Tuesday, April 21, 2009

ನಿನ್ನ ಕಣ್ಣ ನೋಟದಲ್ಲಿ

ನಿನ್ನ ಕಣ್ಣ ನೋಟದಲ್ಲಿ ೩೬೦ ಡಿಗ್ರಿ ಕಂಡೆನು. ಏಡಿಯ ಚಿತ್ರ ಎಲ್ಲಾ ಕೋನದಿಂದ ತೆಗೆದು ಅದರ ಬಗ್ಗೆ ಅಂತರ್ಜಾಲದಲ್ಲಿ ಹುಡುಕಾಡಿದಾಗ ನೆನಪಾದ ಹಾಡು ಇದು. ಏಡಿ ಒಂದೇ ಬಾರಿಗೆ ತನ್ನ ಸುತ್ತ ಇರುವ ನೋಟವನ್ನು ಒಮ್ಮೆಲೇ ಗ್ರಹಿಸುತ್ತದೆ. ಅಂದರೆ ನಮಗೆ ಮುಂದೆ ಕಣ್ಣು ಇರುವಂತೆ ಎಡ, ಬಲ, ಹಿಂದೆ ಕಣ್ಣು ಇದ್ದು ಆ ಕಣ್ಣುಗಳಿಂದ ಸಿಗುವ ನೋಟ ಹೇಗೆ ಇರಬಹುದೋ ಹಾಗೆ!

ನಮ್ಮೂರ ಸಮುದ್ರದಲ್ಲಿ ತೆಗೆದ ಈ ಚಿತ್ರ ನೋಡಿ ನಿಮಗೂ ಆಶ್ಚರ್ಯ ಆಗಬಹುದು.

ಮುನ್ನೋಟ
DSC08223

ಬದಿ ನೋಟ
DSC08225

ಹಿನ್ನೋಟ
DSC08228



ಏಡಿಗೆ ಪ್ರಪಂಚ ಎಷ್ಟು ಭಿನ್ನವಾಗಿ ಕಾಣಿಸುತ್ತಿರಬಹುದಲ್ಲ? ಈ ತಂತ್ರಜ್ಞಾನ ಪೈಲೆಟ್ ರಹಿತ ವಿಮಾನ ಹಾಗೂ ರೋಬಾಟ್ ತಯಾರಿಕೆಯಲ್ಲಿ ಬಹಳಷ್ಟು ಸಹಕಾರಿ.

ಮಾಹಿತಿ ಆಧಾರ: Australia advances

11 comments:

  1. ಪಾಲಚಂದ್ರ....

    ಇಂಥಹ ಫೋಟೊಗಳನ್ನು ಇಟ್ಟುಕೊಂಡು...
    ಬ್ಲಾಗ್ ಗೆ ವಿಶ್ರಾಂತಿ ಕೊಡುವದಕ್ಕೆ ಹೊರಟಿದ್ದೀರಲ್ಲ...!

    ತುಂಬಾ ಚೆನ್ನಾಗಿದೆ...!

    ಏಡಿಯ ಈ ವಿಚಾರ ನನಗೆ ಗೊತ್ತೇ ಇರಲಿಲ್ಲವಾಗಿತ್ತು...!
    ಬಹಳ ಚುರಾಕಾಗಿ ಓಡುವ ಇದರ ಫೋಟೊ ತೆಗೆಯಲು..
    ನೀವೂ ಶ್ರಮ ಪಟ್ಟಿರ ಬಹುದಲ್ಲವೇ...?

    ಅಭಿನಂದನೆಗಳು....

    ReplyDelete
  2. blogging ge rest kodoke aagatte annodella suLLu...

    ReplyDelete
  3. ಪ್ರಕಾಶ್,
    ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು. ಹೌದು ಸಿಕ್ಕಾಪಟ್ಟೆ ಓಡಾಡುತ್ತೆ ಏಡಿ, ಇದೊಂದು ಮಾತ್ರ ಹೆಚ್ಚು ತ್ರಾಸ ಕೊಡಲಿಲ್ಲ :)

    ಲಕ್ಷ್ಮೀ,
    ನನ್ನ ಮಟ್ಟಿಗೆ ನಿಜಾನೇನೋ :)
    ಎಲ್ಲರ ಮಟ್ಟಿಗೂ ಅಲ್ಲ http://manasa-hegde.blogspot.com

    ReplyDelete
  4. PaLa ಅವರೇ ಈ ಚಿತ್ರ ನನ್ನನ್ನು ಮೂಕವಿಸ್ಮಯನನ್ನಾಗಿಸಿತು. ನಿಮ್ಮಿಂದ ಇನ್ನೂ ಹೆಚ್ಚು ಹಚ್ಚು ಉತ್ತಮ ಚಿತ್ರಗಳ ನಿರೀಕ್ಷೆಯನ್ನು ಈ ಚಿತ್ರ ಹುಟ್ಟುಹಾಕಿದೆ.

