ಬಳ್ಳಿ ಅರಶಿನ (Coscinium fenestratum) ತೇವಾಂಶವಿರುವ ಪಶ್ಚಿಮ ಘಟ್ಟದ ಕಾಡುಗಳಲ್ಲಿ ಬೆಳೆಯುವ ಸಸ್ಯ ಸಂಪನ್ಮೂಲ. ದ್ವಿದಳ ಸಸ್ಯವಾದ ಇದರ ಎಲೆ ಮೇಲ್ನೋಟಕ್ಕೆ ವೀಳ್ಯದೆಲೆಯಂತೆ ಗೋಚರಿಸಿದರೂ, ಇದರ ಮೇಲೈ ವೀಳ್ಯದೆಲೆಯಷ್ಟು ನುಣುಪಾಗಿಲ್ಲ, ಅಲ್ಲದೇ ಗಾತ್ರದಲ್ಲಿಯೂ ದೊಡ್ಡದು. ಎಲೆಯ ಹಿಂಭಾಗ ಬೆಳ್ಳಿಯ ಹೊಳಪು. ಚಿಗುರಿನ ಬಣ್ಣವೂ ಬೆಳ್ಳಿಯದ್ದೇ. ಸಂತಾನಾಭಿವೃದ್ಧಿ ಬೀಜದಿಂದ. ಎರಡೋ ನಾಲ್ಕೋ ವರ್ಷಗಳಿಗೊಮ್ಮೆ ದ್ರಾಕ್ಷಿಯ ಗೊಂಚಲಿನಂತೆ ಹಣ್ಣು ಬಿಡುತ್ತದೆ. ಇದರ ಕಾಂಡ ರಟ್ಟೆ ಗಾತ್ರದವರೆಗೂ ಬೆಳೆಯುವುದುಂಟು.
ಬಳ್ಳಿ ಅರಿಶಿನ - ಕಾಡಿನಲ್ಲಿ ಕಾಣಿಸಿದ್ದು ಹೀಗೆ
ಗಾಢ ಅರಶಿನ ಬಣ್ಣದ ಇದರ ಕಾಂಡದ ರುಚಿ ಕಹಿ. ಈ ಬಳ್ಳಿಯ ಬೆಳವಣಿಗೆ ನಿಧಾನ. ೮-೧೦ ವರ್ಷಗಳಿಗೊಮ್ಮೆ ಸರ್ಕಾರದ ಗುತ್ತಿಗೆಯ ಮೂಲಕ ಕೊಯಿಲು. ಒಂದೆರೆಡು ದಿನ ಬಿಸಿಲಿನಲ್ಲಿ ಒಣಗಿಸುವುದಲ್ಲದೇ ಪ್ರತ್ಯೇಕ ಸಂಸ್ಕರಣೆ ಇಲ್ಲ. ಕೆ.ಜಿ.ಗೆ ೩೦ ರೂಪಾಯಿಯವರೆಗೆ ಧಾರಣೆಯಿದೆ.
ಬಳ್ಳಿ ಅರಿಶಿನ - ಕಾಂಡ
ಮಾರುಕಟ್ಟೆ ಯಾವುದು ಅದರ ಉಪಯೋಗ ಎಲ್ಲಿ ಇತ್ಯಾದಿ ಹೆಚ್ಚಿನ ವಿವರ ಲಭ್ಯವಿಲ್ಲ. ಇದನ್ನು ಸೌಂದರ್ಯ ವೃದ್ಧಿಸುವ ಪ್ರಸಾಧನಗಳ ತಯಾರಿಯಲ್ಲಿ, ಅರಶಿನದ ಬಣ್ಣದಿಂದಾಗಿ ಬಣ್ಣ ತಯಾರಿಸುವಲ್ಲಿ, ಆಯುರ್ವೇದದಲ್ಲಿ ಬಳುಸುತ್ತಾರೆಂಬ ಸುಳಿವು ಅಂತರ್ಜಾಲದಲ್ಲಿ ದೊರಕಿದೆಯದರೂ ಖಚಿತ ಮಾಹಿತಿ ತಿಳಿದುಬಂದಿಲ್ಲ.
olleya information sir
ReplyDeleteಈ ಬಗ್ಗೆ ಕೇಳಿದ್ದೆ ಚಿತ್ರ ಸಹಿತ ವಿವರಣೆ ನೋಡಿ ಖುಷಿಯಾಯ್ತು...
ReplyDeletegood article...
ReplyDeleteಕಸ್ತೂರಿ ಅರಿಶಿನ ಅಂದರೆ ಇದೇನಾ?
ReplyDeleteಉಷಾ ಮೇಡಂ,
ReplyDeleteಕಸ್ತೂರಿ ಅರಿಶಿನದ ಬಗ್ಗೆ ನನಗೆ ಅರಿವಿಲ್ಲ
ಅರಿಶಿನ ಕಾಂಡ ದ ಫೋಟೋ ಸುಂದರವಾಗಿ ಸಹಜವಾಗಿ ಮೂಡಿ ಬಂದಿದೆ.
ReplyDeletethis is used to make vermillion(kumkuma)
ReplyDelete:-)
came here through avadhi. But me and daughters have enjoyed your photographs in Flickr.
malathi S
nenapina sanchy inda,
ReplyDeleteAre you sure "Coscinium fenestratum" is being used to make ಕುಂಕುಮ? As per my knowledge its turmeric (ಅರಶಿಣ/ಗಡ್ಡೆ ಅರಶಿಣ)which is used to make ಕುಂಕುಮ