Tuesday, July 20, 2010

ಸ್ಕಂದಗಿರಿಯ ಜನಜಾತ್ರೆ

ಗೆಳೆಯಂದಿರಾದ ಹರ್ಷ, ಗೋಪಿ, ಗಿರಿ ಜೊತೆ ಕೈಗೊಂಡ ಸ್ಕಂದಗಿರಿಯ ಚಾರಣ. ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಮಾರ್ಗವಾದ ರಾಷ್ಟ್ರೀಯ ಹೆದ್ದಾರಿ ೭ ರಲ್ಲಿ ಸುಮಾರು ೫೦ ಕಿ.ಮೀ. ಸಾಗಿ ಈ ಸ್ಥಳ ತಲುಪಬೇಕು. ಬೆಂಗಳೂರಿಗೆ ಹತ್ತಿರವಾದ್ದರಿಂದ ಸಾಮಾನ್ಯವಾಗಿ ಜನರು ರಾತ್ರಿ ಚಾರಣ ಮಾಡುತ್ತಾರೆ. ಬೆಳಿಗ್ಗಿನ ಸೂರ್ಯೋದಯ ನೋಡಿ ವಾಪಾಸು ಬರುವುದು ರೂಢಿ. ಅಪರಾತ್ರಿಯಲ್ಲೂ ಗುಡ್ಡದ ಕೆಳಗೆ ಸ್ಥಳೀಯರು ಕರಡಿ, ಹಾವು (ಒಬ್ಬ ಸ್ಥಳೀಯನಂತೂ ಇಲ್ಲಿ ಅನಕೊಂಡ ಇದೆ ಅಂತ ಬೆದರಿಸಿದ!) ಇತ್ಯಾದಿ ಪ್ರಾಣಿಗಳ ಹೆದರಿಕೆ ಹುಟ್ಟಿಸಿ ಮಾರ್ಗದರ್ಶಿಯಾಗುವ ಅಭಿಲಾಷೆ ತೋರಿಸಿ, ಬಾಯಿಗೆ ಬಂದ ಮೊತ್ತ ಕೇಳುವುದು ಸಾಮಾನ್ಯ.

ಅಬ್ಬ ಈ ಜನ ಮುಗೀತು ಅಂತ ಮೇಲ್ಗಡೆ ಹೋದ್ರೆ, ಈಗಾಗಲೇ ಬಂದವರು, ಇನ್ನೂ ಬರಲಿರುವವರ ಜನಸಾಗರ; ಮೇಲೆ ಗಣೇಶನ ಒಂದು ಮುರುಕಲು ಗುಡಿ, ಅಲ್ಲೇ ಟೀ, ಆಮ್ಲೇಟ್, ನೂಡಲ್ಸ್ ಮಾಡುವ ಹುಡುಗರು. ಒಟ್ಟಲ್ಲಿ ಚಾರಣಕ್ಕಿಂತ ಬಸ್ ನಿಲ್ದಾಣದ ನೆನಪು ಹುಟ್ಟಿಸುವುದೇ ಜಾಸ್ತಿ.

ಟೀ ಅಂಗಡಿಯಲ್ಲಿ ಹಾಲು ಕುದಿಸುತ್ತಿರುವ ದೃಷ್ಯ.

CSC_6804

ನಿಮಗೇನಾದರೂ ಈ ಸ್ಥಳವನ್ನು ನೋಡುವ ಅಭಿಲಾಷೆ ಇದ್ದರೆ, ನನ್ನ ಅಭ್ಯಂತರವಿಲ್ಲ; ಆದರೂ ನನ್ನ ಸಲಹೆ ಇದಕ್ಕಿಂತ ಒಮ್ಮೆ ಮೆಜೆಸ್ಟಿಕ್ಕಿಗೆ ಭೇಟಿ ಕೊಡಿ.