    ReplyDelete
  5. ninna kanna kannadiyalli kande nanna roopa!!!

    ReplyDelete
  6. ಡಾಕ್ಟ್ರೇ,
    ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು, ಅಂಥಾ ದೊಡ್ಡ ಛಾಯಾಗ್ರಾಹಕ ನಾನೇನೂ ಅಲ್ಲ, ಸುಮ್ನೆ ಹೊತ್ತು ಹೋಗದೇ ಇರೋದಕ್ಕೆ ತೆಗಿತೀನಿ ಅಷ್ಟೆ.

    ಸ್ಕಂದ,
    ನೀನು "ನಿನ್ನ ಕಣ್ಣ ಕನ್ನಡಿಯಲ್ಲಿ ಕಂಡೆ ನನ್ನ ರೂಪ", ಹೇಳೋಕೋದ್ರೆ ನಾನು "ನಿನ್ನ ಕಣ್ಣ ನೋಟದಲ್ಲಿ ನೂರು ಆಸೆ ಕಂಡೆನು" ಹೇಳೋಕೆ ಹೊರ್ಟಿದ್ದೆ. ಯಾವಾಗ್ಲು ನಮ್ಮಿಬ್ರಿಗೆ ಹೀಗೆ ಆಗುತ್ತೆ, ಎರಡೂ ಒಂದೇ ರಾಗಾನಾ?

    ReplyDelete
  7. ನಾನು ಏಡಿಯನ್ನು ಹತ್ತಿರದಿಂದ ನೋಡೇ ಇಲ್ಲ. ಏಡಿಯ ಬಣ್ಣವೇ ಆಶ್ಚರ್ಯ ಹುಟ್ಟಿಸಿತು. ಅದರ ಕಣ್ಣುಗಳ ವಿವರವನ್ನು ಎಲ್ಲಿಯೂ ಓದಿರಲಿಲ್ಲ. ಸುಂದರ ಫೋಟೋ

    ReplyDelete
  8. This comment has been removed by the author.

    ReplyDelete
  9. ಚಂದ್ರಕಾಂತ ಮೇಡಂ,
    ನಿಮ್ಮ ನೋಟ ಬಹಳ ಸೂಕ್ಷ್ಮವಾಗಿದೆ. ಏಡಿಯ ಬಣ್ಣ ಅದು ಇರುವ ಮಣ್ಣಿನ ಬಣ್ಣಕ್ಕೆ ತುಂಬಾ ಹತ್ತಿರವಾಗಿದೆ. ಹಾಗೆಯೇ ಬೇರೆ ಬೇರೆ ಕಡೆ ಇರುವ ಬಣ್ಣಾನೂ ಬೇರೆ ರೀತಿ ಇರುತ್ತೆ. ಬಂಡೆಗಳೆಡಯಲ್ಲಿ ಇರೋ ಏಡಿ, ಬಂಡೆಯ ಬಣ್ಣಕ್ಕನುಗುಣವಾಗಿ ಇರಬಹುದು.

    ಡಾರ್ವಿನ್ "ನೈಸರ್ಗಿಕ ಆಯ್ಕೆ" ಇದಕ್ಕೆ ತಕ್ಕ ಮಟ್ಟಿಗೆ ಉತ್ತರ ಕೊಡಬಹುದು. ಕಪ್ಪು, ಕೆಂಪು, ಹಳದಿ, ಮತ್ತೆ ಮೇಲೆ ನೋಡಿದ ಏಡಿಗಳು ಆ ಮರಳಿನಲ್ಲಿ ಬಹು ಹಿಂದೆ ವಾಸವಾಗಿದ್ದವು ಎಂದು ಊಹಿಸಿದರೆ, ಬಿಳಿ ಬಣ್ಣದ ಏಡಿಗಳು ಹೊಯಿಗೆಯ ಬಣ್ಣಕ್ಕೆ ಹೋಲುವಂತಿದ್ದು ಪ್ರಿಡೇಟರ್ಗಳ ಕಣ್ಣಿಗೆ ಬೀಳುವ ಸಂಭವ ಕಡಿಮೆ ಇರುವುದರಿಂದ ಅವುಗಳ ಸಂತತಿ ಮಾತ್ರ ಉಳಿದು, ಉಳಿದವು ಕ್ರಮೇಣವಾಗಿ ನಶಿಸಿ ಹೋಗಿರಬಹುದೆಂದು.

