Wednesday, June 17, 2009

ಕ್ರಾಪಿಂಗ್ - ಒಂದು ಉದಾಹರಣೆ

ಛಾಯಾಗ್ರಹಣದಲ್ಲಿ ಬೆಳಕಿನ ಉಪಯೋಗ ಹೇಗೆ ಪ್ರಮುಖವೋ ಅಂತೆಯೇ ಸಂಯೋಜನೆಯೂ ಕೂಡ. ಈ ಹಿಂದೆ ಚಿತ್ರ ಸಂಯೋಜನೆಯ ಬಗ್ಗೆ ಇಲ್ಲಿ ಬರೆದಿದ್ದೇನೆ. ಇದೇ ನಿಯಮಗಳನ್ನು ಮನದಲ್ಲಿರಿಸಿ ನಾವು ತೆಗೆಯ ಹೊರಟ ಚಿತ್ರದ ಪರಿಣಾಮ ನೋಡುಗರ ಮನದಲ್ಲಿ ಹೇಗೆ ಪರಿಣಾಮಕಾರಿಯಾಗಿ ಚಿತ್ರಿಸಬಹುದು ಎಂದು ಉದಾಹರಣೆಯ ಮೂಲಕ ನೋಡೋಣ.


ಈ ಮೇಲಿನ ಚಿತ್ರ ಹಾಲು ಕುಡಿಯುತ್ತಿರುವ ಮರಿಯದ್ದು. ಇಲ್ಲಿ ಫ್ರೇಮಿಂಗಿಗಾಗಿ ಬಿದಿರನ್ನು ಚಿತ್ರದಲ್ಲಿ ಅಳವಡಿಸಿಕೊಂಡಿದ್ದರೂ, ತಾಯಿಯ ಎಡ ಕಣ್ಣಿನಲ್ಲಿ ಇಲ್ಲವಾದ ಕ್ಯಾಚ್ ಲೈಟ್, ತಾಯಿಯ ಓವರ್ ಎಕ್ಸ್ಪೋಸಾದ ದೇಹ ಭಾಗ ಚಿತ್ರದ ಅಂದ ಕೆಡಿಸಿದೆ.


ತಾಯಿಯ ಮುಖದಲ್ಲಿನ ಕೊರತೆಯನ್ನು ಹೋಗಲಾಡಿಸಲು, ಈ ಮೇಲಿನಂತೆ ಇನ್ನೊಂದು ರೀತಿಯ ಕ್ರಾಪ್ ಮಾಡಿ ನೋಡಿದಾಗ, ತಾಯಿಯ ರುಂಡ ಇಲ್ಲದಿರುವಿಕೆ ನೊಡುಗರಿಗೆ ಸರಿಕಾಣದಿರಬಹುದು. ಅಲ್ಲದೇ ಇಲ್ಲಿ ಬಿದಿರಿನ ಫ್ರೇಮಿಂಗ್ ಇದ್ದರೂ ತಾಯಿಯ ಓವರ್ ಎಕ್ಸ್ಪೋಸಾದ ದೇಹ ಭಾಗ ಇನ್ನೂ ಕಾಣಿಸುತ್ತಿದೆ.


ಈ ಮೇಲಿನ ಚಿತ್ರವನ್ನು ಮತ್ತೂ ಕ್ರಾಪ್ ಮಾಡಿ ಈ ಮೇಲಿನಂತೆ ಪ್ರದರ್ಶಿಸಿದಾಗ, ಹಾಲು ಕುಡಿಯುತ್ತಿರುವ ಮಗುವಿನ ನೋಟ ನೋಡುಗರಲ್ಲಿ ಹೆಚ್ಚಿನ ಪರಿಣಾಮ ಬೀರುತ್ತಿದೆಯಲ್ಲದೇ ಮೇಲೆ ತಿಳಿಸಿದ ಕೊರತೆಗಳನ್ನು ಹೆಚ್ಚಿನ ಮಟ್ಟಿಗೆ ಮೀರಿಸುವಲ್ಲಿ ಸಹಾಯಕವಾಗಿದೆ.

