Monday, June 07, 2010

ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ?

ಕಳೆದ ವಾರ ಊರಿಗೆ ಹೋಗಿದ್ದಾಗ, ಮನೆಯ ಜಗುಲಿಯೊಂದರಲ್ಲಿ ಕಪ್ಪು ಬಣ್ಣದ ತುಂಟ ಬೆಕ್ಕಿನ ಮರಿಯೊಂದು ಕಾಣಿಸಿತು. ಹಿಡಿಕಡ್ಡಿಯೊಂದನ್ನು ಮುಂಗಾಲಿನಲ್ಲಿ ಮೀಟುತ್ತಾ, ಅದು ಚಲಿಸುತ್ತಿದೆ ಎಂಬ ಭ್ರಮೆಯಲ್ಲಿ ಬೆನ್ನಟ್ಟುತ್ತಾ, ಹಲ್ಲಿನಲ್ಲಿ ಕಡಿಯುತ್ತಾ ಆಟವಾಡುತ್ತಿತ್ತು. ಚಿಕ್ಕಂದಿನಲ್ಲಿ ವಠಾರದಲ್ಲಿ ಅಡ್ಡಾಡುತ್ತಿದ್ದ ಪುಂಡ ಬೆಕ್ಕುಗಳಲ್ಲಿ ಕೆಲವು ಕಳ್ಳ ಕಳ್ಳ ಹೆಜ್ಜೆಯಿಟ್ಟು ಕಿಟಕಿಯಿಂದ ನುಗ್ಗಿ ಒಳಬಂದು ಹಾಲು, ಬೆಣ್ಣೆ ಕೊನೆಗೆ ಏನೂ ಸಿಕ್ಕದಿದ್ದರೆ ಎಣ್ಣೆಯನ್ನಾದರೂ ಕುಡಿದು ಪಲಾಯನಗೈಯುತ್ತಿದ್ದವು. ನನ್ನನ್ನೂ ಸೇರಿಸಿ ಮನೆಯವರೂ ಇದುವರೆಗೂ ಮನೆಗೆ ಬರುವ ಬೆಕ್ಕನ್ನು ಓಡಿಸಿದ್ದೆವೆಯೇ ಹೊರತು ಎಂದೂ ಸಾಕಿ ಮುದ್ದು ಮಾಡಿರಲಿಲ್ಲ. ಅಂತದ್ದರಲ್ಲಿ ಈ ಬೆಕ್ಕಿನ ಮರಿ ನಮ್ಮ ಮನೆಗೆ ಹೇಗೆ ಬಂತು ಎಂದು ಕುತೂಹಲವಾಯ್ತು.

ನನ್ನ ತಮ್ಮನನ್ನು ಕರೆದು ಅದರ ಬಗ್ಗೆ ವಿಚಾರಿಸಲಾಗಿ, "ಹೋ ಇದಾ, ಒಂದ್ ಬೆಕ್ ಬಂದ್ ಮರಿ ಹಾಕಿ ಹೋಯ್ತ್. ಎಲ್ಲೆಲ್ ಹಾಕಿತ್ತೇನೋ ಇದ್ರ ಹತ್ರ ಮಾತ್ರ ಸುಳೀಲೇ ಇಲ್ಲ. ಒಂದಿನ ಕಾಂಬುಸಮಿಗೆ ಮನಿ ಮೂಲೆಲ್ ಒಂದ್ ಕಡಿಯಿಂದ್ ಬೆಕ್ಕಿನ್ ಮರಿ ಶಬ್ದ ಕೇಂತಿತ್. ಕಾಂಬುಕೆ ಇಲಿಮರಿಕಣೆಗ್ ಇದ್ದಿತ್. ಕಣ್ಣೂ ಒಡ್ದಿರ್ಲ.. ಮೈ ತುಂಬಾ ಎರು. ಎರುನೆಲಾ ಬಿಡ್ಸಿ ಆವತ್ತಿಂದ್ ಚಮ್ಚದಂಗೆ ಹಾಲು ಕುಡ್ಸಿಯೆ. ಈಗ ಅದೇ ಕುಡಿತ್, ಕಣ್ಣೂ ಒಡ್ತಿತ್." ಎಂದ.

