Sunday, June 07, 2009

ಗಾಂಧಿ ಬಜಾರ್

೨೦೦೩, ಇಂಜಿನಿಯರಿಂಗಿನ ಕೊನೇಯ ವರ್ಷ ಪ್ರಾಜೆಕ್ಟಿಗಾಗಿ ಬೆಂಗಳೂರಿಗೆ ಬಂದಾಗ ಮೊದಲು ಇಳಿದು ಕೊಂಡಿದ್ದು ಆಶ್ರಮದ ಸಮೀಪದ ಒಂದು ಮನೆಯಲ್ಲಿ. ೨ ಬೆಡ್ ರೂಂ ಮನೆ ೩೫೦೦ ರೂ ಬಾಡಿಗೆ, ೬ ಜನ ಮನೆಯ ಪಾಲುದಾರರು. ಅಂದಿನಿಂದ ನಾ ಮೆಚ್ಚಿದ ನನ್ನ ನೆಚ್ಚಿನ ತಿರುಗಾಟದ ತಾಣ ಗಾಂಧಿ ಬಜಾರ್.

ಛಾಯಾಗ್ರಹಣದಲ್ಲಿ ನನ್ನನ್ನು ತೊಡಗಿಸಿಕೊಳ್ಳುತ್ತೇನೆಂದು ಎಂದೂ ಕನಸು ಕಂಡಿರಲಿಲ್ಲ. ಇಂಜಿನಿಯರಿಂಗ್ ಮುಗಿಸಿ ಕೆಲಸದ ನಿಮಿತ್ತ ಮೈಸೂರಿಗೆ ಹೋದಾಗ, ನಮ್ಮ ಕಂಪೆನಿಯ ಪ್ರಾಜೆಕ್ಟಿನ ಕೆಲವು ಚಿತ್ರಗಳಿಗೆ ಸಹೋದ್ಯೋಗಿಯ ಜೊತೆ ಹೋದದ್ದಲ್ಲದೇ ಬೇರಾವ ಅನುಭವವೂ ಇರಲಿಲ್ಲ. ನಂತರ ಬೆಂಗಳೂರಿಗೆ ಬಂದು ಕೆಲಸ ಬದಲಾಯಿಸಿ, ಕೈಯಲ್ಲಿ ಸ್ವಲ್ಪ ಕಾಸು ಬಂದ ಮೇಲೆ ಮೊದಲು ಕೊಂಡು ಕೊಂಡಿದ್ದೇ ನನ್ನ ಸೋನಿ ಡಿ.ಎಸ್.ಸಿ ಎಚ್೨ ಕ್ಯಾಮರಾ. ನನ್ನ ಅದರ ಸಂಬಂಧ ಸುಮಾರು ೩.೫ ವರ್ಷಗಳಷ್ಟು.