    ನಮ್ಮೂರಿಗೆ ಒಮ್ಮೆ ಬನ್ನಿ (ಕೋಟ, ಕಾರಂತರ ಊರೂ ನೋಡಿದಹಾಗಾಯ್ತು), ನಮ್ಮ ಸಮುದ್ರಕ್ಕೆ ಕರ್ಕೊಂಡು ಹೋಗ್ತೀನಿ.

    ReplyDelete
  10. ಪಾಲಚಂದ್ರ,

    ಏಡಿಯ ಫೋಟೋ ತುಂಬಾ ಚೆನ್ನಾಗಿದೆ...ಕಣ್ಣುಗಳನ್ನು ಗಮನದಲ್ಲಿರಿಸಿಕೊಂಡು ನೀವು ಮಾಡಿದ ಶ್ರಮ ಇಲ್ಲಿ ಚೆನ್ನಾಗಿ ಪ್ರತಿಬಿಂಬಿತವಾಗಿದೆ...ಏನನ್ನು ಬೇಕಾದರೂ ಸುಲಭವಾಗಿ ಕ್ಲಿಕ್ಕಿಸಬಹುದು...ಏಡಿ ಫೋಟೊ ಅಷ್ಟು ಸುಲಭವಲ್ಲ...ನಾನು ತುಂಬಾ ಪ್ರಯತ್ನಿಸಿ ವಿಫಲನಾಗಿದ್ದೇನೆ....

    ನಿಮಗೆ ಅಭಿನಂದನೆಗಳು...

    ReplyDelete
  11. ಫೋಟೋಗಳು ಚೆನ್ನಾಗಿವೆ.. ಕಣ್ಣಿನ ಮಾಹಿತಿ ಕೂಡ.. ಬಹಳ ವೇಗವಾಗಿ ಚಲಿಸಿ ಮಾಯವಾಗುವ ಈ ಏಡಿಗಳನ್ನು ಬಹಳ ಚೆನ್ನಾಗಿ ಸೆರೆ ಹಿಡೀದಿದ್ದೀರಿ..