ಇನ್ನಷ್ಟು ಚಿತ್ರಗಳು:

Skandagiri July 2010

Tuesday, July 13, 2010

ಕೃಷ್ಣಸುಂದರಿಯ ಬಳಿಯಲ್ಲಿ

ಅವರ ಮನೆಯ ಕಡೆ ಹೆಜ್ಜೆ ಇಡುತ್ತಿದಂತೆಯೇ ನನ್ನ ಕಾಲೆಲ್ಲಾ ಕಣ್ಣಾಗಿತ್ತು. ಒಂದು ರೀತಿಯ ಅಳುಕು, ಭಯ ನನ್ನೆದಯನಾವರಿಸಿತ್ತು. ದಾರಿಯ ಅಕ್ಕ ಪಕ್ಕದ ಪೊದೆಯಲ್ಲಿ ಏನಾದರೂ ಮಿಸುಕಾಡಿದರೂ ಸಾಕು ಅಪ್ರಯತ್ನ ಪೂರ್ವಕವಾಗಿ ಮೈ ರೋಮ ನಿಮಿರಿ, ಭಯದ ರೋಮಾಂಚನವನ್ನುಂಟುಮಾಡಿತ್ತು. ಮನೆಯ ಕದ ತಟ್ಟುತ್ತಿದಂತೆಯೇ ನನ್ನ ಹೃದಯದ ಬಡಿತದ ಸದ್ದೂ ಅದರೊಡನೆ ಮಿಳಿತಗೊಂಡು ತಾಳ ಹಾಕಿದಂತೆ ಭಾಸವಾಯಿತು. ಒಳಗಡೆಯಿಂದ "ಯಾರು" ಎಂಬ ಹೆಂಗಸೊಬ್ಬರ ದನಿಗೆ ಮಾರುತ್ತರ ಕೊಡಲೂ ಬಾಯಿ ಒಣಗಿದಂತಾಗಿತ್ತು. ಆಕೆಯ ಹೆಜ್ಜೆ ಬಾಗಿಲ ಹತ್ತಿರ ಹತ್ತಿರ ಬರುತ್ತಿದ್ದಂತೆ ನನ್ನೊಳಗಿನ ಭಯ ನೂರ್ಮಡಿಸಿತು. ಬಾಗಿಲು ತೆರೆದ ಕೂಡಲೇ ಅದು ನನ್ನ ಮೇಲೆ ನುಗ್ಗಿ ಬಂದರೆ...

ಬಾಗಿಲು ತೆರೆದ ನಂತರ ಕಾಣಿಸಿದ್ದು, ಪ್ರಶ್ನಾರ್ಥಕ ನೋಟ ಬೀರಿದ ಇಳಿ ವಯಸ್ಸಿನ ಹೆಂಗಸನ್ನು. ನನ್ನ ಪರಿಚಯ ಮಾಡಿಕೊಡುತ್ತಾ, "ನಿನ್ನೆ ಫೋನ್ ಮಾಡಿದ್ದೆನಲ್ಲಾ ಬರುತ್ತೇನೆಂದು, ’ಅವರು’ ಇದ್ದಾರ" ಎಂದು ಕೇಳಿದೆ. "ಈಗಷ್ಟೆ ಒಬ್ರು ಫೋನ್ ಮಾಡಿದ್ರು ಇನ್ನೊಂದ್ ಅರ್ಧಗಂಟೇಲಿ ಬರ್ತಾರೆ ಕೂತಿರಿ", ಎಂದು ಒಳಗೆ ಆಹ್ವಾನಿಸಿದರು. "ಸರಿ, ಆದರೆ ನಿನ್ನೆ ಹಿಡಿದ ಕಾಳಿಂಗ ಸರ್ಪ.." ನನ್ನ ಮಾತನ್ನು ತಡೆಹಿಡಿದು ಆಕೆಯೇ ಮುಂದುವರಿಸಿದರು. "ನೀವು ಈಗ ಬಾಗಿಲ ಪಕ್ಕದ ಒಂದು ಗೋಣಿ ಚೀಲದ ಮೇಲೆ ಕೈ ಇಟ್ಟಿದ್ದೀರಲ್ಲ, ಅದ್ರ ಕೆಳಗೆ ಒಂದು ಪಂಜರ ಇದೆ ಅದ್ರೊಳಗೆ ಆರಾಮಾಗಿ ನಿದ್ರೆ ಮಾಡ್ತಾ ಇದೆ" ಎಂದುತ್ತರಿಸಿದರು.