೨೦೦೬ರ ಪ್ರವಾಸದಲ್ಲಿ ಗೆಳೆಯನಾದ ಪವನ್ ಜೊತೆಗೂಡಿ ಮಾಡಿದ ಕೇರಳದ ಪ್ರವಾಸದಲ್ಲಿ, ಆತನ ಚಿತ್ರ ನೋಡಿ ತುಂಬಾ ಮೆಚ್ಚುಗೆ ವ್ಯಕ್ತ ಪಡಿಸಿದ್ದೆ. ಪ್ರತ್ಯಕ್ಷವಾಗಿ ಛಾಯಾಗ್ರಹಣದ ಬಗ್ಗೆ ಯಾವ ಸಲಹೆ ಕೊಟ್ಟಿಲ್ಲವಾದರೂ ನನ್ನ ಅಭಿರುಚಿ ಕೆರಳಿಸುವಲ್ಲಿ ಆತನ ಚಿತ್ರಗಳು ತುಂಬಾ ಸಹಾಯಕವಾದವು. ಮುಂದೆ ಹನಿವೆಲ್ಲಿನಲ್ಲಿ ನನ್ನ ಸಹೋದ್ಯೋಗಿಯಾಗಿದ್ದ "ಅರವಿಂದ್" ತಮ್ಮ ಅನುಭವ, ಪುಸ್ತಕಗಳನ್ನು ಹಂಚಿಕೊಂಡು ಇನ್ನಷ್ಟು ನೆರವಾದರು. ಹೀಗೆ ಒಂದು ದಿನ ನನಗೆ ಬೇಕಾದ ಯಾವುದೋ ಛಾಯಾಗ್ರಹಣದ ವಿಷಯದ ಬಗ್ಗೆ ಹುಡುಕಾಡುತ್ತಿತ್ತಾಗ ಕಣ್ಣಿಗೆ ಬಿದ್ದಿದ್ದು "ಡಿಜಟಲ್ ಫೋಟೋಗ್ರಫಿ ಸ್ಕೂಲ್" ಎಂಬ ತಾಣ. ಇಲ್ಲಿ ಬರೀ ಪಾಟಗಳಷ್ಟೇ ಅಲ್ಲದೇ ನೀವು ತೆಗೆದ ಚಿತ್ರವನ್ನು ಹಾಕಿದರೆ, ಆ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯ ಪ್ರಪಂಚದ ನಾನಾ ಭಾಗದ ವೃತ್ತಿನಿರತ/ಹವ್ಯಾಸೀ ಛಾಯಾಚಿತ್ರಕಾರರಿಂದ ಬರುತ್ತದೆ. ಇಲ್ಲಿಯೇ ಭೇಟಿಯಾದ ವೃತ್ತಿಯಿಂದ ಚಿತ್ರಕಾರರಾಗಿರುವ "ಜಿಮ್" ಆರಂಭದಿಂದ ನನಗೆ ಸಲಹೆ ಸೂಚನೆ ನೀಡುತ್ತಾ ಇಲ್ಲಿಯವರೆಗೆ ತಂದು ಬಿಟ್ಟಿದ್ದಾರೆ. ಅದೂ ಅಲ್ಲದೇ ಯಾಹೂವಿನ ಫ್ಲಿಕರ್ ಕೂಡ ನನ್ನ ಅಭಿರುಚಿಯನ್ನು ಬೆಳೆಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಇದೆಲ್ಲದರ ಪ್ರಭಾವದಿಂದ ಎಸ್.ಎಲ್.ಎರ್ ಕ್ಯಾಮರಾ ಕೊಳ್ಳಬೇಕೆಂಬ ನನ್ನ ೨ ವರ್ಷದ ಬಯಕೆ ಈ ವಾರ ಕೊನೆಗೊಂಡಿದೆ. ಕಳೆದ ವರ್ಷ ಮಾರುಕಟ್ಟೆ ಪ್ರವೇಶಿಸಿದ ನಿಕಾನ್ ಕಂಪೆನಿಯ ಡಿ೯೦, ನನ್ನ ವಶವಾಗಿದೆ. ಕಳೆದು ೧ ವರ್ಷದಿಂದ ಕೂಡಿಟ್ಟ ಹಣ ಮುಂದಿನ ನನ್ನ ಸ್ವಸಂತೋಷಕ್ಕಾಗಿ.

ಹೊಸ ಕ್ಯಾಮರಾದೊಂದಿಗೆ ನಿನ್ನೆ ಗಾಂಧಿ ಬಜಾರ್ ಸುತ್ತಲು ಹೊರಟಾಗ ಕಣ್ಣಿಗೆ ಬಿದ್ದ ಚಿತ್ರಗಳೇ ಇವು. ಹೊಸ ಕ್ಯಾಮರಾದ ಬಗ್ಗೆ ತಿಳಿದದ್ದು ಇನ್ನೂ ಅಲ್ಪ, ಆದರೂ ಮೊದಲ ಚಿತ್ರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವಾಸೆ.

