Thursday, May 07, 2009

ಪತ್ರೊಡೆ


ಕೆಸು Araceae ವಂಶಕ್ಕೆ ಸೇರಿದ, ಏಷಿಯಾದ ಜವುಗು ಪ್ರದೇಶಗಳಲ್ಲಿ ಕಂಡು ಬರುವ, ಏಕದಳ ಸಸ್ಯ. ಎಲೆಗಳು ಹೃದಯಾಕಾರದಲ್ಲಿ ಇದ್ದು, ಎಲೆಯ ಮೇಲ್ಮೈ ತೈಲ ಸವರಿದಂತೆ ನುಣುಪಾಗಿದ್ದು, ನೀರಿನ ಹನಿ ಜಾರುವಂತಿರುತ್ತದೆ. ನೆಲದೊಳಗೆ ಹುದುಗಿರುವ ಗಡ್ಡೆ, ನೆಲದ ಮಟ್ಟದಿಂದಲೇ ಕವಲೊಡೆದ ಮೃದುವಾದ ಕಾಂಡ, ಕಾಂಡಕ್ಕೊಂದೇ ಎಲೆ ಈ ಗಿಡದ ಸಾಮಾನ್ಯ ರೂಪ.

ಕೆಸುವಿನಲ್ಲೇ ಹಲವು ಪ್ರಭೇದಗಳಿದ್ದರೂ ನಮ್ಮ ಪ್ರಯೋಜನ ದೃಷ್ಟಿಯಿಂದ ಬೆಳಿ ಕೆಸು, ಕರಿ ಕೆಸು, ಮರ ಕೆಸು ಈ ಹೆಸರುಗಳನ್ನಷ್ಟೇ ತಿಳಿದುಕೊಂಡರೆ ಸಾಕು. ಬಿಳಿ ಕೆಸು ತಿಳಿ ಹಸುರು ಬಣ್ಣದ ಕಾಂಡ ಮತ್ತು ಎಲೆಯಂಚು ಹೊಂದಿದ್ದರೆ, ಕರಿ ಕೆಸು ಕಡು ಕಪ್ಪು ಬಣ್ಣವನ್ನು ಹೋಲುವ ಕಾಂಡ, ಎಲೆಯಂಚು ಹೊಂದಿದೆ. ಮರದ ಮೇಲೆ ಆರ್ಕಿಡ್ನಂತೆ ಬೆಳೆಯುವುದು ಮರ ಕೆಸು. ಉಡುಪಿ, ದ.ಕ.ಗಳಲ್ಲಿ ತಯಾರಿಸುವ ಪತ್ರೊಡೆಗೆ ಇವೇ ಎಲೆಗಳನ್ನು ಅನಾದಿ ಕಾಲದಿಂದ ಬಳಸಿಕೊಂಡು ಬರುತ್ತಿದ್ದಾರೆ. ಗುಜರಾತಲ್ಲೂ ಈ ಬಗೆಯ ಖಾದ್ಯ ಮಾಡಿ ಅದಕ್ಕೆ "ಪಾತ್ರ" ಎಂಬ ಹೆಸರನ್ನು ಇಟ್ಟಿದ್ದಾರಾದರೂ, ಎರಡರ ರುಚಿಯನ್ನೂ ಸವಿದ ನನ್ನ ನಾಲಿಗೆ ನಿಶ್ಪಕ್ಷಪಾತಿಯಾಗಿ ಪತ್ರೊಡೆಯತ್ತ ಒಲವು ತೋರಿಸಿದ್ದರಿಂದ "ಪಾತ್ರ"ವನ್ನು ಕಡೆಗಾಣಿಸಲಾಗಿದೆ. ಮೇಲೆ ತಿಳಿಸಿದ ಎಲೆಗಳನ್ನು ರುಚಿಯ ದೃಷ್ಟಿಯಿಂದ, ಮೃದುತ್ವದ ದೃಷ್ಟಿಯಿಂದ ಸಮೀಕರಣದಲ್ಲಿ ಹೀಗೆ ವಿವರಿಸಬಹುದು: ಬಿಳಿ ಕೆಸು < ಕರಿ ಕೆಸು < ಮರ ಕೆಸು. ಪತ್ರೊಡೆಯಲ್ಲಿ ಎರಡು ವಿಧಗಳುಂಟು, ಮೊದಲನೆಯದು ದೋಸೆ ಕಲ್ ಪತ್ರೊಡೆ, ಎರಡನೆಯದು ಪತ್ರೊಡೆ. ಇವೆರಡನ್ನೂ ಮಾಡುವ ವಿಧಾನವನ್ನು ಹಂತ ಹಂತವಾಗಿ ತಿಳಿದುಕೊಳ್ಳೋಣ. ದೋಸೆ ಕಲ್ ಪತ್ರೊಡೆ: ೧. ದೋಸೆ ಮೊದಲಾದ ತಿಂಡಿಗೆ ಬಳಸುವ ಅಕ್ಕಿಯನ್ನು ಎರಡು ಘಂಟೆಗಳಷ್ಟು ಕಾಲ ನೀರಿನಲ್ಲಿ ನೆನೆಹಾಕಿ. ೨. ತೋಟಕ್ಕೆ ತೆರಳಿ ಕೆಸುವಿನ ಎಲೆಯನ್ನಾಯ್ದುಕೊಂಡು ಬನ್ನಿ. ಎಲೆ ತೀರ ಬಲಿತದ್ದಾಗಿರಬಾರದು. ಸ್ವಲ್ಪ ಎಳೆಯ ಎಲೆಯಾದರೆ ಚೆನ್ನಾಗಿ ಬೇಯುವುದೂ ಅಲ್ಲದೇ, ತಿಂದ ನಂತರ ಬಾಯಿ ತುರಿಕೆಯಾಗುವ ಸಂಭವವೂ ಕಡಿಮೆ. ೩. ಎಲೆಯನ್ನು ಚೆನ್ನಾಗಿ ತೊಳೆದು, ದಂಟನ್ನು ಎಲೆಯಿಂದ ಬೇರ್ಪಡಿಸಬೇಕು. ಎಲೆಯ ಕೆಳಭಾಗದಲ್ಲಿರುವ ದಂಟುಗಳನ್ನೂ ಕೂಡ ಇದೇ ರೀತಿ ಬೇರ್ಪಡಿಸಬೇಕು. ೪. ಸುಮಾರು ಒಂದು ಕಡಿಯಷ್ಟು ತೆಂಗಿನ ತುರಿಯನ್ನು ತಯಾರಿಸಿಕೊಳ್ಳಬೇಕು. ೫. ನೆನೆಸಿದ ಅಕ್ಕಿ, ತೆಂಗಿನ ತುರಿ, ೨ ಚಮಚದಷ್ಟು ಜೀರಿಗೆ, ೨ ಚಮಚದಷ್ಟು ಕೊತ್ತುಂಬರಿ ಬೀಜ, ಒಂದು ಚಮಚ ಅರಶಿನ, ೧೦ ಒಣ ಮೆಣಸಿನ ಕಾಯಿ, ಸ್ವಲ್ಪ ಹುಣಸೇ ಹಣ್ಣನ್ನು ದೋಸೆಯ ಹಿಟ್ಟಿನ ಹದಕ್ಕೆ ಅರೆದುಕೊಳ್ಳಬೇಕು. ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ೬. ಕೆಸುವಿನ ಎಲೆಯ ಹಿಂಭಾಗಕ್ಕೆ ಹದವಾಗಿ ಈ ಮಿಶ್ರಣವನ್ನು ಹಚ್ಚುತ್ತಾ, ಮಡಿಸುತ್ತಾ, ಸುರುಳಿಯಾಗಿ ಸುತ್ತಬೇಕು.








