Thursday, March 31, 2011

ಶಾಲೆಯಲ್ಲಿ ಕೃಷಿ ಪಾಠ


ನಿಮ್ಮ ಮಗ ಇಲ್ಲಿ ಪುಸ್ತಕ ಹೊತ್ರೆ ಸಾಕಾತ್ತಿಲ್ಲ, ಮಣ್ಣೂ ಹೊರ್ಕಾತ್”, 1950ರಲ್ಲಿ ಹೈಸ್ಕೂಲಿನ ಉಪಾಧ್ಯಾಯರು  ತಮ್ಮನ್ನುದ್ದೇಶಿಸಿ ಹೇಳಿದ್ದನ್ನು ನರಸಿಂಹ ಹೊಳ್ಳರು ನೆನಪಿಸಿಕೊಳ್ಳುತ್ತಾರೆ. ಈ ಮಾತನ್ನು ಶಾಲೆಗೆ ಸೇರುವ ಸಂದರ್ಭದಲ್ಲಿ ಇಂದು ಹೇಳಿದ್ದರೆ ಹೆತ್ತವರು ತಮ್ಮ ಮಕ್ಕಳನ್ನು ಸೇರಿಸಲು ಹಿಂದೆ ಮುಂದೆ ನೋಡುತ್ತಾರೇನೋ. ಆದರೆ ಅಂದಿನ ಕಾಲದಲ್ಲಿ, ಅದೂ ಅಲ್ಲದೇ ಉಪಾಧ್ಯಾಯರಾಗಿದ್ದ ಕೆ.ಎಲ್. ಕಾರಂತರು (ಕೋಟ ಲಕ್ಷ್ಮೀನಾರಾಯಣ ಕಾರಂತ) ಹೇಳಿದ್ದರಿಂದ ಮಾತಿಗೆ ಬೆಲೆಯಿತ್ತು.

ನಮ್ದು ವಿವೇಕದಲ್ಲಿ ಮೊದಲ್ನೇ ಬ್ಯಾಚ್. ಭತ್ತದ ನೆಟ್ಟಿ, ಕಳಿ ಕೀಳುದು, ಕೊಯ್ಲು ಎಲ್ಲಾ ಮಾಡ್ತಿತ್, ವೆಂಕಟರಮಣ ಉರಾಳರು ತಮ್ಮ ನೆನಪಿನ ಬುತ್ತಿ ಬಿಚ್ಚಿದರು. ಮಕ್ಳ್ ಬರೀ ಓದುದ್ ಮಾತ್ರ ಅಲ್ಲ, ಮರ ಹತ್ತುದು, ಈಜುದು, ದೋಣಿ ನಡ್ಸುದು, ಬೇಸಾಯ ಮಾಡುದ್ ಎಲ್ಲದೂ ಕಲಿಕ್ಕಿತ್ ಕಾರಂತ್ರಿಗೆ ಎಂದು ತಮ್ಮ ಶಾಲೆಯ ದಿನಗಳನ್ನು ನೆನಪಿಸಿಕೊಳ್ಳುತ್ತಾ ಕಾರಂತರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು.

