Thursday, April 09, 2009

ತಾತ್ಕಾಲಿಕ ಬಿಡುವು

ಒಂಭತ್ತನೇ ತರಗತಿಯಿಂದ ಬರೆಯಲಾರಂಭಿಸಿದ ಡೈರಿ, ನಾನು ಬ್ಲಾಗ್ ಪ್ರಪಂಚಕ್ಕೆ ಕಾಲಿಡುವವರೆಗೂ ಮುಂದುವರಿಸಿಕೊಂಡು ಬಂದಿದ್ದೇನೆ. ಆ ನನ್ನ ಹಳೇಯ ಡೈರಿಗಳನ್ನ ತೆಗೆದು ನೋಡಿದರೆ ನಾ ಮೆಚ್ಚಿದ ಪುಸ್ತಕಗಳ ಬಗ್ಗೆ, ನಾ ಮೆಚ್ಚಿದ ಜನರು, ವಿದ್ಯಾಭ್ಯಾಸ, ಇತರ ಚಟುವಟಿಕೆ, ಅಲ್ಲಲ್ಲಿ ಫೋಟೋಗಳು,ಪತ್ರಗಳು, ಸಂಗ್ರಹಿಸಿದ ಹಕ್ಕಿ ಪುಕ್ಕಗಳು, ಕೆಲಸದ ಆರಂಭದ ದಿನಗಳು ಇನ್ನೂ ಏನೇನೋ, ಅದೂ ನನ್ನ ಬರವಣಿಗೆಯಲ್ಲೇ.

ಇಂದಿಗೆ ಸುಮಾರು ೩ ವರ್ಷದ ಹಿಂದೆ ನನ್ನ ಬ್ಲಾಗ್ ಅಕೌಂಟ್ ತೆರೆದಿದ್ದರೂ, ಇಲ್ಲಿ ಬರೆಯಲಾರಂಭಿಸಿದ್ದು ಜುಲೈ ೨೦೦೮ರಿಂದ. "ನಿಮ್ಮ ಪ್ರೀತಿಯನ್ನು ನಿವೇದಿಸುವ ಮುನ್ನ" ಎಂಬ ಪ್ರಬಂಧದಿಂದ ತೊಡಗಿದ ಬರಹ ಕೆಲವು ಪ್ರವಾಸ ಕಥನ, ಅನುಭವ ಕಥನ, ಕವನ, ಛಾಯಗ್ರಹಣಕ್ಕೆ ಸಂಬಂಧಿಸಿದ ಲೇಖನಗಳು, ಲಲಿತ ಪ್ರಬಂಧ, ಕೆಲವು ಚಿತ್ರಗಳನ್ನು ಪೋಸ್ಟ್ ಮಾಡಿದ್ದೇನೆ.

ನನ್ನ ಇತರ ಹವ್ಯಾಸಗಳ ಆಸಕ್ತಿಯ ದೆಸೆಯಿಂದ ಬರೆಯಲು ಹೆಚ್ಚಿನ ಸಮಯ ವಿನಿಯೋಗಿಸಲು ಸಾಧ್ಯವಾಗುತ್ತಿಲ್ಲ. ಸಿಗುವ ಅಲ್ಪ ಸಮಯದಲ್ಲಿ ಏನು ಬರೆಯಬೇಕೆಂದೂ ತೋಚುತ್ತಿಲ್ಲ. ಆದ್ದರಿಂದ ಬರವಣಿಗೆಗೆ ತಾತ್ಕಾಲಿಕ ವಿರಾಮ ಕೊಡುತ್ತಿದ್ದೇನೆ. ನಿಮ್ಮೆಲ್ಲರ ಸ್ನೇಹ, ಪ್ರೋತ್ಸಾಹಕ್ಕೆ ನನ್ನ ತುಂಬು ಹೃದಯದ ಕೃತಜ್ಞತೆಗಳು. ಮತ್ತೆ ಬರೆಯಬೇಕೆನಿಸಿದಾಗ ಬರೆಯುತ್ತೇನೆ, ಅಲ್ಲಿಯವರೆಗೂ ಬಿಡುವಿದ್ದಾಗ ನಿಮ್ಮ ಲೇಖನಗಳನ್ನು ಓದಲು ಖಂಡಿತಾ ಬರುತ್ತೇನೆ. ತಿಳಿಯದೇ ನನ್ನ ಪ್ರತಿಕ್ರಿಯೆಯಿಂದ ನಿಮ್ಮ ಮನಸ್ಸನ್ನು ನೋಯಿಸಿದ್ದಲ್ಲಿ ಕ್ಷಮೆಯಿರಲಿ.

