Sunday, December 14, 2008

ಛಾಯಾಗ್ರಹಣ ಮತ್ತು ISO

ನೀವು ಯಾವುದೋ ಮ್ಯೂಸಿಯಂಗೋ, ದೇವಸ್ಥಾನಕ್ಕೋ ಹೋಗಿರುವಿರಿ. ಒಳಗಡೆ ಬೆಳಕು ಕಡಿಮೆ ಇದ್ದು, ಫ್ಲಾಷ್ ಉಪಯೋಗಿಸುವುದನ್ನು ನಿಷೇದಿಸಿರುತ್ತಾರೆ. ಫ್ಲಾಷ್ ಆಫ್ ಮಾಡಿ ಚಿತ್ರ ತೆಗೆದು, ಮನೆಗೆ ಬಂದು ಕಂಪ್ಯೂಟರಿನಲ್ಲಿ ನೋಡಿದರೆ ಎಲ್ಲವೂ ಅಸ್ಪಷ್ಟ! ಬೆಳಕು ಕಡಿಮೆಯಾದ್ದರಿಂದ, ಫ್ಲಾಷ್ ಕೂಡ ಬಳಸದಿದ್ದುದರಿಂದ ನಿಮ್ಮ ಕ್ಯಾಮಾರದ Shutter Speed ಕಡಿಮೆಯಾದುದ್ದೇ ಇದಕ್ಕೆ ಕಾರಣ. ಕ್ಯಾಮರಾ ಹಿಡಿದ ನಮ್ಮ ಕೈ ಇಷ್ಟೊಂದು ದೀರ್ಘಾವಧಿಯವರೆಗೆ ಒಂದುಚೂರೂ ಚಲಿಸದೆ ಇರುವುದು ಕಷ್ಟ. ಇಂತಹ ಸಂದರ್ಭದಲ್ಲಿ ಟ್ರೈಪಾಡ್ ಅಥವಾ ಸ್ಥಿರವಾದ ವಸ್ತುವಿನ ಮೇಲೆ ಕ್ಯಾಮರಾ ಇರಿಸಿ ಚಿತ್ರ ತೆಗೆಯಬಹುದು. ಒಂದುವೇಳೆ ಇವೆರಡೂ ಇಲ್ಲದಿದ್ದಲ್ಲಿ? ಇಂತಹ ಸಂದರ್ಭದಲ್ಲಿ ಕ್ಯಾಮರಾದ ISO ಜಾಸ್ತಿ ಮಾಡಬಹುದು. ISO ಜಾಸ್ತಿ ಮಾಡಿದಂತೆಲ್ಲಾ ಹೆಚ್ಚಿನ Shutter Speed ಮೂಲಕ ಚಿತ್ರ ತೆಗೆಯಬಹುದು. ಹಾಗಿದ್ದಲ್ಲಿ ಎಲ್ಲಾ ಸಮಯದಲ್ಲೂ ISO ಜಾಸ್ತಿ ಇರಿಸಿಕೊಳ್ಳಬಹುದಲ್ಲಾ? ಆದರೆ ISO ಜಾಸ್ತಿ ಮಾಡಿದಂತೆಲ್ಲ ನಿಮ್ಮ ಚಿತ್ರದ ಗುಣಮಟ್ಟ ಕುಸಿಯುತ್ತದೆ.