೭. ಗಾಲಿಗಳಂತೆ ಇವನ್ನು ಕತ್ತರಿಸಿ ಇಟ್ಟುಕೊಳ್ಳಬೇಕು.



೮. ಹದವಾದ ಬೆಂಕಿ ಹೊತ್ತಿಸಿ ಒಲೆ ಮೇಲಿಟ್ಟ ದೋಸೆ ಕಾವಲಿಗೆ ಎಣ್ಣೆ ಹಚ್ಚಿ, ಈ ಗಾಲಿಗಳನ್ನು ಒಂದೊಂದಾಗಿ ಮೇಲೆ ತಿಳಿಸಿದ ಮಿಶ್ರಣದಲ್ಲಿ ಅದ್ದಿ ಕಾವಲಿ ಮೇಲಿಡಬೇಕು. ಕಾವು ಜಾಸ್ತಿಯಿರುವ ಮಧ್ಯ ಭಾಗ ಬೇಗನೆ ಕರಟಿ ಹೋಗುವ ಸಂಭವ ಇರುವುದರಿಂದ, ಕಾವಲಿ ಮೇಲೆ ಗಾಲಿಗಳನ್ನು ಇಡುವಾಗ ಹೊರವರ್ತುಲದಿಂದ ಆರಂಭಿಸಬೇಕು.
೯. ಕಾವಲಿಗೆ ಎಣ್ಣೆ ಹಚ್ಚುವಾಗ ಬೇರೆ ಎಣ್ಣೆಯನ್ನು ಬಳಸಿದರೂ, ತೆಗೆಯುವ ಕೊಂಚ ಮೊದಲು ತೆಂಗಿನೆಣ್ಣೆ ಹಾಕುವುದು ಸೂಕ್ತ.