    ReplyDelete

ವರ್ಗ

Amomum (1) ficus krishnae (1) Gangtok (1) Nikon 40mm f/2.8 Micro (10) paris (1) Sikkim (8) snow (1) Yuksom (5) ಅನಿಮೇಟೆಡ್ (1) ಅನುಭವ ಕಥನ (7) ಅಮೂರ್ತ (1) ಆಟೋಟ (2) ಆಫಿಡ್ (1) ಇರುವೆ (6) ಉಡುಪಿ (4) ಉಯ್ಯಾಲೆ (1) ಉರಗ (3) ಏರಿ (1) ಒಂಟಿ ಚಕ್ರದ ಸೈಕಲ್ (1) ಒಯ್ಯುಗೆ (6) ಕದ (1) ಕಂದು ಏಲಕ್ಕಿ (1) ಕನ್ನಡ (2) ಕಪ್ಪು ಏಲಕ್ಕಿ (1) ಕಪ್ಪು-ಬಿಳುಪು (5) ಕಂಬಳ (1) ಕಂಬಳಿಹುಳು (2) ಕವನ (15) ಕವಿ ಶೈಲ (1) ಕಸರತ್ತು (1) ಕಳಸ (1) ಕಳ್ಳತನ (1) ಕಾವೇರಿ (1) ಕಾಳಾವಾರ ಬೆಟ್ಟ (1) ಕಾಳಿಂಗ ಸರ್ಪ (1) ಕಿಸ್ಕಾರ (1) ಕೀಟ ಪ್ರಪಂಚ (35) ಕುಂದಾಪುರ (1) ಕುವೆಂಪು (1) ಕೃಷಿ (9) ಕೃಷಿ ಮೇಳ (4) ಕೆರೆ (2) ಕೆಲಸ (2) ಕೆಸು (2) ಕೆಳದಿ (1) ಕೊಕ್ಕರೆ ಬೆಳ್ಳೂರು (1) ಕೋಟ (8) ಖಗೋಳ ಗಡಿಯಾರ (1) ಗವಿ (1) ಗುಡಿ ಕೈಗಾರಿಕೆ (1) ಗುಡ್ಡ (2) ಗುಹೆ (1) ಚಾರಣ (3) ಚಿಕ್ಕಮಗಳೂರು (1) ಚಿಟ್ಟಾಣಿ (1) ಚಿಟ್ಟೆಗಳು (3) ಚಿತ್ರ ಪುಟ (102) ಚಿತ್ರದುರ್ಗ (1) ಚಿತ್ರಪುಟ (1) ಚೌಕಾಶಿ (1) ಛಾಯಾಗ್ರಹಣ (24) ಜನ ಜೀವನ (52) ಜನಪದ (2) ಜರ್ಮನಿ (1) ಜಲಪಾತ (1) ಜೆಕ್ ಗಣರಾಜ್ಯ (4) ಜೇಡ (3) ಜೇನು ಸಾಕಣೆ (1) ಜೋಡಿ (1) ತರಕಾರಿ (2) ತುಮಕೂರು (2) ತೆಂಗಿನ ಕಾಯಿ (1) ತೆಂಗಿನ ತೋಟ (1) ದಸರ (4) ದೇವವೃಂದ (1) ದೇವಸ್ಠಾನ (1) ದೇವಸ್ಥಾನ (1) ದೊಡ್ಡ ಏಲಕ್ಕಿ (1) ಧಾರವಾಡ (1) ನಗರ (1) ನಂಬಿಕೆ (1) ನಾಟಕ (1) ನೀರ್ಹಕ್ಕಿ (6) ಪತಂಗ (1) ಪತ್ರಿಕೋದ್ಯಮ (1) ಪಶ್ಚಿಮ ಘಟ್ಟ (2) ಪಾರ್ಕ್ (1) ಪಾಳು (1) ಪುಸ್ತಕ ಬಿಡುಗಡೆ (1) ಪೋರ್ಟ್ರೈಟ್ (8) ಪ್ಯಾನಿಂಗ್ (1) ಪ್ರಬಂಧ (2) ಪ್ರವಾಸ ಕಥನ (3) ಪ್ರಾಹ (1) ಪ್ಲಾಸ್ಟಿಕ್ (1) ಬಕೇಟ್ (1) ಬಂಡಿ (1) ಬಣ್ಣ (1) ಬನವಾಸಿ (1) ಬಳ್ಳಿ (1) ಬಾಗಿಲು (1) ಬಾರ್ಕೂರು (1) ಬೀಗ (1) ಬೆಂಕಿ (1) ಬೆಂಗಳೂರಿನ ಚಿತ್ರಗಳು (5) ಬೆಂಗಳೂರು (27) ಬೆಳಕು (1) ಬೇಸಾಯ (1) ಬ್ರಹ್ಮಾವರ (1) ಭಾರತ ಬಂದ್ (1) ಭಿಕ್ಷುಕರು (1) ಮಕ್ಕಳು (10) ಮಗು (1) ಮಂಜು (2) ಮಮ್ಮಮ್ (3) ಮಲೆನಾಡು (1) ಮಳೆ (1) ಮಳೆಗಾಲ (2) ಮಾರಿಕಣಿವೆ (1) ಮುಸ್ಸಂಜೆ (1) ಮೇಲುಕೋಟೆ (2) ಮೇವು (1) ಮೈಸೂರು (7) ಮೋಡ (2) ಮ್ಯಾಕ್ರೋ (12) ಯಕ್ಷಗಾನ (2) ರಸ್ತೆ (5) ರಾತ್ರಿ ನೋಟ (3) ರೈಮ್ (1) ರೈಲು (2) ರೈಲುಹಳಿ (1) ಲಲಿತ ಪ್ರಬಂಧ (6) ಲೇಪಾಕ್ಷಿ (1) ವಂಡಾರ್ (1) ವಾಸ್ತು ಶಿಲ್ಪ (1) ವಾಹನ (2) ವಿವೇಕ (1) ವಿಸ್ತರಣೆ (1) ವ್ಯಕ್ತಿ ವಿಷಯ (3) ವ್ಯಾಪಾರ (1) ಶಾಲೆ (1) ಶಿರಸಿ (1) ಶಿರಸಿ. ಸೈಕಲ್ (1) ಶಿಲ್ಪ (1) ಶಿವನಸಮುದ್ರ (1) ಶುಭಾಶಯ (2) ಸಣ್ಣ ಕಥೆ (4) ಸಂತೆ (2) ಸಮುದ್ರ (2) ಸಮುದ್ರ ಜೀವಿ (2) ಸಸ್ಯ ಪ್ರಪಂಚ (12) ಸಾಕು ಪ್ರಾಣಿ (4) ಸಾಗಾಟ (1) ಸಾಸ್ತಾನ (1) ಸಿಕ್ಕಿಂ (3) ಸೈಕಲ್ (5) ಸೈಕಲ್ ಯಾತ್ರೆ (1) ಸ್ಕಂದಗಿರಿ (1) ಸ್ತೂಪ (1) ಸ್ಪರ್ಧೆ (1) ಹಕ್ಕಿಗಳು (21) ಹರಿಹರ (1) ಹಳ್ಳಿ (3) ಹಿಮ (1) ಹೂಗಳು (5) ಹೂವು (1) ಹೊಸ ವರ್ಷ (1) ಹೋಂ ಸ್ಟೇ (1) ಹೌರಾ (1)