ನೀವು ಈ ಹಿಂದೆ ಅನಲಾಗ್ ಕ್ಯಾಮರಾ ಉಪಯೋಗಿಸಿದ್ದಲ್ಲಿ, ಫಿಲ್ಮ್ ಕೊಳ್ಳುವಾಗ ಅದರ ಡಬ್ಬಿಯಲ್ಲಿ ೧೦೦, ೨೦೦, ೪೦೦ ಅಥವಾ ೮೦೦ ಮುಂತಾದ ಸಂಖ್ಯೆಯನ್ನು ಗುರುತಿಸಿರಬಹುದು. ಈ ಸಂಖ್ಯೆ ಬೆಳಕಿಗೆ, ಫಿಲ್ಮಿನ ಸಂವೇದನೆಯನ್ನು ಸೂಚಿಸುತ್ತದೆ. ಅಂದರೆ ಈ ಸಂಖ್ಯೆಯ ಬೆಲೆ ಕಡಿಮೆಯಾದಂತೆಲ್ಲಾ ಫಿಲ್ಮ್ ಚಿತ್ರವನ್ನು ಸೆರೆಹಿಡಿಯಲು ಹೆಚ್ಚಿನ ಕಾಲವಧಿ ತೆಗೆದುಕೊಳ್ಳುತ್ತದೆ. ಇದನ್ನೇ ಡಿಜಿಟಲ್ ಕ್ಯಾಮರಾಕ್ಕೆ ಅನ್ವಯಿಸುವುದಾದರೆ, ISO ಸೆನ್ಸರ್ನ್ ಸಂವೇದನೆ ಎನ್ನಬಹುದು. ISOವನ್ನು ೧೦೦, ೨೦೦, ೪೦೦, ೮೦೦, ೧೬೦೦ ಹೀಗೆ ಮೊದಲಾದ ಸಂಖ್ಯೆಯಿಂದ ಗುರುತಿಸುತ್ತಾರೆ. ISO ಹೆಚ್ಚು ಮಾಡಿದಂತೆಲ್ಲಾ ಹೆಚ್ಚಿನ Shutter Speed ಅಥವಾ ಕಡಿಮೆ Aperture ಮೂಲಕ ಚಿತ್ರ ತೆಗೆಯಲು ಅನುಕೂಲ.








ಈ ಮೇಲಿನ ಎರಡು ಚಿತ್ರ ಒಂದೇ ಕ್ಯಾಮಾರಾದಿಂದ ತೆಗೆದಿರುವುದು. ಮೊದಲನೆಯದ್ದು ISO ೮೦ರಲ್ಲಿ (ನನ್ನ ಕ್ಯಾಮರಾ ಒದಗಿಸುವ ಕಡಿಮೆ ಸಂಖ್ಯೆ) ಹಾಗೂ ಎರಡನೆಯದ್ದು ISO ೧೦೦೦ದಲ್ಲಿ (ನನ್ನ ಕ್ಯಾಮರಾ ಒದಗಿಸುವ ಜಾಸ್ತಿ ಸಂಖ್ಯೆ) ತೆಗೆದದ್ದು. ಸುಲಭವಾಗಿ ಗುರುತಿಸುವಂತೆ ಮೊದಲನೆಯದ್ದಕ್ಕೆ ಹೋಲಿಸಿದಲ್ಲಿ ಎರಡನೆ ಚಿತ್ರದಲ್ಲಿ ಕಪ್ಪು ಚುಕ್ಕಿಗಳು (noise) ಜಾಸ್ತಿ ಇದೆ. ಕಪ್ಪು ಚುಕ್ಕಿಗಳು ಎರಡನೆಯ ಚಿತ್ರದ ಮಾಸಲು ಬಣ್ಣಕ್ಕೆ ಕಾರಣ. ಆದ್ದರಿಂದ ಸಾಮಾನ್ಯವಾಗಿ ಇದನ್ನು ನಮ್ಮ ಕ್ಯಾಮರಾ ಒದಗಿಸುವ ಕಡಿಮೆ ಸಂಖ್ಯೆಗೆ ಹೊಂದಿಸಿಟ್ಟು ಉತ್ತಮ ಗುಣಮಟ್ಟದ ಚಿತ್ರವನ್ನು ನಿರೀಕ್ಷಿಸಬಹುದು. ಬೆಳಕು ಕಡಿಮೆಯಿದ್ದು ಫ್ಲಾಷ್ ಉಪಯೋಗಿಸಲು ಅವಕಾಶ ಇರದಿದ್ದಲ್ಲಿ ಅಥವಾ ಇಷ್ಟವಿರದಿದ್ದಲ್ಲಿ ISO ಜಾಸ್ತಿ ಮಾಡುತ್ತಾ ಹೋಗಬಹುದು.