ಒಮ್ಮೆ ಮೈ ಜುಮ್ಮೆಂದರೂ ತೋರಿಸಿಕೊಳ್ಳದೇ, ಗೂಡಿನ ಮೇಲೆ ಹೆದರಿಕೆಯಿಲ್ಲದೇ ಕೈಯಿಟ್ಟು ನಿಂತಿದ್ದ ನನ್ನ ಧೈರ್ಯಕ್ಕೆ ನಾನೇ ಮೆಚ್ಚಿ "ಈಗ ನೋಡಬಹುದಾ" ಕೇಳಿದೆ. "ಹೋ ಬನ್ನಿ", ಎಂದು ಮನೆಯಾಕೆ ಹೊರಗೆ ಕರೆದುಕೊಂಡು ಹೋಗಿ ಗೋಣಿ ಚೀಲವನ್ನು ಎತ್ತಿದಾಗ, ಪಂಜರದೊಳಗೆ ಪಾಪದ ಪ್ರಾಣಿಯಂತೆ ಸುರುಳಿ ಸುತ್ತಿ ಮಲಗಿರುವ ಕಾಳಿಂಗ ಸರ್ಪವನ್ನು ತೋರಿಸಿದರು. ತುದಿ ಮೊದಲು ಗೊತ್ತಾಗದ ನೀಳ ಕಾಯ, ಕಡು ಗಪ್ಪು ಮಿನುಗುವ ಮೈಬಣ್ಣ, ಮಧ್ಯೆ ಮಧ್ಯೆ ಪಟ್ಟೆಗಳು, ಗಮನಿಸಬಹುದಾದ ಉಸಿರಿನ ಏರಿಳಿತ. ಮತ್ತೆ ಮನೆಯೊಳಗೆ ತೆರಳಿ ಸಮಯ ಹೋಗದಿದ್ದುದಕ್ಕೆ ಮನೆಯವರು ಕೊಟ್ಟ ಬಾಳೆ ಹಣ್ಣು, ಕಾಫಿ ಮುಗಿಸುತ್ತಾ ಮಾತನಾಡುತ್ತಾ ಕುಳಿತೆವು.

ಸುಮಾರು ಅರ್ಧ ಗಂಟೆಯ ನಂತರ ನಾವು ಕಾಯಿತ್ತಿದ್ದ ಪ್ರಫುಲ್ಲ ಭಟ್ಟರ ಆಗಮನವಾಯಿತು. ಸುಮಾರು ಅರವತ್ತರ ಆಸು ಪಾಸಿನ ಭಟ್ಟರು, ಕಂಡ ಕೂಡಲೇ ಕೈಕುಲುಕಿ ಮಾತನಾಡಿಸಿ "ತುಂಬಾ ಹೊತ್ತಾಯ್ತೇನೋ ಬಂದಿದ್ದು" ಎಂದರು. ಈವರೆಗೆ ಪೇಪರಿನಲ್ಲಿ ಪ್ರಕಟವಾಗಿದ್ದ ಅವರ ಬಗೆಗಿನ ಲೇಖನಗಳು, ಚಿತ್ರಗಳನ್ನು ತೋರಿಸುತ್ತಾ ತಮ್ಮ ಅನುಭವ ಹಂಚಿಕೊಂಡರು.

ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮನೆ, ತೋಟಕ್ಕೆ ದಾರಿ ತಪ್ಪಿ ಬಂದ ಹಾವುಗಳನ್ನು ಹಿಡಿದು ಅರಣ್ಯ ಪಾಲಕರ ನೆರವಿನೊಂದಿಗೆ ಮತ್ತೆ ಕಾಡಿಗೆ ಬಿಡುವುದು ಇವರ ಹವ್ಯಾಸಗಳಲ್ಲೊಂದು. ಕಳಸದಲ್ಲಿ ಸ್ವಂತ ಮನೆ, ಆದಾಯಕ್ಕೆ ತೋಟ, ಬಾಡಿಗೆ ಮನೆ ಇರುವುದರಿಂದ ಈ ಕಾಯಕವನ್ನು ಯಾವುದೇ ಫಲಾಪೇಕ್ಷೆಯಿಲ್ಲದೇ ಕೆಲವು ವರ್ಷಗಳಿಂದ ಮಾಡುತ್ತಾ ಬಂದಿದ್ದಾರೆ. "ಕಾಳಿಂಗ ಸರ್ಪ, ಹೆಬ್ಬಾವು, ಕೊಳಕು ಮಂಡಲ, ನಾಗರ ಹಾವು ಹೀಗೆ ಸುಮಾರು ವರ್ಷಕ್ಕೆ ೨೦೦-೨೫೦ ಹಾವುಗಳಿಗೆ ಮರುನೆಲೆ ಕಾಣಿಸುತ್ತೇನೆ" ಎನ್ನುತ್ತಾರೆ ಭಟ್ಟರು. ತಮ್ಮ ೧೫ನೇ ವರ್ಷದಿಂದ ಸ್ವಯಂ ಪ್ರೇರಣೆಯಿಂದ ಹಾವು ಹಿಡಿಯುವುದನ್ನು ಆಟವಾಗಿಸಿಕೊಂಡ ಭಟ್ಟರು, ಅವುಗಳ ಉಳಿವಿಗಾಗಿ ತಮ್ಮನ್ನು ತೊಡಗಿಸಿಕೊಂಡಿರುವುದು ಸಂತಸದ ವಿಷಯ.

