Thursday, June 04, 2009

ಹಿನ್ನೆಲೆಯಲೊಂದಾಗಿ

ಹಸಿರಲ್ಲಿ ಹಸಿರಾದ ಮಿಡತೆ.
GRASSHOPPER IN ACTION

ಬಂಡೆಯ ಮೇಲ್ಮೈಗೂ ಓತಿಯ ಮೇಲ್ಮೈಯ ಲಕ್ಷಣಕ್ಕೂ ಇರುವ ಸಾಮ್ಯತೆ ಗಮನಿಸಿ





ಹೊಯಿಗೆಯ ಬಣ್ಣಕ್ಕೂ, ಏಡಿಯ ಬಣ್ಣಕ್ಕೂ ಇರುವ ಸಾಮ್ಯತೆ ಗಮನಿಸಿ
DSC08225

ಹೀಗೆಯೇ ಹಲವು ಹಕ್ಕಿಗಳು, ಪ್ರಾಣಿಗಳು, ಕೀಟಗಳನ್ನು ಗಮನಿಸಿದರೆ ಅವುಗಳ ಮೇಲ್ಮೈ ಲಕ್ಷಣ ಅವು ವಾಸಿಸುವ ಪರಿಸರದ ಹಿನ್ನೆಲೆಗೆ ಹೊಂದುವುದನ್ನು ಗಮನಿಸಬಹುದು. ಇಂತಹ ಪರಿಸ್ಥಿತಿಯಲ್ಲಿ ಇವುಗಳನ್ನು ಹಿನ್ನೆಲೆಯಿಂದ ಬೇರ್ಪಡಿಸಿ ನೋಡುವುದು ಕಠಿಣವಾಗಿ ಕಾಣಿಸುವುದು. ಇವುಗಳ ಈ ಗುಣಲಕ್ಷಣವೇ ವೈರಿಗಳಿಂದ ರಕ್ಷಿಸಿ ಇವುಗಳ ಸಂತತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಸಹಾಯಕ.

ಇಲ್ಲಿ ಮೊದಲಿಗೆ ಏಳುವ ಪ್ರಶ್ನೆ, ಈ ಜೀವಿಗಳು ಹೇಗೆ ತಮ್ಮ ಮೈಯ ಬಣ್ಣವನ್ನು ಪರಿಸರಕ್ಕೆ ಅನುಕೂಲವಾಗಿ ಹೊಂದಿಸಿಕೊಂಡವು ಎಂಬುದು.ನಾವಾದರೋ ಕನ್ನಡಿಯನ್ನು ನೋಡಿ ನಮ್ಮ ರೂಪ, ಬಣ್ಣ ಹೀಗೆ ಇದೆ ಎಂದು ತಿಳಿದುಕೊಳ್ಳುತ್ತೇವೆ. ಆದರೆ ಈ ಜೀವಿಗಳು ಹೇಗೆ ತಮ್ಮನ್ನು ಕಂಡುಕೊಂಡು, ಪರಿಸರಕ್ಕೆ ಅನುಗುಣವಾಗಿ ತಮ್ಮ ಬಣ್ಣ ಬದಲಿಸಿಕೊಂಡವು ಎಂಬುದು.

ತುಂಬಾ ಹಳೇ ಪ್ರಶ್ನೆ ಉತ್ತರ ನೀವೇ ಕಂಡುಕೊಳ್ಳಿ.

7 comments:

  1. ಫೋಟೋಗಳು ಚೆನ್ನಾಗಿವೆ..ನಾನೂ ಈ ಹಳೇ ಪ್ರಶ್ನೆಯನ್ನು ಅಮ್ಮನ ಜೊತೆ ಕೇಳ್ತಾ ಇದ್ದೆ ಸಣ್ಣವಳಿರುವಾಗ. ಅದಕ್ಕೆ ಅಮ್ಮ 'ಅದು ನಮಗೆ ಕಾಣಬಾರದೆಂದು ಬಣ್ಣ ಬದಲಯಿಸುತ್ತೆ' ಅನ್ತಾ ಇದ್ರು.! ನೀವೇ ಪಕ್ಕಾ ಉತ್ತರ ಹುಡುಕಿ ಕೊಟ್ರೆ ಒಳ್ಳೆದು ಸರ್.
    -ಧರಿತ್ರಿ

    ReplyDelete
  2. ಧರಿತ್ರಿ,
    ಇಲ್ಲಿ ಬಣ್ಣ ಬದಲಿಸುವ ಉಸರವಳ್ಳಿಯ ಗುಣದ ಬಗ್ಗೆ ಹೇಳುತ್ತಿಲ್ಲ, ಮೇಲೆ ತಿಳಿಸಿದ ಉದಾಹರಣೆಯಲ್ಲಿ ಕೆಲವು ಬಣ್ಣ ಬದಲಿಸದೇ ಇರುವುದೂ ಇವೆ. ಆದರೆ ಅವುಗಳ ಬಣ್ಣ ಅವು ವಾಸಿಸುವ ಪರಿಸರಕ್ಕೆ ಹೊಂದಿಕೆಯಾಗಿ ಇರುವುದು ಹೇಗೆ ಎಂಬುದು ನನ್ನ ಪ್ರಶ್ನೆ. ಉದಾಹರಣೆಗೆ ಮೊದಲ ಚಿತ್ರದ ಮಿಡತೆ ಹಸಿರು ಬಣ್ಣದ ಬದಲು ಕೆಂಪೇಕಿರಬಾರದಿತ್ತು? ವೈರಿಗಳಿಂದ ರಕ್ಷಿಸಿಕೊಳ್ಳಲು ಎಂಬುದು ವಾದವಾದರೆ, ಹಸಿರನ್ನೇ ತನ್ನ ಬಣ್ಣವಾಗಿ ಮಾಡಿಕೊಳ್ಳಲು ಅದಕ್ಕೆ ಯಾವುದು ಸಹಾಯಕವಾಯಿತು ಎಂದು.

    ReplyDelete
  3. ಪಾಲಚಂದ್ರ.....

    ಮೊದಲನೆಯ ಚಿತ್ರಕ್ಕೆ ಮನಸೋತಿದ್ದೇನೆ...

    ಮಲೆನಾಡಿನಲ್ಲಿ ಬಣ್ಣ ಬದಲಾಯಿಸುವ
    ಊಸರವಳ್ಳಿ ನೋಡಿದ್ದೇನೆ...

    ಇನ್ನು ಹಲವು ಪಕ್ಷಿಗಳ ಬಣ್ಣವೂ ಸಹ ಎಲೆ.. ಮರದ ತೊಗಟೆಯ ಹಾಗೆ ಇರುವದನ್ನು ಗಮನಿಸಿದ್ದೇನೆ...

    ನಿಮ್ಮ ತರ್ಕ ಇಷ್ಟವಾಯಿತು....

    ReplyDelete
  4. ಪಾಲ,
    ಫೋಟೋಗಳು ಅದ್ಭುತ,
    ಪ್ರಕ್ರತಿ ವೈಚಿತ್ರ್ಯಗಳ ತವರೂರು,
    ಅರಿತದ್ದು ತುಂಬಾ ಕಡಿಮೆ, ಅರಿಯಬೇಕಾದದ್ದು ಅಗಾಧ

    ReplyDelete
  5. ಪಾಲಚಂದ್ರ,

    ನಾನು ಈ "ಹಿನ್ನೆಲೆಯೊಂದಾಗಿ" ಪ್ರಶ್ನೆಗೆ ಉತ್ತರ ಹುಡುಕುತ್ತಿದ್ದೇನೆ..ಇನ್ನೂ ಗೊತ್ತಾಗಿಲ್ಲ..ಆದ್ರೆ ಇದೆಲ್ಲಾ ದೇವರ ಸೃಷ್ಠಿಯ ಅಧ್ಬುತ ಕ್ರಿಯೆ ಅಂತ ಮಾತ್ರ ಹೇಳಬಲ್ಲೆ...

    ಫೋಟೋಗಳೆಲ್ಲಾ ತುಂಬಾ ಚೆನ್ನಾಗಿವೆ...

    ಧನ್ಯವಾದಗಳು.

