ಸ್ಕಂದ: ಎಲ್ಲಿದೀಯ
ನಾನು: ಚಿಕ್ಕ ಪೇಟೆ
ಸ್ಕಂದ: ವೀಕೆಂಡ್ ಏನ್ ಪ್ಲಾನು
ನಾನು: ಏನೂ ಇಲ್ಲ
ಸ್ಕಂದ: ಎಲ್ಲಿಗಾದ್ರೂ ಹೋಗೋಣ
ನಾನು: ಸರಿ ಎಲ್ಲಿಗೆ?
ಸ್ಕಂದ: ಗೊತ್ತಿಲ್ಲ, ಸುಮ್ನೆ ಮೈಸೂರ್ ರೋಡಲ್ಲಿ ಹೋಗೋಣ.. ಎಲ್ಲಿಗೆ ಅಂತ ಆಮೇಲೆ ಡಿಸೈಡ್ ಮಾಡಿದ್ರಾಯ್ತು
ನಾನು: ಸರಿ, ಯಾವಾಗ?
ಸ್ಕಂದ: ಇನ್ನು ೨೦ ನಿಮಿಷದಲ್ಲಿ ನ್ಯಾಷನಲ್ ಮಾರ್ಕೇಟ್ ಹತ್ರ ಸಿಕ್ತೀನಿ
ನಾನು: ಸರಿ
ಹೀಗೆ ಗೊತ್ತು ಗುರಿ ಇಲ್ದೆ ಹೊರ್ಟಿದ್ ನಾವು ಶುಕ್ರವಾರ ರಾತ್ರಿ ೧೧ಗಂಟೆಗೆ ತಲುಪಿದ್ದು ಮೇಲುಕೋಟೆ. ರಾತ್ರಿ ಜನಸಂಚಾರವಿಲ್ದೆ ಉಳಿಯೋದು ಎಲ್ಲಿ ಗೊತ್ತಾಗ್ದೆ ಮಲ್ಗಿದ್ದು ದೇವಸ್ಥಾನದ ಜಗಲೀಲಿ. ಸ್ವಲ್ಪ ಬೆಳದಿಂಗಳು, ಹೊಳೆಯೋ ನಕ್ಷತ್ರ ಇದ್ದಿದ್ರಿಂದ ಅಲ್ಲೇ ಪಕ್ಕದಲ್ಲಿರೋ ಒಂದು ಗುಡ್ಡ ಹತ್ತಿ ಆಕಾಶ ಕಾಯ, ಪ್ರಪಂಚ, ವಿಶ್ವ, ಅಣು, ಜೀವ ವಿಕಾಸ, ಓಷೋ, ಪತಂಗ, ಪ್ರೀತಿ, ಪ್ರೇಮ, ನಿಸ್ವಾರ್ಥ ಪ್ರೀತಿ, ಆಯ್ಕೆ ಮತ್ತು ನಿಸ್ವಾರ್ಥ ಪ್ರೀತಿ ಹೀಗೆ ಏನೇನೋ ತಲೆಗೆ ಬಂದಿದ್ದೆಲ್ಲಾ ಹರ್ಟ್ತಾ ೧:೩೦ರ ಹೊತ್ತಿಗೆ ಮಲ್ಗೋದು ಎಲ್ಲಿ ಎಂತ ಎದ್ವಿ. ನಾವು ತಂದಿದ್ದ ಟೆಂಟು ಹಾಕೊದು ಎಲ್ಲಿ ಅಂತ ಗೊತ್ತಾಗ್ದೆ, ದೇವಸ್ಥಾನದ ಜಗಲಿಯಲ್ಲಿ ಕೊರೆಯುವ ಚಳೀಲಿ ಮಲ್ಗಿದ್ದಾಯ್ತು.
ಮರುದಿನ ಬೆಳ್ಗೆ ಬೇಗ ಎದ್ದು ಮೊದ್ಲು ಮಾಡಿದ್ ಕೆಲ್ಸ, ವಾರ್ಮಪ್ ಆಗ್ಲಿ ಅಂತ ಸ್ವಲ್ಪ ನಡೆದಿದ್ದು. ನಂತ್ರ ಅಲ್ಲೇ ರಸ್ತೆ ಬದಿ ಕಸದ ರಾಶಿ ಇದ್ದಿದ್ರಿಂದ ಬೆಂಕಿ ಹಾಕಿ ಬೆಚ್ಚಗಾಗಿ ನನ್ನ ಹೊಸ ಲೆನ್ಸು (ನಿಕಾರ್ ೭೦-೩೦೦ ವಿ.ಆರ್) ಹೇಗಿದೆ ಅಂತ ಟ್ರೈ ಮಾಡಿದೆ. ಸಕ್ಕತ್ ಇಷ್ಟ ಆಯ್ತು. ಅದ್ರಲ್ಲೂ ಜನರ ಕ್ಯಾಂಡಿಡ್ ಪೋಟೋ ತೆಗೆಯೋಕೆ ಸಕ್ಕತ್ ಲೆನ್ಸು.