ನಾನು ತೆಗೆಯುವ ಫೋಟೋ ನೋಡಲು ಆಸಕ್ತಿಯಿದ್ದಲ್ಲಿ ನನ್ನ ಫ್ಲಿಕರ್ ಎಕೌಂಟ್ಗೆ ಭೇಟಿ ನೀಡಬಹುದು.

-
ಪಾಲ

9 comments:

  1. ಬ್ಲಾಗಿಂಗ್ ಜಗತ್ತಿನಲ್ಲಿ ೩ ವರ್ಷ ಮುಗಿಸಿದ್ದಕ್ಕೆ ಅಭಿನಂದನೆಗಳು.

    ಪ್ರೋತ್ಸಾಹ ಖಂಡಿತ ಇರುತ್ತೆ.

    -ಅನಿಲ್.

    ReplyDelete
  2. ಏನು ಬರೆಯಲು ತೋಚುತ್ತಿಲ್ಲಾ ಎನ್ನಬೇಡಿ.. ನಿಮ್ಮ ಫೋಟಗಳನ್ನು ಹಾಕಿ ಅದಕ್ಕೆ ಒಂದು ಅಡಿ ಬರಹ ಹಾಕಿದರೂ ಸಾಕು, ನಮಗೆ ಖುಷಿ.. ಕನಿಷ್ಠ ಪಕ್ಷ ತಿಂಗಳಿಗೆ ಒಂದೆರಡಾದರೂ ಬರೆಯುತ್ತಾ ಹೋಗಿ.. ನೀವು ಫೋಟೋಗ್ರಾಫಿ ಟಿಪ್ಸ್ ಕೊಡೋದು ನಿಲ್ಲಿಸಬೇಡಿ.. ನಿಮ್ಮ ಬ್ಳಾಗನ್ನು ಓದಿ ಎಂಜಾಯ್ ಮಾಡುತ್ತಾ ಬಂದಿರುವ ನನ್ನ ಮನವಿ..

    ReplyDelete
  3. ನೀವು ಸಮಯ ಸಿಕ್ಕಾಗ ಬರೆಯಿರಿ, ನಿಲ್ಲಿಸಬೇಡಿ. ೩ ವರ್ಷ ಪೂರೈಸುವುದು ಸಾಧನೆಯೇ ಸರಿ,

    ReplyDelete
  4. ಪಾಲ,
    ಬರವಣಿಗೆ ನಿಲ್ಲಿಸುವ ಮಾತೇಕೆ? ಸಮಯ ಸಿಕ್ಕಾಗ ತೋಚಿದ್ದನ್ನ ಬರೆಯುತ್ತಿರಿ, ಏನೂ ಇಲ್ಲದಾಗ ನಿಮ್ಮ ಚಿತ್ರಗಳನ್ನಾದರೂ ಹಾಕುತ್ತಿರಿ.

