ಗಣರಾಜ್ಯೋತ್ಸವದ ರಜಾ ದಿನ. ತೊಂಡೆಕಾಯಿ ಮಜ್ಜಿಗೆ ಹುಳಿ ಗಡದ್ದಾಗಿ ಹೊಡೆದು, ಹಾಗೆ ಸ್ವಲ್ಪ ಮಲಗಿ ಎದ್ದ ಮೇಲೆ ಉಂಡಿದ್ದು ಅರಗಿಲ್ಲವಲ್ಲ ಎಂಬ ತಿಳಿವಾಯ್ತು. ಅರಗಿಸುವ ನೆಪದಿಂದ ಹೆಗಲಿಗೆ ಕ್ಯಾಮರಾ ಸಿಕ್ಕಿಸಿಕೊಂಡು, ಸೈಕಲ್ ಏರಿ ಮನೆಯಿಂದ ಪಶ್ಚಿಮಾಭಿಮುಖವಾಗಿ ಹೊರಟೆ. ೪ ಗಂಟೆಯ ಬಿಸಿಲು, ಹೊಟ್ಟೆ ಭರ್ತಿ, ಅದೇ ಏರು ತಗ್ಗಿನ ರಸ್ತೆಯಲ್ಲಿ ಏದುಸಿರು ಬಿಡುತ್ತಾ ಸಾಗಿದೆ. ಈ ಬಾರಿ ಅಕ್ಕ ಪಕ್ಕದಲ್ಲಿ ಯಾವುದೇ ಚಿತ್ರ ಕಾಣಿಸಲಿಲ್ಲವಾದ್ದರಿಂದ ನನ್ನ ಸೈಕಲ್ ಯಾವುದೇ ತಿರುವು ತೆಗೆದುಕೊಳ್ಳದೇ ನೇರವಾಗಿ ಸಾಗಿತು.
ಹೋದ ಸ್ವಲ್ಪ ದೂರದಲ್ಲಿಯೇ ನೈಸ್ ರಸ್ತೆ ಕಾಣಿಸಿತು. ಅದರ ಮೇಲೆ ಸೇತುವೆಯಂತೆ ಹಾದುಹೋಗುವ ಇನ್ನೊಂದು ರಸ್ತೆ. ಹಾಗೇ ರಸ್ತೆಯಿಂದ ಮುಂದೆ ಸಾಗುತ್ತಿದ್ದಂತೆ ಅಕ್ಕಪಕ್ಕ ಗುಬ್ಬಚ್ಚಿಗಳು, ಮಿಂಚುಳ್ಳಿ, ಕೊಕ್ಕರೆ ಮೊದಲಾದ ಹಕ್ಕಿಗಳು, ಹೀರೆ, ಅಲಸಂದೆ, ಅವರೆ ಇನ್ನೂ ಒಂದಿಷ್ಟು ತರಕಾರಿಯ ತೋಟಗಳಿಂದ ಕಂಗೊಳಿಸುತ್ತಿತ್ತು. ಇಲ್ಲಿಂದ ಸೈಕಲ್ ನನ್ನ ಮಾತು ಕೇಳದೆ ಎಡ ಬಲ ಎಂದು ತನಗಿಷ್ಟ ಬಂದ ಕಡೆ ಹೋಗಲು ಆರಂಭಿಸಿತು.
ಕೊನೇಯಲ್ಲಿ ಯಾವ ಸ್ಥಳ ತಲುಪಿದ್ದೇನಪ್ಪಾ ಎಂದು ಅಂಗಡಿಯವರನ್ನು ಕೇಳಿದರೆ ಇದು"ಕೆಂಚೇನ ಹಳ್ಳಿ" ಎಂದರು. ಅಲ್ಲೇ ಒಂದು ಮನೆಯ ಮುಂದೆ ಮಕ್ಕಳು ಆಟವಾಡುತ್ತಿದ್ದರು. ಸಂಜೆ ೫ ಗಂಟೆಯ ಹೊಂಬಿಸಿಲು. ಸರಿ ಮಕ್ಕಳದ್ದೇ ಚಿತ್ರ ತೆಗೆಯೋಣ risk ಕಡಿಮೆ ಎಂದು ಅವರಿದ್ದ ಕಡೆ ಹೊರಟೆ. ನಾನು ಕ್ಯಾಮರಾ ತೆಗೆಯುತ್ತಿದ್ದಂತೆಯೇ ಮಕ್ಕಳು ಒಬ್ಬೊಬ್ಬರಾಗಿ ಬಂದು, uncle ನನ್ ಫೋಟೋ ತೆಗೀರಿ, ನಂದು ತೆಗೀರಿ ಅಂತ ಗಂಟುಬಿದ್ದವು. ಬರೀ ಚಿತ್ರ ತೆಗೆದರೆ ಸಾಕೇ, ತೆಗೆದ ಚಿತ್ರ ಅವಕ್ಕೆ ತೋರಿಸಿದರೇನೆ ತೃಪ್ತಿ. ಮಕ್ಕಳ ನುಗ್ಗಾಟ, ಜಗ್ಗಾಟದಲ್ಲಿ ನನ್ನ ಕ್ಯಾಮರಾ ಕುತ್ತಿಗೆಯಲ್ಲಿ ಉಳಿದದ್ದೇ ಹೆಚ್ಚು.