    ReplyDelete
  6. ಪಾಲ ರವರೆ...
    ಒಳ್ಳೆಯ ಫೋಟೋಗಳು. ಹಾಗೆ ನಮಗೆಲ್ಲ ಒಳ್ಳೆ ಪ್ರಶ್ನೆ ಕೊಡ ಕೊಟ್ಟಿದ್ದಿರಾ....
    ಹೌದು ಇದು ಪ್ರಕೃತಿ ವಿಸ್ಮಯ, ಇಲ್ಲಿರುವ ಪ್ರಾಣಿಗಳು ಕನ್ನಡಿ ನೋಡಿಕೊಳ್ಳ ದಿರಬಹುದು... ಆದರೆ ಇವಕ್ಕೆ ತಮ್ಮ ರಕ್ಷಣೆಗೋಸ್ಕರ ಬಣ್ಣ ಬದಲಿಸುವ ಕ್ರಿಯೆಯನ್ನು ದೇವರು ಕೊಟ್ಟಿದ್ದಾನೆ,,,,, ಇದರ ಬಗ್ಗೆ ಒಂದು ಡಾಕ್ಯುಮೆಂಟರಿ ನೋಡಿದ್ದೇ... ವಿಚಾರ ಮಾಡುವಂಥ ಪ್ರಶ್ನೆ...
    ಮೊದಲನೆಯ ಹಾಗು ಕೊನೆಯ ಫೋಟೋ ತುಂಬ ಚೆನ್ನಾಗಿ ಇದೆ.....

    ಗುರು

    ReplyDelete
  7. ಫೋಟೋಗಳು ತುಂಬಾ ಚೆನ್ನಾಗಿವೆ.