DSC_1576
ವಿವೇಕ ವಿದ್ಯಾ ಸಂಸ್ಥೆಗಳು

1949ರಲ್ಲಿ ಆರಂಭಗೊಂಡ ಉಡುಪಿ ಜಿಲ್ಲೆಯ, ಕೋಟದ ವಿವೇಕ ಹೈಸ್ಕೂಲ್ ಆರಂಭದಿಂದಲೂ  ಕೃಷಿಯ ಪ್ರಾಥಮಿಕ ಜ್ಞಾನವನ್ನು ವಿದ್ಯಾರ್ಥಿಗಳಿಗೆ ನೀಡುತ್ತಾ ಬಂದಿದೆ. ಸ್ವತಃ ಕೃಷಿಯಲ್ಲಿ ಆಸಕ್ತಿ ಹೊಂದಿದ್ದ ಕೆ.ಎಲ್.ಕಾರಂತರು ಇದರ ಅಡಿಪಾಯ ಹಾಕಿದ್ದರು. ಹಿಂದೆ ಭತ್ತದ ಕೃಷಿಯನ್ನು ವಿದ್ಯಾರ್ಥಿಗಳಿಂದ ಮಾಡಿಸಲಾಗುತ್ತಿತ್ತು. ಮುಂದೆ ವಿದ್ಯಾಸಂಸ್ಥೆ ಬೆಳೆದಂತೆಲ್ಲಾ ಇರುವ ಕೃಷಿ ಭೂಮಿ ಕಟ್ಟಡಗಳ ಪಾಲಾಗಿದ್ದರೂ, ಇಂದು ತರಕಾರಿ ಬೆಳೆಯುವಷ್ಟರ ಮಟ್ಟಿಗೆ ಈ ಪರಂಪರೆಯನ್ನು ಉಳಿಸಿಕೊಂಡಿದೆ.
ಪ್ರತೀ ತರಗತಿಯನ್ನೂ ನಾಲ್ಕು ಗುಂಪುಗಳಾಗಿ ವಿಂಗಡಿಸಿರುತ್ತಾರೆ. ಡಿಸೆಂಬರ್, ಜನವರಿ ತಿಂಗಳಿನಲ್ಲಿ ಹೀಗೆ ಪ್ರತ್ಯೇಕಿಸಿದ ಪ್ರತಿಯೊಂದು ಗುಂಪಿಗೂ ಸ್ವಲ್ಪ (ಸುಮಾರು ೧೫ ರಿಂದ ೨೦ ಬದನೆ ಗಿಡ ಹಿಡಿಯುವಷ್ಟು) ಕೃಷಿ ಭೂಮಿಯ ಹಂಚಿಕೆ. ನಾಟಿ ಬದನೆ ಗಿಡಗಳನ್ನು ಶಾಲೆಯಿಂದಲೇ ಪೂರೈಸಲಾಗುತ್ತದೆ. ಮಣ್ಣನ್ನು ಹದ ಮಾಡಿ, ಗಿಡ ನೆಟ್ಟು ಪೋಷಿಸುವುದು ವಿದ್ಯಾರ್ಥಿಗಳ ಕೆಲಸ. ಉಪಾಧ್ಯಾಯರಾದ ಆದರ್ಶ ಹಂದೆಯವರಿಂದ ಮಕ್ಕಳಿಗೆ ಮಾರ್ಗದರ್ಶನ. ದರಲೆ ಸಂಗ್ರಹಿಸಿ ಸುಡುಮಣ್ಣು ಮಾಡಿ ಗಿಡಗಳಿಗೆ ಹಾಕುವುದು, ನೀರುಣಿಸುವುದು, ಕಳೆಕೀಳುವುದರ ಬಗ್ಗೆ ಸಲಹೆ ನೀಡುತ್ತಾರೆ. ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ಬದನೆ ಗಿಡ ದೊಡ್ಡದಾಗುವ ಮುಂಚೆ ಹರಿವೆ ಬೀಜ ಬಿತ್ತುವುದೂ ಉಂಟು.