ಕೇವಲ ಹಾವು ಹಿಡಿದು ಕಾಡಿಗೆ ಬಿಡುವುದು ಮಾತ್ರವಲ್ಲ, ಜನರಿಗೆ ಶಾಲಾ ಮಕ್ಕಳಿಗೆ ಹಾವುಗಳ ಬಗ್ಗೆ ಅರಿವು ಮೂಡಿಸುವುದನ್ನೂ ಕೂಡ ಮಾಡುತ್ತಾ ಬಂದಿದ್ದಾರೆ. "ತೀರ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಹಾವು ಮನುಷ್ಯರನ್ನು ಕಡಿಯಬಹುದು. ತಪ್ಪಿಸಿಕೊಳ್ಳಲು ಒಂದು ಚಿಕ್ಕ ಅವಕಾಶ ಸಿಕ್ಕಿದರೂ ಮನುಷ್ಯರಿಂದ ದೂರ ಇರುವುದಕ್ಕೇ ಇಷ್ಟ ಪಡುತ್ತವೆ" ಎನ್ನುತ್ತಾರೆ. ಹಾವುಗಳು ನಮ್ಮ ಸಂಸ್ಕೃತಿ, ದೇವತೆಗಳೊಂದಿಗೆ ಬೆರೆತಿವೆ, ಅವುಗಳನ್ನು ರಕ್ಷಿಸುವುದು ನನ್ನ ಕರ್ತವ್ಯ ಎಂದು ಈ ಕೆಲಸ ಮಾಡುತ್ತೇನಷ್ಟೆ ಅಲ್ಲದೇ ಇದರಿಂದ ನಾನು ಬೇರಾವ ಪ್ರತಿಫಲವನ್ನೂ ಬಯಸುವುದಿಲ್ಲ ಎನ್ನುತ್ತಾರೆ. ಇದುವರೆಗೂ ಇವರು ಹಿಡಿದ ಹಾವುಗಳಲ್ಲಿ ಅತೀ ಉದ್ದದ್ದು, ಕೊಪ್ಪದ ಬಳಿ ಹಿಡಿದ ೧೬ ಅಡಿ ಉದ್ದದ ಕಾಳಿಂಗ ಸರ್ಪವಂತೆ. ಒಂದು ಕೋಲು, ಕೈಗೆ ಗ್ಲೌಸು ಹಾವು ಹಿಡಿದ ನಂತರ ಅದನ್ನು ತುಂಬಿಸಲು ಗೋಣಿ ಚೀಲ ಇವಿಷ್ಟು ಹಾವು ಹಿಡಿಯಲು ಅವರು ಬಳಸುವ ಉಪಕರಣಗಳು. ಗ್ಲೌಸು ಹಾವಿನ ಬಾಯಿಯಿಂದ ಹೊರಬರುವ ವಿಷ ಕೈಯ ಗಾಯಕ್ಕೆ, ಉಗುರಿನ ಸಂದಿಗೆ ಹೋಗಬಾರದೆಂದು ಹಾಕುತ್ತಾರಲ್ಲದೇ, ಅದರಿಂದ ಮತ್ತೇನೂ ಪ್ರಯೋಜನವಿಲ್ಲ ಎನ್ನುತ್ತಾರೆ. ಅಂದಹಾಗೇ ಈ ಹಾವು ಭಟ್ಟರು ಹಿಡಿದ ೧೫೧ನೇ ಕಾಳಿಂಗ ಸರ್ಪವಂತೆ.