೧೦. ಹದವಾಗಿ ಬೀಳುತ್ತಿರುವ ಮಳೆಯ ತಾಳದೊಂದಿಗೆ, ಕೆಂಪಗೆ ಕಾದ, ಬಿಸಿ ಬಿಸಿಯಾದ ದೋಸೆ ಕಲ್ ಪತ್ರೊಡೆ ಅವರ್ಣನೀಯವಾದ ಅನುಭವವನ್ನು ಒದಗಿಸುವುದು.

ಪತ್ರೋಡೆ:
"ದೋಸೆ ಕಲ್ ಪತ್ರೊಡೆ"ಮಾಡುವ ವಿಧಾನದ ೬ನೇ ಹಂತದವರೆಗೆ ಅನುಸರಿಸಿ(ಎಲೆಗೆ ಹಿಟ್ಟು ಹಚ್ಚುವ ಮೊದಲು, ಹಿಟ್ಟಿಗೆ ಸ್ವಲ್ಪ ಬೆಲ್ಲ ಬೆರಸಬೇಕು)
೭. ಸುರುಳಿಯ ಮುಂಭಾಗಕ್ಕೂ ಮಿಶ್ರಣವನ್ನು ಸವರಿ, ಇಡ್ಲಿ ಬೇಯಿಸುವಂತೆ ಇಡ್ಲಿ ಅಟ್ಟದಲ್ಲಿ ಬೇಯಿಸಬೇಕು.
೮. ಬಿಸಿ ಬಿಸಿಯಾದ ಪತ್ರೊಡೆಯನ್ನು ಬೆಕ್ಕಿನ ಮಂಡೆಗಾತ್ರದ ಬೆಣ್ಣೆಯೊಂದಿಗೋ ಅಥವಾ ತೆಂಗಿನೆಣ್ಣೆ ಸವರಿಯೋ ತಿನ್ನಬಹುದು.
೯. ಹೆಚ್ಚಿಗೆ ಉಳಿದಿದ್ದನ್ನು ಮರುದಿನ ಚಿಕ್ಕದಾಗಿ ಕತ್ತರಿಸಿ, ಸಾಸಿವೆ, ಕರಿ ಬೇವು, ಒಣ ಮೆಣಸಿನ ಒಗ್ಗರಣೆಯೊಂದಿಗೆ ತುರಿದ ಕಾಯಿ ಸೇರಿಸಿ ಹುರಿದು, ಸಕ್ಕರೆಯನ್ನು ಉದುರಿಸಿ ತಿಂದರೆ ಇನ್ನೊಂದು ಬಗೆಯ ಸುಖ ಪ್ರಾಪ್ತಿಯಾಗುವುದು.

ಈ ಮೇಲಿನ ಎರಡೂ ವಿಧಗಳು ಕೆಲವೊಮ್ಮೆ ನಾಲಗೆ, ಗಂಟಲು ತುರಿಕೆ ಉಂಟು ಮಾಡುವ ಸಂದರ್ಭ ಇರುವುದರಿಂದ, ಇದರ ಶಮನಕ್ಕಾಗಿ ಹುಣಸೇ ಹಣ್ಣು, ಬೆಲ್ಲ ಬಳಿಯಲ್ಲಿಟ್ಟುಕೊಳ್ಳುವುದು ಉತ್ತಮ. ಹೆಚ್ಚಾಗಿ ಸುಳ್ಳು ಹೇಳುವ ಅಭ್ಯಾಸ ಇರುವವರಿಗೆ ತುರಿಕೆ ಜಾಸ್ತಿ ಅಂತ ನನ್ನ ಅಮ್ಮ ಹೇಳುತ್ತಾಳಾದ್ದರಿಂದ, ಸಹಜವೆಂಬಂತೆ ಜೀವಮಾನದಲ್ಲಿ ನನಗೆ ಒಮ್ಮೆಯೂ ಪತ್ರೊಡೆ ತಿಂದು ತುರಿಕೆ ಬಂದದ್ದಿಲ್ಲ.

ಬಣ್ಣ ಬಣ್ಣದ ಕೆಸು ನೋಡಲು ಅಂದವಾಗಿರುವುದಾದರೂ ತಿನ್ನಲು ಯೋಗ್ಯವಲ್ಲ.