ಮಕ್ಕಳ ಸಹವಾಸ ಸಾಕಪ್ಪಾ ಅಂತ ಆಚೀಚೆ ನೋಡಿದಾಗ ಕಣ್ಣಿಗೆ ಬಿದ್ದದ್ದು ರಾಗಿ ಕಣದಲ್ಲಿ ರಾಗಿ ಬೇರ್ಪಡಿಸುತ್ತಿದ್ದ ದೃಷ್ಯ. ನೋಡುತ್ತಿದ್ದಂತೆಯೇ ಸೈಕಲ್ ಅತ್ತ ಕಡೆ ವಾಲಿತು. ಸೈಕಲ್ ಬದಿಗಿಟ್ಟು ಕ್ಯಾಮರಾ ಹೊರತೆಗೆಯುತ್ತಿದ್ದಂತೆಯೇ "ಯಾಕಪ್ಪಾ ನಮ್ಮ ಫೋಟೋ. ನಾವೇನೂ ಮಾಡಿಲ್ಲ, ಬಡವ್ರು" ಎಂದು ಅಲ್ಲಿದ್ದವರೊಬ್ಬರೆಂದರು. "ಸುಮ್ನೆ ನನ್ನ hobby" ಅಂದೆ. "ಅಂಗಂದ್ರೆ ಏನಪ್ಪ?" ಮಾರುಪ್ರಶ್ನೆ. "ಹವ್ಯಾಸ, ನನಗೆ ಫೋಟೋ ತೆಗೆಯೋದು ಸಂತೋಷ ಕೊಡುತ್ತೆ" ಅಂದೆ. ಅದಕ್ಕವರು ತೆಕ್ಕೊಳಪ್ಪ ಅಂದ್ರು.
ಕ್ಯಾಮರಾ ನೋಡಿದ ಕೂಡಲೇ ಜನರ ಹಾವಭಾವದಲ್ಲಿ ಅಸಹಜತೆ ಕಾಣಿಸುತ್ತದೆ. ನಾವು ತೆಗೆಯ ಹೊರಟ ಚಿತ್ರದಲ್ಲಿ ಸಹಜತೆ ಕಾಣಿಸಬೇಕಿದ್ದರೆ ಅವರೊಂದಿಗೆ ಬೆರೆಯುವುದು ಮುಖ್ಯ. ಆದ್ದರಿಂದ ಮೊದಲೇ ಫೋಟೋ ತೆಗೆಯದೇ, ಅವರ ಜೊತೆ ಸ್ವಲ್ಪ ಹೊತ್ತು ಮಾತನಾಡಿ ನಂತರ ನನ್ನ ಕೆಲಸ ಆರಂಭಿಸಿದೆ. ಅವರು ಅವರ ಕೆಲಸ ಮುಂದುವರಿಸಿದರು. ಮುಂದಿನದ್ದು ಕೆಳಗಿನ ಚಿತ್ರಗಳಲ್ಲಿವೆ.