ನಾನು ಹೊರಡುವ ಮುಂಚೆ ಭಟ್ಟರು, "ಹಾವನ್ನ ಹೊರಗೆ ತೆಗಿತೀನಿ, ನೊಡ್ಕೊಂಡು ಹೋಗಿ" ಎಂದರು. ಇದುವರೆಗೆ ಬರೀ ಜೂನಲ್ಲಿ ಕಾಳಿಂಗ ಸರ್ಪ ನೋಡಿದ್ದರಿಂದ, ಈ ಅವಕಾಶ ಕಳೆದುಕೊಳ್ಳುವ ಮನಸ್ಸಿರಲಿಲ್ಲ. "ಗೂಡಿಂದ ತೆಗಿಬೇಕಾದ್ರೆ ಅಡ್ಡಿಲ್ಲ, ಮತ್ತೆ ಗೂಡಿಗೆ ಹಾಕಬೇಕಾದಾಗ ಮಾತ್ರ ಅದರ ಬಾಲ ಸ್ವಲ್ಪ ಹಿಡಿದುಕೊಳ್ಳಬೇಕಾಗುತ್ತದೆ", ಎಂದಂದು ನನ್ನ ಪ್ರತಿಕ್ರಿಯೆಗೂ ಕಾಯದೇ ಗೂಡಿನ ಬಾಗಿಲು ತೆರೆದು ಹಾವನ್ನು ಹೊರಗೆ ತೆಗೆದೇ ಬಿಟ್ಟರು. ಛಾಯಾಗ್ರಹಣದ ನಿಯಮ ಎಲ್ಲಾ ಮರೆತು ನನಗೆ ಹೇಗೆ ತೆಗೆಯೋಕೆ ಬರುತ್ತೋ ಅಂತೆಯೇ ಕ್ಯಾಮರಾದಿಂದ ಕ್ಲಿಕ್ಕಿಸತೊಡಗಿದೆ.

ಕಾಳಿಂಗಾಭರಣರಾಗಿ ಭಟ್ಟರು
CSC_6348

ಹಾವಿನ ಕ್ಲೋಸ್-ಅಪ್ ತೆಗೆಯೋಕೆ ಪ್ರಯತ್ನಿಸಿದ್ದು
CSC_6353

ಅಷ್ಟರಲ್ಲೇ ಭಟ್ಟರಿಗೆ ಹಾವು ಹಿಡಿಯಲು ಇನ್ನೊಂದು ಕರೆ ಬಂದುದರಿಂದ, ಹಾವನ್ನು ಮರಳಿ ಗೂಡಿಗೆ ಹಾಕಲು ನಿರ್ಧರಿಸಿದರು. ನನ್ನ ಪುಣ್ಯಕ್ಕೆ ಪಕ್ಕದ ಮನೆಯವರು ಬಂದುದರಿಂದ ಅದರ ಬಾಲ ಹಿಡಿಯುವ ಕಷ್ಟ ತಪ್ಪಿತು. ಅಂದ ಹಾಗೇ ಭಟ್ಟರ ದೂರವಾಣಿ ಸಂಖ್ಯೆ: ೯೪೮ ೦೦೭ ೫೨೦೨.

CSC_6352

Saturday, July 10, 2010

ಇತ್ತೀಚೆಗೆ ಕಂಡ ಕೆಲವು ಮುಖಗಳು

ಹೂವಿನ ರಂಗಮ್ಮ

HUVINA RANGAMMA

ಕಂಬಳಿ ಕಲ್ಲಣ್ಣ

KAMBLI SELLER

ನ್ಯಾಯಬೆಲೆ ಅಂಗಡಿ ನಾರ್ಣಪ್ಪ

NYAYA BELE ANGADI

ಆಟದ ಪುಟ್ಟಮ್ಮ

ಆಟದ ಸಮಯ

ಕಳಸದ ಕಾಶಮ್ಮ

ಕಾಶಮ್ಮ

ತಮಿಳುನಾಡಿನ ತಂಗಮ್ಮ

FLOWER SELLER

ಮೀಸೆಯ ಸುಬ್ಬಣ್ಣ

MUSTACHE

ರಾಜಸ್ಥಾನದ ರಾಜಪ್ಪ

ಹೊಸ ಚಿಗುರು ಹಳೆ ಬೇರು

Tuesday, July 06, 2010

ಭಾರತ ಬಂದ್

ನಿನ್ನೆ ಬೆಳಿಗ್ಗೆ ಎದ್ದಕೂಡ್ಲೇ ಮನೆಯಿಂದ ಫೋನು, "ಹೊರಗೆ ಹೋಯ್ಬೇಡ ಅಕ್ಕಾ, ಎಂಥಾತ್ತೋ ಏನೋ.. ಮನೇಲೆ ಆಯ್ಕೋ" ಅಂತ. ಸರಿ ಅಂತ ತಲೆ ಆಡ್ಸಿ ತಿಂಡಿ ತಿಂದು ಕೂತಿದ್ದೆ. ಬರೀ ಬಂದಲ್ಲ ಗಲಾಟೆ ಎಲ್ಲಾಗುತ್ತೆ, ಇಲ್ಲೇ ಮನೆ ಹತ್ರ ಒಂದು ರೌಂಡ್ ನೋಡ್ಕೊಂಡು ಬರೋಣ ಅಂತ ಹೊರಟೆ.

