Thursday, June 25, 2009

ನನ್ನಬ್ಬಿ

"ತಾರೇ ಜಮೀನ್ ಪರ್" ನ "ಮೇರಿ ಮಾ" ಹಾಡಿನ ಕೋಟ(ಕುಂದ)ಗನ್ನಡಾನುವಾದ

ಅಬ್ಬೇ,
ನಾ ಏಗ್ಳಿಗೂ ಬಾಯ್ಬಿಟ್ ಹೇಳುದಿಲ್ಲೆ
ಆದ್ರೆ ಬೈಗಾರ್ಕೂಳೆ ನಂಗೆ ಹೆದ್ರಿಕೆಯಾತ್ತಬ್ಬಿ
ನಾ ತೋರ್ಸ್ಕಂತಿಲ್ದಿರೂ
ನಿನ್ ಮೇಲ್ ನಿಗಾ ಇತ್ತಬ್ಬಿ
ನಿಂಗೆಲ್ಲಾ ಗೊತಿತಲ್ದಾ
ನಿಂಗೆಲ್ಲಾ ಗೊತಿತ್.. ನನ್ನಬ್ಬಿ..
ನನ್ನಬ್ಬಿ

ಈ ನಮ್ನಿ ಗಲಾಟೀಲಿ ನನ್ ಕೈ ಬಿಡ್ಬೇಡ
ನಂಗೆ ಮತ್ತೆ ಮನೀಗ್ ಬಪ್ಪುಕಾತ್ತಿಲ್ಲ
ಕಂಡಾಪಟಿ ದೂರ ಕಳ್ಸ್ಬೇಡ
ನಾ ಹಮ್ಲಲ್ಲಿರ್ತ್ನಲ್ದ
ನಾನೇನ್ ಅಷ್ಟಪ ಕೆಟ್ಟವ್ನ
ನಾನೇನ್ ಅಷ್ಟಪ ಕೆಟ್ಟವ್ನ.. ನನ್ನಬ್ಬಿ
ನನ್ನಬ್ಬಿ

ಅಪ್ಪಯ್ಯ ಏಗ್ಳಿಗಾದ್ರೂ ಒಂದೊಂದ್ ಸಲ
ಜೋರ್ ಮಾಡಿ ಹೊಡಿತ್ರಬ್ಬಿ
ನನ್ ಕಣ್ ಆಗ ನಿನ್ನನ್ನೆ ಹುಡ್ಕತ್
ನೀ ಬಂದ್ಕಂಡ್ ನನ್ ತಬ್ಕಂತೆ ಅಂದ್ಕಂಡ್
ಆ ಗಳ್ಗಿಲಿ ನಂಗೆ ಹೇಳುಕಾತ್ತಿಲ್ಲ
ನಂಗೊಳ್ಗೊಳ್ಗೆ ಪುಕು ಪುಕು ಆತ್
ನಿಂಗೆಲ್ಲಾ ಗೊತಿತಲ್ದಾ
ನಿಂಗೆಲ್ಲಾ ಗೊತಿತ್.. ನನ್ನಬ್ಬಿ..

17 comments:

  1. ಮಾಣಿಯಾ...ಒ0ದ್ ನಮೂನಿ ಲಾಯ್ಕಾಯ್ತ್ ಕಾಣು...ಎಶ್ಟಾರು ನಮ್ ಕು0ದಾಪ್ರ್ ಭಾಶಿಯಲ್ದಾ..ಬಿಡುಕಾತ್ತಾ ಹೇಳ್.. ನ0ಗೂ ಇಲ್ ಆಯ್ಕ0ಡ್ ಅಬ್ಬಿ ನೆನಪ್ ಬಟ್ಟ..ಎ0ತ ಮಾಡುದ್ ಗಡಾ..

    Really good effort man...nice one..
    ಫುಲ್ ಹಾರ್ಟ್ ಟಚಿ0ಗ್ ಗುರು

    ReplyDelete
  2. ಭಾವಾನುವಾದ ಚೆನ್ನಾಗಿದೆ

    ReplyDelete
  3. ಪಾಲ,
    ತುಂಬಾ ಲಾಯ್ಕಿತ್.

    -ಅನಿಲ್

    ReplyDelete
  4. ಪಾಲಚಂದ್ರ...

    ಚಂದ .. ಲಾಯಕ್.. ಬರ್ದೀರಿ...
    ಎಂತಾ ಹೇಳೂಕು ಇಲ್ಯೆ...