ಹೂವು ಎಷ್ಟು ಮೊಳ ಕೊಡಲಮ್ಮ?
DSC_0014

ಹೇಗಿದೆ ನನ್ನ ಪೋಸು?
DSC_0021

ದ್ರಾಕ್ಷಿಗೊಂಚಲಿನೊಂದಿಗೆ
DSC_0031

ಹಣ್ಣಿನ ರಾಶಿಯ ನಡುವೆ
DSC_0038

ನಾನಾ ಬಗೆಯ ಹೂಗೊಂಚಲೊಂದಿಗೆ
DSC_0054

ಹೂಮಾಲೆಗೆ ಜರಿ ಸಿಂಗರಿತ್ತಾ
DSC_0046

ತರ ತರ ತರಕಾರಿಯ ನಡುವೆ
DSC_0056

ಇಳಿವಯಸಿನಲ್ಲಿ
DSC_0068

ನನ್ನ ಚಿತ್ರ ನಿಮಗೇತಕೋ
DSC_0069

ತೆಂಗಿನ ಕಾಯಿ ಕೊಳ್ಳುವವರಾರು
DSC_0071

ಕತ್ತಲಾದರೂ ನಿಂತಿಲ್ಲ ಭರಾಟೆ
DSC_0073

14 comments:

  1. Thumba chennagide!

    It's really nice to see the market at night. And crisp images. Good work with the available light. Not an easy task at all to pull it off. Especially since you have these wonderful portraits.

    ReplyDelete
  2. ಪಾಲಚಂದ್ರ,
    ಹೊಸ ಕ್ಯಾಮೆರಾದಲ್ಲಿ 20-20 ಮ್ಯಾಚ್ ಆಡಿ ಗೆದ್ದಿದ್ದೀರಿ. ನಮಗೆ treat ಯಾವಾಗ? ನಾನು ಪಿಯುಸಿ ಓದಿದ್ದು ನ್ಯಾಷನಲ್ ಕಾಲೇಜಿನಲ್ಲಿ. ಅಲ್ಲಿ ಎರಡು ವರ್ಷ ಅಲ್ಲಿನ ಹಾಸ್ಟೆಲಿನಲ್ಲಿದ್ದೆ. ಹಾಗಾಗಿ ಗಾಂಧಿ ಬಜಾರೆಂದರೆ ಹಳೆಯದಿನಗಳು ನೆನಪಾಗುತ್ತವೆ. ಆಗ ಈಗಿನಷ್ಟು ಜನಜಂಗುಳಿ ಇರಲಿಲ್ಲ. ಇನ್ನಷ್ಟು ಮತ್ತಷ್ಟು ಚಿತ್ರಜಗತ್ತು ನಿಮ್ಮಿಂದಾಗಿ ನಾವೆಲ್ಲ ನೋಡುವಂತಾಗಲಿ.All the Best.

    ReplyDelete
  3. ಪಾಲಚಂದ್ರ ..

    ಗಾಂಧಿ ಬಜಾರ್ ಫೋಟೊಗಳು ತುಂಬಾ ಚೆನ್ನಾಗಿವೆ...
    ಅವರ ಭಾವನೆಗಳೂ ಚೆನ್ನಾಗಿವೆ..

    ಗಾಂಧಿ ಬಜಾರ್ ಹೆ ಹೋಗದೆ ತುಂಬಾ ದಿನಗಳಾಗಿ ಬಿಟ್ಟಿದ್ದವು...

    ಒಮ್ಮೆ ಹೋಗಿ ಬಂದಹಾಗೆ ಆಯ್ತು...

    ReplyDelete
  4. Offtopic: I use a Canon A530. It has good manual settings. The only problem is that I can't have large prints. It's OK for a blog.

    In fact all point and shoots are good. It's how u use them.

    ReplyDelete
  5. ಪಾಲಚಂದ್ರ,

    SLR D 90 ನಿಕೋನ್ ಕ್ಯಾಮೆರಾ ನಿಮ್ಮ ಗೆಳೆಯನಾಗಿದ್ದಕ್ಕೆ ಅಭಿನಂದನೆಗಳು. ಮೊದಲ ಪ್ರಯತ್ನದಲ್ಲಿ ಫೋಟೋಗಳು ಚೆನ್ನಾಗಿವೆ....ಇನ್ನೂ ನಿಮ್ಮ ಗೆಳಯನನ್ನು ಚೆನ್ನಾಗಿ ಅರಿತುಕೊಂಡು ಇನ್ನಷ್ಟು ಉತ್ತಮ ಚಿತ್ರಗಳನ್ನು ಕ್ಲಿಕ್ಕಿಸಿರಿ....

    all the best.