ಕೊನೇಯ ಚಿತ್ರ ದೊಡ್ಡ ಪ್ರಿಂಟ್ ತೆಗೆಯುವಲ್ಲಿ ನನಗೆ ಸಹಾಯಕವಾಗದಿದ್ದರೂ ಮುಂದೆ ಇದೇ ರೀತಿಯ ಚಿತ್ರ ತೆಗೆಯಲು ಅವಕಾಶ ಸಿಕ್ಕಿದರೆ, ನಾನು ಈಗ ಕ್ರಾಪಿಂಗಿನಲ್ಲಿ ಮಾಡಿದ ಪ್ರಯೋಗ ನೆರವಿಗೆ ಬರುತ್ತದೆ. ಒಂದು ಒಳ್ಳೆಯ ಚಿತ್ರ ಸಾವಿರ ಪದ ಹೇಳಿದರೆ ಒಂದು ಕೆಟ್ಟ ಚಿತ್ರ ಕನಿಷ್ಟ ಒಂದು ಪಾಠವನ್ನಾದರೂ ಕಲಿಸುತ್ತದೆ.

ಸಾರಾಂಶ:
ಚಿತ್ರದ ಚೌಕಟ್ಟನ್ನು ತುಂಬಿಸುವುದರ (filling the frame) ಮೂಲಕ, ನೀವು ಚಿತ್ರದ ಮೂಲಕ ವ್ಯಕ್ತಪಡಿಸ ಹೊರಟ ಭಾವನೆಯನ್ನು ಚೆನ್ನಾಗಿ ವ್ಯಕ್ತಪಡಿಸಬಹುದು.

12 comments:

  1. ಪಾಲಚಂದ್ರ,

    ಉದಾಹರಣೆ ಸಮೇತ ಫ್ರೇಮಿಂಗ್ ವಿಚಾರವನ್ನು ಚೆನ್ನಾಗಿ ತಿಳಿಸಿದ್ದೀರಿ....ಕೊನೆಯ ಉದಾಹರಣೆಯಲ್ಲಿ ಹೇಳಬೇಕಾದುದನ್ನು ಸರಿಯಾಗಿ ಕ್ರಾಪ್ ಮಾಡಿ ತೋರಿಸಿರುವುದರಿಂದ ತುಂಬಾ ಚೆನ್ನಾಗಿದೆ.

    "ಒಂದು ಒಳ್ಳೆಯ ಚಿತ್ರ ಸಾವಿರ ಪದ ಹೇಳಿದರೆ ಒಂದು ಕೆಟ್ಟ ಚಿತ್ರ ಕನಿಷ್ಟ ಒಂದು ಪಾಠವನ್ನಾದರೂ ಕಲಿಸುತ್ತದೆ".

    ಕಲಿಯುವ ಮನಸ್ಸಿರುವವರಿಗೆ...ಈ ಮಾತಂತೂ ವೇದವಾಕ್ಯದಂತೆ....

    ಕಿವಿಮಾತು: ನಮಗೇ ಬೇಕಾದ ಚಿತ್ರವನ್ನು ಮನದಲ್ಲಿ ಮೊದಲೇ ಮೂಡಿಸಿಕೊಂಡು ನಂತರ ಅದಕ್ಕೆ ತಕ್ಕಂತೆ ಮೊದಲೇ ಕ್ರಾಪ್ ಮಾಡುವ ವಿಚಾರ ಗೊತ್ತಿದ್ದು ಅದರ ಚಿತ್ರಕ್ಕಾಗಿ ಡೆಪ್ತ್ ಆಪ್ ಫೀಲ್ಡ್ ಹೆಚ್ಚು ಮಾಡಿಕೊಂಡು[ಇದರಿಂದ ಕ್ರಾಪ್ ಮಾಡಿ ಚಿತ್ರವನ್ನು ದೊಡ್ಡದಾಗಿ ಪ್ರಿಂಟ್ ಮಾಡಿದರೂ ಚಿತ್ರ ಚೆನ್ನಾಗಿರುತ್ತದೆ, ಬ್ಲರ್ ಆಗೋಲ್ಲ. ಫಿಕ್ಸಲೇಟ್ ಆಗೋಲ್ಲ]ಫೋಕಸ್‌ನಲ್ಲಿ ಹಿಡಿತ ಸಾಧಿಸಿ ಕ್ಲಿಕ್ಕಿಸಿದರೇ ಯಶಸ್ಸು ಖಚಿತ.