    ಎಲ್ ಹೋದ್ರೂ ನಮ್ ಭಾಷಿ ಬಿಡೂಕಾಗಾ...
    ಅದ್ರ್ ಮಜ ಬೇರೇನೇ ಇತ್ತೆ...ಅಲ್ದಾ...?

    ಅಭಿನ್ಂದನೆಗಳು...

    ReplyDelete
  5. ಪಾಲಚಂದ್ರ,,

    ನನಗೇನು ಅರ್ಥವಾಗಲಿಲ್ಲ...ಎಲ್ಲರೂ ಚೆನ್ನಾಗಿ ಬರೆದಿದ್ದೀರಿ ಅಂತ ಹೇಳುತ್ತಿದ್ದಾರೆ..ಆದ್ರೆ ನನಗೆ ನಿಮ್ಮ ಹವ್ಯಕ ಬಾಷೆ ಬರೋಲ್ಲವಾದ್ದರಿಂದ ಏನು ತಿಳಿಯುತ್ತಿಲ್ಲ...

    ReplyDelete
  6. ಕುಂದ ಕನ್ನಡ ನಂಗೆ ಬರೋಲ್ಲ..ಆದ್ರೆ ಅರ್ಥವಾಗುತ್ತೆ. ತುಂಬಾ ಚೆನ್ನಾಗ್ ಬರೆದಿದಿರೀ..ಮತ್ತೇಕೆ ತಡ? ಸ್ವಲ್ಪ ಸ್ವಲ್ಪ ಕವನಗಳನ್ನೂ ಬರೆಯಿರಿ..ಸಕತ್ತು ಬರೆದಿದ್ದೀರಿ.
    -ಧರಿತ್ರಿ

    ReplyDelete
  7. Palachandra avare,

    Benki thara bardiri..Good one!!!

    ReplyDelete
  8. ಪಾಲ ,
    ಕನ್ನಂತರು ಬರೆದಿದ್ದರಲ್ಲ ಮಾರಾಯ ಅದಕ್ಕೆ ಇಲ್ ಬಂದೆ ಕಾಣು..
    ಲಾಯ್ಕ್ ಬರ್ದಿದ್ದೆ ಮಾರಾಯಾ ...
    ನಾನ್ ಕೆಲವೊಮ್ಮೆ ಅಮ್ಮನನ್ನು ಅಬ್ಬಿಯಾ ಅಂತಾನೆ ಕರಿತೆ ಮಾರಾಯ .ನಿನ್ ಪದ್ಯ ಓದಿರ್ ಮೇಲೆ ನಂಗೆ ನಾನ್ ಅಮ್ಮನ ಕರಿಯಿತ್ ನೆನಪಾಯ್ತ್ ಕಾಣು..

    ReplyDelete
  9. ಶಿವೂ ಅವರೆ ಇದು ಹವ್ಯಕ ಭಾಷೆ ಅಲ್ಲ, ಕೋಟ ಭಾಷೆಯ ಕನ್ನಡ ರೀ.

    ReplyDelete
  10. ಹ್ವಾಯ್.. ಲಾಯಕ್ ಇತ್ತ್ ಮರ್ರೆ

    ReplyDelete
  11. ಹ್ವಾಯ್ ಒಳ್ಳೆ ಲಾಯ್ಕ್ ಇತ್ತೇ..
    ಆ ಹಾಡು ನಾನು ಕೇಳಿರಲಿಲ್ಲ.. ಮೊದಲು ಓದಿದ್ದೇ ನಿಮ್ಮ ಸಾಲು.. ಒಂತರಾ ಖುಷಿ ಆಯಿತ್..

    High time, Kannada film industry lifts the ban on dubbing.

    ನಮ್ಮ ನೇಟಿವಿಟಿಗೆ ಹೊಂದೊ ಹಾಗೆ ಡಬ್ಬಿಂಗ್ ಮಾಡಬಲ್ಲ ಎಷ್ಟೋ ಜನಕ್ಕೆ ಕೆಲಸ ಸಿಕ್ಕತ್..

    ಹೀಗೆ ಮುಂದುವರ್ಸಿ ಮರೆರೆ.. :)

    ReplyDelete
  12. ತುಂಬಾ ಚೆನ್ನಾಗಿ ಬಂದಿತ್. ಓದಿ ಖುಷಿ ಆಯಿತ್.. ಕುಂದಾಪುರ ಸಂತೆ ಫೋಟೋಸ್ ಕಂಡೆ ... ಲಾಯಿಕ್ ಮಾಡಿ ಬರ್ದಿರಿ..

