ ಛಾಯಾಗ್ರಾಹಕರಿಗೆ ಸಿಗುವ ಗರಿಷ್ಟ ಮರ್ಯಾದೆ.

  ReplyDelete
 12. naLE SEARCH ALLI SIKTU ANTHA YEDDURAPPA avara PHOTO BADALU MM SINGH PHOTO HAKTARA

  atva yaro kole madidavana photo badalu avara hasaru search madi bareyavara photo hacktatara and
  nanna prakara yava sampadaka nu nanu madidu tappu anta halode ella, adu VK agli SHimoga patrike agli.


  avarige Indian IT act 2000 na rules gotta bereyavara photo kadre atva bere yavara photo na website nalli hackidre,atva MMS madire
  criminal offensu and 3year and 4 crore danda hackbahudu


  A mudiya Sampadaka nige open source andre gotta flicker na disclaimer gotta

  and kese hackidere ratri bayligge raji anta karetara atva poli pudari enda call madthre

  kesara mayle kallu hakodu yake

  and srimantara bagge lekhana dalli rupport mardoke photo hakidakke mardoke legal case madi 4 page ವಿಷಾದ ಕೇಳಿದ್ದಾರೆ,

  ReplyDelete

ವರ್ಗ

Amomum (1) ficus krishnae (1) Gangtok (1) Nikon 40mm f/2.8 Micro (10) paris (1) Sikkim (8) snow (1) Yuksom (5) ಅನಿಮೇಟೆಡ್ (1) ಅನುಭವ ಕಥನ (7) ಅಮೂರ್ತ (1) ಆಟೋಟ (2) ಆಫಿಡ್ (1) ಇರುವೆ (6) ಉಡುಪಿ (4) ಉರಗ (3) ಏರಿ (1) ಒಂಟಿ ಚಕ್ರದ ಸೈಕಲ್ (1) ಒಯ್ಯುಗೆ (6) ಕದ (1) ಕಂದು ಏಲಕ್ಕಿ (1) ಕನ್ನಡ (2) ಕಪ್ಪು ಏಲಕ್ಕಿ (1) ಕಪ್ಪು-ಬಿಳುಪು (5) ಕಂಬಳ (1) ಕಂಬಳಿಹುಳು (2) ಕವನ (15) ಕವಿ ಶೈಲ (1) ಕಸರತ್ತು (1) ಕಳಸ (1) ಕಳ್ಳತನ (1) ಕಾವೇರಿ (1) ಕಾಳಾವಾರ ಬೆಟ್ಟ (1) ಕಾಳಿಂಗ ಸರ್ಪ (1) ಕಿಸ್ಕಾರ (1) ಕೀಟ ಪ್ರಪಂಚ (35) ಕುಂದಾಪುರ (1) ಕುವೆಂಪು (1) ಕೃಷಿ (9) ಕೃಷಿ ಮೇಳ (4) ಕೆರೆ (2) ಕೆಲಸ (2) ಕೆಸು (2) ಕೆಳದಿ (1) ಕೊಕ್ಕರೆ ಬೆಳ್ಳೂರು (1) ಕೋಟ (8) ಖಗೋಳ ಗಡಿಯಾರ (1) ಗವಿ (1) ಗುಡಿ ಕೈಗಾರಿಕೆ (1) ಗುಡ್ಡ (2) ಗುಹೆ (1) ಚಾರಣ (3) ಚಿಕ್ಕಮಗಳೂರು (1) ಚಿಟ್ಟಾಣಿ (1) ಚಿಟ್ಟೆಗಳು (3) ಚಿತ್ರ ಪುಟ (101) ಚಿತ್ರದುರ್ಗ (1) ಚಿತ್ರಪುಟ (1) ಚೌಕಾಶಿ (1) ಛಾಯಾಗ್ರಹಣ (24) ಜನ ಜೀವನ (52) ಜನಪದ (2) ಜರ್ಮನಿ (1) ಜಲಪಾತ (1) ಜೆಕ್ ಗಣರಾಜ್ಯ (4) ಜೇಡ (3) ಜೇನು ಸಾಕಣೆ (1) ಜೋಡಿ (1) ತರಕಾರಿ (2) ತುಮಕೂರು (2) ತೆಂಗಿನ ಕಾಯಿ (1) ತೆಂಗಿನ ತೋಟ (1) ದಸರ (4) ದೇವವೃಂದ (1) ದೇವಸ್ಠಾನ (1) ದೊಡ್ಡ ಏಲಕ್ಕಿ (1) ಧಾರವಾಡ (1) ನಂಬಿಕೆ (1) ನಾಟಕ (1) ನೀರ್ಹಕ್ಕಿ (6) ಪತಂಗ (1) ಪತ್ರಿಕೋದ್ಯಮ (1) ಪಶ್ಚಿಮ ಘಟ್ಟ (2) ಪಾಳು (1) ಪುಸ್ತಕ ಬಿಡುಗಡೆ (1) ಪೋರ್ಟ್ರೈಟ್ (8) ಪ್ರಬಂಧ (2) ಪ್ರವಾಸ ಕಥನ (3) ಪ್ರಾಹ (1) ಪ್ಲಾಸ್ಟಿಕ್ (1) ಬಕೇಟ್ (1) ಬಂಡಿ (1) ಬಣ್ಣ (1) ಬನವಾಸಿ (1) ಬಳ್ಳಿ (1) ಬಾಗಿಲು (1) ಬಾರ್ಕೂರು (1) ಬೀಗ (1) ಬೆಂಗಳೂರಿನ ಚಿತ್ರಗಳು (5) ಬೆಂಗಳೂರು (24) ಬೇಸಾಯ (1) ಬ್ರಹ್ಮಾವರ (1) ಭಾರತ ಬಂದ್ (1) ಭಿಕ್ಷುಕರು (1) ಮಕ್ಕಳು (10) ಮಂಜು (2) ಮಮ್ಮಮ್ (3) ಮಲೆನಾಡು (1) ಮಳೆ (1) ಮಳೆಗಾಲ (2) ಮಾರಿಕಣಿವೆ (1) ಮುಸ್ಸಂಜೆ (1) ಮೇಲುಕೋಟೆ (2) ಮೈಸೂರು (7) ಮೋಡ (2) ಮ್ಯಾಕ್ರೋ (12) ಯಕ್ಷಗಾನ (2) ರಸ್ತೆ (5) ರಾತ್ರಿ ನೋಟ (3) ರೈಮ್ (1) ರೈಲು (2) ರೈಲುಹಳಿ (1) ಲಲಿತ ಪ್ರಬಂಧ (6) ಲೇಪಾಕ್ಷಿ (1) ವಂಡಾರ್ (1) ವಾಸ್ತು ಶಿಲ್ಪ (1) ವಾಹನ (2) ವಿವೇಕ (1) ವ್ಯಕ್ತಿ ವಿಷಯ (3) ವ್ಯಾಪಾರ (1) ಶಾಲೆ (1) ಶಿರಸಿ (1) ಶಿರಸಿ. ಸೈಕಲ್ (1) ಶಿಲ್ಪ (1) ಶಿವನಸಮುದ್ರ (1) ಶುಭಾಶಯ (2) ಸಣ್ಣ ಕಥೆ (4) ಸಂತೆ (2) ಸಮುದ್ರ (2) ಸಮುದ್ರ ಜೀವಿ (2) ಸಸ್ಯ ಪ್ರಪಂಚ (12) ಸಾಕು ಪ್ರಾಣಿ (4) ಸಾಸ್ತಾನ (1) ಸಿಕ್ಕಿಂ (3) ಸೈಕಲ್ (5) ಸೈಕಲ್ ಯಾತ್ರೆ (1) ಸ್ಕಂದಗಿರಿ (1) ಸ್ತೂಪ (1) ಸ್ಪರ್ಧೆ (1) ಹಕ್ಕಿಗಳು (21) ಹಳ್ಳಿ (3) ಹಿಮ (1) ಹೂಗಳು (5) ಹೊಸ ವರ್ಷ (1) ಹೋಂ ಸ್ಟೇ (1) ಹೌರಾ (1)