    ReplyDelete
  6. ಪಾಲಚಂದ್ರ

    ನಿಮ್ಮ ಬರಹ ಹಾಗೂ ಗಾಂಧಿಬಜಾರಿನ ಚಿತ್ರಗಳು ಸೊಗಸಾಗಿವೆ.ನನಗೆ ಫೋಟೋಗ್ರಫಿ ಬಗ್ಗೆ ಏನೂ ಗೊತ್ತಿಲ್ಲ.ಆದರೂ ಬ್ಲಾಗಿಗಳಾದ ಮೇಲೆ ನಿಮ್ಮ. ಮಲ್ಲಿಕಾರ್ಜುನ್ ಅವರ ಶಿವು ಮತ್ತು ಪ್ರಕಾಶ್ ಅವರ ಚಿತ್ರಗಳನ್ನು ನೋಡುತ್ತಾ ಸಂತಸ ಪಟ್ಟಿದ್ದೇನೆ. ತರಕಾರಿಗಳ ಮಧ್ಯದ ಹೆಣ್ಣು , ನನ್ನ ಚಿತ್ರ ನಿನಗ್ಯಾಕೆ ತಲೆಬರಹದ ಚಿತ್ರ ,ಇಳಿವಯಸ್ಸಿನ ತಾಯಿ ಇವರನ್ನು ಬಹುಶಃ ನಾನೂ ನೋಡಿರುತ್ತೇನೆ. ಏಕೆಂದರೆ ಗಾಂಧಿಬಜಾರ್ ನನ್ನ ದಿನನಿತ್ಯದ ಓಡಾಟದ ಭಾಗ. ಆದರೆ ಒಂದು ದಿನವೂ ರಾತ್ರ್ಯಲ್ಲಿ ಆ ಮಾರುಕಟ್ಟೆಯನ್ನು ನೋಡಿಲ್ಲ. ಹೀಗಾಗಿ ಒಂದು ವಿಶೇಷ ತಾಣವನ್ನು ನೋಡಿದಂತೆ ಕಾಣುತ್ತದೆ. ಹೊಸ ಕ್ಯಾಮೆರಾ ನಿಮ್ಮ ಹತ್ತಿರದ ಗೆಳೆಯನಾಗಿದ್ದಕ್ಕೆ ಶುಭಹಾರೈಕೆಗಳು. ಮತ್ತಷ್ಟು ಚಿತ್ರಗಳು ಸುಂದರವಾಗಿ ಮೂಡಿಬರಲಿ

    ReplyDelete
  7. ನಿಮ್ಮ SLRನಿಂದ ಇನ್ನೂ ಹೀಗೇ ಬರುತ್ತಿರಲಿ

    ReplyDelete
  8. ಪಾಲಚಂದ್ರರೆ
    ನಿಮ್ಮ ಕ್ಯಾಮರಾ ಕಣ್ಣಿನಲ್ಲಿ ಗಾ೦ಧಿಬಜಾರಿನ ತುಣುಕುಗಳು ಸಚಿತ್ರವಾಗಿ ಚುಟುಕುಬರಹದೊ೦ದಿಗೆ ಚೆನ್ನಾಗಿ ಮೂಡಿ ಬ೦ದಿದೆ. ನಾನು ಆಗಾಗ ಆ ಕಡೆ ಹೋಗುತ್ತಿರುತ್ತೇನೆ, ಆದರೆ ರಾತ್ರೆವೇಳೆ ಹೋಗಿರಲಿಲ್ಲ, ಈಗ ಹೋಗಿ ಬ೦ದ ಅನುಭವ ವಾಯ್ತು.

    ReplyDelete
  9. Paravagilla. Copy maadi.

    We all have our own way of seeing things. So I do not think that it will look the same.

    Come, let's show off Bangalore and Karnataka's beauty.

    ReplyDelete
  10. ಪಾಲಚಂದ್ರ ಅವರೆ, ಹೇಗಿದ್ದೀರಿ?

