Sunday, November 29, 2009

ಎಕ್ಸ್-ಪೋಶರ್ ಕಾಂಪನ್ಸೇಶನ್

ಕೆಲವು ಕಡೆ ಮೀಟರಿಂಗ್ ಬೆಳಕನ್ನು ತಪ್ಪಾಗಿ ಅಳೆಯುವುದರಿಂದ ಇಂತಹ ಸಂದರ್ಭದಲ್ಲಿ ಎಕ್ಸ್-ಪೋಶರ್ ಕಾಂಪನ್ಸೇಶನ್ ಬಳಸಿ ನಮಗೆ ಬೇಕಾದಷ್ಟೇ ಬೆಳಕಿನ ಪ್ರಮಾಣವನ್ನು ಪಡೆಯಬಹುದು. ಅದೂ ಅಲ್ಲದೇ ೦.೩, ೦.೪ ರಷ್ಟು ಎಕ್ಸ್ಪೋಶರ್ ಬದಲಾವಣೆ ಮಾಡುತ್ತಾ ಎಕ್ಸ್-ಪೋಶರ್ ಕಾಂಪನ್ಸೇಶನ್ ನೀವು ತೆಗೆಯ ಹೊರಟ ಚಿತ್ರದ ಮೇಲೆ ಇನ್ನೂ ಹೆಚ್ಚಿನ ನಿಯಂತ್ರಣವನ್ನು ಒದಗಿಸುತ್ತದೆ. ಇದು ಕ್ಯಾಮರಾದಲ್ಲಿ [EV +/-] ಎಂಬ ಚಿನ್ಹೆಯಿಂದ ಗುರುತಿಸಲ್ಪಡುತ್ತದೆ. ಬೆಳಕಿನ ಅಸಮಾನ ಹಂಚಿಕೆಯಿದ್ದಲ್ಲಿ, ಓವರ್ ಎಕ್ಸ್ಪೋಸ್ ಅಥವಾ ಅಂಡರ್ ಎಕ್ಸ್ಪೋಸಿನಿಂದ ಚಿತ್ರವನ್ನು ವಿಶೇಷವಾಗಿ ಮೂಡಿಸುವ ಸಂದರ್ಭದಲ್ಲಿ ಕೂಡ ಇದನ್ನು ಬಳಸಬಹುದು.

ಎಕ್ಸ್-ಪೋಶರ್ ಕಾಂಪನ್ಸೇಶನ್ ಬಳಸಬಹುದಾದ ಪ್ರಮೇಯವನ್ನು ಈ ಕೆಳಗಿನ ಚಿತ್ರಗಳಿಂದ ತಿಳಿಯೋಣ. ಇದು ಮನೆಯೊಳಗೆ ತೆಗೆದ ಚಿತ್ರವಾದರೂ ಬೆಳಕಿನ ಮೂಲ ಕೋಣೆಯ ತುಂಬಾ ಹರಡದೆ ನೆಲಬೆಳಕಿನಂತೆ (ಸ್ಪಾಟ್ ಲೈಟ್) ಒಂದು ಕಡೆ ಮಾತ್ರ ಬಿದ್ದ ವೆಂಟಿಲೇಶನ್ನಿನಿಂದ ಹೊರಟ ಬೆಳಗಿನ ಹೊಂಬೆಳಕು.

DSC_1925

ಈ ಚಿತ್ರದ ಸೆಟ್ಟಿಂಗ್ ಕೆಳಗಿನಂತಿದೆ:

ಕ್ಯಾಮೆರಾ: ನಿಕಾನ್ ಡಿ ೯೦
ಲೆನ್ಸ್: ೧೮-೧೦೫ ಎಂಎಂ.
ಶೂಟಿಂಗ್ ಮೋಡ್: ಅಪಾರ್ಚರ್ ಪ್ರಿಯಾರಿಟಿ
ಮೀಟರಿಂಗ್: ಪ್ಯಾಟರ್ನ್
ಅಪಾರ್ಚರ್: f೬.೩
ಐ.ಎಸ್.ಓ: ೪೦೦
ಶಟ್ಟರ್ ಸ್ಫೀಡ್: ೧/೪೦೦ ಸೆ.
ಫೋಕಲ್ ಲೆಂತ್: ೧೮ ಎಂಎಂ.
ಎಕ್ಸ್-ಪೋಶರ್ ಕಾಂಪನ್ಸೇಶನ್: -೧.೭