    ReplyDelete
  2. ಫೋಟೋಗ್ರಫಿ ಕಲಿಕೆಗೆ ನಿಮ್ಮ ಮಾರ್ಗದರ್ಶನ ಅದೂ ಚಿತ್ರಗಳ ಉದಾಹರಣೆಯೊಂದಿಗೆ ತುಂಬಾ ಚೆನ್ನಾಗಿದೆ.

    ReplyDelete
  3. ಶಿವು,
    ನೀವು ಕೊಟ್ಟ ಕಿವಿಮಾತು ತುಂಬಾ ಚೆನ್ನಾಗಿದೆ. ಒಳ್ಳೇ ಮಾಹಿತಿ ಹಂಚಿಕೊಂಡಿದ್ದಕ್ಕೆ ಧನ್ಯವಾದ

    ಮಲ್ಲಿಕಾರ್ಜುನ್,
    ಮಾರ್ಗದರ್ಶನ ಅಂತೆಲ್ಲಾ ಹೇಳಿ ಮುಜುಗರ ಮಾಡಿಸ್ತಾ ಇದೀರ. ನಾನು ಕಲೀತಾ ಇದೀನಿ, ಅದರಲ್ಲೂ ಫಿಲ್ಲಿಂಗ್ ದಿ ಫ್ರೇಮ್ ಬೇಸಿಕ್ ಪಾಟ. ಗೊತ್ತಿದ್ದೂ ಗೊತ್ತಿದ್ದೂ ಅದೇ ತಪ್ಪನ್ನು ಮತ್ತೆ ಮತ್ತೆ ಮಾಡ್ತಾ ಇರ್ತೀನಿ. ಅದಕ್ಕೆ ಒಳ್ಳೆಯ ಅಭ್ಯಾಸ ಅಂದ್ರೆ ಮಾಡಿದ ತಪ್ಪಿನ ಬಗ್ಗೆ ನೋಟ್ ಮಾಡಿಟ್ಕೊಳ್ಳೋದು. ಅದನ್ನೇ ನಾನು ಇಲ್ಲಿ ಮಾಡ್ತಾ ಇದೀನಿ ಅಷ್ಟೆ.

    ReplyDelete
  4. ನಿಮ್ಮ ಫೋಟೋ ಮತ್ತು ಲೇಖನಗಳನ್ನ ಸಂಪದಲ್ಲಿ ನೋಡಿದ್ದೇನೆ.
    ಚೆನ್ನಾಗಿದೆ.
    ನಿಮ್ಮನ್ನ ಜೇನು ಬಾವಿಯಲ್ಲಿ ನೋಡಿದ ನೆನಪು.

    ರವಿ.

    ReplyDelete
  5. ರವಿ,
    ಜೇನು ಬಾವೀಲಿ ಯಾವ ಟೀಮಲ್ಲಿದೀರ ನೀವು?

    ReplyDelete
  6. ಪಾಲಚಂದ್ರ, ಫೋಟೋಗ್ರಫಿ - ಉದಾಹರಣೆಯೊಂದಿಗೆ ಮಾಹಿತಿ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು

    ReplyDelete
  7. ಪಾಲ ಅವರೆ

    ನಿಮ್ಮ ಈ ಚಿತ್ರ ಬರಹಕ್ಕೆ ಪ್ರತಿಕ್ರಿಯಿಸಲು ಭಯವಾಗುತ್ತೆ.ಏಕೆಂದರೆ ನೀವು,ಶಿವು,ಮಲ್ಲಿಕಾರ್ಜುನ ಅವರು ಏನೇನು ಹೇಳಿರುವಿರೋ ಅದ್ಯಾವುದೂ ನನ್ನ ದಡ್ಡ ತಲೆಗೆ ಹೋಗಲಿಲ್ಲ. ಈ ಬಾರಿ ಬರಹ ನನ್ನರಿವಿಗೆ ಬರದಿದ್ದರೂ ಚಿತ್ರಗಳು ನನಗೇನೋ ಚೆನ್ನಾಗಿ ಕಾಣುತ್ತಿವೆ.