    ReplyDelete
  13. hoi esht laik bardiri marre..nim thalig entha kotru sakathilla kaani..
    Mahesh Poojary Hemmady

    ReplyDelete
  14. Pala ivattige nin nanna ex-room mate ambuke kushi att. en ayli maraya namma bashi namge, nave uddara madku. Ninu ei padya baruke estu kasta pattidyo eno. ayli maraya bala kushi aytu

    ReplyDelete
  15. like itte.. :-) iNnu barini... Hange nimm melina (thale baraha) mattu lik itt.. Matt sikva..:-)Xlike itte.. :-) iNnu barini... Hange nimm melina (thale baraha) mattu lik itt.. Matt sikva..:-)X

    ReplyDelete
  16. ಪಾಲಚಂದ್ರರೆ,

    ಲಾಯ್ಕಿತ್ ಮಾರ್ರೆ, ಮಕ್ಳು ಪ್ರಾಯಕ್ ಬಂದ್ ಅವ್ರ್ ಮಕ್ಳ್ ಪ್ರಾಯಕ್ ಬಂದ್ರೂ ಅಬ್ಬಿ ಮರೀತ್ತಾ ಮಾರ್ರೆ

    ನಿಮ್ ಅಂವ

    ಅರವಿಂದ

    ReplyDelete

ವರ್ಗ

Amomum (1) ficus krishnae (1) Gangtok (1) Nikon 40mm f/2.8 Micro (10) paris (1) Sikkim (8) snow (1) Yuksom (5) ಅನಿಮೇಟೆಡ್ (1) ಅನುಭವ ಕಥನ (7) ಅಮೂರ್ತ (1) ಆಟೋಟ (2) ಆಫಿಡ್ (1) ಇರುವೆ (6) ಉಡುಪಿ (4) ಉಯ್ಯಾಲೆ (1) ಉರಗ (3) ಏರಿ (1) ಒಂಟಿ ಚಕ್ರದ ಸೈಕಲ್ (1) ಒಯ್ಯುಗೆ (6) ಕದ (1) ಕಂದು ಏಲಕ್ಕಿ (1) ಕನ್ನಡ (2) ಕಪ್ಪು ಏಲಕ್ಕಿ (1) ಕಪ್ಪು-ಬಿಳುಪು (5) ಕಂಬಳ (1) ಕಂಬಳಿಹುಳು (2) ಕವನ (15) ಕವಿ ಶೈಲ (1) ಕಸರತ್ತು (1) ಕಳಸ (1) ಕಳ್ಳತನ (1) ಕಾವೇರಿ (1) ಕಾಳಾವಾರ ಬೆಟ್ಟ (1) ಕಾಳಿಂಗ ಸರ್ಪ (1) ಕಿಸ್ಕಾರ (1) ಕೀಟ ಪ್ರಪಂಚ (35) ಕುಂದಾಪುರ (1) ಕುವೆಂಪು (1) ಕೃಷಿ (9) ಕೃಷಿ ಮೇಳ (4) ಕೆರೆ (2) ಕೆಲಸ (2) ಕೆಸು (2) ಕೆಳದಿ (1) ಕೊಕ್ಕರೆ ಬೆಳ್ಳೂರು (1) ಕೋಟ (8) ಖಗೋಳ ಗಡಿಯಾರ (1) ಗವಿ (1) ಗುಡಿ ಕೈಗಾರಿಕೆ (1) ಗುಡ್ಡ (2) ಗುಹೆ (1) ಚಾರಣ (3) ಚಿಕ್ಕಮಗಳೂರು (1) ಚಿಟ್ಟಾಣಿ (1) ಚಿಟ್ಟೆಗಳು (3) ಚಿತ್ರ ಪುಟ (102) ಚಿತ್ರದುರ್ಗ (1) ಚಿತ್ರಪುಟ (1) ಚೌಕಾಶಿ (1) ಛಾಯಾಗ್ರಹಣ (24) ಜನ ಜೀವನ (52) ಜನಪದ (2) ಜರ್ಮನಿ (1) ಜಲಪಾತ (1) ಜೆಕ್ ಗಣರಾಜ್ಯ (4) ಜೇಡ (3) ಜೇನು ಸಾಕಣೆ (1) ಜೋಡಿ (1) ತರಕಾರಿ (2) ತುಮಕೂರು (2) ತೆಂಗಿನ ಕಾಯಿ (1) ತೆಂಗಿನ ತೋಟ (1) ದಸರ (4) ದೇವವೃಂದ (1) ದೇವಸ್ಠಾನ (1) ದೇವಸ್ಥಾನ (1) ದೊಡ್ಡ ಏಲಕ್ಕಿ (1) ಧಾರವಾಡ (1) ನಗರ (1) ನಂಬಿಕೆ (1) ನಾಟಕ (1) ನೀರ್ಹಕ್ಕಿ (6) ಪತಂಗ (1) ಪತ್ರಿಕೋದ್ಯಮ (1) ಪಶ್ಚಿಮ ಘಟ್ಟ (2) ಪಾರ್ಕ್ (1) ಪಾಳು (1) ಪುಸ್ತಕ ಬಿಡುಗಡೆ (1) ಪೋರ್ಟ್ರೈಟ್ (8) ಪ್ಯಾನಿಂಗ್ (1) ಪ್ರಬಂಧ (2) ಪ್ರವಾಸ ಕಥನ (3) ಪ್ರಾಹ (1) ಪ್ಲಾಸ್ಟಿಕ್ (1) ಬಕೇಟ್ (1) ಬಂಡಿ (1) ಬಣ್ಣ (1) ಬನವಾಸಿ (1) ಬಳ್ಳಿ (1) ಬಾಗಿಲು (1) ಬಾರ್ಕೂರು (1) ಬೀಗ (1) ಬೆಂಕಿ (1) ಬೆಂಗಳೂರಿನ ಚಿತ್ರಗಳು (5) ಬೆಂಗಳೂರು (27) ಬೆಳಕು (1) ಬೇಸಾಯ (1) ಬ್ರಹ್ಮಾವರ (1) ಭಾರತ ಬಂದ್ (1) ಭಿಕ್ಷುಕರು (1) ಮಕ್ಕಳು (10) ಮಗು (1) ಮಂಜು (2) ಮಮ್ಮಮ್ (3) ಮಲೆನಾಡು (1) ಮಳೆ (1) ಮಳೆಗಾಲ (2) ಮಾರಿಕಣಿವೆ (1) ಮುಸ್ಸಂಜೆ (1) ಮೇಲುಕೋಟೆ (2) ಮೇವು (1) ಮೈಸೂರು (7) ಮೋಡ (2) ಮ್ಯಾಕ್ರೋ (12) ಯಕ್ಷಗಾನ (2) ರಸ್ತೆ (5) ರಾತ್ರಿ ನೋಟ (3) ರೈಮ್ (1) ರೈಲು (2) ರೈಲುಹಳಿ (1) ಲಲಿತ ಪ್ರಬಂಧ (6) ಲೇಪಾಕ್ಷಿ (1) ವಂಡಾರ್ (1) ವಾಸ್ತು ಶಿಲ್ಪ (1) ವಾಹನ (2) ವಿವೇಕ (1) ವಿಸ್ತರಣೆ (1) ವ್ಯಕ್ತಿ ವಿಷಯ (3) ವ್ಯಾಪಾರ (1) ಶಾಲೆ (1) ಶಿರಸಿ (1) ಶಿರಸಿ. ಸೈಕಲ್ (1) ಶಿಲ್ಪ (1) ಶಿವನಸಮುದ್ರ (1) ಶುಭಾಶಯ (2) ಸಣ್ಣ ಕಥೆ (4) ಸಂತೆ (2) ಸಮುದ್ರ (2) ಸಮುದ್ರ ಜೀವಿ (2) ಸಸ್ಯ ಪ್ರಪಂಚ (12) ಸಾಕು ಪ್ರಾಣಿ (4) ಸಾಗಾಟ (1) ಸಾಸ್ತಾನ (1) ಸಿಕ್ಕಿಂ (3) ಸೈಕಲ್ (5) ಸೈಕಲ್ ಯಾತ್ರೆ (1) ಸ್ಕಂದಗಿರಿ (1) ಸ್ತೂಪ (1) ಸ್ಪರ್ಧೆ (1) ಹಕ್ಕಿಗಳು (21) ಹರಿಹರ (1) ಹಳ್ಳಿ (3) ಹಿಮ (1) ಹೂಗಳು (5) ಹೂವು (1) ಹೊಸ ವರ್ಷ (1) ಹೋಂ ಸ್ಟೇ (1) ಹೌರಾ (1)