ಹೊರಗಡೆ ಬಂದ್ರೆ ಅಂಗಡಿಯೆಲ್ಲಾ ಬಾಗಿಲು, ಅದರ ಮುಂದೆ ಹರಟೆ ಹೊಡೀತಾ ಕೂತೀರೋ ಜನಗಳು.

From India Bandh 2010


ಕರ್ನಾಟಕ ಸರ್ಕಾರದ ಉದ್ಯಮ ಸಾರ್, ಬಾಗ್ಲು ಹಾಕ್ಲೇ ಬೇಕು

From India Bandh 2010

ಖಾಲಿ ಖಾಲಿ ರೋಡು, ಅಲ್ಲಲ್ಲಿ ಒಂದೆರೆಡು ಸ್ವಂತ ವಾಹನಗಳು

From India Bandh 2010

ಹೋಟೆಲ್ ಮುಚ್ಚಿದ್ರೂ ಅರ್ಧ ಬಾಗಿಲು ತೆರೆದ ಬೇಕರಿಗಳು

From India Bandh 2010

ಕೇನ್-ಓ-ಲಾ ಇಲ್ಲದಿದ್ರೂ ರಸ್ತೆ ಬದಿಯ ಕಬ್ಬಿನಹಾಲಿನ ಅಂಗಡಿ

From India Bandh 2010

ತರಕಾರಿ ಅಂಗಡಿ ಮುಚ್ಚಿದ್ರೂ ಸೈಕಲ್-ತಳ್ಳೋ ತರಕಾರಿ ಗಾಡಿ

From India Bandh 2010

ಸಂಪೂರ್ಣ ತೆರೆದಿದ್ದ ಮೆಡಿಕಲ್ ಶಾಪು, ಹಣ್ಣಿನಂಗಡಿ, ATM, ಹಾಲಿನಂಗಡಿ

From India Bandh 2010

From India Bandh 2010

From India Bandh 2010

From India Bandh 2010

ಆಟದ ಮೈದಾನದ ಇಂಚಿಂಚೂ ಬಿಡದೆ ಸದುಪಯೋಗಪಡಿಸಿಕೊಂಡ ಹುಡುಗ್ರು

From India Bandh 2010

ಖಾಲಿ ರಸ್ತೇಲಿ ಟೈರಾಟಾಡೋ ಹುಡುಗ್ರು

From India Bandh 2010

ಖಾಲಿ ರೋಡು, ಜಾಲಿ ರೈಡು

From India Bandh 2010

ಹೆಚ್ಚಿನ ದುಡ್ಡು ಕಲೆಕ್ಟ್ ಆಗದೇ ಬಂದ್ಗೆ ಶಾಪ ಹಾಕ್ತಾ ಇರೋ ಭಿಕ್ಷುಕಿ

From India Bandh 2010

ತಮ್ಮ ಶಟ್ಟರನ್ನೇ ರೋಲ್ ಮಾಡಿಕೊಂಡ್ ರೋಲಿಂಗ್ ಶಟ್ಟರ್ಸ್ ಅಂಗಡಿ

From India Bandh 2010

ಕೂಲಿ ಕೆಲ್ಸ ಮುಗ್ಸಿ ಬೇಗ ಮನೆಗೆ ಬರ್ತಾ ಇರೋ ಜನರು

From India Bandh 2010

ಮುಚ್ಚಿದ ಸಾಫ್ಟ್-ವೇರ್ ಕಂಪೆನಿ

From India Bandh 2010

ಗಿರಾಕಿ ಇಲ್ಲದ ದೇವಸ್ಥಾನ

From India Bandh 2010

ಮುಚ್ಚಿದ ಕಾಲೇಜು

From India Bandh 2010

ಸಂಜೆ ಮೇಲೆ ಬೇಕಾಗಬಹುದು ಅಂತ ಹೂವು ಕಟ್ತಾ ಇರೋರು

From India Bandh 2010

ಸೆಕ್ಯುರಿಟಿಗೆ ಅಂತ ಪೋಲೀಸರು

From India Bandh 2010

ಬಂದಿನ ಸುತ್ತ ಖ್ಯಾತರಾದವರು

From India Bandh 2010

ತಿಳಿಯದಂತೆ ಹೆಚ್ಚು ಕಡಿಮೆ ೮-೧೦ ಕಿ.ಮೀ ಕಾಲ್ನಡಿಗೇಲೇ ಪೂರೈಸಿದ್ದೆ. ಹಿಂದಿನ ಎರಡು ದಿನ ಜ್ವರ ಅಂತ ಮನೆಲಿ ಬಿದ್ಕೊಂಡಿದ್ರೂ ನನ್ನ ಅಮೋಘ ಕಾಲಿನ ಶಕ್ತಿಯ ಬಗ್ಗೆ ಅತೀವ ಹೆಮ್ಮೆ ಆಯ್ತು. ರಾತ್ರಿ ಮಲ್ಗಿದ್ರೆ ಸವಿ ಕನಸು; ವಾಹನ ದಟ್ಟಣಿಯಿಲ್ಲದ ಸ್ವಚ್ಛ ಸುಂದರ ಬೆಂಗಳೂರು, ನನ್ನಂತೆ ಬರೀ ಕಾಲ್ನೆಡಿಗೆಯಲ್ಲಿ ಸುತ್ತುತ್ತಾ ಇರೋ ಬೆಂಗಳೂರಿಗರು.. ಆಹಾ..