ನಿಮ್ಮ ಮನೆ ಅಥವಾ ಪಕ್ಕದ ಮನೆ ತೋಟದಲ್ಲಿ ಕೆಸು ಇಲ್ಲವಾದಲ್ಲಿ, ದೋಸೆ ಕಲ್ ಪತ್ರೊಡೆಯ ಹಿಟ್ಟನ್ನು ಉಪಯೋಗಿಸಿ ಹೀರೆಕಾಯಿ, ಬದನೇಕಾಯಿ, ಬಾಳೆಕಾಯಿ, ಮೆಂತೆ, ಬಸಳೆ ಇನ್ನಿತರ ಸೊಪ್ಪು, ಹೆಬ್ಬಲಸು ಇತ್ಯಾದಿಗಳಲ್ಯಾವುದನ್ನಾದರೂ ಬಳಸಿ ಚಟ್ಟಿ ಮಾಡಬಹುದು.

ಕೆಸುವಿನ ಉಪಯೋಗ ಬರೀ ಪತ್ರೊಡೆಗೆ ಮೀಸಲು ಎಂದು ನೀವು ತಿಳಿಯಬೇಕಾಗಿಲ್ಲ. ಅದರ ಎಲೆಯ ಚಟ್ನಿಯನ್ನೂ, ದಂಟಿನ ಹುಳಿಯನ್ನೂ, ಗಡ್ಡೆಯ ಹಪ್ಪಳವನ್ನೂ ಮಾಡಬಹುದು. ಎಲ್ಲವನ್ನೂ ಒಮ್ಮೆಲೇ ಪ್ರಯೋಗಿಸಿ ನಿಮಗೆ ಅಜೀರ್ಣವಾಗುವ ಸಂಭವ ಇರುವುದರಿಂದ ಅವನ್ನು ಮುಂದಿನ ತರಗತಿಯಲ್ಲಿ ನೋಡೋಣ.

ಚಿತ್ರ ಕೃಪೆ: ಪಾಲ

22 comments:

  1. ಪತ್ರೊಡೆ ಬಗ್ಗೆ ಓದಿ ಸಕತ್ ಖುಷಿಯಾಯ್ತು. ಮಾಹಿತಿ ಮಸ್ತಾಗಿದೆ. ನಮ್ಮಲ್ಲಿಯೂ ಇದನ್ನು ಮಾಡ್ತಾರೆ. ಜತೆಗೆ ಈ ಎಲೆಯಿಂದ ಕರ್ಕ್ಲಿ...ಕೂಡ ಮಾಡ್ತಾರೆ. ಮಸ್ತಾಗಿರತ್ತೆ.

    ReplyDelete
  2. ಪಾಲಚಂದ್ರ,

    ಪತ್ರೋಡೆ ತಿಂದಿದ್ದೇನೆ. ಸಕ್ಕತ್ ಟೇಷ್ಟ್...ನಿಮ್ಮ ಲೇಖನವು ಪತ್ರೋಡೆಯಷ್ಟೇ ರುಚಿಯಾಗಿದೆ ಮತ್ತೆ ಪತ್ರೋಡೆ ತಿನ್ನಬೇಕೆನ್ನುವ ಬಾಯಿ ಚಪಲ ಹೆಚ್ಚಾಯಿತು...

    ಅದರ ಸಂಫೂರ್ಣ ರೆಸಿಪಿ ಕೊಟ್ಟಿದ್ದೀರಿ...ನಮ್ಮ ಮನೆಯಲ್ಲೂ ಅದರ ಪ್ರಯೋಗ ಮುಂದೆ ನಡೆಯುತ್ತೆ...ಧನ್ಯವಾದಗಳು...

    ReplyDelete
  3. nange adige maadakke baralla...aadru, as a special research experiment...idanna definitely try maadtini. muhurtha nu ittidini..nanna ph.D exam mugida takshana !

    brilliantly written !