    `ಗಾಂಧಿಬಜಾರು' - ಇಲ್ಲಿ ಮಾರುಕಟ್ಟೆ ಪ್ರದೇಶದ ಚಿತ್ರಗಳು ನಿಮ್ಮ ಹೊಸ ಎಸ್.ಎಲ್.ಆರ್‍. ನಿಂದ ಮೂಡಿಬಂದಿರುವ ಸುಂದರವಾಗಿವೆ. ಅದರಲ್ಲಿಯೂ ಅವರೆಲ್ಲರನ್ನೂ ಮಾತಾಡಿಸಿ ಫೋಟೋ ಕ್ಲಿಕ್ಕಿಸಿದ್ದೀರೆಂದರೆ, ಅದು ಅದ್ಭುತ.

    ನಿಮ್ಮನ್ನು ಭೇಟಿ ಮಾಡುವ ಒಂದು ಅವಕಾಶ ಕೈ ತಪ್ಪಿ ಹೋಯಿತು ಅನಿಸುತ್ತಿದೆ, ನನಗೆ. ಏಕೆಂದರೆ, ಸಾಮಾನ್ಯವಾಗಿ ನಾನು ಸಂಜೆಯ ವೇಳೆಯಲ್ಲಿ ಗಾಂಧಿ ಬಜಾರಿಗೆ ಭೇಟಿ ಕೊಡುತ್ತಿದ್ದೆ.

    ಏಕೆಂದರೆ, ಪ್ರತಿ ಭಾನುವಾರಗಳಂದು ಗಾಂಧಿ ಬಜಾರಿಗೆ ಒಂದು ಭೇಟಿ ಇರುತ್ತದೆ. ಆದರೆ, ನಿನ್ನೆ ಶ್ರೀ ರಾಮಕೃಷ್ಣ ಮಠಕ್ಕೆ ಹೋಗಿ, ಅಲ್ಲಿಂದ ಗಾಂಧಿ ಬಜಾರಿಗೆ ಹೋಗುವ ಅಂದುಕೊಂಡಿದ್ದೆ. ಅಕಾರಣದಿಂದ ಮನೆ ಕಡೆಗೆ ಹೊರಟೆ. ಅಲ್ಲಿನ ಅಂಕಿತ ಪುಸ್ತಕಕ್ಕೆ ಒಂದು ಭೇಟಿ, ಹಾಗೆಯೇ ಸ್ನೇಹಿತರಿದ್ದರೆ ಮಹಾಲಕ್ಷ್ಮಿ ಟಿಫಿನ್‌ ರೂಂ ಗೆ ಭೇಟಿ ಕೊಟ್ಟು ಖಾಲಿದೋಸೆ, ಕಾಫಿ ಕುಡಿದು ವಿವಿಧ ವಿಷಯಗಳ ಬಗ್ಗೆ, ಭೇಟಿಯಾಗದ ಸ್ನೇಹಿತರ ಬಗ್ಗೆ ಚರ್ಚಿಸಿ ಬರುವ ವಾಡಿಕೆಯಿದೆ. ಜೊತೆಗೆ ಸುಗಂಧ ಸಾಗರದಲ್ಲಿ ಅಗರಬತ್ತಿ ಖರೀದಿಯೂ ಆಗಾಗ ಇರುತ್ತದೆ. ಡಿವಿಜಿ ರಸ್ತೆಯಿಂದ ನೆಟ್ಟಕಲ್ಲಪ್ಪ ವೃತ್ತದವರೆವಿಗೂ ನಡೆಯುವುದಂತೂ ಇದ್ದೇ ಇರುತ್ತದೆ.