    ...ಚಿಟ್ಟೆ ಬಗ್ಗೆ ಹೇಳುವಾಗ ಮೊದಲನೆಯ ಬಿ.ಎ. ಅನ್ನುವುದನ್ನು ನೀವು ಬಿ.ಇ. ಎಂದು ಅರ್ಥಮಾಡಿಕೊಂಡಿರುವಿರಿ. ನಾನು ಹೇಳಿದ್ದು 1st B.A. ಅದರಲ್ಲಿ ಹಾವುಮೀನಿನ ಬಗ್ಗೆ ಬಹಳ ರೋಚಕ ವಿಚಾರಗಳಿವೆ. ತೇಜಸ್ವಿಯವರ ‘ ಏರೋಪ್ಲೇನ್ ಚಿಟ್ಟೆ...’ ಪುಸ್ತಕದಿಂದಲೇ ಆ ಪ್ರಬಂಧ ಪಠ್ಯಪುಸ್ತಕಕ್ಕೆ ಆಯ್ಕೆ ಮಾಡಿಕೊಂಡಿರುವುದು.

    ReplyDelete
  8. ಚಂದ್ರಕಾಂತ ಮೇಡಂ,
    ಪ್ರಪಂಚದಲ್ಲಿ ಒಬ್ಬೊಬ್ಬರ ಅಭಿರುಚಿ ಒಂದೊಂದು ರೀತಿ ಇರುತ್ತೆ. ಎಲ್ಲವೂ ಎಲ್ಲರಿಗೂ ಅರ್ಥ ಆಗಬೇಕಂತೇನೂ ಇಲ್ಲ. ಅಷ್ಟಕ್ಕೆ ದಡ್ಡ ತಲೆ ಅಂತೆಲ್ಲಾ ಹೇಳೋದು ಸರಿಯಲ್ಲ. ಶಿವರಾಮ ಕಾರಂತ್ರು ಒಂದು ಕಡೆ ಜ್ಞಾನ ಅಂದರೆ "ತಿಳಿದವರು ತಿಳಿಯದವರಿಗೆ ತಿಳಿಯದ ರೀತಿಯಲ್ಲಿ ಹೇಳುವುದು" ಅಂತ ಅನ್ತಾರೆ :)

    ನನ್ನ ಬರಹವೂ ಕೂಡ ಅದೇ ದಿಕ್ಕಿನಲ್ಲಿ ಸಾಗುತ್ತಿದೆಯೇನೋ. ಹಾಗಂತ ನಾನು ತಿಳಿದವನು ಅಂತ ಹೇಳಿಕೊಳ್ತಾ ಇದೀನಿ ಅಂತ ತಪ್ಪು ತಿಳಿಯಬೇಡಿ. ನನಗೆ ತಿಳಿದಿದ್ದನ್ನು ಸರಿಯಾಗಿ ಬರಹದ ಮೂಲಕ ವ್ಯಕ್ತ ಪಡಿಸ್ತಾ ಇಲ್ಲ ಅಂತ. ನೀವೊಬ್ರೆ ನೋಡಿ ಇದುವರೆಗೆ ಪ್ರಾಮಾಣಿಕವಾಗಿ ಪ್ರತಿಕ್ರಿಯೆ ನೀಡಿದವರು. ನನಗೆ ನಿಮ್ಮಂತವರ (ಛಾಯಾಗ್ರಾಹಕರಲ್ಲದವರ???) ಪ್ರತಿಕ್ರಿಯೆ ತುಂಬಾ ಸಹಾಯಕ. ನಾಳೆ ಇನ್ನೊಂದು ಆರ್ಟಿಕಲ್ ಬರೆದ್ರೆ ನಿಮ್ಮ ಮಾತನ್ನು ನೆನಪಿಸಿಕೊಳ್ಳಬಹುದು. ಸುಮ್ಮನೇ ನಾನು ಬರ್ದಿದನ್ನ ನೋಡೀ ಚೆನ್ನಾಗಿದೆ ಎಂದೋ ಏನೋ ಬರೆಯದೆಯೋ ಇರುವುದಕ್ಕಿಂತ ಇದು ತುಂಬಾ ಸಹಾಯಕ.

    ಇನ್ನು ಮೇಲಿನ ಮೊದಲನೇ ಚಿತ್ರ ಮತ್ತು ಕೊನೇಯ ಚಿತ್ರ, ಇವೆರಡರಲ್ಲಿ ಯಾವುದು ಪರಿಣಾಮಕಾರಿಯಾಗಿದೆ ಮತ್ತು ಏಕೆ ಎಂದು ಯೋಚಿಸಿದರೆ ನನ್ನ ಬರಹ ನೀವು ತಿಳಿದುಕೊಂಡಂತೆ. ಇಲ್ಲಿ ನಾವು ಏನು ತೆಗೆಯಹೊರೆಟೆವೋ ಆ ವಿಷಯದ ಮೇಲೆ ಹೆಚ್ಚಿನ ಒತ್ತನ್ನು ಕೊಟ್ಟು ಕ್ಲೋಸ್-ಅಪ್ ಚಿತ್ರ ತೆಗೆಯುವುದರಿಂದ ಚಿತ್ರ ಚೆನ್ನಾಗಿ ಬರುತ್ತದೆ ಎಂಬುದು ನನ್ನ ಅನಿಸಿಕೆ.