    ReplyDelete

ವರ್ಗ

Amomum (1) ficus krishnae (1) Gangtok (1) Nikon 40mm f/2.8 Micro (10) paris (1) Sikkim (8) snow (1) Yuksom (5) ಅನಿಮೇಟೆಡ್ (1) ಅನುಭವ ಕಥನ (7) ಅಮೂರ್ತ (1) ಆಟೋಟ (2) ಆಫಿಡ್ (1) ಇರುವೆ (6) ಉಡುಪಿ (4) ಉಯ್ಯಾಲೆ (1) ಉರಗ (3) ಏರಿ (1) ಒಂಟಿ ಚಕ್ರದ ಸೈಕಲ್ (1) ಒಯ್ಯುಗೆ (6) ಕದ (1) ಕಂದು ಏಲಕ್ಕಿ (1) ಕನ್ನಡ (2) ಕಪ್ಪು ಏಲಕ್ಕಿ (1) ಕಪ್ಪು-ಬಿಳುಪು (5) ಕಂಬಳ (1) ಕಂಬಳಿಹುಳು (2) ಕವನ (15) ಕವಿ ಶೈಲ (1) ಕಸರತ್ತು (1) ಕಳಸ (1) ಕಳ್ಳತನ (1) ಕಾವೇರಿ (1) ಕಾಳಾವಾರ ಬೆಟ್ಟ (1) ಕಾಳಿಂಗ ಸರ್ಪ (1) ಕಿಸ್ಕಾರ (1) ಕೀಟ ಪ್ರಪಂಚ (35) ಕುಂದಾಪುರ (1) ಕುವೆಂಪು (1) ಕೃಷಿ (9) ಕೃಷಿ ಮೇಳ (4) ಕೆರೆ (2) ಕೆಲಸ (2) ಕೆಸು (2) ಕೆಳದಿ (1) ಕೊಕ್ಕರೆ ಬೆಳ್ಳೂರು (1) ಕೋಟ (8) ಖಗೋಳ ಗಡಿಯಾರ (1) ಗವಿ (1) ಗುಡಿ ಕೈಗಾರಿಕೆ (1) ಗುಡ್ಡ (2) ಗುಹೆ (1) ಚಾರಣ (3) ಚಿಕ್ಕಮಗಳೂರು (1) ಚಿಟ್ಟಾಣಿ (1) ಚಿಟ್ಟೆಗಳು (3) ಚಿತ್ರ ಪುಟ (102) ಚಿತ್ರದುರ್ಗ (1) ಚಿತ್ರಪುಟ (1) ಚೌಕಾಶಿ (1) ಛಾಯಾಗ್ರಹಣ (24) ಜನ ಜೀವನ (52) ಜನಪದ (2) ಜರ್ಮನಿ (1) ಜಲಪಾತ (1) ಜೆಕ್ ಗಣರಾಜ್ಯ (4) ಜೇಡ (3) ಜೇನು ಸಾಕಣೆ (1) ಜೋಡಿ (1) ತರಕಾರಿ (2) ತುಮಕೂರು (2) ತೆಂಗಿನ ಕಾಯಿ (1) ತೆಂಗಿನ ತೋಟ (1) ದಸರ (4) ದೇವವೃಂದ (1) ದೇವಸ್ಠಾನ (1) ದೇವಸ್ಥಾನ (1) ದೊಡ್ಡ ಏಲಕ್ಕಿ (1) ಧಾರವಾಡ (1) ನಗರ (1) ನಂಬಿಕೆ (1) ನಾಟಕ (1) ನೀರ್ಹಕ್ಕಿ (6) ಪತಂಗ (1) ಪತ್ರಿಕೋದ್ಯಮ (1) ಪಶ್ಚಿಮ ಘಟ್ಟ (2) ಪಾರ್ಕ್ (1) ಪಾಳು (1) ಪುಸ್ತಕ ಬಿಡುಗಡೆ (1) ಪೋರ್ಟ್ರೈಟ್ (8) ಪ್ಯಾನಿಂಗ್ (1) ಪ್ರಬಂಧ (2) ಪ್ರವಾಸ ಕಥನ (3) ಪ್ರಾಹ (1) ಪ್ಲಾಸ್ಟಿಕ್ (1) ಬಕೇಟ್ (1) ಬಂಡಿ (1) ಬಣ್ಣ (1) ಬನವಾಸಿ (1) ಬಳ್ಳಿ (1) ಬಾಗಿಲು (1) ಬಾರ್ಕೂರು (1) ಬೀಗ (1) ಬೆಂಕಿ (1) ಬೆಂಗಳೂರಿನ ಚಿತ್ರಗಳು (5) ಬೆಂಗಳೂರು (27) ಬೆಳಕು (1) ಬೇಸಾಯ (1) ಬ್ರಹ್ಮಾವರ (1) ಭಾರತ ಬಂದ್ (1) ಭಿಕ್ಷುಕರು (1) ಮಕ್ಕಳು (10) ಮಗು (1) ಮಂಜು (2) ಮಮ್ಮಮ್ (3) ಮಲೆನಾಡು (1) ಮಳೆ (1) ಮಳೆಗಾಲ (2) ಮಾರಿಕಣಿವೆ (1) ಮುಸ್ಸಂಜೆ (1) ಮೇಲುಕೋಟೆ (2) ಮೇವು (1) ಮೈಸೂರು (7) ಮೋಡ (2) ಮ್ಯಾಕ್ರೋ (12) ಯಕ್ಷಗಾನ (2) ರಸ್ತೆ (5) ರಾತ್ರಿ ನೋಟ (3) ರೈಮ್ (1) ರೈಲು (2) ರೈಲುಹಳಿ (1) ಲಲಿತ ಪ್ರಬಂಧ (6) ಲೇಪಾಕ್ಷಿ (1) ವಂಡಾರ್ (1) ವಾಸ್ತು ಶಿಲ್ಪ (1) ವಾಹನ (2) ವಿವೇಕ (1) ವಿಸ್ತರಣೆ (1) ವ್ಯಕ್ತಿ ವಿಷಯ (3) ವ್ಯಾಪಾರ (1) ಶಾಲೆ (1) ಶಿರಸಿ (1) ಶಿರಸಿ. ಸೈಕಲ್ (1) ಶಿಲ್ಪ (1) ಶಿವನಸಮುದ್ರ (1) ಶುಭಾಶಯ (2) ಸಣ್ಣ ಕಥೆ (4) ಸಂತೆ (2) ಸಮುದ್ರ (2) ಸಮುದ್ರ ಜೀವಿ (2) ಸಸ್ಯ ಪ್ರಪಂಚ (12) ಸಾಕು ಪ್ರಾಣಿ (4) ಸಾಗಾಟ (1) ಸಾಸ್ತಾನ (1) ಸಿಕ್ಕಿಂ (3) ಸೈಕಲ್ (5) ಸೈಕಲ್ ಯಾತ್ರೆ (1) ಸ್ಕಂದಗಿರಿ (1) ಸ್ತೂಪ (1) ಸ್ಪರ್ಧೆ (1) ಹಕ್ಕಿಗಳು (21) ಹರಿಹರ (1) ಹಳ್ಳಿ (3) ಹಿಮ (1) ಹೂಗಳು (5) ಹೂವು (1) ಹೊಸ ವರ್ಷ (1) ಹೋಂ ಸ್ಟೇ (1) ಹೌರಾ (1)