ಮೊದಲೇ ತಿಳಿಸಿದಂತೆ ಇಲ್ಲಿ ಬೆಳಕು ಅಸಮಾನವಾಗಿ ಹಂಚಿಕೆಯಾದ್ದರಿಂದ ಎಕ್ಸ್-ಪೋಶರ್ ಕಾಂಪನ್ಸೇಶನ್ ಬಳಸಿ -೧.೭ರಷ್ಟು ಅಂಡರ್ ಎಕ್ಸ್ಪೋಸ್ ಮಾಡಬೇಕಾಗಿ ಬಂತು. ಆದರೂ ಚಿತ್ರದಲ್ಲಿ ಕಾಣಿಸಿದಂತೆ ವಿಷಯದ ಮೇಲೆ ಬೆಳಕಿನ ಪ್ರಮಾಣ ಜಾಸ್ತಿಯಾದದ್ದು ಗಮನಿಸಬಹುದು.

ಮೇಲಿನ ಸೆಟ್ಟಿಂಗಿನಲ್ಲಿಯೇ ಎಕ್ಸ್-ಪೋಶರ್ ಕಾಂಪನ್ಸೇಶನ್ -೨.೩ ಗೆ ಬದಲಾಯಿಸಿದಾಗ (ಶಟ್ಟರ್ ಸ್ಫೀಡ್ - ೧/೧೨೫೦ಸೆ.) ದೊರೆತ ಕೆಳಗಿನ ಚಿತ್ರದಲ್ಲಿ ವಿಷಯದ ಮೇಲೆ ಬಿದ್ದ ಬೆಳಕು ಸರಿಯಾಗಿದ್ದೂ ಅಲ್ಲದೇ, ಹಿನ್ನೆಲೆ ಕತ್ತಲೆಯಲ್ಲಿ ಲೀನವಾಗಿದ್ದನ್ನು ಗಮನಿಸಬಹುದು. ಇಲ್ಲಿ ಶಟ್ಟರ್ ಸ್ಪೀಡ್ ಜಾಸ್ತಿಯಾಗಿ ಕ್ಯಾಮರಾದ ಸೆನ್ಸರ್ ಕಡಿಮೆ ಬೆಳಕು ಪಡೆಯುತ್ತಿದೆ.

DSC_1926


ಈ ಕೆಳಗಿನ ಪೋರ್ಟ್ರೈಟಿನಲ್ಲಿ ಸಂಜೆಯ ಹೊಂಬಿಸಿಲು ಹಿಂಬದಿಯಿಂದ (ಬ್ಯಾಕ್ಲಿಟ್) ಬೀಳುತ್ತಿದ್ದುದರಿಂದ ಆಕೆಯ ಮುಖದ ಮೇಲೆ ನೆರಳು ಬಿದ್ದು ಅಂಡರ್ ಎಕ್ಸ್ಪೋಸಾಗುವ ಸಂಭವ ಇರುವುದರಿಂದ, ಎಕ್ಸ್-ಪೋಶರ್ ಕಾಂಪನ್ಸೇಶನ್ +೦.೭ಗೆ ಬದಲಾಯಿಸಿ ಚಿತ್ರವನ್ನು ಓವರ್ ಎಕ್ಸ್ಪೋಸ್ ಮಾಡಿ, ಆಕೆಯ ಮುಖ ಸರಿಯಾಗಿ ಎಕ್ಸ್ಪೋಸಾಗುವಂತೆ ಮಾಡಲಾಗಿದೆ.