    ನಾವುಗಳು ಹತ್ತನೇ ತರಗತಿಯಲ್ಲಿದ್ದಾಗ ಲೆಕ್ಚರ್‌ ಕ್ಲಾಸಿಗೆ (ಶಂಕ್ರಯ್ಯ ಹಾಲ್‌) ಗೆ ಹೋಗಿ ಮತ್ತು ವಾಪಸಾಗುವಾಗ ಉಪಯೋಗಿಸುತ್ತಿದ್ದದ್ದು ಇದೇ ಡಿವಿಜಿ ರಸ್ತೆ, ಟ್ಯಾಗೋರ್‌ ಸರ್ಕಲ್‌ ಹೀಗೆ ಸಾಗುತ್ತದೆ ನೆನಪುಗಳು. ಅಲ್ಲಿ ನನ್ನೊಬ್ಬ ಸಹಪಾಠಿಯ ದೊಡ್ಡ ಹೋಟೆಲ್ ಕೂಡ ಇದೆ. ಅಷ್ಟೇ ಅಲ್ಲ, ಹಲವು ವರ್ಷಗಳಿಂದ `ಸ್ಮೋಕರ್‍ಸ್ ಕಾರ್ನರ್‍'ಎಂಬ ಅಂಗಡಿಯೂ ಬಹಳ ಫೇಮಸ್ಸು.


    ಅದಕ್ಕೇ ಇರಬೇಕು ಪ್ರೊ. ನಿಸಾರ್‌ ಅಹಮದ್ ರವರು `ಮನಸು ಗಾಂಧಿ ಬಜಾರು' ಬರೆದಿದ್ದು.
    ಇವೆಲ್ಲ ನೆನಪಿಸಿದ್ದಕ್ಕಾಗಿ ಧನ್ಯವಾದಗಳು.

    ಸಸ್ನೇಹಗಳೊಂದಿಗೆ,

    ಚಂದ್ರಶೇಖರ ಬಿ.ಎಚ್.

    ReplyDelete
  11. SloganMurugan ,
    very nice pictures of Bangalore in your blog. Am impressed, thanks for comments.

    ಮಲ್ಲಿಕಾರ್ಜುನ್,
    ಧನ್ಯವಾದ, ಪಾರ್ಟಿ ಕೊಡ್ಸೋಣ ಸಾರ್ :)

    ಪ್ರಕಾಶ್,
    ಪ್ರತಿಕ್ರಿಯೆಗೆ ನನ್ನಿ

    ಶಿವು,
    ಹಳೇ ಕ್ಯಾಮರಾ ಮುನಿಸಿಕೊಂಡಿದೆ, ಆವಾಗಾವಗ ನಿನ್ನನ್ನೂ ಮಾತನಾಡಿಸ್ತೀನಿ ಯಾರಿಗೂ ಮಾರೊಲ್ಲ ಅಂದಮೇಲೆ ಸ್ವಲ್ಪ ಸಮಾಧಾನವಾಗಿದೆ

    ಚಂದ್ರಕಾಂತ ಮೇಡಂ,
    ನಿಮ್ಮಂತಹ ಸಹಬ್ಲಾಗಿಗರ ನುಡಿ ಫೋಟೋ ಬ್ಲಾಗಿಗರಿಗೆ ಸ್ಪೂರ್ತಿ, ನಿಮ್ಮ ಸವಿನುಡಿಗೆ ನನ್ನಿ

    ಕೇಶವ್,
    ವಂದನೆಗಳು

    ಪರಂಜಪೆ,
    ಗಂಧಿಬಜಾರು ಅನುಭವಿಸಿದ್ದಕ್ಕೆ ನನ್ನಿ

    ಚಂದ್ರಶೇಖರ,
    ನಿಮ್ಮ ಗಾಂಧಿಬಜಾರಿನ ರೂಟಿನು, ಅನುಭವ ಹಂಚಿಕೊಂಡಿದ್ದು ತುಂಬಾ ಸಂತೋಷ

    ReplyDelete
  12. ಪಾಲಚಂದ್ರ ಸರ್...
    ಗಾಂಧೀಬಜಾರ್..ನಿಜವಾಗಲೂ ನಂಗೂ ನೆನಪಾಗುವುದು ಥಟ್ಟನೆ ಹೂವಿನ ಮಾರುಕಟ್ಟೆ! ಡಿವಿಜಿ ರಸ್ತೆಯಲ್ಲಿ ಒಂದು ರೌಂಡು ಹೊಡೆದು ಸೀದಾ ಹೂವಿನ ಮಾರುಕಟ್ಟೆಗೆ ಬಂದು ಹೂವ ಕೊಂಡರೇನೇ ಸಮಾಧಾನ. ಫೋಟೋಗಳೂ ಚೆನ್ನಾಗಿವೆ...
    -ಧರಿತ್ರಿ

    ReplyDelete
  13. hi pala this is somu ,one of my friend asked me to check out this site and after visiting the site i m really impressed by your talent , so can please spare some of your precious time with me to share my views . sorry i wanted to post the comment in kannada but i don't have the option.. How can i contact you ?