ಮತ್ತೆ ನಾನೇ ಕೆಳಿದೆ, "ಅಲ್ದ ಅದ್ರಬ್ಬಿ ಒಂದ್ಸಲಿಯೂ ಬರ್ಲಿಲ್ಯ ಆಮೇಲೆ, ಅದೆಂತಾ ಬೆಕ್ಕಾಯ್ಕ್" ಅಂದೆ.

"ಒಂದೆರಡ್ ಸಲಿ ಬಂದಿತ್, ನಾವು ಹಾಲು ಕುಡ್ಸುಸಮಿಗೇ ಬಂದಿತ್. ಸುಮ್ನೆ ಕಂಡ್ಕಂಡ್ ಹೋಯ್ತ್" ಅಂದ.

ಸುಟಿ ಸುಟಿಯಾದ ಮರಿಯನ್ನ ನಾನೂ ಮೊದಲಬಾರಿಗೆಂಬಂತೆ ಮುದ್ದು ಮಾಡಿದೆ. ಮೊದಮೊದಲು ಹೆದರಿದರೂ ಕಡೆಗೆ ನನ್ನ ಬಳಿ ನಿರ್ಭಯದಿಂದ ಸುಳಿದಾಡಲು ಆರಂಭಿಸಿತು. ಅದರ ತುಂಟಾಟ ನೋಡುವುದು ಮಾತ್ರ ತುಂಬಾ ಸಂತೋಷದ ಕೆಲಸ. ಈ ಬಾರಿ ಇವೆರಡು ಫೋಟೋ ತೆದೆದಿದ್ದೇನೆ. ಮುಂದಿನ ಬಾರಿ ಊರಿಗೆ ಹೋದರೆ, ಅದರ ತುಂಟಾಟದ ಚಿತ್ರಗಳನ್ನು ಸೆರೆಹಿಡಿಯಲು ಪ್ರಯತ್ನಿಸುವೆ.

ನನ್ನ ಕ್ಯಾಮರಾವನ್ನು ಕುತೂಹಲದಿಂದ ವೀಕ್ಷಿಸುತ್ತಿರುವುದು:

CSC_5824

ಅಂಗೈಯಲ್ಲಿ ಮುದ್ದಿನ ಮರಿ:

KITTEN


"ಥಟ್ ಅಂತ ಹೇಳಿ" ಖ್ಯಾತಿಯ ನಾಸೋ ಸಂಪದದಲ್ಲಿ ಪ್ರತಿಕ್ರಿಯಿಸಿ, ಕಣ್ಣಿನ ಬಗ್ಗೆ ಹೆಚ್ಚಿನ ಮಾಹಿತಿ ಒದಗಿಸಿದ್ದಾರೆ:


  • ಈ ಬೆಕ್ಕು ವಿಶೇಷವಾದದ್ದು. ಬೆಕ್ಕಿನ ಕಣ್ಣು ಸಾಮಾನ್ಯವಾಗಿ ತಿಳಿಹಸಿರು ಅಥವ ಹಳದಿ ಮಿಶ್ರಿತ ಹಸಿರು ಇರುವುದು ಸಾಮಾನ್ಯ. ಇದರ ಕಣ್ಣನ್ನು ನೋಡಿ. ನೀಲಿಯಾಗಿದೆ.
  • ಕಣ್ಣಿನ ಬಣ್ಣವನ್ನು ಒಳಗೊಂಡಂತೆ ದೇಹದ ಎಲ್ಲ ಗುಣಲಕ್ಷಣಗಳನ್ನು ವಂಶವಾಹಿಗಳು ನಿರ್ಧರಿಸುತ್ತವೆ. ಕಣ್ಣಿನ ಬಣ್ಣವನ್ನು ನಿರ್ಧರಿಸುವ ವಂಶವಾಹಿಯು ಮೆಲಾನಿನ್ ಎಂಬ ವರ್ಣಕವನ್ನು ಉತ್ಪಾದಿಸುತ್ತದೆ. ಈ ವರ್ಣಕ ಎಷ್ಟು ದಟ್ಟವಾಗಿದೆ ಎನ್ನುವುದನ್ನು ಆಧರಿಸಿ ಕಣ್ಣಿನ ಬಣ್ಣ ನಿರ್ಧಾರವಾಗುತ್ತದೆ. ಮೆಲಾನಿನ್ ಅತ್ಯಂತ ಕನಿಷ್ಟ ಪ್ರಮಾಣದಲ್ಲಿದ್ದಾಗ ಕಣ್ಣಿನ ಬಣ್ಣ (ಅಂದರೆ ಕಣ್ಣಿನಲ್ಲಿರುವ ಕನೀನಿಕೆ-ಐರಿಸ್-ಯಲ್ಲಿರುವ ಬಣ್ಣ) ನೀಲಿಯಾಗಿ ಕಾಣುತ್ತದೆ.
  • ವಂಶವಾಹಿಗಳಲ್ಲಿ ಕಂಡು ಬರುವ ಹಠಾತ್ ಬದಲಾವಣೆಗಳಾದ ಉತ್ಪರಿವರ್ತನೆ (ಮ್ಯುಟೇಷನ್) ಯು ನೀಲಿ ಬಣ್ಣದ ಕಣ್ಣಿಗೆ ಅವಕಾಶವನ್ನು ಮಾಡಿಕೊಟ್ಟಿತು ಎನ್ನಲಾಗಿದೆ. ತಳಿಪಾರಿಭಾಷಿಕದಲ್ಲಿ ಇದೊಂದು ರಿಸೆಸಿವ್ ಟ್ರೈಟ್.
  • ನೀಲಿ ಕಣ್ಣಿರುವ ಜನರು ವಸ್ತುಗಳ ಚಲನೆಯನ್ನು ಇತರ ಬಣ್ಣದ ಕಣ್ಣಿನವರಿಗಿಂತ ತುಸು ತಡವಾಗಿ ಗುರುತಿಸುತ್ತಾರೆ ಎಂದು ಓದಿದ ನೆನಪು.
  • ನೀಲಿ ಕಣ್ಣುಗಳಿರುವ ಹುಡುಗ/ಹುಡುಗಿ ಅತ್ಯಂತ ಸುಂದರ ಎಂಬ ಮಾತಿದೆ.

7 comments:

  1. Idu doddadad mele kalla bekk aguva sadyathe ye jasthi kanstha ith maraya ... jor ith

    ReplyDelete
  2. ಪಾಲ ,
    ಕರಿಬೆಕ್ಕು ಒಳ್ಳೆ ಸಟಾ -ಸುಟಿ ಇತ್ತಲ್ಲ ಮಾರಾಯ ..ಚಿತ್ರ ಲಾಯ್ಕಿತ್ತು ಮಾರಾಯ ...ಆದ್ರೆ ನೀನು ಮುಂದಿನ್ ಸರ್ತಿ ಹೊಪಷ್ಟತ್ತಿಗೆ ನಿನ್ನ ಬೆಕ್ಕಿನ ಮರಿ ದೊಡ್ದದಾಯಿರುತ್ತಲ್ಲ ಮಾರಾಯ!!!!!

    ReplyDelete
  3. ವ್ಹಾ!! ಕಪ್ಪು ಮರಿ ಎಷ್ಟು ಚಂದ ಇದೆ ...ಆದಷ್ಟು ಬೇಗ ಇದರ ಇನ್ನಷ್ಟು ಫೋಟೋ ಹಾಕಿ .

    ReplyDelete
  4. ಬೆಕ್ಕಿನ್ ಮರಿ ಚಂದ ಇತ್ತೆ.. ನಾನ್ ಸಣ್ಣನ್ ಇಪ್ಪತಿಗೆ ನಮ್ ಮನಿಯಲ್ ಬೆಕ್ ಸಾಂಕ್ತಿದ್ದಿತ್.. ಈಗಲು ಇದ್ದೊ ಐದಾರು.. ಆದ್ರೆ ಯಾವುದು ಸಾಕಿದ್ದಲ್ಲ.. ಎಲ್ಲ ಬಂದು ಸೇರ್ದವ್. .. ಬೆಕ್ ಇದ್ರೆ ಮನಿಗ್ ಒಂದ್ ಕಳಿ .. :)

    ReplyDelete
  5. ಪಾಲ...
    ನನಗೆ ಬೆಕ್ಕು ಅಂದರೆ ಅಷ್ಟಕ್ಕಷ್ಟೆ..
    ಆದರೆ ನೀವು ತೆಗೆದ ಫೋಟೊ ಮಾತ್ರ ತುಂಬಾ ಮುದ್ದಾಗಿ ಬಂದಿದೆ..