CSC_2679

ಈ ಚಿತ್ರದ ಸೆಟ್ಟಿಂಗ್ ಕೆಳಗಿನಂತಿದೆ:

ಕ್ಯಾಮೆರಾ: ನಿಕಾನ್ ಡಿ ೯೦
ಲೆನ್ಸ್: ೧೮-೧೦೫ ಎಂಎಂ.
ಶೂಟಿಂಗ್ ಮೋಡ್: ಅಪಾರ್ಚರ್ ಪ್ರಿಯಾರಿಟಿ
ಮೀಟರಿಂಗ್: ಪ್ಯಾಟರ್ನ್
ಅಪಾರ್ಚರ್: f೫.೬
ಐ.ಎಸ್.ಓ: ೨೦೦
ಶಟ್ಟರ್ ಸ್ಫೀಡ್: ೧/೧೨೫ ಸೆ.
ಫೋಕಲ್ ಲೆಂತ್: ೧೦೫ ಎಂಎಂ.
ಎಕ್ಸ್-ಪೋಶರ್ ಕಾಂಪನ್ಸೇಶನ್: +೦.೭

ಈ ಮೇಲಿನ ಚಿತ್ರಗಳನ್ನು ಸ್ಪಾಟ್ ಅಥವಾ ಸೆಂಟರ್ ವೈಟೆಡ್ ಮೀಟರಿಂಗ್ ಮೋಡ್ ಬಳಸಿ ತೆಗೆಯಬಹುದಾಗಿತ್ತಾದರೂ, ಮೊದಲೇ ತಿಳಿಸಿದಂತೆ ಎಕ್ಸ್-ಪೋಶರ್ ಕಾಂಪನ್ಸೇಶನ್- ಎಕ್ಸ್ಪೋಶರ್ ಮೇಲೆ ಇನ್ನೂ ಹೆಚ್ಚಿನ ನಿಯಂತ್ರಣ ಒದಗಿಸುವುದಲ್ಲದೇ, ಪ್ರತೀ ಚಿತ್ರಕ್ಕೂ ಮೀಟರಿಂಗ್ ಮೋಡ್ ಬದಲಾಯಿಸುವ ತೊಂದರೆಯಿಂದ ತಪ್ಪಿಸಿಕೊಳ್ಳಲು ಅನುಕೂಲ. ಇನ್ನು ಕೆಲವು ವಿಶೇಷ ಸಂದರ್ಭಗಳಲ್ಲಿ ಕ್ಯಾಮರಾ ಮೀಟರಿಂಗ್ ತಪ್ಪಾಗಿ ತೋರಿಸುವ ಸಂದರ್ಭದಲ್ಲಿ ಇದು ಹೆಚ್ಚು ಉಪಯುಕ್ತ. ಉದಾಹರಣೆಗೆ ಹಿಮದ ಚಿತ್ರ ತೆಗೆಯುವಾಗ ಸಾಮಾನ್ಯವಾಗಿ ಕ್ಯಾಮರಾ ಚಿತ್ರವನ್ನು ಅಂಡರ್ ಎಕ್ಸ್ಪೋಸ್ ಮಾಡಿ ಹಿಮದ ಬಣ್ಣ ಮಸುಕಾಗಿರುವಂತೆ ಕಾಣುವುದನ್ನು ಗಮನಿಸಿರಬಹುದು. ಬಿಳಿ ಬಣ್ಣದ ಹಿಮ ಹೆಚ್ಚಿನ ಬೆಳಕನ್ನು ಪ್ರತಿಫಲಿಸುವುದನ್ನು ಮೀಟರಿಂಗ್ ತಪ್ಪಾಗಿ ಗ್ರಹಿಸಿ ಅದನ್ನು ಮಸುಕಾಗಿ ಚಿತ್ರಿಸುತ್ತದೆ. ಇಲ್ಲಿ ಎಕ್ಸ್-ಪೋಶರ್ ಕಾಂಪನ್ಸೇಶನ್ ಉಪಯೋಗಿಸಿ ಓವರ್-ಎಕ್ಸ್ಪೋಸ್ ಮಾಡುವುದರಿಂದ ಬಿಳುಪಾದ ಹಿಮದ ಚಿತ್ರ ಪಡೆಯಬಹುದು. ಇನ್ನು ಸಿಲ್ಹೌಟ್ ತೆಗೆಯುವ ಸಂದರ್ಭದಲ್ಲಿ ಕೂಡ ಎಕ್ಸ್-ಪೋಶರ್ ಕಾಂಪನ್ಸೇಶನ್ ಬಳಸಿ ಮುನ್ನೆಲೆಯನ್ನು ಅಂಡರ್ ಎಕ್ಸ್ಪೋಸ್ ಮಾಡಬಹುದು.