    -ಬಾಲ

    ReplyDelete
  5. ಪಾಲಚಂದ್ರ,

    ಏನು ತೋಚುತ್ತಿಲ್ಲವೆಂದು ಬರೆಯುವುದು ನಿಲ್ಲಿಸಬೇಡಿ...ಹಾಗೆ ಅನ್ನಿಸಿದನ್ನು ಬರೆದರೂ ಬರೆಯಬಹುದು...ಮತ್ತೆ ನಿಮ್ಮ ಫೋಟೋ ತೆಗೆಯುವ ಬ್ಲಾಗಿಗೆ ಹಾಕುವ ಕೆಲಸ ನಿಲ್ಲಿಸಬಾರದು...ಮತ್ತು ಫೋಟೋಗ್ರಫಿ ಪಾಠ ಹೇಳುವುದನ್ನು ನಿಲ್ಲಿಸಿದ್ದೀರಿ...ಏಕೆ ಬೇರೆಲ್ಲಾದರೂ ಸಂಬಳಕ್ಕೆ ಹೇಳಿಕೊಡುವುದಕ್ಕೆ ಸೇರಿಕೊಂಡಿರಾ....ಆಗೆಲ್ಲಾ ಆಗದು...ನಿಮಗಾಗಿ ನಾವೆಲ್ಲಾ ಕಲಿಯಲು ಕಾಯುತ್ತಿದ್ದೇವೆ...ಪಾಠ ಮಾತ್ರ ಬೇಕು...ಬೇಕೆ ಬೇಕು....

    ReplyDelete
  6. ಅನಿಲ್,
    ನನ್ನಿ

    ಶಿವು,
    >>ಏಕೆ ಬೇರೆಲ್ಲಾದರೂ ಸಂಬಳಕ್ಕೆ ಹೇಳಿಕೊಡುವುದಕ್ಕೆ ಸೇರಿಕೊಂಡಿರಾ
    ಇಲ್ಲಾ ಸಾರ್, ಪರ್ಸನಲ್ ಕೆಲ್ಸ ತುಂಬಾ ಇದೆ ಅಷ್ಟೆ :)

    ಗುರು, ಇಂಚರ, ಚಂದನ, ಶಿವು,
    ನಿಮ್ಮ ಪ್ರೀತಿಗೆ ವಂದನೆಗಳು. ಆದಷ್ಟು ಬೇಗ ಮತ್ತೆ ಬರೀತೀನಿ.. ಸಾಧ್ಯವಾದ್ರೆ ಆವಾಗಾವಾಗ ಚಿತ್ರ ಹಾಕ್ತಾ ಇರ್ತೀನಿ

    --
    ಪಾಲ

    ReplyDelete
  7. ನಿಲ್ಲಿಸಬೇಡಿ ಪಾಲಚಂದ್ರ.ನೀವು ತೆಗೆದ ಒಂದು ಫೋಟೋ,ಆ ಫೋಟೋ ತೆಗೆದ ಸಂದರ್ಭ, ರೀತಿ ಬರೆದರೂ ಸಾಕು. ನಿರಾಶೆ ಮಾಡಬೇಡಿ.

    ReplyDelete
  8. ಪಾಲ ಚಂದ್ರ...

    ನೀವು ತೆಗೆದ ಫೋಟೊಗಳನ್ನು ಹಾಕಿ....

    ತುಂಬ ಚಂದದ ಫೋಟೊ ಸಂಗ್ರಹ ನಿಮ್ಮಲ್ಲಿವೆ...

    ಬರೆಯುವದನ್ನು ನಿಲ್ಲಿಸ ಬೇಡಿ...

    ನಿಮ್ಮ ಬರವಣಿಗೆಯ ಶೈಲಿ ಚೆನ್ನಾಗಿದೆ...

    ReplyDelete
  9. ಏನ್ಸಾರ್ ಇದು...?! ಸಮಯವನ್ನೇ ಮೈ ಮೇಲೆ ಹೊದ್ದುಕೊಂಡರೂ ಮನುಷ್ಯ ಸಮಯವಿಲ್ಲ ಅಂತ ಬೊಬ್ಬಿಡ್ತಾನೆ ಅಂತೆ. ನಾನೂ-ನೀವೂ ಹೊರತಾಗಿಲ್ಲ ಬಿಡಿ. ತಾತ್ಕಾಲಿಕ ಬಿಡುವಿನ ಮಾತೇಕೆ? ಮಾರಾಯ್ರೆ..?! ಬೇಡ ಬೇಡ..ಪ್ರೋತ್ಸಾಹ ಮಾಡಿದವರಿಗೆ ಥ್ಯಾಂಕ್ಸ್ ಹೇಳಿ ಕೈತೊಳೆದುಕೋಬೇಡಿ..ಸುಮ್ನೆ ನಿರಾಶೆ ಮಾಡದೆ..ವಾರಕ್ಕೆ ಕನಿಷ್ಠ ಒಂದು ಫೋಸ್ಟ್ ಆದ್ರೂ ಅಪ್ ಡೇಟ್ ಮಾಡಿ. ಅಷ್ಟೇ..ನಿಲ್ಲಿಸೋ ಮಾತೇ ಬೇಡ..
    -ಧರಿತ್ರಿ