    ಒಮ್ಮೆ ಎತ್ತಿಕೊಳ್ಳೋಣ ಅನಿಸಿತು...

    ಇನ್ನಷ್ಟು ಫೋಟೊ ಹಾಕಿ...

    ReplyDelete
  6. ಪಾಲ ಸರ್
    ತುಂಬಾ ಮುದ್ದಿನ ಬೆಕ್ಕು ಅನಿಸುತ್ತದೆ
    ಚೆಂದದ ಫೋಟೋ

    ReplyDelete

ವರ್ಗ

Amomum (1) ficus krishnae (1) Gangtok (1) Nikon 40mm f/2.8 Micro (10) paris (1) Sikkim (8) snow (1) Yuksom (5) ಅನಿಮೇಟೆಡ್ (1) ಅನುಭವ ಕಥನ (7) ಅಮೂರ್ತ (1) ಆಟೋಟ (2) ಆಫಿಡ್ (1) ಇರುವೆ (6) ಉಡುಪಿ (4) ಉಯ್ಯಾಲೆ (1) ಉರಗ (3) ಏರಿ (1) ಒಂಟಿ ಚಕ್ರದ ಸೈಕಲ್ (1) ಒಯ್ಯುಗೆ (6) ಕದ (1) ಕಂದು ಏಲಕ್ಕಿ (1) ಕನ್ನಡ (2) ಕಪ್ಪು ಏಲಕ್ಕಿ (1) ಕಪ್ಪು-ಬಿಳುಪು (5) ಕಂಬಳ (1) ಕಂಬಳಿಹುಳು (2) ಕವನ (15) ಕವಿ ಶೈಲ (1) ಕಸರತ್ತು (1) ಕಳಸ (1) ಕಳ್ಳತನ (1) ಕಾವೇರಿ (1) ಕಾಳಾವಾರ ಬೆಟ್ಟ (1) ಕಾಳಿಂಗ ಸರ್ಪ (1) ಕಿಸ್ಕಾರ (1) ಕೀಟ ಪ್ರಪಂಚ (35) ಕುಂದಾಪುರ (1) ಕುವೆಂಪು (1) ಕೃಷಿ (9) ಕೃಷಿ ಮೇಳ (4) ಕೆರೆ (2) ಕೆಲಸ (2) ಕೆಸು (2) ಕೆಳದಿ (1) ಕೊಕ್ಕರೆ ಬೆಳ್ಳೂರು (1) ಕೋಟ (8) ಖಗೋಳ ಗಡಿಯಾರ (1) ಗವಿ (1) ಗುಡಿ ಕೈಗಾರಿಕೆ (1) ಗುಡ್ಡ (2) ಗುಹೆ (1) ಚಾರಣ (3) ಚಿಕ್ಕಮಗಳೂರು (1) ಚಿಟ್ಟಾಣಿ (1) ಚಿಟ್ಟೆಗಳು (3) ಚಿತ್ರ ಪುಟ (102) ಚಿತ್ರದುರ್ಗ (1) ಚಿತ್ರಪುಟ (1) ಚೌಕಾಶಿ (1) ಛಾಯಾಗ್ರಹಣ (24) ಜನ ಜೀವನ (52) ಜನಪದ (2) ಜರ್ಮನಿ (1) ಜಲಪಾತ (1) ಜೆಕ್ ಗಣರಾಜ್ಯ (4) ಜೇಡ (3) ಜೇನು ಸಾಕಣೆ (1) ಜೋಡಿ (1) ತರಕಾರಿ (2) ತುಮಕೂರು (2) ತೆಂಗಿನ ಕಾಯಿ (1) ತೆಂಗಿನ ತೋಟ (1) ದಸರ (4) ದೇವವೃಂದ (1) ದೇವಸ್ಠಾನ (1) ದೇವಸ್ಥಾನ (1) ದೊಡ್ಡ ಏಲಕ್ಕಿ (1) ಧಾರವಾಡ (1) ನಗರ (1) ನಂಬಿಕೆ (1) ನಾಟಕ (1) ನೀರ್ಹಕ್ಕಿ (6) ಪತಂಗ (1) ಪತ್ರಿಕೋದ್ಯಮ (1) ಪಶ್ಚಿಮ ಘಟ್ಟ (2) ಪಾರ್ಕ್ (1) ಪಾಳು (1) ಪುಸ್ತಕ ಬಿಡುಗಡೆ (1) ಪೋರ್ಟ್ರೈಟ್ (8) ಪ್ಯಾನಿಂಗ್ (1) ಪ್ರಬಂಧ (2) ಪ್ರವಾಸ ಕಥನ (3) ಪ್ರಾಹ (1) ಪ್ಲಾಸ್ಟಿಕ್ (1) ಬಕೇಟ್ (1) ಬಂಡಿ (1) ಬಣ್ಣ (1) ಬನವಾಸಿ (1) ಬಳ್ಳಿ (1) ಬಾಗಿಲು (1) ಬಾರ್ಕೂರು (1) ಬೀಗ (1) ಬೆಂಕಿ (1) ಬೆಂಗಳೂರಿನ ಚಿತ್ರಗಳು (5) ಬೆಂಗಳೂರು (27) ಬೆಳಕು (1) ಬೇಸಾಯ (1) ಬ್ರಹ್ಮಾವರ (1) ಭಾರತ ಬಂದ್ (1) ಭಿಕ್ಷುಕರು (1) ಮಕ್ಕಳು (10) ಮಗು (1) ಮಂಜು (2) ಮಮ್ಮಮ್ (3) ಮಲೆನಾಡು (1) ಮಳೆ (1) ಮಳೆಗಾಲ (2) ಮಾರಿಕಣಿವೆ (1) ಮುಸ್ಸಂಜೆ (1) ಮೇಲುಕೋಟೆ (2) ಮೇವು (1) ಮೈಸೂರು (7) ಮೋಡ (2) ಮ್ಯಾಕ್ರೋ (12) ಯಕ್ಷಗಾನ (2) ರಸ್ತೆ (5) ರಾತ್ರಿ ನೋಟ (3) ರೈಮ್ (1) ರೈಲು (2) ರೈಲುಹಳಿ (1) ಲಲಿತ ಪ್ರಬಂಧ (6) ಲೇಪಾಕ್ಷಿ (1) ವಂಡಾರ್ (1) ವಾಸ್ತು ಶಿಲ್ಪ (1) ವಾಹನ (2) ವಿವೇಕ (1) ವಿಸ್ತರಣೆ (1) ವ್ಯಕ್ತಿ ವಿಷಯ (3) ವ್ಯಾಪಾರ (1) ಶಾಲೆ (1) ಶಿರಸಿ (1) ಶಿರಸಿ. ಸೈಕಲ್ (1) ಶಿಲ್ಪ (1) ಶಿವನಸಮುದ್ರ (1) ಶುಭಾಶಯ (2) ಸಣ್ಣ ಕಥೆ (4) ಸಂತೆ (2) ಸಮುದ್ರ (2) ಸಮುದ್ರ ಜೀವಿ (2) ಸಸ್ಯ ಪ್ರಪಂಚ (12) ಸಾಕು ಪ್ರಾಣಿ (4) ಸಾಗಾಟ (1) ಸಾಸ್ತಾನ (1) ಸಿಕ್ಕಿಂ (3) ಸೈಕಲ್ (5) ಸೈಕಲ್ ಯಾತ್ರೆ (1) ಸ್ಕಂದಗಿರಿ (1) ಸ್ತೂಪ (1) ಸ್ಪರ್ಧೆ (1) ಹಕ್ಕಿಗಳು (21) ಹರಿಹರ (1) ಹಳ್ಳಿ (3) ಹಿಮ (1) ಹೂಗಳು (5) ಹೂವು (1) ಹೊಸ ವರ್ಷ (1) ಹೋಂ ಸ್ಟೇ (1) ಹೌರಾ (1)