
ಕಳೆದವಾರ ಬನವಾಸಿಯ ದೇವಸ್ಥಾನಕ್ಕೆ ಭೇಟಿ ನೀಡಿದಾಗ ತೆಗೆದ ಚಿತ್ರ. ೯ ನೇ ಶತಮಾನದಷ್ಟು ಹಳೆಯದಾದ ದೇವಸ್ಥಾನದ ಗೋಡೆಯ ಮಯ್ವಳಿಕೆ ಚಿತ್ರಕ್ಕೆ ಹಿನ್ನೆಲೆ ಒದಗಿಸಿದರೆ, ಚಿತ್ರದ ವಿಷಯವಾದ ನಿಶ್ಚಿಂತೆಯಿಂದ ಮಲಗಿರುವ ಮಗು ಪ್ರಶಾಂತತೆಯ ಭಾವ ತುಂಬುವಂತಿದೆ.
ಅನುಭವಿಸದೇ ಹಾಡಿದ ಹಾಡು ಹಾಡಲ್ಲ, ಅನುಭವಿಸದೇ ಬಿಡಿಸಿದ ಚಿತ್ರ ಚಿತ್ರವಲ್ಲ, ಅನುಭವಿಸದೇ ಬರೆದ ಬರಹ ಬರಹವಲ್ಲ!