ಜಾಸ್ತಿ ISO ಉಂಟುಮಾಡುವ ಈ ಕಪ್ಪು ಚುಕ್ಕಿಗಳನ್ನು, ವಿಷಯಕ್ಕೆ, ಮನೋಭಾವನೆಗೆ ತಕ್ಕಂತೆ ನಿಮ್ಮ ಪ್ರಯೋಜನಕ್ಕೆ ಬಳಸಿಕೊಳ್ಳಬಹುದು. ಕಪ್ಪು ಬಿಳುಪು ಮತ್ತು ಹೆಚ್ಚಿನ ISO ಬಳಸಿ ತೆಗೆದ ಈ ಚಿತ್ರ, ವ್ಯಕ್ತಿಯ ಕಣ್ಣಿನ ಸುತ್ತ ಇರುವ ನೆರಿಗೆಗೆ ಪೂರಕವಾಗಿ ಒಂದು ರೀತಿಯ ಹಳೇಯ ಭಾವನೆ ಕೊಡುತ್ತದೆ.

9 comments:

  1. ಪಾಲಚಂದ್ರ,
    ನಿಜಕ್ಕೂ ಇದೊಂದು ಉತ್ತಮ ಪ್ರಯೋಗ. ISO ಹೆಚ್ಚು ಮಾಡಿಕೊಂಡು ನಾನು ತೆಗೆದ ಚಿತ್ರಗಳು ನಂದಿ ಬೆಟ್ಟ ಮತ್ತು ಮೇಲುಕೋಟೆ ಚಿತ್ರಲೇಖನಗಳಲ್ಲಿವೆ. ನಾನಲ್ಲಿ ವೇಗವಾಗಿ ಕ್ಯಾಂಡಿಡ್ ಫೋಟೊ ತೆಗೆಯಬೇಕಾಗಿದ್ದರಿಂದ ISO ಜಾಸ್ತಿ ಮಾಡಿದ್ದೆ. ಅದಕ್ಕೆ ತಕ್ಕಂತೆ ಇಬ್ಬನಿಯ ಪರಿಣಾಮವೂ ಚೆನ್ನಾಗಿಯೇ ಬಂದಿದೆ. ಅಂದಹಾಗೆ ಕಪ್ಪುಚುಕ್ಕಿ[grains]ಹೆಚ್ಚು ಮಾಡಿ ತೆಗೆದಿರುವ ಕೆಳಗಿನ ಪೋರ್ಟರೇಟ್ ತುಂಬಾ ಚೆನ್ನಾಗಿದೆ. ಯಾರು ತೆಗೆದಿದ್ದು.?

    ReplyDelete
  2. ಶಿವು,

    ನಿಮ್ಮ ಅನುಭವ ಹಂಚಿಕೊಂಡು ನನ್ನ ಬರಹ ಪೂರ್ತಿಗೊಳಿಸಿದಿರಿ. ಆ ಚಿತ್ರ ನಾನು ಉತ್ತರ ಕನ್ನಡದಲ್ಲಿ, ಕಳೆದ ಮಳೆಗಾಲದಲ್ಲಿ ತೆಗೆದದ್ದು. ಕೆಲವು ಫೋಟೋ ತುಂಬಾ ವಿವರಣೆ ಈ ಕೊಂಡಿಯಲ್ಲಿದೆ: http://palachandra.blogspot.com/2008/07/blog-post_30.html

    --
    ಪಾಲ

    ReplyDelete
  3. ಪಾಲಚಂದ್ರರೇ, ನಿಮ್ಮ ಹಿಂದಿನ ಲೇಖನಗಳಿಗೆ ಹೋಲಿಸಿದರೆ ಇದು ಯಾಕೋ ಇನ್ನೂ ಉತ್ತಮವಾಗಿ ಬರಬಹುದಿತ್ತು ಎನಿಸುತ್ತದೆ. ISO ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು

    ReplyDelete
  4. ಹರೀಶ್,

    ತಾಣಕ್ಕೆ ಭೇಟಿ ಕೊಟ್ಟು, ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದ. ಇದ್ರ ಬಗ್ಗೆ ಇನ್ನು ಜಾಸ್ತಿಯೇನು ಎಕ್ಸ್ಪೆರಿಮೆಂಟ್ ಮಾಡಿಲ್ಲ..

    --
    ಪಾಲ

    ReplyDelete
  5. ಪಾಲಚಂದ್ರ ಆ ಫೋಟೊವನ್ನು ಯಾವುದಾದರೂ ಸ್ಪರ್ದೆಗೆ ಕಳುಹಿಸಿ ಬಹುಮಾನ ಬರಬಹುದು !