ಸೂರ್ಯ ಕೆಳಗಿಳಿತ್ತಿದ್ದಂತೆಯೇ ನನ್ನ ಪರಿಸ್ಥಿತಿಯ ಅರ್ಥ ಆಯಿತು. ಕತ್ತಲೆಯಾದರೆ ದಾರಿ ಹುಡುಕಿ ಮನೆ ಸೇರುವುದು ಕಷ್ಟ ಎಂದರಿತು, ಅವರಿಗೆ ವಿದಾಯ ಹೇಳಿ ಮನೆಯ ದಾರಿ ಹಿಡಿದೆ. ಮನೆಗೆ ಬರುತ್ತಿದ್ದಂತೆಯೇ ಮಜ್ಜಿಗೆ ಹುಳಿಯ ವಾಸನೆ ತನ್ನತ್ತ ಸೆಳೆಯಲಾರಂಭಿಸಿತು.

ಒಳ್ಳೆಯ ಚಿತ್ರಗಳು ಫಾಲಚಂದ್ರ ಅವರೇ..... ನನಗೆ ಮೂರನೇ ಚಿತ್ರ ಅತ್ಯಂತ ಇಷ್ಟವಾಯಿತು....
ReplyDeleteಸೂಪರ್ ಚಿತ್ರಗಳು, ನೀನು ಬರೆಯೋದು ನೋಡಿದ್ರೆ ಯಾವ್ದೋ ಊರಲ್ಲಿ ಇದೀಯ ಅಂದ್ಕೋಬೇಕು. :)
ReplyDeleteಚಿನ್ನದ ಬೆಳಕು ಇಷ್ಟ ಆಯ್ತು ಫೋಟೋಗಳಲ್ಲಿ :)
Very nice photos :-)
ReplyDeleteಚ೦ದದ ಚಿತ್ರಗಳು
ReplyDeleteಪಾಲ..
ReplyDeleteಮಸ್ತ್.. ಮಸ್ತ್ ಫೋಟೊಗಳು...
ಎಲ್ಲ ಫೋಟೊಗಳು ಚೆನ್ನಾಗಿವೆ..
ಕೊನೆಯದು ಸೂಪರ್ !
ಪಾಲಚಂದ್ರ,
ReplyDeleteಕಳೆದ ವಾರ ಮಾಡಿದ್ದು ನಾವು ಇದೇ ಕೆಲಸ. ನಮ್ಮ ದಿಕ್ಕು ಕುಣಿಗಲ್ ಕಡೆಗೆ. ಮತ್ತೆ ನಮ್ಮ ಉದ್ದೇಶ ರಾಗಿ ತೂರುವ ಸ್ಪರ್ಧಾತ್ಮಕ ಚಿತ್ರಗಳನ್ನು ತೆಗೆಯುವುದೇ ಆಗಿತ್ತು ಅದರಲ್ಲಿ ಯಶಸ್ವಿಯೂ ಆದೆವು. ನಿಮ್ಮ ಫೋಟೊಗಳು ಚೆನ್ನಾಗಿವೆ. ನೀವು ಸ್ಪರ್ಧೆಗೆ ಕಳಿಸಬಹುದು.
ನೈಸ್ ರಸ್ತೆಯ ಅಂಚಿನಲ್ಲಿ ತೆಗೆದ ನೈಸ್ ಚಿತ್ರಗಳು...ತುಂಬಾ ಚೆನ್ನಾಗಿವೆ.
ReplyDeleteVery good pics. :)
ReplyDeleteಗುರು ಪ್ರಸಾದ್, ಅರವಿಂದ, ರವಿಶಂಕರ್, ದಿಗ್ವಾಸ್, ಪ್ರಕಾಶ್, ನಾರಾಯಣ್, ಗಿರಿ
ReplyDeleteನಿಮ್ಮೆಲ್ಲರ ಪ್ರೋತ್ಸಾಹಕ್ಕೆ ವಂದನೆಗಳು. ವಂದನೆಗಳು..
ಶಿವು,
ಜನರ ಚಿತ್ರ ತೆಗೆಯಲು ಮೊದಲು ಸಲಹೆಯಿತ್ತವರೇ ನೀವು. ಜನರೆದುರು ಕ್ಯಾಮರಾ ಹಿಡಿಯಲು ಅಳುಕಿದ್ದರೂ, ಅದನ್ನು ಬದಿಯಿಟ್ಟು ಚಿತ್ರಿಸಲು ತಿಳಿಸಿದ್ದು ನನಗಿನ್ನೂ ನೆನಪಿದೆ. ಬ್ಲಾಗಿಗರ ಬಣದಲ್ಲಿ ನೀವು ಮತ್ತು ನಿಮ್ಮ ತಂಡ ನೀವೂ ಬೆಳೆಯುತ್ತಾ, ಉಳಿದವರನ್ನೂ ಬೆಳೆಸುತ್ತಾ ಪ್ರೋತ್ಸಾಹಿಸುತ್ತಿದ್ದೀರ. ಮೇಲಿನ ಚಿತ್ರಗಳೆಲ್ಲಾ ನಿಮ್ಮಂತರು ತೆಗೆದ ಚಿತ್ರಗಳ ಅನುಕರಣೆಗಳಷ್ಟೇ. ಇದರಲ್ಲಿ ನನ್ನತನವೇನಿದ್ದರೂ ಅಲ್ಪ. ಅಲ್ಲದೇ ಸಧ್ಯಕ್ಕೆ ನನಗೆ ಚಿತ್ರ ತೆಗೆಯುವುದುರಲ್ಲೇ ಸಂತೋಷ ಸಿಗುತ್ತಿದೆ. ಸ್ಪರ್ಧೆಯಲ್ಲಿ ಭಾಗವಹಿಸ ತೊಡಗಿದರೆ ಸ್ಪರ್ಧೆಗಾಗಿ ಚಿತ್ರತೆಗೆಯುವುದರಲ್ಲಿ ನನ್ನ ಸಂತೋಷ ಮರೆಯಬಹುದೇನೋ ಎಂಬ ಅಳುಕಿದೆ. ಜೀವನದಲ್ಲಿ ಯಾವುದೇ ರೀತಿಯ ಸ್ಪರ್ಧೆಯಲ್ಲೂ ನಾನಿದುವರೆಗೆ ಭಾಗವಹಿಸಿಲ್ಲ. ಸಧ್ಯಕ್ಕೆ ನನ್ನ ಸ್ಪರ್ಧೆಯೇನಿದ್ದರೂ ನನ್ನ ಜೊತೆ. ಇದು ನನ್ನ ಉದ್ಧಟತನದ ಮಾತುಗಳಲ್ಲ, ವಿನಯದ ಪ್ರತಿಕ್ರಿಯೆ ಎಂದು ತಿಳಿಯಬೇಕಾಗಿ ವಿನಂತಿ.
ನೀವು ಭಾಗವಹಿಸುತ್ತಿರುವ ಸ್ಪರ್ಧೆಗೆ ಶುಭಾಶಯಗಳು.
ಸುಂದರವಾದ ಮುಸ್ಸಂಜೆ...ಸುಂದರವಾದ ಚಿತ್ರಗಳು.
ReplyDeletePala,
ReplyDeleteತುಂಬಾ ಚೆನ್ನಾಗಿವೆ
ಪಾಲಚಂದ್ರ,
ReplyDeleteಈ ಚಿತ್ರಗಳನ್ನು ನಾನು ೨೦೦೨ನೇ ಇಸವಿಯಿಂದ ಕ್ಲಿಕ್ಕಿಸಿ ಅನೇಕ ಬಹುಮಾನಗಳನ್ನು ಗಳಿಸುತ್ತಿದ್ದರೂ ಈಗಲೂ ತೆಗೆಯಬೇಕೆನ್ನುವ ಬಯಕೆ. ಏಕೆಂದರೆ ಅದನ್ನು ಮತ್ತಷ್ಟು ಚೆನ್ನಾಗಿ ತೆಗೆಯುವ ಬಯಕೆ. ಹೇಗೆ ಎಂದು ವಿವರಿಸಲು ಅದಕ್ಕೆ ಎಲ್ಲಾ ವಿವರಣೆಯೂ ಕೊಡಬೇಕಾಗುತ್ತದೆ. ಪ್ರತಿವರ್ಷವೂ ನಾನು ಇವುಗಳನ್ನು ಹುಡುಕಿಕೊಂಡು ಹೋಗುತ್ತೇನೆ. ಕಳೆದ ವಾರದ ಚಿತ್ರವನ್ನು ನೋಡಿದ ನಮ್ಮ ವೈಪಿಎಸ್ ಸೀನಿಯರ್ ಜಡ್ಜ್ ಒಬ್ಬರು ಈ ಫೋಟೊ ತೆಗೆಯಬೇಕೆಂದು ಸಿದ್ದರಾಗಿ ಈಗ ಬರುತ್ತಿದ್ದಾರೆ. ನಾವು ಈಗ ೨-೪೫ಕ್ಕೆ ಅವರ ಕಾರಿನಲ್ಲಿ ಹೋಗುತ್ತಿದ್ದೇವೆ. ನನಗಿಂತ ಹತ್ತು ವರ್ಷಕ್ಕೆ ಸೀನಿಯರ್ ಆದ ಅವರು ಈ ಮೊದಲು ಈ ಇಂಥ ಚಿತ್ರಗಳನ್ನು ತೆಗೆದಿದ್ದರೂ ಅವರಿಗೂ ಅದನ್ನು ಮತ್ತಷ್ಟು ಅದ್ಬುತವಾಗಿ ಕ್ಲಿಕ್ಕಿಸುವ ಆಸೆ. ನಮ್ಮೆಲ್ಲರ ಆಸೆಯೂ ಅದೇ ಆಗಿರುವುದರಿಂದ ಹೀಗೆ ಹೋಗುತ್ತಿರುತ್ತೇವೆ. ಕ್ಲಿಕ್ಕಿಸುವಾಗಲೇ ಸಂತೋಷವನ್ನು ಅನುಭವಿಸುತ್ತೇವೆ. ಸ್ಪರ್ಧೆಗೆ ಕಳಿಸಿದರೆ ನಮ್ಮ ಚಿತ್ರ ಪ್ರಪಂಚ ವಿಶ್ವಕ್ಕೆ ಗೊತ್ತಾಗುತ್ತದೆ. ತಪ್ಪುಗಳನ್ನು ತಿದ್ದಿಕೊಳ್ಳಲು ಸಹಕಾರಿಯಾಗುತ್ತದೆ. ಚೆನ್ನಾಗಿದ್ದಲ್ಲಿ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ನನ್ನೆಲ್ಲ ಕೆಲಸಗಳ ನಡುವೆಯೇ ಅಲ್ಲವೇ ಇದೆಲ್ಲವನ್ನು ಮಾಡುತ್ತಿದ್ದೇನೆ. ಮತ್ತೆ ಈಗಾಗಲೇ "ಫೋಟೊ ಹಿಂದಿನ ಕತೆಗಳು" ಎನ್ನುವ ಹೊಸ ಪುಸ್ತಕವನ್ನು ಆಗಲೇ ಅರ್ಧ ಬರೆದು ಮುಗಿಸಿ ಉಳಿದಿದ್ದನ್ನು ಬರೆಯಲು ಸಿದ್ದನಾಗುತ್ತಿರುವುದು ಕೂಡ ಇಂಥ ಹತ್ತಾರು ಅನುಭವಗಳಿಂದಲೇ ಅಲ್ಲವೇ..
ನಿಮ್ಮ ಬ್ಲಾಗಿನ ಟ್ಯಾಗ್ "ಅನುಭವಿಸದೇ ಹಾಡಿದ ಹಾಡು ಹಾಡಲ್ಲ, ಅನುಭವಿಸಿದೇ ಬಿಡಿಸಿದ ಚಿತ್ರ ಚಿತ್ರವಲ್ಲ, ಅನುಭವಿಸದೇ ಬರೆದ ಬರಹ ಬರಹವಲ್ಲ!" ಇಂಥ ಸಾವಿರಾರು ಅನುಭವಗಳಿಗಾಗಿಯೇ ಅಲ್ಲವೇ...
ಧನ್ಯವಾದಗಳು.
This comment has been removed by the author.
ReplyDeletePaala Sir
ReplyDeletesuperb
no words to explain, photo tells everything
nicely captured
ಪಾಲ,
ReplyDeleteಅದ್ಭುತವಾದ ಚಿತ್ರಗಳನ್ನು ಸೆರೆ ಹಿಡಿದಿರುವಿರಿ. ಸೂರ್ಯಾಸ್ತದ ಸಮಯದ ಬೆಳಕಿನ ಬಳಕೆ ತುಂಬ ಸೊಗಸಾಗಿದೆ. ಇವು ಫೋಟೋ ಎನ್ನಿಸದೆ, ಕುಂಚದಿಂದ ಬರೆದ ಚಿತ್ರ ಎನ್ನಿಸುತ್ತವೆ. ಅಭಿನಂದನೆಗಳು.
Pala,
ReplyDeleteNice pics, how do you manage to get so much time to go to such places ? !
nice pics..
ReplyDeletegreat photos sir........
ReplyDelete