    ReplyDelete
  4. ಪತ್ರೊಡೆ ಬಗ್ಗೆ ಕೇಳಿದ್ದೆ. ಲಕ್ಷ್ಮಣರಾವ್ ಅವರು ಪತ್ರೊಡೆಯ ವಿಚಾರವಾಗಿ ಪೇಚಿಗೆ ಸಿಲುಕಿಕೊಂಡಿದ್ದ ಬರಹವನ್ನೂ ಓದಿದ್ದೆ. ಆದರೆ ಇನ್ನೂ ತಿನ್ನಲಾಗಿಲ್ಲ. ನೀವು ಕೊಟ್ಟಿರುವ ಚಿತ್ರಗಳನ್ನು ನೋಡುತ್ತಿದ್ದರೆ, ಬಾಯಲ್ಲಿ ನೀರು ಬರುತ್ತಿದೆ. ಒಮ್ಮೆ ತಿನ್ನಬೇಕ್ರಿ. ಸಧ್ಯಕ್ಕೆ ಬೆಂಗಳೂರಿನ ಯಾವುದಾದರು ಹೋಟೆಲ್ಲಿನಲ್ಲಿ ಇದು ಲಭ್ಯವಿದ್ದರೆ ಯಾರಾದರು ತಿಳಿಸಿ ಮಾರಾಯ್ರೆ

    ReplyDelete
  5. Yaake bayalli niru ursitti maraya. Madhu dodamma nim bayake tirsida hagide...

    ReplyDelete
  6. ಆಹಾ ಇದಕ್ಕಿಂತ ಒಳ್ಳೆ ವಿವರಣೆ ಬೇಕಿಲ್ಲ.

    ReplyDelete
  7. ಏನ್ರಿ, ಬಾಯ್ನಲ್ಲಿ ನೀರೂರುವ ಹಾಗೆ ಬರೆದಿದ್ದಿರಲ್ಲ, ಊರಿಂದ ಬೆ೦ಗಳೂರಿಗೆ ಬ೦ದ ಮೇಲೆ ಪತ್ರೊಡೆ ತಿ೦ದಿಲ್ಲ, ಈ ಮಳೆಗಾಲ ದಲ್ಲಿಯಾದರು ಮರಗೆಸುವಿನ ಪತ್ರೊಡೆ ತಿನ್ನಬೇಕು.

    ReplyDelete
  8. Bala!

    Patrode tindu bahala varshagale aagoytu! article chennagi ide!! thanks!!

    Srivatsa Jois

    ReplyDelete
  9. ನೀವು ಸುಳ್ಳು ಹೇಳೋರಾಗಿದ್ರೆ ಪತ್ರೊಡೆ ತಿಂದ್ರೆ ಬಾಯಿ ತುರಿಕೆ ಬರುತ್ತಂತೆ. :)

    ReplyDelete
  10. ಅಗ್ನಿಪ್ರಪಂಚ,
    ಕರ್ಕ್ಲಿ ನೆನಪಿಸಿದ್ದಕ್ಕೆ ವಂದನೆಗಳು

    ಶಿವು,
    ನಿಮ್ಮನಿಸಿಕೆಗೆ ವಂದನೆಗಳು, ನಿಮ್ಮನೆ ಪತ್ರೊಡೆ ರುಚಿಸಲಿ

    ಲಕ್ಷ್ಮೀ,
    ಧನ್ಯವಾದ, ನಿಮ್ಮ ಪ್ರಯೋಗ ಅಮೋಘ ಯಶಸ್ಸು ಕಾಣಲಿ

    ಡಾ||ಸತ್ಯನಾರಾಯಣ
    ಬಸವನಗುಡಿ ಹಳ್ಳಿತಿಂಡಿಲಿ ಟ್ರೈ ಮಾಡಿ

    ಸೌಮ್ಯ,
    ಪತ್ರೊಡೆ ಸಮಾ ತಗಂಡೆ ಮೊನ್ನೆ ಊರಿಗೆ ಹೋಯಿ

    ಸಂದೀಪ್,
    ಧನ್ಯವಾದ :)

    ಪರಂಜಪೆ,
    ಪತ್ರೊಡೆ ತಿನ್ನಲು ಶುಭ ಹಾರೈಕೆಗಳು

    ಶ್ರೀವತ್ಸ ಜೋಯಿಸ್,
    ಆದಷ್ಟು ಬೇಗ ಪತ್ರೊಡೆ ಸವಿಯುವ ಅವಕಾಶ ನಿಮಗೊದಗಲಿ, ವಂದನೆಗಳು

    ಹರ್ಷ,
    :)

    ReplyDelete
  11. ಇದೆಲ್ಲಾ ತೋರಿಸಿ ನನ್ನ ಬಾಯಲ್ಲಿ ನೀರು ಬರಿಸ್ತೀರಪ್ಪ ನೀವು :( :)

    ReplyDelete
  12. ಸರ್‌, ಕೆಸುವಿನ ಎಲೆಯ ಬಗ್ಗೆ ವಿವರವಾದ ಮಾಹಿತಿಯೊಂದಿಗೆ ಉತ್ತಮ ಚಿತ್ರಗಳನ್ನೂ ನೀಡಿದ್ದೀರಿ. ಜೊತೆಗೆ ಅದರ ಹಲವು ಬಗೆಯ ಖಾದ್ಯೋಪಯೋಗಗಳನ್ನೂ ತಿಳಿಸಿದ್ದೀರಿ. ಧನ್ಯವಾದಗಳು.

    ReplyDelete
  13. ಇಲ್ಲಿಯವರೆಗೂ ತಿಂದಿಲ್ಲ... :) ಚೆನ್ನಾಗಿದೆ ಖಾದ್ಯ ತಯಾರಿಕೆಯ ವಿವರಣೆ..

    ReplyDelete
  14. ನಂಗೆ ಪತ್ರೊಡೆ ಅಂದ್ರೆ ತುಂಬಾ ಇಷ್ಟ. ಅಮ್ಮ ಆಟಿ ತಿಂಗಳಲ್ಲಿ ಪತ್ರೊಡೆ ಮಾಡಿ ಕೊಡ್ತಾರೆ. ಚೆನ್ನಾಗಿದೆ ಬರಹ..
    -ಧರಿತ್ರಿ

    ReplyDelete
  15. Wow, those look so delicious. Thanks for the comment on my blog. What language are you writing in?? I had spent some time in Kerala and Tamil Nadu and it looks similar to me. All I know is I wish I could read it, those taro leaves look delicious! Any chance of an English translation?

    ReplyDelete
  16. Bea,
    I posted this recipe, after looking these leaves in your blog. Thank you for your post.

    Am writing in Kannada native language of Karnataka which is adjacent to Kerala and Tamil Nadu you visited.

    I will definitely translate this to English and reply to your "Gabi (Colocasiodeae )" post.

    ReplyDelete
  17. ವಾಹ್.. ಪತ್ರೊಡೆ ಮಾಡೋದನ್ನು ಚೆನ್ನಾಗಿ ವಿವರಿಸಿದ್ದೀರಿ.ಇದು ನಂಗಿಷ್ಟ,ಆದ್ರೆ ಇಲ್ಲಿ ನಂಗೆ ಕೆಸುವಿನ ಎಲೇನೆ ಸಿಗಲ್ಲ..:( ದೋಸೆ ಕಲ್ ಪತ್ರೊಡೆ ಬಗ್ಗೆ ತಿಳಿದಿರಲಿಲ್ಲ.ಇದನ್ನು ಮಾಡೋ ಇನ್ನೊದು ಸುಲಭದ ವಿಧಾನ ಅಂದ್ರೆ ಎಲೆಯನ್ನು ಸಣ್ಣಗೆ ಕಟ್ ಮಾಡಿ ಗಟ್ಟಿಗೆ ರುಬ್ಬಿದ ಹಿಟ್ಟಿನೊಂದಿಗೆ ಬೆರೆಸಿ, ಬಾಳೆಲೆಯಲ್ಲಿಟ್ಟು ಬೇಯಿಸುವುದು..

    ReplyDelete
  18. pala patrode tenbeku antha anisutede but nanu yendu taste madilla.....nange kodistera?

    ReplyDelete
  19. ಪತ್ರೊಡೆ ನ ಚಿತ್ರದಲ್ಲಿ ನೋಡ್ತಿದ್ದ ಹಾಗೆ ಬಾಯಲ್ಲಿ ನೀರು ಬರ್ತಾ ಇದೆ.... ಅದ್ರಲ್ಲೂ "ಬೆಕ್ಕಿನ ಮಂಡೆ" ಗಾತ್ರದ ಬೆಣ್ಣೆ ನ ಜ್ನಾಪಿಸಿಕೊಂಡ್ರೇ....... ಈಗ್ಲೆ ಪತ್ರೊಡೆ ತಿನ್ಬೇಕು ಅನಿಸ್ತಿದೆ....:-)

    ReplyDelete
  20. neenu bahala cennagi adige maadti amta kElidde. idannu nOdidare houdu amta annisutte. naanu yaavaaga ruchi nODali aMta hELu!!

