
ಬಿಸಿಲ ಬೇಗೆಗೆ ಕೆಂದೋಟ ಕೆಂಪಾಗಿತ್ತು
ನೆಲ ಕಾವೇರಿತ್ತು
ಬಟ್ಟ ಬಯಲಾಗಿತ್ತು
ಆದರೆ ನನ್ನ ಮನ ತಂಪಾಗಿತ್ತು
ನಿನ್ನ ಒಡನಾಟ ನನಗಿತ್ತು
ನೆರೆತಿದ್ದ ಜನತೆ ಹಸಿವಿನಿಂದ ಬಳಲಿತ್ತು
ಮೊಗ ಕೆಂಪಡರಿತ್ತು
ಕಾಲ್ಗಳು ಸೋತಿತ್ತು
ಆದರೆ ನನ್ನ ಮನ ನಲಿವಾಗಿತ್ತು
ನಿನ್ನ ನೋಟ ಮನದುಂಬಿತ್ತು
ತೇಲಾಡುವ ಹಕ್ಕಿಗಳ ರೆಕ್ಕೆ ಸೋತಿತ್ತು
ಪದ ಬರದಾಗಿತ್ತು
ಗೊಂಕೆ ಬಾಯಾರಿತ್ತು
ಆದರೆ ನನ್ನ ಮನ ತೇಲುತ್ತಿತ್ತು
ನಿನ್ನ ಕರ ನನ್ನ ಬಳಸಿತ್ತು
ಗಿಡ ಮರ ಬಳ್ಳಿಗಳು ಎಲೆಯನ್ನುದುರಿಸಿತ್ತು
ಬಳಲಿ ಸೊರಗುತಿತ್ತು
ನೆರಳ ಬಯಸುತಲಿತ್ತು
ಆದರೆ ನನ್ನ ಮನ ಹಸಿರಾಗಿತ್ತು
ನಿನ್ನ ಮೊಗ ನನ್ನೆದೆಯಲಿತ್ತು
ಕವನ ಚೆನ್ನಾಗಿದೆ...
ReplyDeleteಫೋಟೋ ಅಂತು ಸೂಪರ್... :-)
chennagide.
ReplyDeleteSo "Nambuge"-inda matthe prema kaavyakke bandideeya :) Good progress :)
ಪ್ರೀತಿಯ ಪವರ್ ಬಗ್ಗೆ ತುಂಬಾ ಚೆನ್ನಾಗಿ ಬರ್ದಿದೀರ. 'ಬಿಸಿಲ ಬೇಗೆಯಿಂದ ಜಗ ಬೇಯುತ್ತಿದ್ದರೂ ಸಂಗಾತಿ ಜೊತೆಗಿರುವಾಗ ತಂಪಾಗಿರುವೆ' ಎಂಬ ನಿಮ್ಮ ಕಲ್ಪನೆ ತುಂಬಾ ಚೆನ್ನಾಗಿದೆ.
ReplyDeleteಪಾಲ ,
ReplyDeleteಕವನ ಚೆನ್ನಾಗಿತ್ತು ಮಾರಾಯ .ಬಿಸಿಲ ಬೇಗೆಯ ತಂಪಾದ ಕವನ ಮತ್ತು ಅದಕ್ಕೊಪ್ಪುವ ಚಿತ್ರ ಸೊಗಸಾಗಿತ್ತು ಕಣೋ..
Very nice indeed.
ReplyDeleteಪಾಲ,
ReplyDeleteಬಿಸಿಲು ಹೆಚ್ಚಾಗುತ್ತಿದೆಯೇ?
ನಮಗೆ ಬಿಸಿಲು ಇದ್ದರೂ ೭ ಡಿಗ್ರಿ ದಾಟುತ್ತಿಲ್ಲ
ಸುಂದರ ಕವನ
ಪಾಲ.
ReplyDeleteಕವನ ತುಂಬಾ ಚೆನ್ನಾಗಿ ಇದೆ... ಇಂಥ ಏರುತ್ತಿರುವ ಬಿಸಿಲಿನಲ್ಲೂ.... ನಿಮ್ಮವಳ ನೋಟ ಒಡನಾಟ ದಿಂದ ಮನಸನ್ನು ತಂಪಾಗಿಸಿ ಕೊಂಡಿರಲ್ಲ ಗುಡ್.
Guru
ದಿವ್ಯ,
ReplyDeleteಧನ್ಯವಾದ :)
ನಾಗೇಶ್,
ಮೌನ ಮರೆಯುತ, ಮಧುರ ಗೀತೆಯ ಮತ್ತೆ ಹಾಡಿತು ಕೋಗಿಲೆ ;)
ಓ ಮನಸೇ,
ಕವನದ ಸಾರಾಂಶ ಸುಂದರ ಸಾಲುಗಳಲ್ಲಿ ತಿಳಿಸಿದ್ದಕ್ಕೆ ವಂದನೆಗಳು
ಶಶಿ ಜೋಯಿಸ್,
ಥ್ಯಾಂಕ್ಸ್ ಕಣ್ರೀ :)
ರೋಹಿತ್,
ಥ್ಯಾಂಕ್ಯು
ಗುರುಮೂರ್ತಿ,
ಸ್ವಲ್ಪ ಹೆಚ್ಚೇ ಸೆಕೆ.. ನಿನ್ನೆ ಇದನ್ನ ಪೋಸ್ಟ್ ಮಾಡಿದ ಕೂಡ್ಲೇ ಮಳೆ ಬರ್ಬೇಕೆ!
ಗುರು,
ಧನ್ಯವಾದ :)
Super....Lovely poem with lovely picture...!!!
ReplyDeleteಪಾಲ..
ReplyDeleteಚಿತ್ರ ಅದ್ಭುತವಾಗಿದೆ, ಕವನ ಕೂಡ ಅಲಂಕಾರಿಕ ಶಬ್ದಗಳ ಆಡಂಬರವಿಲ್ಲದೆ ಸರಳವಾಗಿದೆ.... ನೀವು ಕವನ ಬರೆಯಲಿ ಅಂತ ಕಾಯುತ್ತಿತ್ತು ಮಳೆ... ಈಗ ಮಳೆಯಲ್ಲಿ ನಿಮ್ಮ ತುಂಟ ಮನ ಗೆಳತಿಯ ನೆನೆದು ಏನು ಹೇಳುತ್ತಿದೆ..???
:-) :-)... ಹೊಸ ಕವನ ಬರೀತೀರಲ್ಲಾ..
ತುಂಬಾ ಚೆನ್ನಾಗಿದೆ,
ReplyDelete