    ReplyDelete
  6. ನಾನು ಫೋಟೋಗ್ರಾಫಿ ಬಗ್ಗೆ ಅಷ್ಟು ತಲೆ ಕೆಡಿಸಿಕೊಂಡಿಲ್ಲ ಆದ್ರೆ ನೀವು ಬರೆಯೋ ಲೇಖನ ಮಾತ್ರ ತುಂಬಾ ಮಾಹಿತಿ ಪೂರ್ಣವಾಗಿವೆ.

    ReplyDelete
  7. ಶಿವು,
    ನೋಡ್ತೀನಿ ಸಾರ್.

    ಸಂದೀಪ್,
    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ.

    --
    ಪಾಲ

    ReplyDelete
  8. ಪಾಲ,
    ಅಜ್ಜನ ಚಿತ್ರ ತುಂಬಾ ಚೆನ್ನಾಗಿದೆ.

    ReplyDelete
  9. ಅನಿಲ್,

    ನಿಮ್ಮ ಮೆಚ್ಚುಗೆಗೆ ನನ್ನಿ

    --
    ಪಾಲ

    ReplyDelete

ವರ್ಗ

Amomum (1) ficus krishnae (1) Gangtok (1) Nikon 40mm f/2.8 Micro (10) paris (1) Sikkim (8) snow (1) Yuksom (5) ಅನಿಮೇಟೆಡ್ (1) ಅನುಭವ ಕಥನ (7) ಅಮೂರ್ತ (1) ಆಟೋಟ (2) ಆಫಿಡ್ (1) ಇರುವೆ (6) ಉಡುಪಿ (4) ಉಯ್ಯಾಲೆ (1) ಉರಗ (3) ಏರಿ (1) ಒಂಟಿ ಚಕ್ರದ ಸೈಕಲ್ (1) ಒಯ್ಯುಗೆ (6) ಕದ (1) ಕಂದು ಏಲಕ್ಕಿ (1) ಕನ್ನಡ (2) ಕಪ್ಪು ಏಲಕ್ಕಿ (1) ಕಪ್ಪು-ಬಿಳುಪು (5) ಕಂಬಳ (1) ಕಂಬಳಿಹುಳು (2) ಕವನ (15) ಕವಿ ಶೈಲ (1) ಕಸರತ್ತು (1) ಕಳಸ (1) ಕಳ್ಳತನ (1) ಕಾವೇರಿ (1) ಕಾಳಾವಾರ ಬೆಟ್ಟ (1) ಕಾಳಿಂಗ ಸರ್ಪ (1) ಕಿಸ್ಕಾರ (1) ಕೀಟ ಪ್ರಪಂಚ (35) ಕುಂದಾಪುರ (1) ಕುವೆಂಪು (1) ಕೃಷಿ (9) ಕೃಷಿ ಮೇಳ (4) ಕೆರೆ (2) ಕೆಲಸ (2) ಕೆಸು (2) ಕೆಳದಿ (1) ಕೊಕ್ಕರೆ ಬೆಳ್ಳೂರು (1) ಕೋಟ (8) ಖಗೋಳ ಗಡಿಯಾರ (1) ಗವಿ (1) ಗುಡಿ ಕೈಗಾರಿಕೆ (1) ಗುಡ್ಡ (2) ಗುಹೆ (1) ಚಾರಣ (3) ಚಿಕ್ಕಮಗಳೂರು (1) ಚಿಟ್ಟಾಣಿ (1) ಚಿಟ್ಟೆಗಳು (3) ಚಿತ್ರ ಪುಟ (102) ಚಿತ್ರದುರ್ಗ (1) ಚಿತ್ರಪುಟ (1) ಚೌಕಾಶಿ (1) ಛಾಯಾಗ್ರಹಣ (24) ಜನ ಜೀವನ (52) ಜನಪದ (2) ಜರ್ಮನಿ (1) ಜಲಪಾತ (1) ಜೆಕ್ ಗಣರಾಜ್ಯ (4) ಜೇಡ (3) ಜೇನು ಸಾಕಣೆ (1) ಜೋಡಿ (1) ತರಕಾರಿ (2) ತುಮಕೂರು (2) ತೆಂಗಿನ ಕಾಯಿ (1) ತೆಂಗಿನ ತೋಟ (1) ದಸರ (4) ದೇವವೃಂದ (1) ದೇವಸ್ಠಾನ (1) ದೇವಸ್ಥಾನ (1) ದೊಡ್ಡ ಏಲಕ್ಕಿ (1) ಧಾರವಾಡ (1) ನಗರ (1) ನಂಬಿಕೆ (1) ನಾಟಕ (1) ನೀರ್ಹಕ್ಕಿ (6) ಪತಂಗ (1) ಪತ್ರಿಕೋದ್ಯಮ (1) ಪಶ್ಚಿಮ ಘಟ್ಟ (2) ಪಾರ್ಕ್ (1) ಪಾಳು (1) ಪುಸ್ತಕ ಬಿಡುಗಡೆ (1) ಪೋರ್ಟ್ರೈಟ್ (8) ಪ್ಯಾನಿಂಗ್ (1) ಪ್ರಬಂಧ (2) ಪ್ರವಾಸ ಕಥನ (3) ಪ್ರಾಹ (1) ಪ್ಲಾಸ್ಟಿಕ್ (1) ಬಕೇಟ್ (1) ಬಂಡಿ (1) ಬಣ್ಣ (1) ಬನವಾಸಿ (1) ಬಳ್ಳಿ (1) ಬಾಗಿಲು (1) ಬಾರ್ಕೂರು (1) ಬೀಗ (1) ಬೆಂಕಿ (1) ಬೆಂಗಳೂರಿನ ಚಿತ್ರಗಳು (5) ಬೆಂಗಳೂರು (27) ಬೆಳಕು (1) ಬೇಸಾಯ (1) ಬ್ರಹ್ಮಾವರ (1) ಭಾರತ ಬಂದ್ (1) ಭಿಕ್ಷುಕರು (1) ಮಕ್ಕಳು (10) ಮಗು (1) ಮಂಜು (2) ಮಮ್ಮಮ್ (3) ಮಲೆನಾಡು (1) ಮಳೆ (1) ಮಳೆಗಾಲ (2) ಮಾರಿಕಣಿವೆ (1) ಮುಸ್ಸಂಜೆ (1) ಮೇಲುಕೋಟೆ (2) ಮೇವು (1) ಮೈಸೂರು (7) ಮೋಡ (2) ಮ್ಯಾಕ್ರೋ (12) ಯಕ್ಷಗಾನ (2) ರಸ್ತೆ (5) ರಾತ್ರಿ ನೋಟ (3) ರೈಮ್ (1) ರೈಲು (2) ರೈಲುಹಳಿ (1) ಲಲಿತ ಪ್ರಬಂಧ (6) ಲೇಪಾಕ್ಷಿ (1) ವಂಡಾರ್ (1) ವಾಸ್ತು ಶಿಲ್ಪ (1) ವಾಹನ (2) ವಿವೇಕ (1) ವಿಸ್ತರಣೆ (1) ವ್ಯಕ್ತಿ ವಿಷಯ (3) ವ್ಯಾಪಾರ (1) ಶಾಲೆ (1) ಶಿರಸಿ (1) ಶಿರಸಿ. ಸೈಕಲ್ (1) ಶಿಲ್ಪ (1) ಶಿವನಸಮುದ್ರ (1) ಶುಭಾಶಯ (2) ಸಣ್ಣ ಕಥೆ (4) ಸಂತೆ (2) ಸಮುದ್ರ (2) ಸಮುದ್ರ ಜೀವಿ (2) ಸಸ್ಯ ಪ್ರಪಂಚ (12) ಸಾಕು ಪ್ರಾಣಿ (4) ಸಾಗಾಟ (1) ಸಾಸ್ತಾನ (1) ಸಿಕ್ಕಿಂ (3) ಸೈಕಲ್ (5) ಸೈಕಲ್ ಯಾತ್ರೆ (1) ಸ್ಕಂದಗಿರಿ (1) ಸ್ತೂಪ (1) ಸ್ಪರ್ಧೆ (1) ಹಕ್ಕಿಗಳು (21) ಹರಿಹರ (1) ಹಳ್ಳಿ (3) ಹಿಮ (1) ಹೂಗಳು (5) ಹೂವು (1) ಹೊಸ ವರ್ಷ (1) ಹೋಂ ಸ್ಟೇ (1) ಹೌರಾ (1)