8 comments:

  1. Hi Pala,

    Nice photos...
    Thank you for the useful information.

    ReplyDelete
  2. ಪಾಲ ಅವರೆ, ಉದಾಹರಣೆಗಳ ಮೂಲಕ ಉತ್ತಮ ಮಾಹಿತಿಯನ್ನು ನೀಡಿದ್ದೀರಿ. ಎಲ್ಲ ಚಿತ್ರಗಳೂ ಚೆನ್ನಾಗಿವೆ.

    ReplyDelete
  3. The best thing about your blog is that you explain technical details in Kannada. I like your posts. I wish a lot of people make use of your posts.

    ReplyDelete
  4. ಛಾಯಾಗ್ರಹಣ ಬಗ್ಗೆ ನಿಮ್ಮ ಎಲ್ಲ ಲೇಖನಗಳು ಛಾಯಾಗ್ರಹಣದ ಬಗ್ಗೆ ಉತ್ತಮ ಮಾರ್ಗದರ್ಶನವನ್ನು ನೀಡುತ್ತವೆ. ಹಾಗೆಯೇ ನಿಮ್ಮ ಎಲ್ಲ ಛಾಯಾ ಚಿತ್ರಗಳನ್ನು ನೋಡಿದಾಗ, ನಿಮ್ಮ ಪ್ರಯೋಗಗಗಳ ಬಗ್ಗೆ ಮೆಚ್ಚುಗೆ ತಾನಾಗಿಯೇ ಮೂಡುತ್ತದೆ. 'ಮನೆಯ ಹಾದಿ ತುಳಿಯುತ್ತ' ಶೀರ್ಷಿಕೆಯಲ್ಲಿದ್ದಂಥ ಉತ್ತಮ ಫೋಟೋಗಳನ್ನು ಶೂಟ್ ಮಾಡಲು ಬೇಕಾದ ಏಕಾಗ್ರತೆಯನ್ನು ನೆನೆಸಿಕೊಂಡರೆ ರೋಮಾಂಚನವಾಗುತ್ತದೆ.

    ನಿಮ್ಮಿಂದ ಒಂದು ಸಲಹೆ ಬೇಕಾಗಿದೆ- Nikon 90 OR Canon EOS 500D(Rebel T1i), ಇವೆರಡರಲ್ಲಿ ಯಾವುದು ಉತ್ತಮ / Nikon OR Canon ಈ ಎರಡು ಬ್ರಾಂಡ್ ಗಳಲ್ಲಿ ಯಾವುದು ಯೋಗ್ಯ - ತಿಳಿಸುವಿರಾ?.

    ReplyDelete
  5. ನಾರಾಯಣ ಭಟ್,
    ಪ್ರತಿಕ್ರಿಯೆಗೆ ಧನ್ಯವಾದ. ಕಳೆದ ೬ ತಿಂಗಳಿನಿಂದ ನಿಕಾನ್ ಡಿ೯೦ ಬಳಸ್ತಾ ಇದೀನಿ ಮತ್ತದು ನನಗೆ ಇಷ್ಟವಾಗಿದೆ ಕೂಡ. ಕ್ಯಾನಾನ್, ನಿಕಾನ್ ಎರಡೂ ಚೆನ್ನಾಗಿವೆ. ಲೋ ಎಂಡ್ ಎಸ್.ಎಲ್.ಆರ್.ಗಳಲ್ಲಿ ನನಗೆ ನಿಕಾನ್ ಇಷ್ಟ ಕ್ಯಾನಾನಿಗಿಂತ.. ಕಾರಣ ಬಣ್ಣಗಳು ಸ್ವಾಭಾವಿಕವಾಗಿರುತ್ತದೆ. ನಿಮ್ಮ ಪ್ರಯೋಗಗಳಿಗೆ ಆಲ್ ದಿ ಬೆಸ್ಟ್.