DSC_1627
ಸಹಕಾರದೊಂದಿದೆ ನೀರೆತ್ತುತ್ತಿರುವುದು


DSC_1638
ಬದನೆ ಏರಿಗೆ ನೀರುಣಿಸುವುದು 

ಬೆಳೆದ ಬೆಳೆಯನ್ನು ಹರಾಜಿನ ಮೂಲಕ ಶಾಲೆಯಲ್ಲಿಯೇ ಮಾರಾಟ ಮಾಡಲಾಗುತ್ತದೆ. ತರಕಾರಿಗಳನ್ನು ತರಗತಿಯ ಕಿಟಕಿಗಳಲ್ಲಿ ಜೋಡಿಸಿ, ಗುಂಪಿನ ಮುಖಂಡ ಒಂದು ಬೆಲೆಯನ್ನು ಹಾಳೆಯಲ್ಲಿ ನಮೂದಿಸಿ  ಜೊತೆಗಿಡುತ್ತಾನೆ. ಉಪಾಧ್ಯಾಯರೋ ಅಥವಾ ವಿದ್ಯಾರ್ಥಿಗಳೋ ತಮಗಿಷ್ಟವಾದಲ್ಲಿ ಬೆಲೆ ಏರಿಸಿ ಅದೇ ಹಾಳೆಯಲ್ಲಿ ಬರೆಯುತ್ತಾರೆ. ದಿನದ ಅಂತ್ಯದಲ್ಲಿ ಯಾರ ಹೆಸರು ಕೊನೆಯಲ್ಲಿರುತ್ತದೋ ಅವರು ನಮೂದಿಸಿದ ಬೆಲೆಗೆ ತರಕಾರಿ ಕೊಳ್ಳುತ್ತಾರೆ. ಹೀಗೆ ಬಂದ ಹಣವನ್ನು ವಿದ್ಯಾರ್ಥಿಗಳು ತಮ್ಮಲ್ಲಿ ಹಂಚಿಕೊಳ್ಳುತ್ತಾರೆ. ಚೆನ್ನಾಗಿ ಬೆಳೆ ಬೆಳೆದ ಗುಂಪಿಗೆ ಶಾಲೆಯ ವಾರ್ಷಿಕೋತ್ಸವದಂದು ಬಹುಮಾನವನ್ನೂ ಕೊಡಲಾಗುತ್ತದೆ.

DSC_1643
ಶಾಲೆಯಲ್ಲಿಯೇ ತರಕಾರಿ ಮಾರಾಟ

ಗಿಡ ನೆಡುಕೆ ಖುಷಿಯಾತ್, ಈ ವರ್ಷ ಮನೇಲೂ ನೆಟ್ಟಿದ್ದೆ, ಒಂಭತ್ತನೇ ತರಗತಿಯಲ್ಲಿ ಓದುತ್ತಿರುವ ಗಣೇಶರು ತಮ್ಮ ಮಾತು ಮುಂದುವರಿಸಿ, ಒಂದು ತಿಂಗ್ಳಿಂದ ನಮ್ಮ ಗುಂಪಿದು ೧೦೦ ರೂಪಾಯ್ ಆಯಿತ್.  ಕೊನೇಲ್ ಎಲ್ಲ ಹಂಚ್ಕಣತ್ಎಂದರು. ಕನ್ನಡ ಅಧ್ಯಾಪಕರಾದ ಪ್ರೇಮಾನಂದರು ಕೃಷಿಯ ಇಂತಹ ಪ್ರಯತ್ನಗಳು ಬೇಕು. ಈಗಿನ ಐ.ಟಿ., ಬಿ.ಟಿ.ಯಲ್ಲಿನ ಮಾನಸಿಕ ಒತ್ತಡದ ಜೀವನ ಶೈಲಿಯಲ್ಲಿ ಇವು ನೆಮ್ಮದಿ ಕಂಡುಕೊಳ್ಳುವ ಬಗೆ ಕಲಿಸುತ್ತದೆ”, ಎಂದರು.

3 comments:

  1. ವಿವೇಕ ಶಾಲೆಗಳ ಬಗೆಗೆ ಓದಿ ಖುಶಿಯಾಯಿತು. In fact, ನಾನು ಚಿಕ್ಕಂದಿನಲ್ಲಿ ಕನ್ನಡ ಸಾಲೆ ಸೇರಿದಾಗ, ಬೇರೆ ಬೇರೆ ಸಾಲೆಗಳಲ್ಲಿ ನೂಲುವದು, ನೆಯ್ಯುವದು, ತೋಟಗಾರಿಕೆ ಮೊದಲಾದವುಗಳನ್ನು ಮಾಡಬೇಕಾಗುತ್ತಿತ್ತು. ಈಗ ಇವೆಲ್ಲ ಮಾಯವಾಗಿವೆ.