    ReplyDelete
  14. hey sorry, photos are really good,gandhi bazar is our adda,u hav expressed gandhi bazar as we wanted too.....


    thank you soooooooooooooooooo much
    g bazar is great!!!!!

    ReplyDelete

ವರ್ಗ

Amomum (1) ficus krishnae (1) Gangtok (1) Nikon 40mm f/2.8 Micro (10) paris (1) Sikkim (8) snow (1) Yuksom (5) ಅನಿಮೇಟೆಡ್ (1) ಅನುಭವ ಕಥನ (7) ಅಮೂರ್ತ (1) ಆಟೋಟ (2) ಆಫಿಡ್ (1) ಇರುವೆ (6) ಉಡುಪಿ (4) ಉಯ್ಯಾಲೆ (1) ಉರಗ (3) ಏರಿ (1) ಒಂಟಿ ಚಕ್ರದ ಸೈಕಲ್ (1) ಒಯ್ಯುಗೆ (6) ಕದ (1) ಕಂದು ಏಲಕ್ಕಿ (1) ಕನ್ನಡ (2) ಕಪ್ಪು ಏಲಕ್ಕಿ (1) ಕಪ್ಪು-ಬಿಳುಪು (5) ಕಂಬಳ (1) ಕಂಬಳಿಹುಳು (2) ಕವನ (15) ಕವಿ ಶೈಲ (1) ಕಸರತ್ತು (1) ಕಳಸ (1) ಕಳ್ಳತನ (1) ಕಾವೇರಿ (1) ಕಾಳಾವಾರ ಬೆಟ್ಟ (1) ಕಾಳಿಂಗ ಸರ್ಪ (1) ಕಿಸ್ಕಾರ (1) ಕೀಟ ಪ್ರಪಂಚ (35) ಕುಂದಾಪುರ (1) ಕುವೆಂಪು (1) ಕೃಷಿ (9) ಕೃಷಿ ಮೇಳ (4) ಕೆರೆ (2) ಕೆಲಸ (2) ಕೆಸು (2) ಕೆಳದಿ (1) ಕೊಕ್ಕರೆ ಬೆಳ್ಳೂರು (1) ಕೋಟ (8) ಖಗೋಳ ಗಡಿಯಾರ (1) ಗವಿ (1) ಗುಡಿ ಕೈಗಾರಿಕೆ (1) ಗುಡ್ಡ (2) ಗುಹೆ (1) ಚಾರಣ (3) ಚಿಕ್ಕಮಗಳೂರು (1) ಚಿಟ್ಟಾಣಿ (1) ಚಿಟ್ಟೆಗಳು (3) ಚಿತ್ರ ಪುಟ (102) ಚಿತ್ರದುರ್ಗ (1) ಚಿತ್ರಪುಟ (1) ಚೌಕಾಶಿ (1) ಛಾಯಾಗ್ರಹಣ (24) ಜನ ಜೀವನ (52) ಜನಪದ (2) ಜರ್ಮನಿ (1) ಜಲಪಾತ (1) ಜೆಕ್ ಗಣರಾಜ್ಯ (4) ಜೇಡ (3) ಜೇನು ಸಾಕಣೆ (1) ಜೋಡಿ (1) ತರಕಾರಿ (2) ತುಮಕೂರು (2) ತೆಂಗಿನ ಕಾಯಿ (1) ತೆಂಗಿನ ತೋಟ (1) ದಸರ (4) ದೇವವೃಂದ (1) ದೇವಸ್ಠಾನ (1) ದೇವಸ್ಥಾನ (1) ದೊಡ್ಡ ಏಲಕ್ಕಿ (1) ಧಾರವಾಡ (1) ನಗರ (1) ನಂಬಿಕೆ (1) ನಾಟಕ (1) ನೀರ್ಹಕ್ಕಿ (6) ಪತಂಗ (1) ಪತ್ರಿಕೋದ್ಯಮ (1) ಪಶ್ಚಿಮ ಘಟ್ಟ (2) ಪಾರ್ಕ್ (1) ಪಾಳು (1) ಪುಸ್ತಕ ಬಿಡುಗಡೆ (1) ಪೋರ್ಟ್ರೈಟ್ (8) ಪ್ಯಾನಿಂಗ್ (1) ಪ್ರಬಂಧ (2) ಪ್ರವಾಸ ಕಥನ (3) ಪ್ರಾಹ (1) ಪ್ಲಾಸ್ಟಿಕ್ (1) ಬಕೇಟ್ (1) ಬಂಡಿ (1) ಬಣ್ಣ (1) ಬನವಾಸಿ (1) ಬಳ್ಳಿ (1) ಬಾಗಿಲು (1) ಬಾರ್ಕೂರು (1) ಬೀಗ (1) ಬೆಂಕಿ (1) ಬೆಂಗಳೂರಿನ ಚಿತ್ರಗಳು (5) ಬೆಂಗಳೂರು (27) ಬೆಳಕು (1) ಬೇಸಾಯ (1) ಬ್ರಹ್ಮಾವರ (1) ಭಾರತ ಬಂದ್ (1) ಭಿಕ್ಷುಕರು (1) ಮಕ್ಕಳು (10) ಮಗು (1) ಮಂಜು (2) ಮಮ್ಮಮ್ (3) ಮಲೆನಾಡು (1) ಮಳೆ (1) ಮಳೆಗಾಲ (2) ಮಾರಿಕಣಿವೆ (1) ಮುಸ್ಸಂಜೆ (1) ಮೇಲುಕೋಟೆ (2) ಮೇವು (1) ಮೈಸೂರು (7) ಮೋಡ (2) ಮ್ಯಾಕ್ರೋ (12) ಯಕ್ಷಗಾನ (2) ರಸ್ತೆ (5) ರಾತ್ರಿ ನೋಟ (3) ರೈಮ್ (1) ರೈಲು (2) ರೈಲುಹಳಿ (1) ಲಲಿತ ಪ್ರಬಂಧ (6) ಲೇಪಾಕ್ಷಿ (1) ವಂಡಾರ್ (1) ವಾಸ್ತು ಶಿಲ್ಪ (1) ವಾಹನ (2) ವಿವೇಕ (1) ವಿಸ್ತರಣೆ (1) ವ್ಯಕ್ತಿ ವಿಷಯ (3) ವ್ಯಾಪಾರ (1) ಶಾಲೆ (1) ಶಿರಸಿ (1) ಶಿರಸಿ. ಸೈಕಲ್ (1) ಶಿಲ್ಪ (1) ಶಿವನಸಮುದ್ರ (1) ಶುಭಾಶಯ (2) ಸಣ್ಣ ಕಥೆ (4) ಸಂತೆ (2) ಸಮುದ್ರ (2) ಸಮುದ್ರ ಜೀವಿ (2) ಸಸ್ಯ ಪ್ರಪಂಚ (12) ಸಾಕು ಪ್ರಾಣಿ (4) ಸಾಗಾಟ (1) ಸಾಸ್ತಾನ (1) ಸಿಕ್ಕಿಂ (3) ಸೈಕಲ್ (5) ಸೈಕಲ್ ಯಾತ್ರೆ (1) ಸ್ಕಂದಗಿರಿ (1) ಸ್ತೂಪ (1) ಸ್ಪರ್ಧೆ (1) ಹಕ್ಕಿಗಳು (21) ಹರಿಹರ (1) ಹಳ್ಳಿ (3) ಹಿಮ (1) ಹೂಗಳು (5) ಹೂವು (1) ಹೊಸ ವರ್ಷ (1) ಹೋಂ ಸ್ಟೇ (1) ಹೌರಾ (1)