ವರ್ಗ

Amomum (1) ficus krishnae (1) Gangtok (1) Nikon 40mm f/2.8 Micro (10) paris (1) Sikkim (8) snow (1) Yuksom (5) ಅನಿಮೇಟೆಡ್ (1) ಅನುಭವ ಕಥನ (7) ಅಮೂರ್ತ (1) ಆಟೋಟ (2) ಆಫಿಡ್ (1) ಇರುವೆ (6) ಉಡುಪಿ (4) ಉಯ್ಯಾಲೆ (1) ಉರಗ (3) ಏರಿ (1) ಒಂಟಿ ಚಕ್ರದ ಸೈಕಲ್ (1) ಒಯ್ಯುಗೆ (6) ಕದ (1) ಕಂದು ಏಲಕ್ಕಿ (1) ಕನ್ನಡ (2) ಕಪ್ಪು ಏಲಕ್ಕಿ (1) ಕಪ್ಪು-ಬಿಳುಪು (5) ಕಂಬಳ (1) ಕಂಬಳಿಹುಳು (2) ಕವನ (15) ಕವಿ ಶೈಲ (1) ಕಸರತ್ತು (1) ಕಳಸ (1) ಕಳ್ಳತನ (1) ಕಾವೇರಿ (1) ಕಾಳಾವಾರ ಬೆಟ್ಟ (1) ಕಾಳಿಂಗ ಸರ್ಪ (1) ಕಿಸ್ಕಾರ (1) ಕೀಟ ಪ್ರಪಂಚ (35) ಕುಂದಾಪುರ (1) ಕುವೆಂಪು (1) ಕೃಷಿ (9) ಕೃಷಿ ಮೇಳ (4) ಕೆರೆ (2) ಕೆಲಸ (2) ಕೆಸು (2) ಕೆಳದಿ (1) ಕೊಕ್ಕರೆ ಬೆಳ್ಳೂರು (1) ಕೋಟ (8) ಖಗೋಳ ಗಡಿಯಾರ (1) ಗವಿ (1) ಗುಡಿ ಕೈಗಾರಿಕೆ (1) ಗುಡ್ಡ (2) ಗುಹೆ (1) ಚಾರಣ (3) ಚಿಕ್ಕಮಗಳೂರು (1) ಚಿಟ್ಟಾಣಿ (1) ಚಿಟ್ಟೆಗಳು (3) ಚಿತ್ರ ಪುಟ (102) ಚಿತ್ರದುರ್ಗ (1) ಚಿತ್ರಪುಟ (1) ಚೌಕಾಶಿ (1) ಛಾಯಾಗ್ರಹಣ (24) ಜನ ಜೀವನ (52) ಜನಪದ (2) ಜರ್ಮನಿ (1) ಜಲಪಾತ (1) ಜೆಕ್ ಗಣರಾಜ್ಯ (4) ಜೇಡ (3) ಜೇನು ಸಾಕಣೆ (1) ಜೋಡಿ (1) ತರಕಾರಿ (2) ತುಮಕೂರು (2) ತೆಂಗಿನ ಕಾಯಿ (1) ತೆಂಗಿನ ತೋಟ (1) ದಸರ (4) ದೇವವೃಂದ (1) ದೇವಸ್ಠಾನ (1) ದೇವಸ್ಥಾನ (1) ದೊಡ್ಡ ಏಲಕ್ಕಿ (1) ಧಾರವಾಡ (1) ನಗರ (1) ನಂಬಿಕೆ (1) ನಾಟಕ (1) ನೀರ್ಹಕ್ಕಿ (6) ಪತಂಗ (1) ಪತ್ರಿಕೋದ್ಯಮ (1) ಪಶ್ಚಿಮ ಘಟ್ಟ (2) ಪಾರ್ಕ್ (1) ಪಾಳು (1) ಪುಸ್ತಕ ಬಿಡುಗಡೆ (1) ಪೋರ್ಟ್ರೈಟ್ (8) ಪ್ಯಾನಿಂಗ್ (1) ಪ್ರಬಂಧ (2) ಪ್ರವಾಸ ಕಥನ (3) ಪ್ರಾಹ (1) ಪ್ಲಾಸ್ಟಿಕ್ (1) ಬಕೇಟ್ (1) ಬಂಡಿ (1) ಬಣ್ಣ (1) ಬನವಾಸಿ (1) ಬಳ್ಳಿ (1) ಬಾಗಿಲು (1) ಬಾರ್ಕೂರು (1) ಬೀಗ (1) ಬೆಂಕಿ (1) ಬೆಂಗಳೂರಿನ ಚಿತ್ರಗಳು (5) ಬೆಂಗಳೂರು (27) ಬೆಳಕು (1) ಬೇಸಾಯ (1) ಬ್ರಹ್ಮಾವರ (1) ಭಾರತ ಬಂದ್ (1) ಭಿಕ್ಷುಕರು (1) ಮಕ್ಕಳು (10) ಮಗು (1) ಮಂಜು (2) ಮಮ್ಮಮ್ (3) ಮಲೆನಾಡು (1) ಮಳೆ (1) ಮಳೆಗಾಲ (2) ಮಾರಿಕಣಿವೆ (1) ಮುಸ್ಸಂಜೆ (1) ಮೇಲುಕೋಟೆ (2) ಮೇವು (1) ಮೈಸೂರು (7) ಮೋಡ (2) ಮ್ಯಾಕ್ರೋ (12) ಯಕ್ಷಗಾನ (2) ರಸ್ತೆ (5) ರಾತ್ರಿ ನೋಟ (3) ರೈಮ್ (1) ರೈಲು (2) ರೈಲುಹಳಿ (1) ಲಲಿತ ಪ್ರಬಂಧ (6) ಲೇಪಾಕ್ಷಿ (1) ವಂಡಾರ್ (1) ವಾಸ್ತು ಶಿಲ್ಪ (1) ವಾಹನ (2) ವಿವೇಕ (1) ವಿಸ್ತರಣೆ (1) ವ್ಯಕ್ತಿ ವಿಷಯ (3) ವ್ಯಾಪಾರ (1) ಶಾಲೆ (1) ಶಿರಸಿ (1) ಶಿರಸಿ. ಸೈಕಲ್ (1) ಶಿಲ್ಪ (1) ಶಿವನಸಮುದ್ರ (1) ಶುಭಾಶಯ (2) ಸಣ್ಣ ಕಥೆ (4) ಸಂತೆ (2) ಸಮುದ್ರ (2) ಸಮುದ್ರ ಜೀವಿ (2) ಸಸ್ಯ ಪ್ರಪಂಚ (12) ಸಾಕು ಪ್ರಾಣಿ (4) ಸಾಗಾಟ (1) ಸಾಸ್ತಾನ (1) ಸಿಕ್ಕಿಂ (3) ಸೈಕಲ್ (5) ಸೈಕಲ್ ಯಾತ್ರೆ (1) ಸ್ಕಂದಗಿರಿ (1) ಸ್ತೂಪ (1) ಸ್ಪರ್ಧೆ (1) ಹಕ್ಕಿಗಳು (21) ಹರಿಹರ (1) ಹಳ್ಳಿ (3) ಹಿಮ (1) ಹೂಗಳು (5) ಹೂವು (1) ಹೊಸ ವರ್ಷ (1) ಹೋಂ ಸ್ಟೇ (1) ಹೌರಾ (1)