    ReplyDelete
  2. ಒಳ್ಳೆ ಗಮ್ಮತ್ ಸ್ಕೂಲ್ ಜೀವನ..

    ReplyDelete
  3. ವಿವೇಕ ಶಾಲೆಯ ವಿಷಯ ಓದಿ ತುಂಬಾ ಖುಷಿಯಾಯಿತು.... ಧನ್ಯವಾದಗಳು.


    ಶ್ಯಾಮಲ

    ReplyDelete

ವರ್ಗ

Amomum (1) ficus krishnae (1) Gangtok (1) Nikon 40mm f/2.8 Micro (10) paris (1) Sikkim (8) snow (1) Yuksom (5) ಅನಿಮೇಟೆಡ್ (1) ಅನುಭವ ಕಥನ (7) ಅಮೂರ್ತ (1) ಆಟೋಟ (2) ಆಫಿಡ್ (1) ಇರುವೆ (6) ಉಡುಪಿ (4) ಉಯ್ಯಾಲೆ (1) ಉರಗ (3) ಏರಿ (1) ಒಂಟಿ ಚಕ್ರದ ಸೈಕಲ್ (1) ಒಯ್ಯುಗೆ (6) ಕದ (1) ಕಂದು ಏಲಕ್ಕಿ (1) ಕನ್ನಡ (2) ಕಪ್ಪು ಏಲಕ್ಕಿ (1) ಕಪ್ಪು-ಬಿಳುಪು (5) ಕಂಬಳ (1) ಕಂಬಳಿಹುಳು (2) ಕವನ (15) ಕವಿ ಶೈಲ (1) ಕಸರತ್ತು (1) ಕಳಸ (1) ಕಳ್ಳತನ (1) ಕಾವೇರಿ (1) ಕಾಳಾವಾರ ಬೆಟ್ಟ (1) ಕಾಳಿಂಗ ಸರ್ಪ (1) ಕಿಸ್ಕಾರ (1) ಕೀಟ ಪ್ರಪಂಚ (35) ಕುಂದಾಪುರ (1) ಕುವೆಂಪು (1) ಕೃಷಿ (9) ಕೃಷಿ ಮೇಳ (4) ಕೆರೆ (2) ಕೆಲಸ (2) ಕೆಸು (2) ಕೆಳದಿ (1) ಕೊಕ್ಕರೆ ಬೆಳ್ಳೂರು (1) ಕೋಟ (8) ಖಗೋಳ ಗಡಿಯಾರ (1) ಗವಿ (1) ಗುಡಿ ಕೈಗಾರಿಕೆ (1) ಗುಡ್ಡ (2) ಗುಹೆ (1) ಚಾರಣ (3) ಚಿಕ್ಕಮಗಳೂರು (1) ಚಿಟ್ಟಾಣಿ (1) ಚಿಟ್ಟೆಗಳು (3) ಚಿತ್ರ ಪುಟ (102) ಚಿತ್ರದುರ್ಗ (1) ಚಿತ್ರಪುಟ (1) ಚೌಕಾಶಿ (1) ಛಾಯಾಗ್ರಹಣ (24) ಜನ ಜೀವನ (52) ಜನಪದ (2) ಜರ್ಮನಿ (1) ಜಲಪಾತ (1) ಜೆಕ್ ಗಣರಾಜ್ಯ (4) ಜೇಡ (3) ಜೇನು ಸಾಕಣೆ (1) ಜೋಡಿ (1) ತರಕಾರಿ (2) ತುಮಕೂರು (2) ತೆಂಗಿನ ಕಾಯಿ (1) ತೆಂಗಿನ ತೋಟ (1) ದಸರ (4) ದೇವವೃಂದ (1) ದೇವಸ್ಠಾನ (1) ದೇವಸ್ಥಾನ (1) ದೊಡ್ಡ ಏಲಕ್ಕಿ (1) ಧಾರವಾಡ (1) ನಗರ (1) ನಂಬಿಕೆ (1) ನಾಟಕ (1) ನೀರ್ಹಕ್ಕಿ (6) ಪತಂಗ (1) ಪತ್ರಿಕೋದ್ಯಮ (1) ಪಶ್ಚಿಮ ಘಟ್ಟ (2) ಪಾರ್ಕ್ (1) ಪಾಳು (1) ಪುಸ್ತಕ ಬಿಡುಗಡೆ (1) ಪೋರ್ಟ್ರೈಟ್ (8) ಪ್ಯಾನಿಂಗ್ (1) ಪ್ರಬಂಧ (2) ಪ್ರವಾಸ ಕಥನ (3) ಪ್ರಾಹ (1) ಪ್ಲಾಸ್ಟಿಕ್ (1) ಬಕೇಟ್ (1) ಬಂಡಿ (1) ಬಣ್ಣ (1) ಬನವಾಸಿ (1) ಬಳ್ಳಿ (1) ಬಾಗಿಲು (1) ಬಾರ್ಕೂರು (1) ಬೀಗ (1) ಬೆಂಕಿ (1) ಬೆಂಗಳೂರಿನ ಚಿತ್ರಗಳು (5) ಬೆಂಗಳೂರು (27) ಬೆಳಕು (1) ಬೇಸಾಯ (1) ಬ್ರಹ್ಮಾವರ (1) ಭಾರತ ಬಂದ್ (1) ಭಿಕ್ಷುಕರು (1) ಮಕ್ಕಳು (10) ಮಗು (1) ಮಂಜು (2) ಮಮ್ಮಮ್ (3) ಮಲೆನಾಡು (1) ಮಳೆ (1) ಮಳೆಗಾಲ (2) ಮಾರಿಕಣಿವೆ (1) ಮುಸ್ಸಂಜೆ (1) ಮೇಲುಕೋಟೆ (2) ಮೇವು (1) ಮೈಸೂರು (7) ಮೋಡ (2) ಮ್ಯಾಕ್ರೋ (12) ಯಕ್ಷಗಾನ (2) ರಸ್ತೆ (5) ರಾತ್ರಿ ನೋಟ (3) ರೈಮ್ (1) ರೈಲು (2) ರೈಲುಹಳಿ (1) ಲಲಿತ ಪ್ರಬಂಧ (6) ಲೇಪಾಕ್ಷಿ (1) ವಂಡಾರ್ (1) ವಾಸ್ತು ಶಿಲ್ಪ (1) ವಾಹನ (2) ವಿವೇಕ (1) ವಿಸ್ತರಣೆ (1) ವ್ಯಕ್ತಿ ವಿಷಯ (3) ವ್ಯಾಪಾರ (1) ಶಾಲೆ (1) ಶಿರಸಿ (1) ಶಿರಸಿ. ಸೈಕಲ್ (1) ಶಿಲ್ಪ (1) ಶಿವನಸಮುದ್ರ (1) ಶುಭಾಶಯ (2) ಸಣ್ಣ ಕಥೆ (4) ಸಂತೆ (2) ಸಮುದ್ರ (2) ಸಮುದ್ರ ಜೀವಿ (2) ಸಸ್ಯ ಪ್ರಪಂಚ (12) ಸಾಕು ಪ್ರಾಣಿ (4) ಸಾಗಾಟ (1) ಸಾಸ್ತಾನ (1) ಸಿಕ್ಕಿಂ (3) ಸೈಕಲ್ (5) ಸೈಕಲ್ ಯಾತ್ರೆ (1) ಸ್ಕಂದಗಿರಿ (1) ಸ್ತೂಪ (1) ಸ್ಪರ್ಧೆ (1) ಹಕ್ಕಿಗಳು (21) ಹರಿಹರ (1) ಹಳ್ಳಿ (3) ಹಿಮ (1) ಹೂಗಳು (5) ಹೂವು (1) ಹೊಸ ವರ್ಷ (1) ಹೋಂ ಸ್ಟೇ (1) ಹೌರಾ (1)