    ReplyDelete
  6. ಪಾಲ ಅವರೆ,
    ನಿಮ್ಮ ಸಲಹೆಗೆ ಕೃತಜ್ಞ. ಕ್ಯಾಮರಾಗಳನ್ನು ಕೊಂಡುಕೊಳ್ಳಬೇಕಾದಾಗ ಗಮನಿಸಬೇಕಾದ ಅಂಶಗಳಬಗ್ಗೆ ನಿಮ್ಮಿಂದ ಒಂದು ಲೇಖನ ಬಂದಿದ್ದರೆ ನನ್ನಂತಹವರಿಗೆ ಅನುಕೂಲವಾಗುತ್ತಿತ್ತು.

    ReplyDelete

ವರ್ಗ

Amomum (1) ficus krishnae (1) Gangtok (1) Nikon 40mm f/2.8 Micro (10) paris (1) Sikkim (8) snow (1) Yuksom (5) ಅನಿಮೇಟೆಡ್ (1) ಅನುಭವ ಕಥನ (7) ಅಮೂರ್ತ (1) ಆಟೋಟ (2) ಆಫಿಡ್ (1) ಇರುವೆ (6) ಉಡುಪಿ (4) ಉಯ್ಯಾಲೆ (1) ಉರಗ (3) ಏರಿ (1) ಒಂಟಿ ಚಕ್ರದ ಸೈಕಲ್ (1) ಒಯ್ಯುಗೆ (6) ಕದ (1) ಕಂದು ಏಲಕ್ಕಿ (1) ಕನ್ನಡ (2) ಕಪ್ಪು ಏಲಕ್ಕಿ (1) ಕಪ್ಪು-ಬಿಳುಪು (5) ಕಂಬಳ (1) ಕಂಬಳಿಹುಳು (2) ಕವನ (15) ಕವಿ ಶೈಲ (1) ಕಸರತ್ತು (1) ಕಳಸ (1) ಕಳ್ಳತನ (1) ಕಾವೇರಿ (1) ಕಾಳಾವಾರ ಬೆಟ್ಟ (1) ಕಾಳಿಂಗ ಸರ್ಪ (1) ಕಿಸ್ಕಾರ (1) ಕೀಟ ಪ್ರಪಂಚ (35) ಕುಂದಾಪುರ (1) ಕುವೆಂಪು (1) ಕೃಷಿ (9) ಕೃಷಿ ಮೇಳ (4) ಕೆರೆ (2) ಕೆಲಸ (2) ಕೆಸು (2) ಕೆಳದಿ (1) ಕೊಕ್ಕರೆ ಬೆಳ್ಳೂರು (1) ಕೋಟ (8) ಖಗೋಳ ಗಡಿಯಾರ (1) ಗವಿ (1) ಗುಡಿ ಕೈಗಾರಿಕೆ (1) ಗುಡ್ಡ (2) ಗುಹೆ (1) ಚಾರಣ (3) ಚಿಕ್ಕಮಗಳೂರು (1) ಚಿಟ್ಟಾಣಿ (1) ಚಿಟ್ಟೆಗಳು (3) ಚಿತ್ರ ಪುಟ (102) ಚಿತ್ರದುರ್ಗ (1) ಚಿತ್ರಪುಟ (1) ಚೌಕಾಶಿ (1) ಛಾಯಾಗ್ರಹಣ (24) ಜನ ಜೀವನ (52) ಜನಪದ (2) ಜರ್ಮನಿ (1) ಜಲಪಾತ (1) ಜೆಕ್ ಗಣರಾಜ್ಯ (4) ಜೇಡ (3) ಜೇನು ಸಾಕಣೆ (1) ಜೋಡಿ (1) ತರಕಾರಿ (2) ತುಮಕೂರು (2) ತೆಂಗಿನ ಕಾಯಿ (1) ತೆಂಗಿನ ತೋಟ (1) ದಸರ (4) ದೇವವೃಂದ (1) ದೇವಸ್ಠಾನ (1) ದೇವಸ್ಥಾನ (1) ದೊಡ್ಡ ಏಲಕ್ಕಿ (1) ಧಾರವಾಡ (1) ನಗರ (1) ನಂಬಿಕೆ (1) ನಾಟಕ (1) ನೀರ್ಹಕ್ಕಿ (6) ಪತಂಗ (1) ಪತ್ರಿಕೋದ್ಯಮ (1) ಪಶ್ಚಿಮ ಘಟ್ಟ (2) ಪಾರ್ಕ್ (1) ಪಾಳು (1) ಪುಸ್ತಕ ಬಿಡುಗಡೆ (1) ಪೋರ್ಟ್ರೈಟ್ (8) ಪ್ಯಾನಿಂಗ್ (1) ಪ್ರಬಂಧ (2) ಪ್ರವಾಸ ಕಥನ (3) ಪ್ರಾಹ (1) ಪ್ಲಾಸ್ಟಿಕ್ (1) ಬಕೇಟ್ (1) ಬಂಡಿ (1) ಬಣ್ಣ (1) ಬನವಾಸಿ (1) ಬಳ್ಳಿ (1) ಬಾಗಿಲು (1) ಬಾರ್ಕೂರು (1) ಬೀಗ (1) ಬೆಂಕಿ (1) ಬೆಂಗಳೂರಿನ ಚಿತ್ರಗಳು (5) ಬೆಂಗಳೂರು (27) ಬೆಳಕು (1) ಬೇಸಾಯ (1) ಬ್ರಹ್ಮಾವರ (1) ಭಾರತ ಬಂದ್ (1) ಭಿಕ್ಷುಕರು (1) ಮಕ್ಕಳು (10) ಮಗು (1) ಮಂಜು (2) ಮಮ್ಮಮ್ (3) ಮಲೆನಾಡು (1) ಮಳೆ (1) ಮಳೆಗಾಲ (2) ಮಾರಿಕಣಿವೆ (1) ಮುಸ್ಸಂಜೆ (1) ಮೇಲುಕೋಟೆ (2) ಮೇವು (1) ಮೈಸೂರು (7) ಮೋಡ (2) ಮ್ಯಾಕ್ರೋ (12) ಯಕ್ಷಗಾನ (2) ರಸ್ತೆ (5) ರಾತ್ರಿ ನೋಟ (3) ರೈಮ್ (1) ರೈಲು (2) ರೈಲುಹಳಿ (1) ಲಲಿತ ಪ್ರಬಂಧ (6) ಲೇಪಾಕ್ಷಿ (1) ವಂಡಾರ್ (1) ವಾಸ್ತು ಶಿಲ್ಪ (1) ವಾಹನ (2) ವಿವೇಕ (1) ವಿಸ್ತರಣೆ (1) ವ್ಯಕ್ತಿ ವಿಷಯ (3) ವ್ಯಾಪಾರ (1) ಶಾಲೆ (1) ಶಿರಸಿ (1) ಶಿರಸಿ. ಸೈಕಲ್ (1) ಶಿಲ್ಪ (1) ಶಿವನಸಮುದ್ರ (1) ಶುಭಾಶಯ (2) ಸಣ್ಣ ಕಥೆ (4) ಸಂತೆ (2) ಸಮುದ್ರ (2) ಸಮುದ್ರ ಜೀವಿ (2) ಸಸ್ಯ ಪ್ರಪಂಚ (12) ಸಾಕು ಪ್ರಾಣಿ (4) ಸಾಗಾಟ (1) ಸಾಸ್ತಾನ (1) ಸಿಕ್ಕಿಂ (3) ಸೈಕಲ್ (5) ಸೈಕಲ್ ಯಾತ್ರೆ (1) ಸ್ಕಂದಗಿರಿ (1) ಸ್ತೂಪ (1) ಸ್ಪರ್ಧೆ (1) ಹಕ್ಕಿಗಳು (21) ಹರಿಹರ (1) ಹಳ್ಳಿ (3) ಹಿಮ (1) ಹೂಗಳು (5) ಹೂವು (1) ಹೊಸ ವರ್ಷ (1) ಹೋಂ ಸ್ಟೇ (1) ಹೌರಾ (1)