    ReplyDelete
  21. Pala,

    Nannadondu chikka salahe,

    1. Dosekal patrode samagrigalalli jeerigeyannu swalpa(1/2 chamacha) kadime madi menthe(Fenugreek) upayogisodu uttama.

    2. Aakkiya(Rice) pramana kevala ardha(1/2) kg agirabeku.

    3. Ona menasinakai(Red Chilli)ya prakaragallu(Guntur & Byadige) tilidu swalpa kadime madabahudu.

    4. Nanna prakara patrodege sakkareya badalu bellavannu upayogisodu bahala uttama.

    ReplyDelete
  22. ಪತ್ರೊಡೆಯ ಬಗ್ಗೆ ಗೆಳೆಯರಿಂದ ಕೇಳಿ ತಿಳಿದಿದ್ದೆ, ನಿಮ್ಮ ಲೇಖನ ಓದಿದ ಮೇಲೆ ನಿಜಕ್ಕೂ ಅದನ್ನು ಸವಿದಂತಾಯಿತು. ಅದಕ್ಕೆ ಬೇಕಾಗುವ ಮೂಲ ಸಾಮಗ್ರಿ "ಕೆಸು" ಯಾವುದೋ ಅಂದುಕೊಂಡಿದ್ದೆ, ನಿಮ್ಮ ಚಿತ್ರ ಮಾಹಿತಿಯಿಂದಾಗಿ ಅದು ನಮ್ಮ ಬಳ್ಳಾರಿ ಜಿಲ್ಲೆಯಲ್ಲಿ "ಶ್ಯಾವೆ ಪಲ್ಯ" ಎಂದು ಕರೆಸಿಕೊಳ್ಳುವ ಗಿಡವೆಂದು ತಿಳಿದುಬಂತು. ಇದರ ಪಲ್ಯವನ್ನು ನಮ್ಮಲ್ಲಿ ಶ್ರಾದ್ಧದ ಊಟದಲ್ಲಿ ತಪ್ಪದೇ ಮಾಡಬೇಕು. ಅದಿಲ್ಲದಿದ್ದರೆ ಶ್ರಾದ್ಧದ ಅಡಿಗೆ ಅಸಂಪೂರ್ಣ/ಪೂರ್ತಿ ಪುಣ್ಯ ಬರುವುದಿಲ್ಲ.