    ReplyDelete

ವರ್ಗ

Amomum (1) ficus krishnae (1) Gangtok (1) Nikon 40mm f/2.8 Micro (10) paris (1) Sikkim (8) snow (1) Yuksom (5) ಅನಿಮೇಟೆಡ್ (1) ಅನುಭವ ಕಥನ (7) ಅಮೂರ್ತ (1) ಆಟೋಟ (2) ಆಫಿಡ್ (1) ಇರುವೆ (6) ಉಡುಪಿ (4) ಉಯ್ಯಾಲೆ (1) ಉರಗ (3) ಏರಿ (1) ಒಂಟಿ ಚಕ್ರದ ಸೈಕಲ್ (1) ಒಯ್ಯುಗೆ (6) ಕದ (1) ಕಂದು ಏಲಕ್ಕಿ (1) ಕನ್ನಡ (2) ಕಪ್ಪು ಏಲಕ್ಕಿ (1) ಕಪ್ಪು-ಬಿಳುಪು (5) ಕಂಬಳ (1) ಕಂಬಳಿಹುಳು (2) ಕವನ (15) ಕವಿ ಶೈಲ (1) ಕಸರತ್ತು (1) ಕಳಸ (1) ಕಳ್ಳತನ (1) ಕಾವೇರಿ (1) ಕಾಳಾವಾರ ಬೆಟ್ಟ (1) ಕಾಳಿಂಗ ಸರ್ಪ (1) ಕಿಸ್ಕಾರ (1) ಕೀಟ ಪ್ರಪಂಚ (35) ಕುಂದಾಪುರ (1) ಕುವೆಂಪು (1) ಕೃಷಿ (9) ಕೃಷಿ ಮೇಳ (4) ಕೆರೆ (2) ಕೆಲಸ (2) ಕೆಸು (2) ಕೆಳದಿ (1) ಕೊಕ್ಕರೆ ಬೆಳ್ಳೂರು (1) ಕೋಟ (8) ಖಗೋಳ ಗಡಿಯಾರ (1) ಗವಿ (1) ಗುಡಿ ಕೈಗಾರಿಕೆ (1) ಗುಡ್ಡ (2) ಗುಹೆ (1) ಚಾರಣ (3) ಚಿಕ್ಕಮಗಳೂರು (1) ಚಿಟ್ಟಾಣಿ (1) ಚಿಟ್ಟೆಗಳು (3) ಚಿತ್ರ ಪುಟ (102) ಚಿತ್ರದುರ್ಗ (1) ಚಿತ್ರಪುಟ (1) ಚೌಕಾಶಿ (1) ಛಾಯಾಗ್ರಹಣ (24) ಜನ ಜೀವನ (52) ಜನಪದ (2) ಜರ್ಮನಿ (1) ಜಲಪಾತ (1) ಜೆಕ್ ಗಣರಾಜ್ಯ (4) ಜೇಡ (3) ಜೇನು ಸಾಕಣೆ (1) ಜೋಡಿ (1) ತರಕಾರಿ (2) ತುಮಕೂರು (2) ತೆಂಗಿನ ಕಾಯಿ (1) ತೆಂಗಿನ ತೋಟ (1) ದಸರ (4) ದೇವವೃಂದ (1) ದೇವಸ್ಠಾನ (1) ದೇವಸ್ಥಾನ (1) ದೊಡ್ಡ ಏಲಕ್ಕಿ (1) ಧಾರವಾಡ (1) ನಗರ (1) ನಂಬಿಕೆ (1) ನಾಟಕ (1) ನೀರ್ಹಕ್ಕಿ (6) ಪತಂಗ (1) ಪತ್ರಿಕೋದ್ಯಮ (1) ಪಶ್ಚಿಮ ಘಟ್ಟ (2) ಪಾರ್ಕ್ (1) ಪಾಳು (1) ಪುಸ್ತಕ ಬಿಡುಗಡೆ (1) ಪೋರ್ಟ್ರೈಟ್ (8) ಪ್ಯಾನಿಂಗ್ (1) ಪ್ರಬಂಧ (2) ಪ್ರವಾಸ ಕಥನ (3) ಪ್ರಾಹ (1) ಪ್ಲಾಸ್ಟಿಕ್ (1) ಬಕೇಟ್ (1) ಬಂಡಿ (1) ಬಣ್ಣ (1) ಬನವಾಸಿ (1) ಬಳ್ಳಿ (1) ಬಾಗಿಲು (1) ಬಾರ್ಕೂರು (1) ಬೀಗ (1) ಬೆಂಕಿ (1) ಬೆಂಗಳೂರಿನ ಚಿತ್ರಗಳು (5) ಬೆಂಗಳೂರು (27) ಬೆಳಕು (1) ಬೇಸಾಯ (1) ಬ್ರಹ್ಮಾವರ (1) ಭಾರತ ಬಂದ್ (1) ಭಿಕ್ಷುಕರು (1) ಮಕ್ಕಳು (10) ಮಗು (1) ಮಂಜು (2) ಮಮ್ಮಮ್ (3) ಮಲೆನಾಡು (1) ಮಳೆ (1) ಮಳೆಗಾಲ (2) ಮಾರಿಕಣಿವೆ (1) ಮುಸ್ಸಂಜೆ (1) ಮೇಲುಕೋಟೆ (2) ಮೇವು (1) ಮೈಸೂರು (7) ಮೋಡ (2) ಮ್ಯಾಕ್ರೋ (12) ಯಕ್ಷಗಾನ (2) ರಸ್ತೆ (5) ರಾತ್ರಿ ನೋಟ (3) ರೈಮ್ (1) ರೈಲು (2) ರೈಲುಹಳಿ (1) ಲಲಿತ ಪ್ರಬಂಧ (6) ಲೇಪಾಕ್ಷಿ (1) ವಂಡಾರ್ (1) ವಾಸ್ತು ಶಿಲ್ಪ (1) ವಾಹನ (2) ವಿವೇಕ (1) ವಿಸ್ತರಣೆ (1) ವ್ಯಕ್ತಿ ವಿಷಯ (3) ವ್ಯಾಪಾರ (1) ಶಾಲೆ (1) ಶಿರಸಿ (1) ಶಿರಸಿ. ಸೈಕಲ್ (1) ಶಿಲ್ಪ (1) ಶಿವನಸಮುದ್ರ (1) ಶುಭಾಶಯ (2) ಸಣ್ಣ ಕಥೆ (4) ಸಂತೆ (2) ಸಮುದ್ರ (2) ಸಮುದ್ರ ಜೀವಿ (2) ಸಸ್ಯ ಪ್ರಪಂಚ (12) ಸಾಕು ಪ್ರಾಣಿ (4) ಸಾಗಾಟ (1) ಸಾಸ್ತಾನ (1) ಸಿಕ್ಕಿಂ (3) ಸೈಕಲ್ (5) ಸೈಕಲ್ ಯಾತ್ರೆ (1) ಸ್ಕಂದಗಿರಿ (1) ಸ್ತೂಪ (1) ಸ್ಪರ್ಧೆ (1) ಹಕ್ಕಿಗಳು (21) ಹರಿಹರ (1) ಹಳ್ಳಿ (3) ಹಿಮ (1) ಹೂಗಳು (5) ಹೂವು (1) ಹೊಸ ವರ್ಷ (1) ಹೋಂ ಸ್ಟೇ (1) ಹೌರಾ (1)