    ಇನ್ನು ಕ್ಯಾಚ್ ಲೈಟ್ ಎಂದ್ರೆ ಕೊನೇಯ ಚಿತ್ರದ ಮರಿಯ ಕಣ್ಣಿನ, ಗಡಿಯಾರದ ಸುಮಾರು ೧೧ ಗಂಟೆ ತೋರಿಸುವ ಜಾಗದಲ್ಲಿ ಹೊಳಪು ಕಾಣಿಸ್ತಾ ಇದ್ಯಲ್ಲ ಅದು. ಮೊದಲ ಚಿತ್ರದಲ್ಲಿ ತಾಯಿಯಲ್ಲಿ ಆ ಕ್ಯಾಚ್ ಲೈಟಿಲ್ಲದೆ ಕಣ್ಣು ಕಪ್ಪು ಗುಳಿಯಂತಿದೆ. ಸಾಮಾನ್ಯವಾಗಿ ಜೀವಿಗಳಲ್ಲಿ ಜೀವಂತಿಕೆಯ ಗುರುತು ತೋರಿಸುವುದು ಕಣ್ಣು, ಆ ಜೀವಂತಿಕೆ ಇರುವುದು ಕಣ್ಣಿನ ಹೊಳಪಿನಲ್ಲಿ (ಕ್ಯಾಚ್ ಲೈಟ್). ಅದನ್ನು ಪಡೆಯುವಲ್ಲಿ ವಿಫಲವಾಗಿದ್ದರಿಂದ ಮೊದಲ ಚಿತ್ರ ಛಾಯಾಗ್ರಹಣದ ದೃಷ್ಟಿಯಿಂದ ಒಳ್ಳೆಯ ಚಿತ್ರವಲ್ಲ.

    ಬಿ.ಎ., ಬಿ.ಇ. ಗೊಂದಲ ನಿವಾರಣೆಗೆ ವಂದನೆಗಳು. "ಏರೋಪ್ಲೇನ್..." ಮೂಲ ಪುಸ್ತಕವನ್ನೇ ಕೊಂಡು ಓದ್ತೀನಿ :)

    ReplyDelete
  9. ಮೇಡಂ,
    ಅಂತೆಯೇ ಹಿಂದಿನ ಪೋಸ್ಟಿನಲ್ಲಿ http://palachandra.blogspot.com/2009/06/blog-post_16.html ಜನಪದ ಸಾಹಿತ್ಯದ, ಬಿದಿರಿನ ಬಗ್ಗೆ ಒಂದು ಪದ್ಯ ಹಾಕಿದ್ದೇನೆ. ನಿಮಗೆ ಇಷ್ಟವಾಗಬಹುದು.

    ReplyDelete
  10. ಪಾಲ ಅವರೆ

    ನನ್ನ ಪ್ರತಿಕ್ರಿಯೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸಿದ್ದಕ್ಕೆ ಧನ್ಯವಾದ. ನೀವು ಕೊಟ್ಟ ವಿವರಣೆಯಿಂದ , ಮತ್ತೊಮ್ಮೆ ಚಿತ್ರ ನೋಡಿದ ಮೇಲೆ ಅನುಮಾನ ಪರಿಹಾರವಾಯಿತು. ನಿಮಗೆ ಒಳ್ಳೆಯ Teaching capacity ಇದೆ.ಹಾಗೇ ಉಳಿಸಿಕೊಳ್ಳಿ.

    ಬಿದಿರಿನ ಬಗ್ಗೆ ಕವನ ಚಿತ್ರ ನೋಡಿದೆ. ಇನ್ನೂ ಓದಿಲ್ಲ. ಓದುತ್ತೇನೆ. ನನ್ನ ರಾಮಾಯಣದ ಬಗ್ಗೆಯೂ ಗಮನ ಹರಿಸಿ!!

    ReplyDelete
  11. ಪಾಲಚಂದ್ರ....

    ಫೋಟೊಗ್ರಫಿಯಲ್ಲಿ ನಿಮ್ಮ ಆಸಕ್ತಿ...
    ನೀವು ತಿಳಿಸಿಕೊಡುವ ವಿಷಯಗಳು...
    ಚೆನ್ನಗಿರುತ್ತದೆ....

    ಫೋಟೊಗಳೂ ಚೆನ್ನಾಗಿವೆ...

    ReplyDelete
  12. ಪಾಲ
    ಚಿತ್ರಗಳ ಸಮೇತ ತುಂಬ ಚೆನ್ನಾಗಿ ವಿವರಿಸಿದ್ದಿರ. ಫೋಟೋಗ್ರಫಿ ಕಲಿಯುವ ನಮ್ಮಂತವರಿಗೆ ತುಂಬ ಸಹಾಯ ಆಗುತ್ತೆ. ಇದೆ ತರಹ ಬೇರೆ ಬೇರೆ techniques ಅನ್ನು ತಿಳಿಸಿಕೊಡಿ.....:-)
    ಗುರು

    ReplyDelete

ವರ್ಗ

Amomum (1) ficus krishnae (1) Gangtok (1) Nikon 40mm f/2.8 Micro (10) paris (1) Sikkim (8) snow (1) Yuksom (5) ಅನಿಮೇಟೆಡ್ (1) ಅನುಭವ ಕಥನ (7) ಅಮೂರ್ತ (1) ಆಟೋಟ (2) ಆಫಿಡ್ (1) ಇರುವೆ (6) ಉಡುಪಿ (4) ಉಯ್ಯಾಲೆ (1) ಉರಗ (3) ಏರಿ (1) ಒಂಟಿ ಚಕ್ರದ ಸೈಕಲ್ (1) ಒಯ್ಯುಗೆ (6) ಕದ (1) ಕಂದು ಏಲಕ್ಕಿ (1) ಕನ್ನಡ (2) ಕಪ್ಪು ಏಲಕ್ಕಿ (1) ಕಪ್ಪು-ಬಿಳುಪು (5) ಕಂಬಳ (1) ಕಂಬಳಿಹುಳು (2) ಕವನ (15) ಕವಿ ಶೈಲ (1) ಕಸರತ್ತು (1) ಕಳಸ (1) ಕಳ್ಳತನ (1) ಕಾವೇರಿ (1) ಕಾಳಾವಾರ ಬೆಟ್ಟ (1) ಕಾಳಿಂಗ ಸರ್ಪ (1) ಕಿಸ್ಕಾರ (1) ಕೀಟ ಪ್ರಪಂಚ (35) ಕುಂದಾಪುರ (1) ಕುವೆಂಪು (1) ಕೃಷಿ (9) ಕೃಷಿ ಮೇಳ (4) ಕೆರೆ (2) ಕೆಲಸ (2) ಕೆಸು (2) ಕೆಳದಿ (1) ಕೊಕ್ಕರೆ ಬೆಳ್ಳೂರು (1) ಕೋಟ (8) ಖಗೋಳ ಗಡಿಯಾರ (1) ಗವಿ (1) ಗುಡಿ ಕೈಗಾರಿಕೆ (1) ಗುಡ್ಡ (2) ಗುಹೆ (1) ಚಾರಣ (3) ಚಿಕ್ಕಮಗಳೂರು (1) ಚಿಟ್ಟಾಣಿ (1) ಚಿಟ್ಟೆಗಳು (3) ಚಿತ್ರ ಪುಟ (102) ಚಿತ್ರದುರ್ಗ (1) ಚಿತ್ರಪುಟ (1) ಚೌಕಾಶಿ (1) ಛಾಯಾಗ್ರಹಣ (24) ಜನ ಜೀವನ (52) ಜನಪದ (2) ಜರ್ಮನಿ (1) ಜಲಪಾತ (1) ಜೆಕ್ ಗಣರಾಜ್ಯ (4) ಜೇಡ (3) ಜೇನು ಸಾಕಣೆ (1) ಜೋಡಿ (1) ತರಕಾರಿ (2) ತುಮಕೂರು (2) ತೆಂಗಿನ ಕಾಯಿ (1) ತೆಂಗಿನ ತೋಟ (1) ದಸರ (4) ದೇವವೃಂದ (1) ದೇವಸ್ಠಾನ (1) ದೇವಸ್ಥಾನ (1) ದೊಡ್ಡ ಏಲಕ್ಕಿ (1) ಧಾರವಾಡ (1) ನಗರ (1) ನಂಬಿಕೆ (1) ನಾಟಕ (1) ನೀರ್ಹಕ್ಕಿ (6) ಪತಂಗ (1) ಪತ್ರಿಕೋದ್ಯಮ (1) ಪಶ್ಚಿಮ ಘಟ್ಟ (2) ಪಾರ್ಕ್ (1) ಪಾಳು (1) ಪುಸ್ತಕ ಬಿಡುಗಡೆ (1) ಪೋರ್ಟ್ರೈಟ್ (8) ಪ್ಯಾನಿಂಗ್ (1) ಪ್ರಬಂಧ (2) ಪ್ರವಾಸ ಕಥನ (3) ಪ್ರಾಹ (1) ಪ್ಲಾಸ್ಟಿಕ್ (1) ಬಕೇಟ್ (1) ಬಂಡಿ (1) ಬಣ್ಣ (1) ಬನವಾಸಿ (1) ಬಳ್ಳಿ (1) ಬಾಗಿಲು (1) ಬಾರ್ಕೂರು (1) ಬೀಗ (1) ಬೆಂಕಿ (1) ಬೆಂಗಳೂರಿನ ಚಿತ್ರಗಳು (5) ಬೆಂಗಳೂರು (27) ಬೆಳಕು (1) ಬೇಸಾಯ (1) ಬ್ರಹ್ಮಾವರ (1) ಭಾರತ ಬಂದ್ (1) ಭಿಕ್ಷುಕರು (1) ಮಕ್ಕಳು (10) ಮಗು (1) ಮಂಜು (2) ಮಮ್ಮಮ್ (3) ಮಲೆನಾಡು (1) ಮಳೆ (1) ಮಳೆಗಾಲ (2) ಮಾರಿಕಣಿವೆ (1) ಮುಸ್ಸಂಜೆ (1) ಮೇಲುಕೋಟೆ (2) ಮೇವು (1) ಮೈಸೂರು (7) ಮೋಡ (2) ಮ್ಯಾಕ್ರೋ (12) ಯಕ್ಷಗಾನ (2) ರಸ್ತೆ (5) ರಾತ್ರಿ ನೋಟ (3) ರೈಮ್ (1) ರೈಲು (2) ರೈಲುಹಳಿ (1) ಲಲಿತ ಪ್ರಬಂಧ (6) ಲೇಪಾಕ್ಷಿ (1) ವಂಡಾರ್ (1) ವಾಸ್ತು ಶಿಲ್ಪ (1) ವಾಹನ (2) ವಿವೇಕ (1) ವಿಸ್ತರಣೆ (1) ವ್ಯಕ್ತಿ ವಿಷಯ (3) ವ್ಯಾಪಾರ (1) ಶಾಲೆ (1) ಶಿರಸಿ (1) ಶಿರಸಿ. ಸೈಕಲ್ (1) ಶಿಲ್ಪ (1) ಶಿವನಸಮುದ್ರ (1) ಶುಭಾಶಯ (2) ಸಣ್ಣ ಕಥೆ (4) ಸಂತೆ (2) ಸಮುದ್ರ (2) ಸಮುದ್ರ ಜೀವಿ (2) ಸಸ್ಯ ಪ್ರಪಂಚ (12) ಸಾಕು ಪ್ರಾಣಿ (4) ಸಾಗಾಟ (1) ಸಾಸ್ತಾನ (1) ಸಿಕ್ಕಿಂ (3) ಸೈಕಲ್ (5) ಸೈಕಲ್ ಯಾತ್ರೆ (1) ಸ್ಕಂದಗಿರಿ (1) ಸ್ತೂಪ (1) ಸ್ಪರ್ಧೆ (1) ಹಕ್ಕಿಗಳು (21) ಹರಿಹರ (1) ಹಳ್ಳಿ (3) ಹಿಮ (1) ಹೂಗಳು (5) ಹೂವು (1) ಹೊಸ ವರ್ಷ (1) ಹೋಂ ಸ್ಟೇ (1) ಹೌರಾ (1)