    ReplyDelete

ವರ್ಗ

Amomum (1) ficus krishnae (1) Gangtok (1) Nikon 40mm f/2.8 Micro (10) paris (1) Sikkim (8) snow (1) Yuksom (5) ಅನಿಮೇಟೆಡ್ (1) ಅನುಭವ ಕಥನ (7) ಅಮೂರ್ತ (1) ಆಟೋಟ (2) ಆಫಿಡ್ (1) ಇರುವೆ (6) ಉಡುಪಿ (4) ಉಯ್ಯಾಲೆ (1) ಉರಗ (3) ಏರಿ (1) ಒಂಟಿ ಚಕ್ರದ ಸೈಕಲ್ (1) ಒಯ್ಯುಗೆ (6) ಕದ (1) ಕಂದು ಏಲಕ್ಕಿ (1) ಕನ್ನಡ (2) ಕಪ್ಪು ಏಲಕ್ಕಿ (1) ಕಪ್ಪು-ಬಿಳುಪು (5) ಕಂಬಳ (1) ಕಂಬಳಿಹುಳು (2) ಕವನ (15) ಕವಿ ಶೈಲ (1) ಕಸರತ್ತು (1) ಕಳಸ (1) ಕಳ್ಳತನ (1) ಕಾವೇರಿ (1) ಕಾಳಾವಾರ ಬೆಟ್ಟ (1) ಕಾಳಿಂಗ ಸರ್ಪ (1) ಕಿಸ್ಕಾರ (1) ಕೀಟ ಪ್ರಪಂಚ (35) ಕುಂದಾಪುರ (1) ಕುವೆಂಪು (1) ಕೃಷಿ (9) ಕೃಷಿ ಮೇಳ (4) ಕೆರೆ (2) ಕೆಲಸ (2) ಕೆಸು (2) ಕೆಳದಿ (1) ಕೊಕ್ಕರೆ ಬೆಳ್ಳೂರು (1) ಕೋಟ (8) ಖಗೋಳ ಗಡಿಯಾರ (1) ಗವಿ (1) ಗುಡಿ ಕೈಗಾರಿಕೆ (1) ಗುಡ್ಡ (2) ಗುಹೆ (1) ಚಾರಣ (3) ಚಿಕ್ಕಮಗಳೂರು (1) ಚಿಟ್ಟಾಣಿ (1) ಚಿಟ್ಟೆಗಳು (3) ಚಿತ್ರ ಪುಟ (102) ಚಿತ್ರದುರ್ಗ (1) ಚಿತ್ರಪುಟ (1) ಚೌಕಾಶಿ (1) ಛಾಯಾಗ್ರಹಣ (24) ಜನ ಜೀವನ (52) ಜನಪದ (2) ಜರ್ಮನಿ (1) ಜಲಪಾತ (1) ಜೆಕ್ ಗಣರಾಜ್ಯ (4) ಜೇಡ (3) ಜೇನು ಸಾಕಣೆ (1) ಜೋಡಿ (1) ತರಕಾರಿ (2) ತುಮಕೂರು (2) ತೆಂಗಿನ ಕಾಯಿ (1) ತೆಂಗಿನ ತೋಟ (1) ದಸರ (4) ದೇವವೃಂದ (1) ದೇವಸ್ಠಾನ (1) ದೇವಸ್ಥಾನ (1) ದೊಡ್ಡ ಏಲಕ್ಕಿ (1) ಧಾರವಾಡ (1) ನಗರ (1) ನಂಬಿಕೆ (1) ನಾಟಕ (1) ನೀರ್ಹಕ್ಕಿ (6) ಪತಂಗ (1) ಪತ್ರಿಕೋದ್ಯಮ (1) ಪಶ್ಚಿಮ ಘಟ್ಟ (2) ಪಾರ್ಕ್ (1) ಪಾಳು (1) ಪುಸ್ತಕ ಬಿಡುಗಡೆ (1) ಪೋರ್ಟ್ರೈಟ್ (8) ಪ್ಯಾನಿಂಗ್ (1) ಪ್ರಬಂಧ (2) ಪ್ರವಾಸ ಕಥನ (3) ಪ್ರಾಹ (1) ಪ್ಲಾಸ್ಟಿಕ್ (1) ಬಕೇಟ್ (1) ಬಂಡಿ (1) ಬಣ್ಣ (1) ಬನವಾಸಿ (1) ಬಳ್ಳಿ (1) ಬಾಗಿಲು (1) ಬಾರ್ಕೂರು (1) ಬೀಗ (1) ಬೆಂಕಿ (1) ಬೆಂಗಳೂರಿನ ಚಿತ್ರಗಳು (5) ಬೆಂಗಳೂರು (27) ಬೆಳಕು (1) ಬೇಸಾಯ (1) ಬ್ರಹ್ಮಾವರ (1) ಭಾರತ ಬಂದ್ (1) ಭಿಕ್ಷುಕರು (1) ಮಕ್ಕಳು (10) ಮಗು (1) ಮಂಜು (2) ಮಮ್ಮಮ್ (3) ಮಲೆನಾಡು (1) ಮಳೆ (1) ಮಳೆಗಾಲ (2) ಮಾರಿಕಣಿವೆ (1) ಮುಸ್ಸಂಜೆ (1) ಮೇಲುಕೋಟೆ (2) ಮೇವು (1) ಮೈಸೂರು (7) ಮೋಡ (2) ಮ್ಯಾಕ್ರೋ (12) ಯಕ್ಷಗಾನ (2) ರಸ್ತೆ (5) ರಾತ್ರಿ ನೋಟ (3) ರೈಮ್ (1) ರೈಲು (2) ರೈಲುಹಳಿ (1) ಲಲಿತ ಪ್ರಬಂಧ (6) ಲೇಪಾಕ್ಷಿ (1) ವಂಡಾರ್ (1) ವಾಸ್ತು ಶಿಲ್ಪ (1) ವಾಹನ (2) ವಿವೇಕ (1) ವಿಸ್ತರಣೆ (1) ವ್ಯಕ್ತಿ ವಿಷಯ (3) ವ್ಯಾಪಾರ (1) ಶಾಲೆ (1) ಶಿರಸಿ (1) ಶಿರಸಿ. ಸೈಕಲ್ (1) ಶಿಲ್ಪ (1) ಶಿವನಸಮುದ್ರ (1) ಶುಭಾಶಯ (2) ಸಣ್ಣ ಕಥೆ (4) ಸಂತೆ (2) ಸಮುದ್ರ (2) ಸಮುದ್ರ ಜೀವಿ (2) ಸಸ್ಯ ಪ್ರಪಂಚ (12) ಸಾಕು ಪ್ರಾಣಿ (4) ಸಾಗಾಟ (1) ಸಾಸ್ತಾನ (1) ಸಿಕ್ಕಿಂ (3) ಸೈಕಲ್ (5) ಸೈಕಲ್ ಯಾತ್ರೆ (1) ಸ್ಕಂದಗಿರಿ (1) ಸ್ತೂಪ (1) ಸ್ಪರ್ಧೆ (1) ಹಕ್ಕಿಗಳು (21) ಹರಿಹರ (1) ಹಳ್ಳಿ (3) ಹಿಮ (1) ಹೂಗಳು (5) ಹೂವು (1) ಹೊಸ ವರ್ಷ (1) ಹೋಂ ಸ್ಟೇ (1) ಹೌರಾ (1)