ಆಮೇಲೆ ಅಲ್ಲೇ ಒಂದ್ಕಡೆ ರೂಮ್ ಮಾಡಿ, ಭಾನುವಾರದವರೆಗೂ ಊರೆಲ್ಲಾ ಅಲ್ದು ಮನೆಗೆ ಬಂದ್ವಿ. ತಿರ್ಗಾಟದಲ್ಲಿ ನನಗಿಷ್ಟವಾದ ಚಿತ್ರ ಇದು, ಮೀನು ಹಿಡಿಯೋ ಬೆಸ್ತಂದು. ಇನ್ನಷ್ಟು ಫೋಟೋ ಇಲ್ಲಿದೆ (ನನ್ ಫ್ಲಿಕರ್ ಪ್ರೋ ಅಕೌಂಟ್ ಎಕ್ಸ್ಪೈರ್ ಆದ್ರಿಂದ ಎಲ್ಲಾ ಫೋಟೋ ಹಾಕೋಕೆ ಆಗ್ಲಿಲ್ಲ ).

ತುಂಬ ಚೆನ್ನಾಗಿ ಮೂಡಿ ಬಂದಿದೆ... ನಾವು ಕೂಡ ನಿಮ್ಮ ಹಾಗೆ,,, sudden ಆಗಿ,, ಹೋಗಬೇಕು ಅಂತ ಅನ್ಕೊಂಡ್ ಹೋಗ್ಬಿಡೋದು,,,, ಮಜಾ ಇರುತ್ತೆ,,,,, ಎಸ್ಟೋ ಸರ್ತಿ,, ಎಸ್ಟೆ ಪ್ಲಾನ್ ಮಾಡಿದ್ರು,,,, ಸರಿಹೊಗಿರೋಲ್ಲ , fliker ನಲ್ಲಿ ಇರುವ ಫೋಟೋಗಳು ಚೆನ್ನಾಗಿ ಇದೆ .
ReplyDeleteGuru
ಆಯಿಕೆ ಮತ್ತು ಆಸೆ :-)
ReplyDeleteಮೀನು ಹಿಡಿಯುವ ಬೆಸ್ತನ ಛಾಯಾಚಿತ್ರ, ಹಾಗೆಯೇ 'ಫ್ಲಿಕರ್'ನಲ್ಲಿ ಇರುವ ಎಲ್ಲ ಚಿತ್ರಗಳೂ ಒಂದಕ್ಕಿಂತ ಒಂದು ಚೆನ್ನಾಗಿ ಬಂದಿವೆ...ಒಂದು ರೋಮಾಂಚಕ ಅನುಭವ.. ನನಗೂಕೂಡ.
ReplyDeleteಛಾಯಚಿತ್ರ ತುಂಬಾ ಸುಂದರವಾಗಿದೆ ...
ReplyDeleteSudden Programme Fix ಮಾಡಿದ್ರೆ ಮಜವಾಗಿರುತ್ತೆ
ReplyDeleteಮೊದಲೇ ಎಲ್ಲಾನು ಮಾಡಿಕೊಂಡರೆ ಆಮೇಲೆ ಅದು ನಡೆಯೋದು ಕಷ್ಟ
ಸೊಗಸಾಗಿದೆ ನಿಮ್ಮ ತಿರುಗಾಟ
ಪಾಲ...
ReplyDeleteನಿಮ್ಮನ್ನು ನೋಡಿ ಹೊಟ್ಟೆಕಿಚ್ಚಾಗುತ್ತಿದೆ..
ನಾನು ಬ್ರಹ್ಮಚಾರಿಯಾಗಿದ್ದಾಗ ನಿಮ್ಮ ಹಾಗೆ ಅಲೆದಿದ್ದೆ..
ಇನ್ನು ನಿಮ್ಮ ಫೋಟೊಗ್ರಫಿಯ ಬಗ್ಗೆ ಎರಡು ಮಾತಿಲ್ಲ...
ತುಂಬಾ.. ತುಂಬಾ ಸೊಗಸಾಗಿದೆ...
ಜೈ ಹೋ....!
ಚೆಂದದ ಫೋಟೋ ಮತ್ತು ವಿವರಣೆ..
ReplyDeleteಅಂತ ತಿರ್ಗಾಟಗಳೇ ತುಂಬಾ ಖುಷಿ ಕೊಡ್ತದೆ ಅಲ್ವ..
ಈಗೇನೋ ಚೆನ್ನಾಗಿದೆ,ಗುರಿಯಿಲ್ಲದ ಪಯಣ ಕೆಲವೊಮ್ಮೆ ಅಸ್ತವ್ಯಸ್ತಕ್ಕೆ ಕಾರಣ !
ReplyDeleteಚಿತ್ರಗಳು ಚೆನ್ನಾಗಿವೆ ಪಾಲ ಅವರೆ.........
ReplyDeleteಶ್ಯಾಮಲ
Nice picture..
ReplyDeletenice photo :)
ReplyDeletePaLa nice story ree...chennaagide...nimma cameraa pareekshege melukotege hoda kathe...
ReplyDeletence one palanna :)
ReplyDeleteI dont know about photography much. This picture makes me watch again and again.
ReplyDelete